• Home
  • »
  • News
  • »
  • jobs
  • »
  • Unlimited Leaves: ಈ ಉದ್ಯೋಗಿಗಳಿಗೆ ಜ.16 ರಿಂದ ಸಿಗಲಿದೆ ಅನ್​ಲಿಮಿಟೆಡ್ ರಜೆ

Unlimited Leaves: ಈ ಉದ್ಯೋಗಿಗಳಿಗೆ ಜ.16 ರಿಂದ ಸಿಗಲಿದೆ ಅನ್​ಲಿಮಿಟೆಡ್ ರಜೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೊಡ್ಡ ದೊಡ್ಡ ಐಟಿ ಕಂಪನಿಗಳು ಈಗ ತಮ್ಮ ಉದ್ಯೋಗಿಗಳಿಗಾಗಿ ಹೊಸ ಹೊಸ ನೀತಿಗಳನ್ನು ಜಾರಿಗೆ ತಂದಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೀಗೆ ಒಂದು ದೊಡ್ಡ ಕಂಪನಿಯು ತನ್ನ ಉದ್ಯೋಗಿಗಳಿಗೆ ಅನಿಯಮಿತವಾದ ರಜಾ ದಿನಗಳನ್ನು ನೀಡಲು ಹೊಸ ನೀತಿಯೊಂದನ್ನು ಜಾರಿಗೆ ತಂದಿದೆ ನೋಡಿ.

  • Trending Desk
  • 3-MIN READ
  • Last Updated :
  • Share this:

ಈ ಎರಡೂವರೆ ವರ್ಷಗಳಿಂದ ಕಂಪನಿಗಳ(Company) ಮತ್ತು ಸರ್ಕಾರಿ ಕೆಲಸಗಳ ನೀತಿಗಳಲ್ಲಿ(Policy) ಅನೇಕ ರೀತಿಯ ಬದಲಾವಣೆಗಳು ಆಗಿರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಹೌದು..ಕೆಲ ಖಾಸಗಿ ಕಂಪನಿಗಳಂತೂ(Private Companies) ಇನ್ನೂ ಸಹ ಎಂದರೆ ಕೋವಿಡ್-19(Covid-19) ಸಾಂಕ್ರಾಮಿಕ ರೋಗದ ಪ್ರಕರಣಗಳು ಈ ಮಧ್ಯೆ ಇಳಿಮುಖವಾದಾಗಲೂ ತನ್ನ ಉದ್ಯೋಗಿಗಳಿಗೆ ‘ವರ್ಕ್ ಫ್ರಮ್ ಹೋಮ್’(Work Form Home) ಮಾದರಿಯನ್ನೇ ಮುಂದುವರೆಸಿದರೆ, ಇನ್ನೂ ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನಗಳಷ್ಟೇ ಆಫೀಸಿಗೆ(Office) ಬಂದು ಹೋಗುವಂತೆ ಹೇಳಿದ್ದವು.


ಇದರ ಜೊತೆಗೆ ಮ್ಯಾನೇಜರ್ ಗಳಿಗಂತೂ ಮನೆಯಲ್ಲಿಯೇ ಕೂತು ಕೆಲಸ ಮಾಡುವ ಆಯ್ಕೆಯಲ್ಲಿ ತುಂಬಾನೇ ಸಡಿಲಿಕೆಯನ್ನು ನೀಡಿದ್ದನ್ನು ಸಹ ನಾವು ನೋಡಬಹುದು. ದೊಡ್ಡ ದೊಡ್ಡ ಐಟಿ ಕಂಪನಿಗಳು ಈಗ ತಮ್ಮ ಉದ್ಯೋಗಿಗಳಿಗಾಗಿ ಹೊಸ ಹೊಸ ನೀತಿಗಳನ್ನು ಜಾರಿಗೆ ತಂದಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೀಗೆ ಒಂದು ದೊಡ್ಡ ಕಂಪನಿಯು ತನ್ನ ಉದ್ಯೋಗಿಗಳಿಗೆ ಅನಿಯಮಿತವಾದ ರಜಾ ದಿನಗಳನ್ನು ನೀಡಲು ಹೊಸ ನೀತಿಯೊಂದನ್ನು ಜಾರಿಗೆ ತಂದಿದೆ ನೋಡಿ.


ಮೈಕ್ರೋಸಾಫ್ಟ್ ಉದ್ಯೋಗಿಗಳು ಅನಿಯಮಿತ ರಜಾದಿನಗಳನ್ನು ತೆಗೆದುಕೊಳ್ಳಬಹುದಂತೆ!


ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಮೈಕ್ರೋಸಾಫ್ಟ್ ಉದ್ಯೋಗಿಗಳು ಹೊಸ "ಡಿಸ್ಕ್ರೇಷ್ನರಿ (ವಿವೇಚನೆಯುಳ್ಳ) ಟೈಮ್ ಆಫ್" ನೀತಿಯ ಅಡಿಯಲ್ಲಿ ಮುಂದಿನ ವಾರದಿಂದ ಅನಿಯಮಿತ ರಜಾದಿನಗಳನ್ನು ತೆಗೆದುಕೊಳ್ಳಬಹುದು ಎಂದು ಆಂತರಿಕ ಮೆಮೊವನ್ನು ಉಲ್ಲೇಖಿಸಿ ‘ದಿ ವರ್ಜ್’ ವೆಬ್‌ಸೈಟ್ ವರದಿ ಮಾಡಿದೆ.


ಇದನ್ನೂ ಓದಿ: Notice Periodನಲ್ಲಿರುವ ಉದ್ಯೋಗಿಗಳು ಈ ಡಾಕ್ಯುಮೆಂಟ್ಸ್ ಅನ್ನು ಕಲೆಕ್ಟ್ ಮಾಡಿಟ್ಟುಕೊಳ್ಳಬೇಕು


ಜನವರಿ 16 ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮಗಳು ಅನಿಯಮಿತ ರಜೆಯ ದಿನಗಳು ಸೇರಿದಂತೆ 10 ಕಾರ್ಪೊರೇಟ್ ರಜಾದಿನಗಳು, ಅನಾರೋಗ್ಯ ನಿಮಿತ್ತ ಪಡೆಯುವ ರಜಾ ದಿನಗಳನ್ನು ಸಹ ಇದು ಒಳಗೊಂಡಿದೆ.


ಹೊಸ ಉದ್ಯೋಗಿಗಳು ತಮ್ಮ ರಜೆಯ ದಿನಗಳಿಗಾಗಿ ಕಾಯಬೇಕಾಗಿಲ್ಲ ಎಂದು ವೆಬ್‌ಸೈಟ್ ವರದಿ ಮಾಡಿದೆ. ಬಳಕೆ ಮಾಡದೆ ಹಾಗೆ ಇರುವಂತಹ ರಜೆಗಳಿಗೆ ಉದ್ಯೋಗಿಗಳು ಏಪ್ರಿಲ್ ನಲ್ಲಿ ಹಣವನ್ನು ಪಡೆಯುತ್ತಾರೆ.


ಮೈಕ್ರೋಸಾಫ್ಟ್ ನ ಈ ಹೊಸ ನೀತಿ ಯಾರಿಗೆ ಅನ್ವಯಿಸುವುದಿಲ್ಲ?


ಆದಾಗ್ಯೂ, ಈ ನೀತಿಯು ಮೈಕ್ರೋಸಾಫ್ಟ್ ನಲ್ಲಿ ಗಂಟೆಗಳ ಆಧಾರದ ಮೇಲೆ ಕೆಲಸ ಮಾಡುವ ಮತ್ತು ವಿಭಿನ್ನ ಕಾನೂನುಗಳು ಮತ್ತು ನಿಬಂಧನೆಗಳ ಕಾರಣದಿಂದಾಗಿ ಯುಎಸ್ ನ ಹೊರಗೆ ನೆಲೆಸಿರುವ ಉದ್ಯೋಗಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಲಾಗುತ್ತಿದೆ.


ಮೈಕ್ರೋಸಾಫ್ಟ್ ನ ಚೀಫ್ ಪೀಪಲ್ ಆಫೀಸರ್ ಕ್ಯಾಥ್ಲೀನ್ ಹೊಗನ್ ಮಾತನಾಡಿ, ಕೆಲಸದ ಸ್ವರೂಪವು ತೀವ್ರವಾಗಿ ಬದಲಾಗಿರುವುದರಿಂದ, ಹೆಚ್ಚು ಹೊಂದಿಕೊಳ್ಳುವ ರಜೆಯ ನೀತಿಯು ಕಂಪನಿಯ ಮುಂದಿನ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.


ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಮೈಕ್ರೋಸಾಫ್ಟ್ ಅನಾವರಣಗೊಳಿಸಿದ ಹೊಸ ಕ್ರಮಗಳ ಸರಣಿಯಲ್ಲಿ ಫ್ಲೆಕ್ಸಿಬಲ್ ರಜೆ ನೀತಿ ಇತ್ತೀಚಿನದು ಅಂತ ಹೇಳಲಾಗುತ್ತಿದೆ.


2021 ರಲ್ಲಿ, ಯುಎಸ್ ಮೂಲದ ಮತ್ತು ಅಂತರರಾಷ್ಟ್ರೀಯ ಉದ್ಯೋಗಿಗಳಿಗೆ 1,500 ಡಾಲರ್ ಬೋನಸ್ ಅನ್ನು ಸಹ ಈ ಕಂಪನಿಯು ಘೋಷಿಸಿತ್ತು.


ವರ್ಕ್ ಫ್ರಮ್ ಹೋಮ್ ನೀತಿಯ ಬಗ್ಗೆ ಏನ್ ಹೇಳುತ್ತೆ ಮೈಕ್ರೋಸಾಫ್ಟ್?


ವರ್ಕ್ ಫ್ರಮ್ ಹೋಮ್ ನೀತಿಯ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್, ಪ್ರತಿಯೊಬ್ಬ ಉದ್ಯೋಗಿಯು ಎಲ್ಲಿಂದಲಾದರೂ ಕೆಲಸ ಮಾಡಲು ನಾವು ಒಪ್ಪಿಗೆಯನ್ನು ಸೂಚಿಸುವುದಿಲ್ಲ ಎಂದು ಹೇಳಿದೆ.


"ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಒಟ್ಟಿಗೆ ಇರುವುದು ಕೆಲಸಕ್ಕೆ ತುಂಬಾನೇ ಒಳ್ಳೆಯದು ಎಂದು ನಾವು ನಂಬುತ್ತೇವೆ" ಎಂದು ಅವರು ಹೇಳಿದರು.


ಇದನ್ನೂ ಓದಿ: Career in the Advertising: ಜಾಹೀರಾತು ಕ್ಷೇತ್ರದಲ್ಲಿ ಕರಿಯರ್ ರೂಪಿಸಿಕೊಳ್ಳುವ ಮಾರ್ಗ ಇಲ್ಲಿದೆ


ಆದರೆ ಕೆಲಸದ ಸ್ಥಳಗಳು, ಸಮಯ ಸಾಕಷ್ಟು ವಿರಾಮದೊಂದಿಗೆ ಕಂಪನಿಗಳು ಹೆಚ್ಚು ಸಡಿಲತೆಯನ್ನು ಹೊಂದುತ್ತಿವೆ ಅಂತ ಹೇಳಬಹುದು. ಕೆಲವರು ರಜೆಯ ದಿನಗಳನ್ನು ಹೆಚ್ಚಿಗೆ ಮಾಡುತ್ತಿದ್ದರೆ, ಇನ್ನೂ ಕೆಲವು ಕಂಪನಿಗಳು ಪುರುಷ ಉದ್ಯೋಗಿಗಳಿಗೆ ಶಿಶುಪಾಲನಾ ರಜೆಗಳನ್ನು ಸಹ ನೀಡುತ್ತಿವೆ.


ಕಳೆದ ವಾರ, ಔಷಧೀಯ ಕಂಪನಿ ಫೈಜರ್ ಭಾರತದಲ್ಲಿ ತನ್ನ ಉದ್ಯೋಗಿಗಳಿಗೆ 12 ವಾರಗಳ ಪಿತೃತ್ವ ರಜೆಯನ್ನು ಘೋಷಿಸಿತ್ತು. 

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು