• ಹೋಂ
  • »
  • ನ್ಯೂಸ್
  • »
  • Jobs
  • »
  • Train Driver: ರೈಲು ಚಾಲಕರಾಗುವುದು ಹೇಗೆ; ಈ ಸರ್ಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆ-ಸಂಬಳದ ಮಾಹಿತಿ ಇಲ್ಲಿದೆ

Train Driver: ರೈಲು ಚಾಲಕರಾಗುವುದು ಹೇಗೆ; ಈ ಸರ್ಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆ-ಸಂಬಳದ ಮಾಹಿತಿ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರೈಲ್ವೆಯಲ್ಲಿ ಲೋಕೋ ಪೈಲಟ್ ಹುದ್ದೆಗೆ ನೇರ ನೇಮಕಾತಿ ಇಲ್ಲ. ಮೊದಲು ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ. ಸಹಾಯಕ ಲೋಕೋ ಪೈಲಟ್ ಹುದ್ದೆಯಲ್ಲಿ ಎರಡು ವರ್ಷಗಳ ಕೆಲಸದ ಅನುಭವ ಪಡೆಯಬೇಕು.

  • Share this:

ಭಾರತದಲ್ಲಿ ರೈಲ್ವೆ ಇಲಾಖೆ (Indian Railways) ಉದ್ಯೋಗಗಳಿಗಾಗಿ (Railway Jobs) ಲಕ್ಷಾಂತರ ಅಭ್ಯರ್ಥಿಗಳು ಪ್ರತಿವರ್ಷ ಪ್ರಯತ್ನಿಸುತ್ತಾರೆ. ರೈಲ್ವೆ ಜಾಬ್​ ಸಿಕ್ಕರೆ ಜೀವನ ಸೆಟಲ್​ ಎಂಬ ಭಾವನೆ ದೊಡ್ಡ ಸಂಖ್ಯೆಯ ಜನರಲ್ಲಿದೆ. ಅದಕ್ಕೆ ತಕ್ಕಂತೆ ಭಾರತೀಯ ರೈಲ್ವೆಯಲ್ಲೂ ಪ್ರತಿವರ್ಷ ಸಾವಿರಾರು ಹುದ್ದೆಗಳಿಗೆ ಭರ್ತಿ (Railway Recruitment) ಮಾಡಲಾಗುತ್ತೆ. ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ನೇಮಕಾತಿ ಮಾಡಲಾಗುತ್ತದೆ. ಈ ಪೈಕಿ ರೈಲು ಚಾಲಕರ ಹುದ್ದೆಯೂ ಒಂದು. ರೈಲು ಚಾಲಕನನ್ನು ಲೋಕೋ ಪೈಲಟ್ ಎಂದು ಕರೆಯಲಾಗುತ್ತದೆ.


ಲೋಕೋ ಪೈಲಟ್ ಹುದ್ದೆಗಾಗಿ ಸಾವಿರಾರು ಅಭ್ಯರ್ಥಿಗಳು ಪ್ರಯತ್ನಿಸುತ್ತಾರೆ. ಲೋಕೋ ಪೈಲಟ್‌ನ ಕೆಲಸವು ತುಂಬಾ ಜವಾಬ್ದಾರಿಯುತವಾದದ್ದು. ಸರಕು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು ಲೋಕೋ ಪೈಲಟ್‌ನ ಜವಾಬ್ದಾರಿಯಾಗಿದೆ. ಲೋಕೋ ಪೈಲಟ್ ಹುದ್ದೆಯು ಒಳ್ಳೆಯ ಸಂಬಳವನ್ನು ಹೊಂದಿದೆ. ರೈಲ್ವೆಯಿಂದ ಅನೇಕ ಇತರ ಪ್ರಯೋಜನಗಳು ಸಹ ಲಭ್ಯವಿದೆ. ರೈಲು ಚಾಲಕ ಅಂದರೆ ಲೋಕೋ ಪೈಲಟ್ ಆಗುವುದು ಹೇಗೆ ಎಂದು ಇಂದು ನಾವು ಇಲ್ಲಿ ತಿಳಿಸಿದ್ದೇವೆ.


ಲೋಕೋ ಪೈಲಟ್ ಹುದ್ದೆಗೆ ನೇಮಕಾತಿ ಹೇಗೆ ನಡೆಯುತ್ತೆ?


ರೈಲ್ವೆಯಲ್ಲಿ ಲೋಕೋ ಪೈಲಟ್ ಹುದ್ದೆಗೆ ನೇರ ನೇಮಕಾತಿ ಇಲ್ಲ. ಮೊದಲನೆಯದಾಗಿ, ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ. ಸಹಾಯಕ ಲೋಕೋ ಪೈಲಟ್ ಹುದ್ದೆಯಲ್ಲಿ ಎರಡು ವರ್ಷಗಳ ಕೆಲಸದ ಅನುಭವ ಪಡೆಯಬೇಕು. ಜೊತೆಗೆ 60 ಸಾವಿರ ಕಿಲೋಮೀಟರ್ ಚಾಲನೆಯ ಅನುಭವದ ನಂತರ, ಹಿರಿಯ ಲೋಕೋ ಪೈಲಟ್ ಹುದ್ದೆಯಲ್ಲಿ ಬಡ್ತಿ ಮಾಡಲಾಗುವುದು. ಇದಾದ ನಂತರ ಲೋಕೋ ಪೈಲಟ್ ಮತ್ತು ಲೋಕೋ ಸೂಪರ್ ವೈಸರ್ ಹುದ್ದೆಗೆ ಬಡ್ತಿ ಇದೆ.


ಪ್ರಾತಿನಿಧಿಕ ಚಿತ್ರ


ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಯಾವೆಲ್ಲಾ ಅರ್ಹತೆಗಳಿರಬೇಕು?


ಸಹಾಯಕ ಲೋಕೋ ಪೈಲಟ್‌ ಆಗಿ ನೇಮಕಗೊಳ್ಳಲು ಭೌತಶಾಸ್ತ್ರ ಮತ್ತು ಗಣಿತ ವಿಷಯಗಳೊಂದಿಗೆ 10 ನೇ ಅಥವಾ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಟೆಕ್ನಿಷಿಯನ್, ವೈರ್‌ಮ್ಯಾನ್ ಇತ್ಯಾದಿ ಟ್ರೇಡ್‌ನಲ್ಲಿ ಐಟಿಐ ಪ್ರಮಾಣೀಕರಣ ಅಥವಾ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹೊಂದಿರುವುದು ಸಹ ಅಗತ್ಯವಾಗಿದೆ.


ಸಹಾಯಕ ಲೋಕೋ ಪೈಲಟ್ ನೇಮಕಾತಿ ಪರೀಕ್ಷೆ ಹೇಗಿರುತ್ತೆ?


ಸಹಾಯಕ ಲೋಕೋ ಪೈಲಟ್ ಹುದ್ದೆಗೆ ನೇಮಕಾತಿಗಾಗಿ ರೈಲ್ವೇ ನೇಮಕಾತಿ ಮಂಡಳಿ (RRB) ನೇಮಕಾತಿ ಪರೀಕ್ಷೆಯನ್ನು ಆಯೋಜಿಸುತ್ತದೆ. RRB ಸಹಾಯಕ ಲೋಕೋ ಪೈಲಟ್‌ನ ನೇಮಕಾತಿ ಪ್ರಕ್ರಿಯೆಯು ಹಲವಾರು ಹಂತಗಳಲ್ಲಿ ನಡೆಯುತ್ತದೆ. ಲಿಖಿತ ಪರೀಕ್ಷೆಯನ್ನು ಆನ್‌ಲೈನ್ ಮೋಡ್‌ನಲ್ಲಿ ನಡೆಸಲಾಗುತ್ತದೆ.




ಸಹಾಯಕ ಲೋಕೋ ಪೈಲಟ್ ಕೆಲಸವೇನು?


ಸಿಗ್ನಲ್ ಟ್ರಾನ್ಸ್‌ಮಿಷನ್ ಮಾಡಲು ಸಹಾಯಕ ಲೋಕೋ ಪೈಲಟ್ ಅಗತ್ಯವಿದೆ, ರೈಲು ಇಂಜಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ, ರಿಪೇರಿ ಕೆಲಸದಲ್ಲಿ ಹಿರಿಯರಿಗೆ ಸಹಾಯ ಮಾಡಬೇಕಾಗುತ್ತದೆ.


ಇದನ್ನೂ ಓದಿ: UPSC Success Story: ದೊಡ್ಡ ಸಂಬಳದ MNC ಉದ್ಯೋಗ ಬಿಟ್ಟು ಐಪಿಎಸ್ ಅಧಿಕಾರಿಯಾದ ಸಾಧಕಿ


ಸಹಾಯಕ ಲೋಕೋ ಪೈಲಟ್ ಸಂಬಳ ಎಷ್ಟಿರುತ್ತೆ?


ಏಳನೇ ವೇತನ ಆಯೋಗದ ಪ್ರಕಾರ ಸಹಾಯಕ ಲೋಕೋ ಪೈಲಟ್‌ನ ವೇತನ ಶ್ರೇಣಿ ತಿಂಗಳಿಗೆ 19,900 ರಿಂದ 35,000 ರೂಪಾಯಿ ಇರುತ್ತೆ. ಹಿರಿಯ ಸಹಾಯಕ ಲೋಕೋ ಪೈಲಟ್, ಲೋಕೋ ಪೈಲಟ್ ಮತ್ತು ಲೋಕೋ ಮೇಲ್ವಿಚಾರಕ ಹುದ್ದೆಗೆ ಬಡ್ತಿಯೊಂದಿಗೆ ಸಂಬಳವೂ ಹೆಚ್ಚಾಗುತ್ತದೆ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು