ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಒಂದೊಳ್ಳೆ ಕೆಲಸ ಗಿಟ್ಟಿಸಿಕೊಂಡು ಕೈತುಂಬಾ ಸಂಬಳ ಪಡ್ಕೊಂಡು ಜೀವನದಲ್ಲಿ ಹಾಯಾಗಿ ಇರಬೇಕು ಅನ್ನೋದು ಅಸಂಖ್ಯಾತ ಯುವಜನರ (Indian Youths) ಕನಸು. ಭಾರತೀಯ ವಿದ್ಯಾರ್ಥಿಗಳಂತೂ (Indian Students) ಇಂತಹ ಕನಸು ಕಂಡು ಅದನ್ನು ಮುಂದುವರಿಸುವತ್ತ ಹೆಜ್ಜೆ ಹಾಕ್ತಾರೆ. ಆದರೆ ಆ ವಿದ್ಯಾರ್ಥಿಗಳ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಭಾರತದಂತಹ ದೇಶದಲ್ಲಿ ಕನಸು ಈಡೇರಲು ಸಾಧ್ಯ. ಈಗಂತೂ ಹೆಚ್ಚಿನ ಕುಟುಂಬಗಳು ತಮ್ಮ ಮಕ್ಕಳನ್ನು ವಿದೇಶಕ್ಕೆ ಶಿಕ್ಷಣಕ್ಕಾಗಿ (Education) ಕಳುಹಿಸಲು ಹಾತೊರೆಯುತ್ತಾರೆ. ಇತ್ತೀಚಿನ ಅಧ್ಯಯನದ ಪ್ರಕಾರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದ್ದು, 2024ರಲ್ಲಿ ಇದು 1.8 ಮಿಲಿಯನ್ಗೆ ಏರುವ ಸಾಧ್ಯತೆ ಇದೆ.
ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಫ್ಯಾಷನ್ ಇತ್ತೀಚಿನ ದಿನಗಳಲ್ಲಿ ಭಾರತೀಯರಲ್ಲಿ ಹೆಚ್ಚುತ್ತಿದ್ದು, ಆದರೆ ವಿಶ್ವಾಸಾರ್ಹ ಶೈಕ್ಷಣಿಕ ಸಂಸ್ಥೆಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಅನೇಕರಿಗೆ ಗೊಂದಲವಿದೆ. ಆದರೆ ವಿದೇಶದಲ್ಲಿ ಕಲಿಯುವ ಕನಸನ್ನು ನನಸಾಗಿಸಬೇಕಾದರೆ ಭಾರತೀಯರ ಜೀವಮಾನದ ಸರಾಸರಿ ಉಳಿತಾಯಕ್ಕಿಂತ ಹೆಚ್ಚಿನ ಹಣವನ್ನು ಭರಿಸಬೇಕಾಗುತ್ತದೆ ಅನ್ನುವ ವಿಚಾರವನ್ನು ಕೂಡ ಖಂಡಿತವಾಗಿ ಗಮನದಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ: Job Market 2023: ಸಾಲು ಸಾಲು ಉದ್ಯೋಗಿಗಳ ವಜಾ ಮಧ್ಯೆ ಹೊಸ ಕೆಲಸ ಸಿಗಬೇಕೆಂದರೆ 5 ಸಲಹೆಗಳನ್ನು ಪಾಲಿಸಿ
ಇದಕ್ಕಾಗಿಯೇ ಇಂದಿಗೂ ಕೂಡ ಅನೇಕ ಭಾರತೀಯ ಪೋಷಕರು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳಿಸಲು ಜಮೀನು ಮಾರಾಟ ಮಾಡುವುದು, ಸಾಲವನ್ನು ಪಡೆಯುವುದು, ಚಿನ್ನಾಭರಣ ಅಡವಿಡೋದು ಮಾಡುತ್ತಾರೆ. ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಹೋಗೋದು ಮುಖ್ಯವಲ್ಲ, ಆದರೆ ನಾವು ಸರಿಯಾದ ಶೈಕ್ಷಣಿಕ ಸಂಸ್ಥೆ, ದೇಶವನ್ನು ಆಯ್ಕೆ ಮಾಡಿದ್ದೀವೋ ಅನ್ನೋದರ ಬಗ್ಗೆ ತಿಳಿದುಕೊಳ್ಳೋದು ಕೂಡ ತುಂಬಾನೆ ಮುಖ್ಯವಾಗುತ್ತದೆ. ನಮ್ಮ ಕನಸು, ಯೋಜನೆಗಳು, ಗುರಿ, ಮಹತ್ವಾಕಾಂಕ್ಷೆಗಳ ಸಾಕಾರಕ್ಕೆ ಆ ದೇಶ ನಿಮಗೆ ಏನು ಭರವಸೆ ನೀಡುತ್ತದೆ ಅನ್ನೋದನ್ನು ಕೂಡ ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ.
ಈ ಹಿಂದಿನ ಕೆಲವು ವರ್ಷಗಳನ್ನು ಗಮನಿಸಿದರೆ ಯುಕೆ (ಯುನೈಟೆಡ್ ಕಿಂಗ್ಡಮ್) ಭಾರತೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚು ಸೂಕ್ತ ದೇಶ ಎಂದೇ ಹೇಳಬಹುದು. ಈವರೆಗೆ ಯುಕೆನಲ್ಲಿ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ಅಧ್ಯಯನಕ್ಕೆಂದು ಹೋಗಿ ಬಂದಿದ್ದಾರೆ. ಆ ಪೈಕಿ 96%ನಷ್ಟು ಅಧ್ಯಯನ ವೀಸಾ ಅರ್ಜಿಗಳು ಯಶಸ್ಸುಗೊಂಡಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ.
ಇದನ್ನೂ ಓದಿ:Foreign Study: ವಿದೇಶದಲ್ಲಿ ಅಲೆಮಾರಿಗಳಾದ ಭಾರತೀಯ ವಿದ್ಯಾರ್ಥಿಗಳು, ಇವರು ಅನುಭವಿಸುವ ಕಷ್ಟ ಹೇಗಿದೆ ನೋಡಿ
ವಿಶೇಷ ಅಂದ್ರೆ ಯುಕೆಯಲ್ಲಿ ಬೇರೆ ಬೇರೆ ದೇಶಗಳ ಬಹುಸಂಸ್ಕೃತಿಯ ವಿದ್ಯಾರ್ಥಿಗಳ ಪೈಕಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಾಗತಿಕವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು, ಆಧುನಿಕ ಬೋಧನಾ ವಿಧಾನಗಳು, ವೃತ್ತಿಪರ ಅವಕಾಶಗಳು, ಉದ್ಯೋಗದಲ್ಲಿ ಭರವಸೆ, ಎಲ್ಲಾ ನಮೂನೆಯ ಕೋರ್ಸ್ಗಳು ಹೀಗೆ ವೈವಿಧ್ಯತೆಯಿಂದ ಕೂಡಿರುವ ಕೋರ್ಸ್ಗಳು ಯುಕೆಯಲ್ಲಿ ಅಧ್ಯಯನ ಮಾಡುವವರಿಗೆ ಸದಾ ಸ್ವಾಗತಿಸುತ್ತದೆ. ಮತ್ತು ಕೋರ್ಸ್ಗಳು ಕೂಡ ಆದಾಯದ ಭರವಸೆಯನ್ನು ಸೃಷ್ಟಿಸುತ್ತದೆ.
ಅಧ್ಯಯನಕ್ಕಾಗಿ ವೀಸಾ ಅರ್ಜಿಗಳಿಗೆ ಬೇಡಿಕೆಗಳು ಹೆಚ್ಚುತ್ತಿರುವ ಕಾರಣದಿಂದ ಇದನ್ನು ಮುಂದುವರಿಸಲು ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಭಾರತೀಯ ವೃತ್ತಿಪರರಿಗಾಗಿ ಹೊಸತೊಂದು ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಇದೇ ವರ್ಷದ ಆರಂಭದಿಂದಲೇ ಈ ಯೋಜನೆ ಆರಂಭವಾಗಲಿದ್ದು, ನೀವು ಯುನೈಟೆಡ್ ಕಿಂಗ್ಡಮ್ನ ಯಾವುದೇ ಭಾಗದಲ್ಲಿ ಅಧ್ಯಯನ ಮಾಡಲು ಅಥವಾ ಕೆಲಸ ಮಾಡುವ ಯೋಜನೆ ಹಾಕಿಕೊಂಡಿದ್ದರೆ, ನೀವು ಖಂಡಿತವಾಗಿಯೂ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕು.
ರಿಷಿ ಸುನಕ್ರ ಹೊಸ ಯೋಜನೆ ಏನನ್ನು ಒಳಗೊಂಡಿದೆ?
‘ಯುಕೆ ಮತ್ತು ಭಾರತ ಯಂಗ್ ಪ್ರೊಫೆಷನಲ್ ಸ್ಕೀಮ್’ ಅಡಿಯಲ್ಲಿ 18ರಿಂದ 30 ವರ್ಷದೊಳಗಿನ ಪದವಿ ಪಡೆದಿರುವ ಪ್ರಜೆಗಳಿಗೆ ವಾರ್ಷಿಕ 3000 ವೀಸಾಗಳನ್ನು ಒದಗಿಸುವುದಾಗಿ ಯುನೈಟೆಡ್ ಕಿಂಗ್ಡಮ್ ಭರವಸೆ ನೀಡಿದೆ. ಇದಕ್ಕೆ ಆಯ್ಕೆಯಾದವರು 2 ವರ್ಷಗಳ ಕಾಲ ಯುಕೆನಲ್ಲಿ ಉಳಿಯಬಹುದು ಅಥವಾ ಕೆಲಸ ಮಾಡಬಹುದು. ಈ ಯೋಜನೆಯು ಪರಸ್ಪರ ಹೊಂದಾಣಿಕೆಯಿಂದ ನಡೆಯುವುದರಿಂದ ಬ್ರಿಟಿಷ್ ಪ್ರಜೆಗಳೂ ಕೂಡ ಭಾರತದಲ್ಲಿ ಇದೇ ಯೋಜನೆ ಪಡೆಯಲು ಅರ್ಹತೆ ಹೊಂದುತ್ತಾರೆ.
ವಿದ್ಯಾರ್ಥಿ ವೀಸಾ ಪಡೆಯಲು ಬೇಕಾದ ಅರ್ಹತೆಗಳೇನು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ