• Home
 • »
 • News
 • »
 • jobs
 • »
 • Toughest Exams: ವಿಶ್ವದಲ್ಲೇ ಅತ್ಯಂತ ಕಠಿಣವಾದ ಪರೀಕ್ಷೆಗಳ್ಯಾವುವು - UPSC, JEEಗೆ ಎಷ್ಟನೇ ಸ್ಥಾನ?

Toughest Exams: ವಿಶ್ವದಲ್ಲೇ ಅತ್ಯಂತ ಕಠಿಣವಾದ ಪರೀಕ್ಷೆಗಳ್ಯಾವುವು - UPSC, JEEಗೆ ಎಷ್ಟನೇ ಸ್ಥಾನ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಐಐಟಿ ಜೆಇಇ ಪರೀಕ್ಷೆಯು ಭಾರತದಲ್ಲಿ ಅತ್ಯಂತ ಕಠಿಣ ಮತ್ತು ವಿಶ್ವದಲ್ಲೇ ಎರಡನೇ ಕಠಿಣ ಪರೀಕ್ಷೆಯಾಗಿದೆ. UPSC 3ನೇ ಅತ್ಯಂತ ಕಠಿಣ ಪರೀಕ್ಷೆಯಾಗಿದೆ.

 • Share this:

  ಪ್ರತಿ ವಿದ್ಯಾರ್ಥಿಗೂ (Students) ಪರೀಕ್ಷೆ (Exams) ಅನ್ನೋದು ಮುಖ್ಯ ಘಟ್ಟ. ಅವರ ಸಂಪೂರ್ಣ ಜ್ಞಾನ, ಓದಿನ ಪರಿಶ್ರಮವನ್ನು ಪರೀಕ್ಷೆಯು ನಿರ್ಧರಿಸುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪರೀಕ್ಷೆ ಎಂದರೆ ಕಷ್ಟ ಎಂಬ ಭಾವನೆ ಇದೆ. ಆದರೆ ಭಾರತ ಸೇರಿ ವಿಶ್ವದಲ್ಲೇ ಕಬ್ಬಿಣ ಕಡಲೆ ಎನ್ನುವಂತಹ ಪರೀಕ್ಷೆಗಳು ಕೆಲವು ಇವೆ. ಇವು ವಿಶ್ವದಲ್ಲೇ ಅತ್ಯಂತ ಕಠಿಣ ಪರೀಕ್ಷೆಗಳು (Toughest Exams) ಎಂದು ವರದಿಯೊಂದು ಹೇಳಿದೆ.


  ಆನ್‌ಲೈನ್ ಶಿಕ್ಷಣ ಹುಡುಕಾಟ ವೇದಿಕೆಯಾದ ಎರುಡೆರಾದಿಂದ ಪಡೆದ ಮಾಹಿತಿ ಆಧಾರದ ಮೇಲೆ ವರದಿ ಮಾಡಿದ್ದು, IIT-JEE, ಯುಪಿಎಸ್‌ಸಿ ನಾಗರಿಕ ಸೇವೆಗಳು ಮತ್ತು ಗೇಟ್ ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳು ಎನ್ನಲಾಗಿದೆ.


  ಐಐಟಿ ಜೆಇಇ
  ಐಐಟಿ ಜೆಇಇ ಪರೀಕ್ಷೆಯು ಭಾರತದಲ್ಲಿ ಅತ್ಯಂತ ಕಠಿಣ ಮತ್ತು ವಿಶ್ವದಲ್ಲೇ ಎರಡನೇ ಕಠಿಣ ಪರೀಕ್ಷೆಯಾಗಿದೆ. IIT JEE ನಿಸ್ಸಂದೇಹವಾಗಿ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ನಂತರ ಎದುರಿಸುವ ಅತ್ಯಂತ ಸವಾಲಿನ ಪರೀಕ್ಷೆಗಳಲ್ಲಿ ಒಂದು. ಈ ಪ್ರವೇಶ ಪರೀಕ್ಷೆಗೆ ತಯಾರಾಗಲು, ಸರಾಸರಿ ಎರಡು ವರ್ಷಗಳ ನಿರಂತರ ಪ್ರಯತ್ನಗಳ ಅಗತ್ಯವಿದೆ. “23 ವಿವಿಧ ಐಐಟಿ ಸಂಸ್ಥೆಗಳಲ್ಲಿ ಸುಮಾರು 11,000 ಸೀಟುಗಳಿಗೆ ಪ್ರತಿ ವರ್ಷ 1.2 ಮಿಲಿಯನ್ ಅಭ್ಯರ್ಥಿಗಳು ಹಾಜರಾಗುತ್ತಾರೆ” ಎಂದು ವರದಿ ಹೇಳಿದೆ.
  10ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ತೆರವುಗೊಳಿಸಿದ ನಂತರ ಜಂಟಿ ಪ್ರವೇಶ ಪರೀಕ್ಷೆಗೆ ತಯಾರಿ ಪ್ರಾರಂಭವಾಗುತ್ತದೆ. ತಮ್ಮ ಎಂಜಿನಿಯರಿಂಗ್ ಪದವಿಗಳನ್ನು ಪಡೆಯುವ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳು 11 ನೇ ತರಗತಿಯಲ್ಲಿ ವಿಜ್ಞಾನವನ್ನು ಆರಿಸಿಕೊಳ್ಳಬೇಕು. ಇದು ವಿದ್ಯಾರ್ಥಿಯ ಜೀವನದಲ್ಲಿ ನಿರ್ಣಾಯಕ ಘಟ್ಟವಾಗಿದೆ.


  ಇದನ್ನೂ ಓದಿ: Competitive Exams: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಈ ತಪ್ಪುಗಳನ್ನು ಮಾಡಬಾರದು


  ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)
  IIT JEE ಪರೀಕ್ಷೆಯ ನಂತರ, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಾಗರಿಕ ಸೇವಾ ಪರೀಕ್ಷೆಗಳು ವಿಶ್ವದಲ್ಲೇ ಈ ಪರೀಕ್ಷೆ ಮೂರನೇ ಕಠಿಣ ಪರೀಕ್ಷೆಯಾಗಿದ್ದರೆ, ಇದು ಭಾರತದ ಎರಡನೇ ಕಠಿಣ ಪರೀಕ್ಷೆಯಾಗಿದೆ. UPSC ಪರೀಕ್ಷೆಗೆ ಹಾಜರಾಗಲು ಸುಮಾರು ಒಂದು ವರ್ಷ ತಯಾರಿಯಾದರು ಬೇಕು. ವರದಿಯ ಪ್ರಕಾರ, ಸುಮಾರು 500,000 ವಿದ್ಯಾರ್ಥಿಗಳು 1,000 ಕ್ಕಿಂತ ಕಡಿಮೆ ಸೀಟುಗಳಿಗೆ ಪ್ರಿಲಿಮ್ಸ್ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಿಲಿಮ್ಸ್, ಮೇನ್ಸ್‌, ಸಂದರ್ಶನ ಎಂಬ ಮೂರು ಪ್ರಮುಖ ಹಂತಗಳಿರುತ್ತವೆ. ಈ ಮೂರು ಹಂತಗಳನ್ನು ಜಯಿಸಿದವರು ಐಎಎಸ್‌, ಐಪಿಎಸ್‌ ಅಧಿಕಾರಿ ಆಗುವ ಅರ್ಹತೆ ಪಡೆಯುತ್ತಾರೆ.
  ಗೇಟ್ ಪರೀಕ್ಷೆ
  ಭಾರತದ ಮೂರನೇ ಕಠಿಣ ಪರೀಕ್ಷೆ ಎಂದರೆ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (ಗೇಟ್), ಇದು ವಿಶ್ವದಲ್ಲಿ 8ನೇ ಕಠಿಣ ಪರೀಕ್ಷೆಯಾಗಿದೆ. ಗೇಟ್ ಪರೀಕ್ಷೆಗೆ ಏನಿಲ್ಲವೆಂದರೂ ಆರರಿಂದ ಒಂದು ವರ್ಷದವರೆಗೆ ಸರಿಯಾದ ತಯಾರಿ ಬೇಕು. ವರದಿಯ ಪ್ರಕಾರ, ಸುಮಾರು 8 ಲಕ್ಷದಿಂದ 1 ಮಿಲಿಯನ್ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಾರೆ ಎಂದು ವರದಿ ಹೇಳಿದೆ. ಇದು ಪ್ರಾಥಮಿಕವಾಗಿ ಸ್ನಾತಕೋತ್ತರ ಕಾರ್ಯಕ್ರಮಕ್ಕೆ ಪ್ರವೇಶಕ್ಕಾಗಿ ಎಂಜಿನಿಯರಿಂಗ್ ಮತ್ತು ವಿಜ್ಞಾನದಲ್ಲಿ ವಿವಿಧ ಪದವಿಪೂರ್ವ ವಿಷಯಗಳ ಸಮಗ್ರ ತಿಳುವಳಿಕೆಯನ್ನು ಪರೀಕ್ಷಿಸುತ್ತದೆ


  ವಿಶ್ವದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ನಂಬರ್‌ ಒನ್‌ ಯಾವುದು?
  ಒಂಬತ್ತು ಗಂಟೆಗಳ ಅವಧಿಯ ಚೀನಾದ ಗಾವೊಕಾವೊ ಪರೀಕ್ಷೆಯು ವಿಶ್ವದ ಅತ್ಯಂತ ಕಠಿಣ ಪರೀಕ್ಷೆಯಾಗಿದೆ. ವಾರ್ಷಿಕ ಆಧಾರದ ಮೇಲೆ ಸುಮಾರು 12 ಮಿಲಿಯನ್ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ. ಇಂಗ್ಲೆಂಡ್‌ನ ಮೆನ್ಸಾ ಪರೀಕ್ಷೆಯು ನಾಲ್ಕನೇ ಸ್ಥಾನದಲ್ಲಿದೆ.
  ಇತರೆ ಕಷ್ಟದ ಪರೀಕ್ಷೆಗಳು
  ವರದಿ ಪ್ರಕಾರ ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ (CFA), ಸಿಸ್ಕೊ ​​ಸರ್ಟಿಫೈಡ್ ಇಂಟರ್‌ನೆಟ್‌ವರ್ಕ್ ಎಕ್ಸ್‌ಪರ್ಟ್ (CCIE), ಯುನೈಟೆಡ್ ಸ್ಟೇಟ್ಸ್ ಮೆಡಿಕಲ್ ಲೈಸೆನ್ಸಿಂಗ್ ಎಕ್ಸಾಮಿನೇಷನ್ (USMLE) ಮತ್ತು ಕ್ಯಾಲಿಫೋರ್ನಿಯಾ ಬಾರ್ ಪರೀಕ್ಷೆಗಳು ಸಹ ಕಠಿಣ ಪರೀಕ್ಷೆಗಳ ಪಟ್ಟಿಯಲ್ಲಿವೆ.

  Published by:Kavya V
  First published: