ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ (CSE) ಭಾರತದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ (Exam) ಒಂದಾಗಿದೆ. ಇದನ್ನು ಪಾಸ್ ಮಾಡುವುದು ಸವಾಲಾದರೂ ಕೂಡ ಪರಿಶ್ರಮ, ಓದು, ತಾಳ್ಮೆಯಿಂದ ಇವುಗಳನ್ನು ಪಾಸ್ ಮಾಡಬಹುದಾಗಿದೆ.
ಈ ಪರೀಕ್ಷೆಯ ಸುತ್ತಮುತ್ತ ಹಲವು ಕಲ್ಪನೆ, ಮಿಥ್ಯ, ಅಂತೆಕಂತೆಗಳಿವೆ. ಈ ಸುಳ್ಳುಗಳಿಂದ ಹಲವು ಅಭ್ಯರ್ಥಿಗಳು ಪರೀಕ್ಷೆಯಿಂದ ದೂರು ಉಳಿದು ಬಿಡುತ್ತಾರೆ. ಅಭ್ಯರ್ಥಿಗಳನ್ನು ಪರೀಕ್ಷೆಯಿಂದ ದೂರವಾಗಿಸುವ ಸುಳ್ಳುಗಳು ಯಾವುವು, ಅವುಗಳು ಹೇಗೆ ಸತ್ಯಕ್ಕೆ ದೂರವಾಗಿವೆ ನೋಡಿ.
ಯುಪಿಎಸ್‌ಸಿಗೆ ಸಂಬಂಧಿಸಿದ ಮಿಥ್ಯಗಳು
ಮಿಥ್ಯ 1: UPSCಯನ್ನು ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರು ಮಾತ್ರ ಪಾಸ್ ಮಾಡಲು ಸಾಧ್ಯ.
ಯುಪಿಎಸ್‌ಸಿ ಸಿಎಸ್‌ಇ ಕುರಿತ ಸಾಮಾನ್ಯ ಸುಳ್ಳೆಂದರೆ ಅಭ್ಯರ್ಥಿಗಳು ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ದರೆ ಮಾತ್ರ ಪಾಸ್ ಮಾಡಬಹುದು ಮತ್ತು ಇಂತಹ ಪರೀಕ್ಷೆಗಳು ಅವರಿಗೆ ಮಾತ್ರ ಎಂಬ ಕಲ್ಪನೆ ಇದೆ.
ಇದು ನಿಜಕ್ಕೂ ಸತ್ಯಕ್ಕೆ ದೂರವಾದ ಮಾತು ಎನ್ನಬಹುದು. ಯಾಕೆಂದೆ UPSC CSE ಅನ್ನು ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ನಡೆಸಲಾಗುತ್ತದೆ ಮತ್ತು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಬಯಸುವ ಭಾಷೆಯನ್ನು ಆಯ್ಕೆ ಮಾಡಬಹುದು.
UPSC CSE ಯನ್ನು ಪ್ರಾದೇಶಿಕ ಭಾಷೆಯಲ್ಲಿ ಎದುರಿಸಿ ಟಾಪರ್ ಆದ ಹಲವು ನಿದರ್ಶನಗಳಿವೆ. ಇಂಗ್ಲಿಷ್ ಜ್ಞಾನ ಬೇಕೇ ಹೊರತು ತೀರ ಅಗತ್ಯ ಮತ್ತು ಅನಿವಾರ್ಯವಲ್ಲ ಎಂಬುದನ್ನು ಆಕಾಂಕ್ಷಿಗಳು ಅರಿತಿರಬೇಕು
ಮಿಥ್ಯೆ 2: ಯುಪಿಎಸ್‌ಸಿ ಸಿಎಸ್‌ಇ ಐಐಟಿ ಮತ್ತು ಐಐಎಂಗಳಂತಹ ಪ್ರೀಮಿಯರ್ ಇನ್‌ಸ್ಟಿಟ್ಯೂಟ್‌ಗಳಲ್ಲಿ ಅಧ್ಯಯನ ಮಾಡಿದವರಿಗೆ ಮಾತ್ರ.
ಯುಪಿಎಸ್‌ಸಿ ಸಿಎಸ್‌ಇ ಬಗ್ಗೆ ಇರುವ ಮತ್ತೊಂದು ಸಾಮಾನ್ಯ ಮಿಥ್ಯವೆಂದರೆ ಅದು ಐಐಟಿ ಮತ್ತು ಐಐಎಂಗಳಂತಹ ಪ್ರೀಮಿಯರ್ ಇನ್‌ಸ್ಟಿಟ್ಯೂಟ್‌ಗಳಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ.
ಇದು ಕೂಡ ದೊಡ್ಡ ಅಂತೆ-ಕಂತೆ. ಉತ್ತಮ ಶಿಕ್ಷಣವು ಪರೀಕ್ಷೆಗೆ ತಯಾರಾಗಲು ಸಹಾಯ ಮಾಡಬಹುದಾದರೂ, ಯುಪಿಎಸ್‌ಸಿ ಸಿಎಸ್‌ಇಗೆ ಹಾಜರಾಗಲು ಇದು ಪೂರ್ವಾಪೇಕ್ಷಿತವಲ್ಲ.
ಇಲ್ಲಿ ಸಾಧನೆ ಮಾಡಿದ ಅನೇಕರು ಸಾಮಾನ್ಯ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರಿದ್ದಾರೆ. ಹೀಗಾಗಿ ಇಲ್ಲಿ ಯಶಸ್ಸು ಗಳಿಸಲು ಅಧ್ಯಯನದ ಪರಿಶ್ರಮ ಮತ್ತು ನಿರಂತರತೆ ಮುಖ್ಯವಾಗಿರುತ್ತದೆ ಹೊರತು ಶಿಕ್ಷಣ ಸಂಸ್ಥೆಗಳು ಮುಖ್ಯವಾಗುವುದಿಲ್ಲ.
ಮಿಥ್ಯ 3: ಯುಪಿಎಸ್‌ಸಿ ಸಿಎಸ್‌ಇ ಎಲ್ಲಾ ಮಾಹಿತಿ ಮತ್ತು ಮೌಖಿಕ ಕಲಿಕೆಗೆ ಸಂಬಂಧಿಸಿದೆ.
ಯುಪಿಎಸ್‌ಸಿ ಸಿಎಸ್‌ಇ ಮಾಹಿತಿ ಮತ್ತು ಮೌಖಿಕ ಕಲಿಕೆಗೆ ಸಂಬಂಧಿಸಿದ್ದು ಎಂದು ಹಲವರು ನಂಬುತ್ತಾರೆ. ಆದಾಗ್ಯೂ, ಇದು ಸತ್ಯಕ್ಕೆ ದೂರವಾದ ಮಾತು. UPSC CSE ಅಭ್ಯರ್ಥಿಗಳ ಮೌಖಿಕ ಕಲಿಕೆ ಮಾತ್ರವಲ್ಲದೇ, ಒಟ್ಟಾರೆ ವ್ಯಕ್ತಿತ್ವ ಮತ್ತು ಯೋಗ್ಯತೆಯನ್ನು ಸಹ ಪರೀಕ್ಷಿಸುತ್ತದೆ, ಯೋಚಿಸುವ ಶಕ್ತಿ, ಸಮಸ್ಯೆ ಬಗೆಹರಿಸುವ ಕಲೆ, ವ್ಯಕ್ತಿತ್ವ, ಮೌಲ್ಯಗಳ ಮೇಲೂ ನಿಮ್ಮ ಯುಪಿಎಸ್‌ಸಿ ಕನಸು ನಿರ್ಧಾರವಾಗುತ್ತದೆ.
ಮಿಥ್ಯ 4: UPSC CSE ಒಳ್ಳೆ ಅಂಕ ಪಡೆದವರಿಗೆ ಮಾತ್ರ
ಈ ಅಂಶ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯು ಪರೀಕ್ಷೆಗೆ ತಯಾರಾಗಲು ಸಹಾಯ ಮಾಡುತ್ತದೆ, ಹಾಗಂತ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಇದು ಆದ್ಯತೆಯಾಗುವುದಿಲ್ಲ. ಹಾಗೇ UPSC CSEನಲ್ಲಿ ಯಶಸ್ಸನ್ನು ನಿರ್ಧರಿಸುವ ಏಕೈಕ ಅಂಶ ಶೈಕ್ಷಣಿಕ ಅಂಕ ಅಲ್ಲ.
ಇದನ್ನೂ ಓದಿ: UPSC Success Story: ಕೊರೊನಾದಿಂದ ತಂದೆ-ತಾಯಿ ಆಸ್ಪತ್ರೆ ಸೇರಿದ್ದಾಗಲೂ ಪರೀಕ್ಷಾ ತಯಾರಿ ನಡೆಸಿ IAS ಆದ ಕೃತಿ
ಮಿಥ್ಯ 5: UPSC CSE ಮಾನವಿಕ ವಿಷಯಗಳ ಹಿನ್ನೆಲೆಯನ್ನು ಹೊಂದಿರುವವರಿಗೆ ಮಾತ್ರ.
ಯುಪಿಎಸ್‌ಸಿ ಸಿಎಸ್‌ಇ ಮಾನವಿಕ ವಿಷಯಗಳ ಹಿನ್ನೆಲೆ ಹೊಂದಿರುವವರಿಗೆ ಎಂದು ಹಲವು ಅಭ್ಯರ್ಥಿಗಳು ನಂಬಿದ್ದಾರೆ. ಖಂಡಿತ ಇದೊಂದು ಮಿಥ್ಯ, ಈ ಪರೀಕ್ಷೆ ಎಲ್ಲಾ ಅಂದರೆ ಸೈನ್ಸ್ ಮತ್ತು ಎಂಜಿನಿಯರಿಂಗ್ ಹಿನ್ನೆಲೆ ಹೊಂದಿದ ಎಲ್ಲರಿಗೂ ಮುಕ್ತವಾಗಿರುತ್ತದೆ.
ಈ ಎಲ್ಲಾ ಸುಳ್ಳು ಮಾಹಿತಿಗಳನ್ನು ದೂರ ತಳ್ಳಿ ಕೇವಲ ಓದಿಗೆ ಒತ್ತು ನೀಡಿದಲ್ಲಿ ಮಾತ್ರ ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯನ್ನು ಓದಿ ಪಾಸ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ