• Home
 • »
 • News
 • »
 • jobs
 • »
 • Professional Courses: 3-4 ವರ್ಷಗಳ ಡಿಗ್ರಿಗಿಂತ ಈ ಕೋರ್ಸ್​ಗಳನ್ನು ಮಾಡಿದ್ರೆ ಒಳ್ಳೆಯ ಕೆಲಸ ಬೇಗ ಸಿಗುತ್ತೆ

Professional Courses: 3-4 ವರ್ಷಗಳ ಡಿಗ್ರಿಗಿಂತ ಈ ಕೋರ್ಸ್​ಗಳನ್ನು ಮಾಡಿದ್ರೆ ಒಳ್ಳೆಯ ಕೆಲಸ ಬೇಗ ಸಿಗುತ್ತೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈ ವಿಶೇಷ ಕೋರ್ಸ್‌ಗಳಲ್ಲಿ ಪ್ರಾಕ್ಟಿಕಲ್ ಸ್ಕಿಲ್ಸ್‌ ಮತ್ತು ಕೆಲಸದ ತರಬೇತಿಯ ಮೇಲೆ ಒತ್ತು ನೀಡಲಾಗುತ್ತದೆ. ಇದರಿಂದ  ಉದ್ಯೋಗ ಪಡೆಯುವ ಅವಕಾಶಗಳು ಹೆಚ್ಚಿರುತ್ತವೆ.

 • Trending Desk
 • 4-MIN READ
 • Last Updated :
 • Share this:

  ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳು (Students) ಹೆಚ್ಚಾಗಿ ಸಾಂಪ್ರದಾಯಿಕ ಕೋರ್ಸ್‌ಗಳಾದ ಬಿಎ, ಬಿಇ, ಬಿಟೆಕ್‌ ಅಥವಾ ಎಂಬಿಬಿಎಸ್‌ ಇಂಥವುಗಳಿಗಿಂತ ಹೆಚ್ಚಾಗಿ ವೃತ್ತಿಪರ ಕೋರ್ಸ್‌ ನತ್ತ (Professional Courses) ಆಕರ್ಷಿತರಾಗುತ್ತಿದ್ದಾರೆ. ವೃತ್ತಿಪರ ಕೋರ್ಸ್ ಎಂದರೆ ಸೈದ್ಧಾಂತಿಕ ಜ್ಞಾನಕ್ಕಿಂತ ಪ್ರಾಯೋಗಿಕ ಕೌಶಲ್ಯಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುತ್ತದೆ.


  ಈ ವಿಶೇಷ ಕೋರ್ಸ್‌ಗಳಲ್ಲಿ ಪ್ರಾಕ್ಟಿಕಲ್ ಸ್ಕಿಲ್ಸ್‌ ಮತ್ತು ಕೆಲಸದ ತರಬೇತಿಯ ಮೇಲೆ ಒತ್ತು ನೀಡಲಾಗುತ್ತದೆ. ಇದರಿಂದ  ಉದ್ಯೋಗ ಪಡೆಯುವ ಅವಕಾಶಗಳು ಹೆಚ್ಚಿರುತ್ತವೆ. ಹಾಗಿದ್ರೆ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾದ ಟಾಪ್ 5 ಲಾಭದಾಯಕ ವೃತ್ತಿಪರ ಕೋರ್ಸ್‌ಗಳ (Career Tips) ಪಟ್ಟಿ ಇಲ್ಲಿದೆ.


  1. ಪಾಕಶಾಸ್ತ್ರ : ಅನೇಕ ವರ್ಷಗಳಿಂದಲೂ ಅಡುಗೆ ಮತ್ತು ಅದರ ತರಗತಿಗಳು ಜನಪ್ರಿಯವಾಗಿವೆ. ಪ್ರಾಯೋಗಿಕವಾಗಿ ಎಲ್ಲಾ ಪಾಕಶಾಲೆಯ ಕಾರ್ಯಕ್ರಮಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿವೆ ಎಂಬುದು ಮಹತ್ವದ ಅಂಶ. ಈ ಕೋರ್ಸ್‌ ಆಸಕ್ತಿದಾಯಕ ವೃತ್ತಿಜೀವನದ ಜೊತೆಗೆ ಆರ್ಥಿಕ ಭದ್ರತೆಯನ್ನು ಸಹ ನೀಡುತ್ತದೆ. ಪಾಕಶಾಲೆಯಲ್ಲಿ ಪ್ರತಿಭಾವಂತರಾಗಿರುವ ವಿದ್ಯಾರ್ಥಿಗಳು ಹೆಚ್ಚಿನ ವೇತನದಿಂದಾಗಿ ಜೀವನದಲ್ಲಿ ಬೇಗ ಮುಂದೆ ಬರಬಹುದು.
  ಅಂದಹಾಗೆ ಪಾಕಶಾಸ್ತ್ರವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ವಿದೇಶಿ ಹೋಟೆಲ್‌ಗಳು, ಕೆಫೆಗಳು, ಪಂಚತಾರಾ ಊಟದ ಸಂಸ್ಥೆಗಳು, ರೈಲುಗಳು ಮತ್ತು ವಿಮಾನಯಾನ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದು.


  ಇದನ್ನೂ ಓದಿ: Career Options for Housewives: ಹೋಮ್ ಮೇಕರ್ಸ್ ಮನೆಯಿಂದಲೇ ಮತ್ತೆ ತಮ್ಮ ಕರಿಯರ್ ಶುರು ಮಾಡಬಹುದು


  2. ಫೋಟೋಗ್ರಫಿ: ಫೋಟೋಗ್ರಫಿ ಎಲ್ಲಾ ಕಾಲದಲ್ಲೂ ಬೇಡಿಕೆಯಲ್ಲಿರುವ ಲಾಭದಾಯಕ ವೃತ್ತಿಕೋರ್ಸ್‌ ಆಗಿದೆ. ಛಾಯಾಗ್ರಾಹಕರಾದವರು ಈವೆಂಟ್, ಮದುವೆ, ವನ್ಯಜೀವಿ, ಫ್ಯಾಷನ್ ಅಥವಾ ಸಿನೇಮಾ ಹೀಗೆ ಬೇರೆ ಬೇರೆ ರೀತಿಯ ಫೋಟೋಗ್ರಾಫರ್‌ ಆಗಿ ಕೆಲಸ ಮಾಡಬಹುದು.


  career in photography how to become professional photographer career in photography
  ಫೋಟೋ ಕೃಪೆ: Reinhart Julian


  ನೀವು ಛಾಯಾಗ್ರಹಣ ಉದ್ಯಮದಲ್ಲಿ ಕೆಲಸ ಮಾಡಲು ಬಯಸಿದರೆ, ಸ್ವಂತಿಕೆ ಮತ್ತು ಕಲ್ಪನೆಯ ಕಣ್ಣನ್ನು ಹೊಂದಿರುವುದು ಅತ್ಯಗತ್ಯ. ಅಲ್ದೇ, ನೀವು ಸ್ವತಂತ್ರ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಬಹುದು ಮತ್ತು ವಿಭಿನ್ನ ಥೀಮ್‌ಗಳಲ್ಲಿ ಫೋಟೋ ತೆಗೆಯುವುದನ್ನು ಆನಂದಿಸ್ತೀರಿ ಎಂದಾದರೆ ಅದನ್ನೂ ಕೂಡ ಮಾಡಬಹುದು.


  3.ಆ್ಯನಿಮೇಷನ್: ಆ್ಯನಿಮೇಷನ್‌ ಜಗತ್ತಿನಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಸಾಕಷ್ಟು ಕ್ರಿಯೇಟಿವ್‌ ಮೈಂಡ್‌ ಹೊಂದಿರುವ ವ್ಯಕ್ತಿಗಳಿಗೆ ಇದು ಅತ್ಯಂತ ಸೂಕ್ತ ಕ್ಷೇತ್ರ.


  ಅಂದಹಾಗೆ ಆ್ಯನಿಮೇಷನ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನೀವು ಕಲ್ಪನೆಯ ಸಾಮರ್ಥ್ಯ ಹೊಂದಿರಬೇಕು. ಅಲ್ದೇ ರೇಖಾಚಿತ್ರದಲ್ಲಿ ಪರಿಣತಿ ಹೊಂದಿರಬೇಕು. ಅಂದಹಾಗೆ ಗೇಮಿಂಗ್, ಟಿಲಿವಿಷನ್‌, ಜಾಹೀರಾತು, ಚಲನಚಿತ್ರಗಳು ಮತ್ತು ಶಿಕ್ಷಣ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ನುರಿತ ಆನಿಮೇಟರ್ ಆಗಿ ನೀವು ಕೆಲಸ ಮಾಡಬಹುದು.


  Animation course with abundant job opportunities and the Career in Animation stg asp
  ಅನಿಮೇಷನ್‌


  4. ವಿದೇಶಿ ಭಾಷೆ: ವಿದೇಶಿ ಭಾಷೆಯ ಕೋರ್ಸ್ ನಿಮಗೆ ಹೊಸ ಭಾಷೆಯನ್ನು ಕಲಿಸುವುದರ ಜೊತೆಗೆ ಇನ್ನೊಂದು ದೇಶದ ಸಂಸ್ಕೃತಿ ಮತ್ತು ಜೀವನ ವಿಧಾನದ ಬಗ್ಗೆ ಕಲಿಸುತ್ತದೆ. ಎರಡು ಅಥವಾ ಹೆಚ್ಚಿನ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವವರಿಗೆ, ಈ ರೀತಿಯ ವೃತ್ತಿಪರ ಕೋರ್ಸ್ ಸೂಕ್ತವಾಗಿದೆ. ಮಾರುಕಟ್ಟೆಗಳ ಜಾಗತೀಕರಣದಿಂದಾಗಿ ಬಹುಭಾಷಾ ತಜ್ಞರ ಬೇಡಿಕೆ ಹೆಚ್ಚುತ್ತಿದೆ.


  ಬೇರೆ ಬೇರೆ ದೇಶದ ಜನರೊಂದಿಗೆ ಕೆಲಸ ಮಾಡುವಾಗ ಪದಗಳನ್ನು ಮತ್ತು ನೀತಿಗಳನ್ನು ಭಾಷಾಂತರಿಸಲು MNC ಗಳಿಗೆ ಭಾಷಾಶಾಸ್ತ್ರಜ್ಞರ ಸಹಾಯದ ಅಗತ್ಯವಿದೆ. ಫ್ರೆಂಚ್, ಜರ್ಮನ್, ರಷ್ಯನ್, ಚೈನೀಸ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಮುಂತಾದ ಭಾಷೆಗಳನ್ನು ಕಲಿತರೆ ನೀವು ಶಿಕ್ಷಕ, ಸ್ವತಂತ್ರೋದ್ಯೋಗಿ, ಅನುವಾದಕ, ತಾಂತ್ರಿಕ ಡಿಕೋಡರ್ ಮತ್ತು ಇಂಟರ್ಪ್ರಿಟರ್ ಆಗಿ ಕೆಲಸ ಮಾಡಬಹುದು.


  5. ಕಮರ್ಷಿಯಲ್‌ ಪೈಲಟ್: ಈ ಕೋರ್ಸ್‌ನಲ್ಲಿ ನೀಡಲಾಗುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪೈಲಟ್ ತರಬೇತಿಯು 12–18 ತಿಂಗಳುಗಳಲ್ಲಿ ಪೂರ್ಣಗೊಳ್ಳುತ್ತದೆ. ಇದಕ್ಕಾಗಿ ನೀವು ಪಿಯುಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಎರಡರಲ್ಲೂ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು. ಪೈಲಟ್ ತರಬೇತಿಯ ಎರಡು ಅಂಶಗಳೆಂದರೆ ಗ್ರೌಂಡ್‌ ಸ್ಕೂಲ್‌ ಮತ್ತು ಫ್ಲೈಯಿಂಗ್‌ ಸ್ಕೂಲ್‌.
  ಅದರಲ್ಲಿ ವಾಯು ನಿಯಮಗಳು, ವಾಯುಯಾನ ಪವನಶಾಸ್ತ್ರ, ವಾಯು ಸಂಚಾರ, ವಿಮಾನ ತಾಂತ್ರಿಕ ವಿಷಯಗಳು ಸೇರಿದಂತೆ ಸೈದ್ಧಾಂತಿಕ ವಿಷಯಗಳನ್ನು ನೆಲದ ತರಬೇತಿ ಒಳಗೊಂಡಿರುತ್ತವೆ.

  Published by:Kavya V
  First published: