• Home
 • »
 • News
 • »
 • jobs
 • »
 • Career in Beauty Industry: ಈ ಕೋರ್ಸ್​​ಗಳನ್ನು ಮಾಡಿದ್ರೆ ಬ್ಯೂಟಿ ಇಂಡಷ್ಟ್ರಿಯಲ್ಲಿ ಲಕ್ಷ ಲಕ್ಷ ಗಳಿಸಬಹುದು

Career in Beauty Industry: ಈ ಕೋರ್ಸ್​​ಗಳನ್ನು ಮಾಡಿದ್ರೆ ಬ್ಯೂಟಿ ಇಂಡಷ್ಟ್ರಿಯಲ್ಲಿ ಲಕ್ಷ ಲಕ್ಷ ಗಳಿಸಬಹುದು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸೌಂದರ್ಯಶಾಸ್ತ್ರದ ಕುರಿತು ಅಧ್ಯಯನವನ್ನು ಕೈಗೆತ್ತಿಕೊಂಡು, ಈ ವಿಭಾಗದಲ್ಲಿ ಕೈ ತುಂಬಾ ಸಂಬಳ ಹೊಂದುವ ಉದ್ಯೋಗ ಪಡೆಯಬಹುದಾಗಿದೆ. ಈ ಕ್ಷೇತ್ರದ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ.

 • Trending Desk
 • 4-MIN READ
 • Last Updated :
 • Share this:

  ಜೀವನದಲ್ಲಿ ಸೆಟಲ್ ಆಗಬೇಕು ಎಂಬುದು ಪ್ರತಿಯೊಬ್ಬರ ಇಚ್ಛೆಯಾಗಿರುತ್ತದೆ. ಹಾಗಾಗಿಯೇ ಶಿಕ್ಷಣ ಕೋರ್ಸ್‌ಗಳನ್ನು (Professional Courses) ಆಯ್ಕೆಮಾಡುವಾಗ ಮುಂದಿನ ಭವಿಷ್ಯವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಕೋರ್ಸ್‌ಗಳನ್ನು ಆರಿಸುತ್ತಾರೆ. ಇದಕ್ಕಾಗಿಯೇ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ಇಲ್ಲವೇ ಇಂಜಿನಿಯರಿಂಗ್ (Medical or Engineering) ಕ್ಷೇತ್ರವನ್ನು ಆರಿಸಿಕೊಳ್ಳುತ್ತಾರೆ. ವೈದ್ಯರಾಗಿ ಮಾತ್ರವಲ್ಲದೆ ಈ ಕ್ಷೇತ್ರದಲ್ಲಿ ಬೇರೆ ಬೇರೆ ಉದ್ಯೋಗ (Jobs) ವಲಯಗಳಿವೆ.


  ಲ್ಯಾಬ್ ಟೆಕ್ನೀಶಿಯನ್, ನರ್ಸಿಂಗ್, ಎಕ್ಸರೇ ಸ್ಪೆಶಲಿಸ್ಟ್, ಅರವಳಿಕೆ ತಜ್ಞರು ಹೀಗೆ ಉದ್ಯೋಗಕ್ಕೆ ತಕ್ಕಂತಹ ಕೋರ್ಸ್‌ಗಳನ್ನು ಮಾಡಿದರೆ  ವೈದ್ಯಕೀಯರಂಗದಲ್ಲಿ ಕೂಡ ಉತ್ತಮ ಸಂಪಾದನೆ ಮಾಡಬಹುದಾಗಿದೆ.


  ಸೌಂದರ್ಯಶಾಸ್ತ್ರ ಕ್ಷೇತ್ರ ಉತ್ತಮ ಬೇಡಿಕೆ ಇರುವ ಕ್ಷೇತ್ರ


  ವೈದ್ಯಕೀಯ ಕ್ಷೇತ್ರದಲ್ಲಿ ಈಗೀಗ ಹೆಚ್ಚು ಸುದ್ದಿಯಲ್ಲಿರುವುದು ಸೌಂದರ್ಯಶಾಸ್ತ್ರವಾಗಿದೆ. ಹೊರದೇಶಗಳಲ್ಲಿ ಈ ಕ್ಷೇತ್ರಕ್ಕೆ ಒಳ್ಳೆಯ ಬೇಡಿಕೆ ಇದೆ. ಮಹಿಳೆಯರು ಹಾಗೂ ಪುರುಷರು ಸೌಂದರ್ಯಶಾಸ್ತ್ರದ ಕುರಿತು ಅಧ್ಯಯನವನ್ನು ಕೈಗೆತ್ತಿಕೊಂಡು, ಈ ವಿಭಾಗದಲ್ಲಿ ಕೈ ತುಂಬಾ ಸಂಬಳ ಹೊಂದುವ ಉದ್ಯೋಗ ಪಡೆಯಬಹುದಾಗಿದೆ. ಈ ಕ್ಷೇತ್ರದ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ.


  new year party beauty tips for girls


  ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ಉದ್ಯಮವು ರೂ 54,558 ಕೋಟಿ ಆದಾಯ ಗಳಿಸಿದೆ ಎಂದು 2020 ರ ವರದಿಯು ತಿಳಿಸಿದೆ. 2023 ರ ವೇಳೆಗೆ ಈ ಪ್ರಮಾಣ 10% ಏರಿಕೆಯಾಗುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


  ಕ್ಲಿನಿಕಲ್ ಕಾಸ್ಮೆಟಾಲಜಿಯಲ್ಲಿ ಪಿಜಿ ಡಿಪ್ಲೊಮಾ


  ಕಾಸ್ಮೆಟಿಕ್ (ತ್ವಚೆ, ಕೂದಲು) ಟ್ರೈಕೋಲಜಿ (ಕೂದಲು ಮತ್ತು ನೆತ್ತಿಗೆ ಸಂಬಂಧಿಸಿದ ವೈದ್ಯಕೀಯ ಮತ್ತು ಸೌಂದರ್ಯವರ್ಧಕ ಅಧ್ಯಯನ) ಸ್ನಾಯುಗಳನ್ನು ಬಲಪಡಿಸುವುದು, ಮೊಡವೆಗಳ ಚಿಕಿತ್ಸೆ, ಮಚ್ಚೆ, ಟ್ಯಾಟೂಗಳನ್ನು ತೆಗೆದುಹಾಕುವುದು, ತಲೆಹೊಟ್ಟು ನಿವಾರಣೆ ಮೊದಲಾದ ಚಿಕಿತ್ಸೆಗಳ ಅಧ್ಯಯನವನ್ನು ಒಳಗೊಂಡಿದೆ.


  ಬೊಟಾಕ್ಸ್ ಮತ್ತು ಫಿಲ್ಲರ್‌ಗಳಲ್ಲಿ ಸರ್ಟಿಫಿಕೇಟ್ ಕೋರ್ಸ್


  ಬೊಟಾಕ್ಸಿ ಹಾಗೂ ಫಿಲ್ಲರ್ಸ್ ಎಂಬುದು ತ್ವಚೆಗೆ ಯವ್ವೌನದ ಕಳೆಯನ್ನು ಉಂಟುಮಾಡುವ ನೋವುರಹಿತ ಚಿಕಿತ್ಸೆಯಾಗಿದೆ. ಈ ಕೋರ್ಸ್‌ಗಳು ಮುಖದ ಅಂಗರಚನಾಶಾಸ್ತ್ರ, ವಯಸ್ಸಾಗುವಿಕೆ ಕಾಣದಂತೆ ಮಾಡುವುದು, ಮಾರುಕಟ್ಟೆಯಲ್ಲಿನ ಉತ್ಪನ್ನಗಳ ಕಲಿಕೆಗೆ ಸಹಕಾರಿಯಾಗಿದೆ.
  ಸ್ತ್ರೀರೋಗ ಶಾಸ್ತ್ರದಲ್ಲಿ ಸರ್ಟಿಫಿಕೇಟ್ ಕೋರ್ಸ್


  ಶಸ್ತ್ರಚಿಕಿತ್ಸೆ ರಹಿತ ಚಿಕಿತ್ಸಾ ವಿಧಾನಗಳನ್ನು ಈ ಕೋರ್ಸ್ ತಿಳಿಸುತ್ತದೆ. ಪ್ಲಾಸ್ಮಾ ಥೆರಪಿ, ಮೆಸೊಥೆರಪಿ, ಹೈ-ಇಂಟೆನ್ಸಿಟಿ ಫೋಕಸ್ಡ್ ಅಲ್ಟ್ರಾಸೌಂಡ್, ಫ್ರಾಕ್ಷನಲ್ CO2, ಕೆಮಿಕಲ್ ಪೀಲ್ಸ್, ಮತ್ತು ಬೊಟಾಕ್ಸ್ ಮತ್ತು ಫಿಲ್ಲರ್‌ಗಳ ಕುರಿತು ಕಲಿಕೆಯನ್ನು ಒಳಗೊಂಡಿದೆ.


  ಮೈಕ್ರೋಬ್ಲೇಡಿಂಗ್ ಮತ್ತು ಮೈಕ್ರೋ ಪಿಗ್ಮೆಂಟೇಶನ್‌ ಕೋರ್ಸ್


  ತ್ವಚೆಯ ಗಾಯ, ಮೊಡವೆ, ಕೂದಲು ಉದುರುವಿಕೆ, ಹಲ್ಲಿನ ಉಬ್ಬು, ತುಟಿ ಬಣ್ಣಕ್ಕೆ ಸಂಬಂಧಿತ ಕೋರ್ಸ್‌ಗಳನ್ನು ಇದರಲ್ಲಿ ಕಲಿಯಬಹುದಾಗಿದೆ.


  ತೂಕ ನಿರ್ವಹಣೆಯ ಕೋರ್ಸ್‌ಗಳು


  ರೋಗಿಯ ಮಾನಸಿಕ ಹಾಗೂ ದೈಹಿಕ ಸ್ಥಿತಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ಆಹಾರ ಯೋಜನೆ, ವ್ಯಾಯಾಮ ದಿನಚರಿ ಹಾಗೂ ಔಷಧಗಳನ್ನು ತಿಳಿಸಿಕೊಡುವ ಕೋರ್ಸ್‌ಗಳನ್ನು ಕಲಿಯಬಹುದಾಗಿದೆ. ರೋಗಿಯ ಮನೋವಿಜ್ಞಾನವನ್ನು ಈ ಕೋರ್ಸ್ ತಿಳಿಸುತ್ತದೆ.
  ಹೆಚ್ಚಿನ ಬೇಡಿಕೆ ಇದೆ


  ಕೆನಡಾದಂತಹ ದೇಶಗಳಲ್ಲಿ ಸೌಂದರ್ಯಶಾಸ್ತ್ರ ತಜ್ಞರು ಅಥವಾ ಕಾಸ್ಮೆಟಿಕ್ ತಜ್ಞರು ಉತ್ತಮ ಬೇಡಿಕೆ ಹೊಂದಿದ್ದಾರೆ. ವಿವಿಧ ಬಜೆಟ್‌ಗಳಲ್ಲಿ ವಿವಿಧ ಶ್ರೇಣಿಯ ಸೇವೆಗಳನ್ನು ಒದಗಿಸಬಹುದಾಗಿದೆ.


  ಸೌಂದರ್ಯಕ್ಕಿರುವ ಬೇಡಿಕೆಯಿಂದ ಈ ಕ್ಷೇತ್ರದಲ್ಲಿ ಪರಿಣಿತಿಯನ್ನು ಸಾಧಿಸಬಹುದು ಅಂತೆಯೇ ಚಿಕಿತ್ಸಾಲಯಗಳನ್ನು ತೆರೆಯಬಹುದು. ಚರ್ಮರೋಗ ತಜ್ಞರು ಸೌಂದರ್ಯಶಾಸ್ತ್ರದ ಉದ್ಯಮಕ್ಕೆ ಪ್ರವೇಶಿಸಲು ಆರ್ಥಿಕ ಅವಕಾಶವನ್ನು ಒದಗಿಸುತ್ತದೆ.


  ಹೆಚ್ಚು ಸಮಯ ವ್ಯಯಿಸುವ ಅಗತ್ಯವಿಲ್ಲ


  ಆಸ್ಪತ್ರೆಯಲ್ಲಿ ಕೆಲಸ ಮಾಡುವ ಇತರ ವೈದ್ಯ ವೃತ್ತಿಗಿಂತ ಪ್ರತ್ಯೇಕವಾಗಿರುವ ಈ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ವಿನಿಯೋಗಿಸುವ ಅಗತ್ಯವಿರುವುದಿಲ್ಲ. ನಿಮ್ಮ ಸಮಯವನ್ನು ನಿಮಗೆ ಹೊಂದಿಸಬಹುದಾಗಿದೆ. ರಾತ್ರಿ ಪೂರ್ತಿ ಆಸ್ಪತ್ರೆಯಲ್ಲಿ ಇರಬೇಕಾದ ಅಗತ್ಯವೂ ಇಲ್ಲ.
  ಇದರಿಂದ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕ್ಲಿನಿಕ್ ನಡೆಸಬಹುದು. ಅಪಾಯಿಂಟ್‌ಮೆಂಟ್ ಇದ್ದಾಗ ಮಾತ್ರವೇ ಸೇವೆಯನ್ನು ಒದಗಿಸಬಹುದು. ಹೀಗಾಗಿ ಹೆಚ್ಚು ಸಮಯ ನೀವು ಬಿಡುವಾಗಿಯೇ ಇರುತ್ತೀರಿ.


  ಸಂತೋಷ ಹಾಗೂ ಹೆಮ್ಮೆಯನ್ನೊದಗಿಸುವ ಉದ್ಯೋಗ


  ಸೌಂದರ್ಯ ಸಮಸ್ಯೆಗಳನ್ನು ನೀಗಿಸುವ ಸಲುವಾಗಿ ಹೆಚ್ಚಿನವರು ಸೌಂದರ್ಯ ಚಿಕಿತ್ಸಕರ ಬಳಿ ಬರುತ್ತಾರೆ ಹಾಗೂ ತಮ್ಮ ಸಮಸ್ಯೆಗಳಿಗೆ ಪರಿಹಾರಹೊಂದಲು ಬಯಸುತ್ತಾರೆ. ಹೀಗಾಗಿ ಒಂದು ರೀತಿಯ ಸಾರ್ಥಕತೆ ನಿಮ್ಮಲ್ಲಿ ತುಂಬಿರುತ್ತದೆ. ಕುರೂಪಿಯನ್ನು ಸುಂದರಗೊಳಿಸುವ ಚಾಕಚಕ್ಯತೆ ನಿಮ್ಮಲ್ಲಿರುತ್ತದೆ ಹಾಗಾಗಿ ಈ ಉದ್ಯೋಗ ನಿಮಗೆ ಸಂತೋಷ ಕೊಡುವುದಲ್ಲದೆ ಹೆಮ್ಮೆ ಪಡುವಂತೆಯೂ ಮಾಡುತ್ತದೆ.


  ಕೈತುಂಬಾ ಸಂಬಳ, ಉತ್ತಮ ಬೇಡಿಕೆ


  ಒಂದೊಂದು ದಿನ ಹೆಚ್ಚಿನ ರೋಗಿಗಳು ನಿಮ್ಮ ಕ್ಲಿನಿಕ್‌ಗೆ ಭೇಟಿ ನೀಡಬಹುದು. ತಮಗೆ ಬೇಕಾದ ಚಿಕಿತ್ಸೆಗಳನ್ನು ಅವರು ಹೆಚ್ಚು ಸಮಯ ಮಾಡಿಸಿಕೊಳ್ಳಬಹುದು ಹೀಗಾದಾಗ ಉತ್ತಮ ವೇತನ ಕೂಡ ನಿಮ್ಮ ಕೈಸೇರುತ್ತದೆ. ನಿಮ್ಮ ಸೇವಾ ಗುಣಮಟ್ಟ ಉತ್ತಮವಾಗಿದ್ದಷ್ಟು ಹೆಚ್ಚು ಹೆಚ್ಚು ರೋಗಿಗಳು ನಿಮ್ಮ ಕ್ಲಿನಿಕ್‌ಗೆ ಭೇಟಿ ನೀಡುತ್ತಾರೆ.

  Published by:Kavya V
  First published: