• Home
  • »
  • News
  • »
  • jobs
  • »
  • Career Advice: ಯಶಸ್ವಿ ಕರಿಯರ್ ನಿಮ್ಮದಾಗಬೇಕೆಂದರೆ ಈ ಸೀಕ್ರೆಟ್ ಪಾಲಿಸಿ: Uber CEO ಸಲಹೆ

Career Advice: ಯಶಸ್ವಿ ಕರಿಯರ್ ನಿಮ್ಮದಾಗಬೇಕೆಂದರೆ ಈ ಸೀಕ್ರೆಟ್ ಪಾಲಿಸಿ: Uber CEO ಸಲಹೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ವೃತ್ತಿಜೀವನದಲ್ಲಿ ನೀವು ಏನನ್ನು ಸಾಧಿಸಲು ಬಯಸುತ್ತೀರಿ ಎಂಬ ಸಾಮಾನ್ಯ ಕಲ್ಪನೆಯನ್ನು ಹೊಂದುವುದರಲ್ಲಿ ಯಾವುದೇ ತಪ್ಪಿಲ್ಲ. ನಿಮ್ಮ ಕಲ್ಪನೆಯು ತುಂಬಾ ಚಿಕ್ಕದಾಗಿದ್ದರೆ ಯಶಸ್ವಿ ವೃತ್ತಿಜೀವನವನ್ನು ನಡೆಸುವ ಅವಕಾಶಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಖೋಸ್ರೋಶಾಹಿ ಎಚ್ಚರಿಸಿದ್ದಾರೆ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

    ವೃತ್ತಿಯಲ್ಲಿ ಅಭಿವೃದ್ಧಿ (Career Development) ಹೊಂದಬೇಕು.. ಒಳ್ಳೆಯ ಜೀವನದ ಕನಸು ಕಾಣಬೇಕು ನಿಜ. ಆದರೆ ಜೀವನವನ್ನು ರೂಪಿಸಿಕೊಳ್ಳುವಾಗ ಆತುರ ಒಳ್ಳೆಯದಲ್ಲ ಎಂದು ಉಬರ್ ಸಿಇಒ ದಾರಾ ಖೋಸ್ರೋಶಾಹಿ ( Uber CEO Dara Khosrowshahi) ಯುವಜನತೆಗೆ ವೃತ್ತಿ ಸಲಹೆ (Career Advice) ನೀಡಿದ್ದಾರೆ. ಜೀವನದಲ್ಲಿ ತಾವು ಎಂದಿಗೂ ಆತುರಪಡಲಿಲ್ಲ. ಹಾಗೆಯೇ ಇಂದಿನ ಯುವಜನರೂ ಸಹ ಆತುರ ಪಡಬಾರದು ಎಂಬುದಾಗಿ ಅವರು ಹೇಳುತ್ತಾರೆ.


    ಶ್ರೇಷ್ಠವಾದುದು ಯಾವಾಗಲೂ ಸಮಯ ತೆಗೆದುಕೊಳ್ಳುತ್ತದೆ ಎಂದು ಲಿಂಕ್ಡ್‌ಇನ್ ಸಿಇಒ ರಯಾನ್ ರೋಸ್ಲಾನ್ಸ್‌ಕಿಯೊಂದಿಗಿನ ಸಂದರ್ಶನದಲ್ಲಿ ಉಬರ್ ಸಿಇಒ ದಾರಾ ಖೋಸ್ರೋಶಾಹಿ ಹೇಳಿದ್ದಾರೆ. ನಿಜವಾಗಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕೆಂದಿದ್ದರೆ ಅಂಥವರು ಸ್ವಲ್ಪ ಸಮಯದವರೆಗೆ ಕಾಯಬೇಕು. ತಾಳ್ಮೆಯಿಂದ ಕಾದು ಒಳ್ಳೆಯ ಅವಕಾಶಕ್ಕಾಗಿ ಸಮಯ ತೆಗೆದುಕೊಳ್ಳುವುದು ಹೆಚ್ಚು ತೃಪ್ತಿಕರವಾಗಿರುತ್ತದೆ ಎಂದು ಉಬರ್ ಬಾಸ್ ಹೇಳಿದ್ದಾರೆ.


    ಆತುರಪಡಬೇಡಿ ಎಂದ ಉಬರ್‌ ಸಿಇಒ


    53 ವರ್ಷದ ಖೋಸ್ರೋಶಾಹಿ ಅವರು ಅವರು 2017 ರಲ್ಲಿ ಉಬರ್‌ ಸೇರುವ ಮೊದಲು, 16 ವರ್ಷಗಳ ಕಾಲ ಎಂಜಿನಿಯರಿಂಗ್ ಕಂಪನಿ ಎಕ್ಸ್‌ಪೀಡಿಯಾದ ಸಿಇಒ ಆಗಿ ಕೆಲಸ ಮಾಡಿದ್ದರು. ಅವರು ಐಟಿ ಕಂಪನಿ ಐಎಸಿಯಿಂದ ಎಕ್ಸ್‌ಪೀಡಿಯಾಕ್ಕೆ ಬದಲಾಯಿಸಿದ್ದರು. ಅಲ್ಲಿ ಅವರು ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.


    ಉಬರ್ ಸಿಇಒ ದಾರಾ ಖೋಸ್ರೋಶಾಹಿ


    ಆದ್ರೆ ಇಂದಿನ ಯುವಕರು ನಿಗದಿತ ಸಮಯದೊಳಗೆ ಜೀವನದಲ್ಲಿ ದೊಡ್ಡ ಸ್ಥಾನಗಳನ್ನು ತಲುಪಲು ಆತುರ ಪಡುತ್ತಾರೆ. ಆದ್ರೆ ಅದು ಅವರ ವೃತ್ತಿ ಜೀವನಕ್ಕೆ ಹಾಗೂ ಜೀವನದ ಯಶಸ್ಸಿಗೆ ಹಾನಿಕಾರಕವಾಗಬಹುದು ಎಂದು ಖೋಸ್ರೋಶಾಹಿ ಹೇಳಿದ್ದಾರೆ.


    “ವೃತ್ತಿ ಜೀವನವನ್ನು ಅತಿಯಾಗಿ ಪ್ಲಾನ್‌ ಮಾಡಬೇಡಿ"


    ನಿಮ್ಮ ವೃತ್ತಿಜೀವನವನ್ನು ಅತಿಯಾಗಿ ಪ್ಲಾನ್‌ ಮಾಡಬೇಡಿ ಎಂದು ಖೋಸ್ರೋಶಾಹಿ ಹೇಳುತ್ತಾರೆ. ಇಂದಿನ ಯುವಕರು ಅನೇಕರು ಈ ತಪ್ಪನ್ನು ಮಾಡುವುದನ್ನು ನಾನು ನೋಡುತ್ತೇನೆ. “ನಾನು ಇಂತಿಷ್ಟು ವರ್ಷದಲ್ಲಿ VP ಆಗಲು ಬಯಸುತ್ತೇನೆ ಅಥವಾ ನಾನು ಇಂತಿಷ್ಟು ಮೊತ್ತವನ್ನು ಗಳಿಸಲು ಬಯಸುತ್ತೇನೆ” ಹೀಗೆ ಅತಿಯಾಗಿ ಯೋಜನೆ ಹಾಕಿಕೊಳ್ಳಬೇಡಿ ಎಂದು ಎಂಬುದಾಗಿ ಅವರು ಹೇಳುತ್ತಾರೆ.


    ನಿಮ್ಮ ವೃತ್ತಿಜೀವನದಲ್ಲಿ ನೀವು ಏನನ್ನು ಸಾಧಿಸಲು ಬಯಸುತ್ತೀರಿ ಎಂಬ ಸಾಮಾನ್ಯ ಕಲ್ಪನೆಯನ್ನು ಹೊಂದುವಲ್ಲಿ ಯಾವುದೇ ತಪ್ಪಿಲ್ಲ. ನಿಮ್ಮ ಕಲ್ಪನೆಯು ತುಂಬಾ ಚಿಕ್ಕದಾಗಿದ್ದರೆ ಯಶಸ್ವಿ ವೃತ್ತಿಜೀವನವನ್ನು ನಡೆಸುವ ಅವಕಾಶಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಖೋಸ್ರೋಶಾಹಿ ಎಚ್ಚರಿಸಿದ್ದಾರೆ.


    Successful Career


    “ವೃತ್ತಿಪರರು ಅವಕಾಶಗಳನ್ನು ಬಳಸಿಕೊಳ್ಳಬೇಕು”


    "ನೀವು ಎಲ್ಲಿಗೆ ತಲುಪಬೇಕು ಎಂಬ ಕಲ್ಪನೆಯನ್ನು ಹೊಂದಿರಿ, ಆದರೆ ನೀವು ಅವಕಾಶಕ್ಕೆ ಮುಕ್ತವಾಗಿರಿ. ನಿಮಗೆ ಉತ್ತಮ ಅವಕಾಶಗಳು ಸಿಕ್ಕಾಗ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು. ನನ್ನ ವೃತ್ತಿಜೀವನದಲ್ಲಿ ನಾನು ಎಂದಿಗೂ ಆತುರಪಡಲಿಲ್ಲ. ಏಕೆಂದರೆ ನೀವು ನಿಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದಿದ್ದರೆ ಸಮಯವನ್ನು ತೆಗೆದುಕೊಳ್ಳುವುದು ಉತ್ತಮ” ಎಂದು ಅವರು ಹೇಳಿದ್ದಾರೆ.


    "ನೀವು ಸ್ಟೀವ್ ಜಾಬ್ಸ್, ಜೆಫ್ ಬೆಜೋಸ್, ಜೇಮೀ ಡಿಮನ್, ಜ್ಯಾಕ್ ವೆಲ್ಚ್ ಅವರನ್ನು ನೋಡುತ್ತೀರಿ. ಶ್ರೇಷ್ಠತೆಯು ಯಾವಾಗಲೂ ಸಮಯ ತೆಗೆದುಕೊಳ್ಳುತ್ತದೆ.




    ನೀವು ಮೂರ್ನಾಲ್ಕು ವರ್ಷಗಳು ಅಥವಾ ಔಟ್‌ ರೀತಿಯ ವ್ಯಕ್ತಿಯಾಗಿದ್ದರೆ ನೀವು ನಿಜವಾಗಿಯೂ ವೃತ್ತಿ ಜೀವನದ ಸಂಯೋಜನೆಯನ್ನು ಕಳೆದುಕೊಳ್ಳುತ್ತೀರಿ. ಎಲ್ಲವೂ ಸಮಯ ತೆಗೆದುಕೊಳ್ಳುತ್ತದೆ. ನೀವು ಅದರ ಲಾಭವನ್ನು ಪಡೆದಾಗ ಮ್ಯಾಜಿಕ್‌ ಸಂಭವಿಸುತ್ತದೆ" ಎಂದು ಅವರು ಹೇಳುತ್ತಾರೆ.


    ಒಟ್ಟಾರೆ, ಜೀವನ ನಾವಂದುಕೊಂಡ ಹಾಗೆ ಇರುವುದಿಲ್ಲ. ನಾವು ಅಂದುಕೊಳ್ಳುವುದೆಲ್ಲವೂ ಜೀವನದಲ್ಲಿ ನಡೆಯುವುದಿಲ್ಲ. ಹಾಗಾಗಿ ತಾಳ್ಮೆ ಬಹಳ ಮುಖ್ಯ. ಪ್ರತಿ ಕೆಲಸದಲ್ಲೂ ತಾಳ್ಮೆ ಇದ್ದರೆ ಅದು ಅನೇಕ ಸಮಸ್ಯೆಗಳನ್ನು ತಪ್ಪುಗಳನ್ನು ಸರಿಪಡಿಸುತ್ತದೆ. ಆತುರ ಎಂದಿಗೂ ಒಳ್ಳೆಯದಲ್ಲ ಎಂಬುದನ್ನು ವೃತ್ತಿಯ ವಿಚಾರದಲ್ಲೂ ಅಳವಡಿಸಿಕೊಂಡರೆ ಅಭಿವೃದ್ಧಿ ಸಾಧ್ಯ. ಜೊತೆಗೆ ಸಿಗುವಂಥಹ ಒಳ್ಳೆಯ ಅವಕಾಶಗಳನ್ನು ಬಳಸಿಕೊಂಡು ಯಶಸ್ಸಿನ ಮೆಟ್ಟಿಲೇರುವುದು ಜಾಣ ನಡೆ ಎಂಬುದು ಅಷ್ಟೇ ಸತ್ಯ.

    Published by:Kavya V
    First published: