ಯುಪಿಎಸ್‌ಸಿ ಪರೀಕ್ಷೆ (UPSC Exam ) ಎಂದರೆ ಕಬ್ಬಿಣದ ಕಡಲೆ ಅಂತ ಹಲವರು ಭಾವಿಸುತ್ತಾರೆ. ಆದರೆ ಪರಿಶ್ರಮ ಪಟ್ಟು ಓದಿದರೆ ಎಲ್ಲವೂ ಸುಲಭ ಎನ್ನುವುದು ಮತ್ತೊಂದು ವರ್ಗದವರ ವಾದ. ದೇಶದ ಅತ್ಯಂತ ಕಠಿಣ ಪರೀಕ್ಷೆಯನ್ನು (Toughest Exam) ಗೆಲ್ಲುವುದಕ್ಕೆ ಇರೋದು ಓದು, ಪರಿಶ್ರಮ, ತಾಳ್ಮೆ ಎಂಬ ಅಸ್ತ್ರಗಳು. ಇವು ಇಲ್ಲದಿದ್ದರೆ ಎಲ್ಲಾ ಪರೀಕ್ಷೆಗಳು ಕಷ್ಟನೇ. ಯುಪಿಎಸ್ ಪರೀಕ್ಷೆಯ ಸುತ್ತಮುತ್ತ ಕೆಲವು ಮಿಥ್ಯ (Myths) ಪುರಾಣಗಳು ಇವೆ. ಯುಪಿಎಸ್‌ಸಿ ಪರೀಕ್ಷೆ ತಯಾರಿಯ ಸುತ್ತಮುತ್ತ ಇರುವ ಈ ಸುಳ್ಳು ನಾವಿಲ್ಲಿ ತಿಳಿಯೋಣ.
ಮಿಥ್ಯ #1: ಕಠಿಣ ಮತ್ತು ಇದು ಎಲ್ಲಾ ಪರೀಕ್ಷೆಗಳ ತಾಯಿಯ
ಯುಪಿಎಸ್‌ಸಿಗೆ ಓದಿದರೆ ಸಾಕು ನೀವು ಇನ್ನೂ ಎಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಬಹುದು. ಇದು ಎಲ್ಲಾ ಪರೀಕ್ಷೆಗಳ ತಾಯಿ ಇದ್ದಂತೆ ಅನ್ನೋ ಮಾತು ನಮ್ಮ ಕಿವಿ ಮೇಲೆ ಬಿದ್ದಿರುತ್ತದೆ. ಹೌದು ಇದರಲ್ಲಿನ ಆಳ-ಅಗಲ ಬೇರೆ ಪರೀಕ್ಷೆಗಳಿಗೆ ಸಹಾಯವಾಗುತ್ತದೆ. ಹಾಗಂತ ಇದು ಎಲ್ಲಾ ಪರೀಕ್ಷೆಗಳಿಗೂ ಅನ್ವಯವಾಗುವುದಿಲ್ಲ. ಕೆಲವು ಪರೀಕ್ಷೆಗಳಿಗೆ ಅದರದ್ದೇ ಆದ ವಸ್ತು ನಿಷ್ಠ ವಿಷಯ ಇರುತ್ತದೆ. ಆ ಪ್ರಕಾರವಾಗಿ ಓದಿದರೆ ಮಾತ್ರ ಆ ಪರೀಕ್ಷೆಯನ್ನು ಪಾಸ್ ಮಾಡಬಹುದು.
ಮಿಥ್ಯ #2: ಆಕಾಂಕ್ಷಿಗಳು ಎಲ್ಲಾ ವಿಷಯದ ಬಗ್ಗೆ ಇಂಚಿಂಚೂ ತಿಳಿದುಕೊಂಡಿರಬೇಕು.
ಯುಪಿಎಸ್‌ಸಿ ಪರೀಕ್ಷೆ ತುಂಬಾ ಕಠಿಣವಾಗಿದ್ದು, ಯಾವ ಪ್ರಶ್ನೆಗಳು ಬರುತ್ತವೆ ಅಂತಾ ಊಹೆ ಮಾಡೋದು ಕಷ್ಟ. ಹೀಗಾಗಿ ಪ್ರತಿ ವಿಷಯದ ಇಂಚಿಂಚೂ ಮಾಹಿತಿಯನ್ನು ಆಕಾಂಕ್ಷಿಗಳು ಕಲೆ ಹಾಕಿರಬೇಕು ಎನ್ನಲಾಗುತ್ತದೆ. ಆದರೆ ಇಲ್ಲೂ ಸಹ ಪರೀಕ್ಷೆಗೆ ತಯಾರಾಗಲು ಕೆಲವು ವಸ್ತು ವಿಷಯಗಳನ್ನು ನೀಡಲಾಗುತ್ತದೆ. ವಸ್ತು ವಿಷಯ, ಪ್ರಚಲಿತ ಘಟನೆ ಹೀಗೆ ಕೆಲವು ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕು.
ಯಾವುದೇ ಪರೀಕ್ಷೆಯಾದರೂ ಒಂದು ವಿಧಾನ, ಮಿತಿ ಇರುತ್ತದೆ. UPSC ಸಾಮಾನ್ಯ ಪರೀಕ್ಷೆಯಾಗಿದ್ದು, ಪಠ್ಯಕ್ರಮದಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕ್ಷೇತ್ರಗಳು ಮತ್ತು ವಿಷಯಗಳ ವಿಶಾಲವಾದ ಪರಿಕಲ್ಪನಾ ಪಾಂಡಿತ್ಯದ ಅಗತ್ಯವಿದೆ. ಹಾಗಂತ ಮಾತ್ರಕ್ಕೆ ಎಲ್ಲವನ್ನೂ ಅರೆದು ಕುಡಿದಿರಬೇಕು ಅಥವಾ ನೀವು ಓಡಾಡುವ ಎನ್ಸೈಕ್ಲೋಪೀಡಿಯಾ ಆಗಿರಬೇಕು ಎಂದಿಲ್ಲ.
ಮಿಥ್ಯ #3: ಇದು ಅದೃಷ್ಟದ ಆಟ
ಇಂತಹ ಕೆಲಸ ಸಿಗಬೇಕು ಎಂದರೆ ಅದೃಷ್ಟವೂ ಬೇಕು, ನಮ್ಮ ಹಣೆಯ ಮೇಲೆ ಏನಿರುತ್ತದೆಯೋ ಅಷ್ಟೇ ಸಿಗೋದು, ಇಷ್ಟೇಲ್ಲಾ ಓದಿದರು ಪಾಸ್ ಆಗುತ್ತಿಲ್ಲ ಅಂದರೆ ನಿನಗೆ ಅದೃಷ್ಟ ಇಲ್ಲ ಅಂತಾ ಆಕಾಂಕ್ಷಿಗಳ ಮೇಲೆ ಹಣೆ ಪಟ್ಟಿ ಕಟ್ಟಿಬಿಡುತ್ತಾರೆ. ಆದರೆ ಈ ಪರೀಕ್ಷೆಯನ್ನು ಪಾಸ್ ಮಾಡಲು ಬೇಕಿರುವುದು ಓದು, ತಾಳ್ಮೆ, ಪರಿಶ್ರಮ. ಇವುಗಳಿಂದ ಎಲ್ಲವನ್ನೂ ಸಾಧಿಸಬಹುದು. ನಮ್ಮ ಸರಿಯಾದ ಅಭ್ಯಾಸ ಅದೃಷ್ಟವನ್ನೇ ತಲೆಕೆಳಗಾಗಿಸುತ್ತದೆ.
ಮಿಥ್ಯ #4: ಇಂಗ್ಲಿಷ್ ಭಾಷೆಯ ಬಲವಾದ ಜ್ಞಾನ ಹೊಂದಿರಬೇಕು.
ಇದೊಂದು ಸತ್ಯಕ್ಕೆ ದೂರವಾದ ಮಾತು. ಇಂಗ್ಲಿಷ್ ಇತರ ಭಾಷೆಯಂತೆ ಒಂದು ಭಾಷೆ ಹೊರತು ಜ್ಞಾನವಲ್ಲ. ಅದೆಷ್ಟೋ ಅಭ್ಯರ್ಥಿಗಳು ಇಂಗ್ಲಿಷ್ ಭಾಷೆಯ ಕಾರಣಕ್ಕಾಗಿಯೇ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ.
ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಗಳಲ್ಲಿ ಸರಿಯಾದ ಕೋಡ್ ಅನ್ನು ಟಿಕ್ ಮಾಡಬೇಕಾಗಿರುವುದರಿಂದ ಪೂರ್ವಭಾವಿ ಪರೀಕ್ಷೆಗೆ ಹೆಚ್ಚು ಇಂಗ್ಲಿಷ್ ಅಗತ್ಯವಿಲ್ಲ.
ಇದನ್ನೂ ಓದಿ: Competitive Exams ಸುಲಭವಲ್ಲ, ಆದರೆ ಅಸಾಧ್ಯವೂ ಅಲ್ಲ: ಹೀಗೆ ಜಾಣ್ಮೆಯ ದಾರಿ ಆಯ್ಕೆ ಮಾಡಬೇಕಷ್ಟೇ
ಮುಖ್ಯ ಪರೀಕ್ಷೆಗೆ ಇಂಗ್ಲಿಷ್ ಮತ್ತು ಪ್ರತಿಯಾಗಿ ಆಯ್ಕೆ ಮಾಡಿದರೂ ಸಹ ಸ್ಥಳೀಯ ಭಾಷೆಗಳಲ್ಲಿ ಸಂದರ್ಶನಗಳು ಲಭ್ಯವಿವೆ. ಸರಳವಾಗಿ ಹೇಳುವುದಾದರೆ, ಬೋಧನಾ ಮಾಧ್ಯಮವು ನಿಮ್ಮ ಆಲೋಚನೆಗಳನ್ನು ಸಂವಹನ ಮಾಡುವ ಒಂದು ಸಾಧನವಾಗಿದೆ ಮತ್ತು ನಿಮ್ಮ ಪರೀಕ್ಷೆಯ ಯಶಸ್ಸಿನಲ್ಲಿ ಮುಖ್ಯ ಅಂಶವಲ್ಲ. ಹೀಗಾಗಿ ಈ ಭಾಷೆ ಬಗ್ಗೆ ಜ್ಞಾನ ಇದ್ದರೆ ಒಳ್ಳೆಯದು ಹಾಗಂತ ಈ ಪರೀಕ್ಷೆಗೆ ಇಂಗ್ಲಿಷ್ ಮಾನದಂಡವಲ್ಲ.
ಮಿಥ್ಯ #5: ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ದೀರ್ಘಾವಧಿಯವರೆಗೆ ಅಧ್ಯಯನ ಮಾಡಬೇಕು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ನಾವು ಅಷ್ಟು ಓದುತ್ತೇವೆ, ಇಷ್ಟು ತಾಸು ಓದುತ್ತೇವೆ ಎನ್ನುತ್ತಾರೆ. ಆದರೆ ಇಲ್ಲಿ ಓದಿದ ಅವಧಿಗಿಂತ ಓದಿದ ವಿಷಯಗಳು ಮುಖ್ಯವಾಗುತ್ತದೆ. ಸರಿಯಾಗಿ ವಿಷಯವನ್ನು ಅರ್ಥ ಮಾಡಿಕೊಂಡು ಕೆಲವೇ ಗಂಟೆ ಓದಿದರೂ ಸಾಕು. ಅರ್ಥವಾಗಲೇ ಸುಮ್ಮನೆ ಇಡೀ ದಿನ ಓದುವುದು ವ್ಯರ್ಥ.
ಈ ಎಲ್ಲಾ ಮಾತುಗಳನ್ನು ಗಾಳಿಗೆ ತೂರಿ ಸಕಾರಾತ್ಮಕ ಮನೋಭಾವದಿಂದ ನಿಮ್ಮ ಗುರಿ ಸಾಧಿಸಿ. ಓದಿ ಯುಪಿಎಸ್‌ಸಿ ಎಂಬ ಸಾಗರವನ್ನು ಸುಲಭವಾಗಿ ಜಯಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ