• ಹೋಂ
 • »
 • ನ್ಯೂಸ್
 • »
 • Jobs
 • »
 • Career in Business: ಯಶಸ್ವಿ ಉದ್ಯಮಿ ನೀವಾಗಬೇಕೇ? ಈ 4 ಪುಸ್ತಕಗಳನ್ನು ಓದಿ, ಬದುಕೇ ಬದಲಾಗುತ್ತೆ

Career in Business: ಯಶಸ್ವಿ ಉದ್ಯಮಿ ನೀವಾಗಬೇಕೇ? ಈ 4 ಪುಸ್ತಕಗಳನ್ನು ಓದಿ, ಬದುಕೇ ಬದಲಾಗುತ್ತೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಪುಸ್ತಕಗಳು ಹಲವರ ಬದುಕನ್ನೇ ಬದಲಾಯಿಸಿರುವ ಉದಾಹರಣೆಗಳಿವೆ. ಅಂತೆಯೇ ವ್ಯಾಪಾರ-ವ್ಯವಹಾರವನ್ನು ಸಹ ಉತ್ತಮವಾಗಿಸುವ ಪುಸ್ತಕಗಳು ಲಭ್ಯವಿದೆ. ನಿಮಗಿರುವ ಉದ್ಯಮದ ಜ್ಞಾನದ ಜೊತೆ ಈ ಪುಸ್ತಕಗಳನ್ನು ಓದಿಕೊಂಡರೆ ನಿಮ್ಮ ವ್ಯಾಪಾರ ಉತ್ತುಂಗಕ್ಕೆ ಏರುತ್ತದೆ.

 • Trending Desk
 • 3-MIN READ
 • Last Updated :
 • Share this:

  ನಮ್ಮದೇ ವ್ಯಾಪಾರ ಅಥವಾ ಉದ್ಯಮವನ್ನು (Business) ಪ್ರಾರಂಭಿಸುವುದು ಅಂತಹ ಕಷ್ಟದ ವಿಚಾರವೇನೂ ಅಲ್ಲ. ಆದರೆ ಅದರಲ್ಲಿ ಯಶಸ್ಸು (Success) ಕಾಣುವುದು ಮಾತ್ರ ಸುಲಭಲ್ಲ. ಅದಕ್ಕೆ ಅದರದ್ದೇ ಆದ ಕೆಲ ತಯಾರಿಗಳು ಬೇಕಾಗುತ್ತವೆ. ನೋಡಿ ಕಲಿ, ಮಾಡಿ ಕಲಿ, ಕೇಳಿ ಕಲಿ ಎನ್ನುವಂತೆ ಹತ್ತಾರು ಉದ್ಯಮಿಗಳ ( Entrepreneurs) ಜೊತೆ ಮಾತನಾಡಬೇಕು, ಅವರ ವ್ಯಾಪಾರದ ಅನುಭವ ಕೇಳಿ ತಿಳಿದಿರಬೇಕು, ನಾವು ಮಾಡುವ ಉದ್ಯಮದ ಆಳ-ಆಗಲ ಎಲ್ಲವನ್ನೂ ತಿಳಿದುಕೊಂಡಿರಬೇಕು. ಹೀಗಿದ್ದಲ್ಲಿ ಮಾತ್ರ ನಾವು ಆರಂಭಿಸುವ ಉದ್ಯಮ ಕೇವಲ ಉದ್ಯಮವಾಗಿರದೇ ಯಶಸ್ವಿ ಮತ್ತು ಲಾಭದಾಯಕ ಉದ್ಯಮ ಎನಿಸಿಕೊಳ್ಳುತ್ತದೆ.


  ಉದ್ಯಮದಲ್ಲಿನ ನಮ್ಮ ಜ್ಞಾನ ಮಾತ್ರವಲ್ಲದೇ ಒಂದು ಯಶಸ್ವಿ ವ್ಯಾಪಾರಕ್ಕೆ ಕೆಲ ಪುಸ್ತಕಗಳು ಸಹ ಸಹಾಯ ಮಾಡುತ್ತವೆ ಎನ್ನಬಹುದು. ಪುಸ್ತಕಗಳು ಹಲವರ ಬದುಕನ್ನೇ ಬದಲಾಯಿಸಿರುವ ಉದಾಹರಣೆಗಳಿವೆ. ಅಂತೆಯೇ ವ್ಯಾಪಾರ-ವ್ಯವಹಾರವನ್ನು ಸಹ ಉತ್ತಮವಾಗಿಸುವ ಪುಸ್ತಕಗಳು ಲಭ್ಯವಿದೆ. ನಿಮಗಿರುವ ಉದ್ಯಮದ ಜ್ಞಾನದ ಜೊತೆ ಈ ಪುಸ್ತಕಗಳನ್ನು ಓದಿಕೊಂಡರೆ ನಿಮ್ಮ ವ್ಯಾಪಾರ ಉತ್ತುಂಗಕ್ಕೆ ಏರುತ್ತದೆ.


  ಈ ವರ್ಷ ನೀವು ಓದುವುದನ್ನು ತಪ್ಪಿಸಿಕೊಳ್ಳಬಾರದ ಟಾಪ್ 5 ವ್ಯಾಪಾರ ಪುಸ್ತಕಗಳು ಈ ಕೆಳಗಿನಂತಿವೆ:


  1. ಇಂಜಿನಿಯರ್ಡ್ ಇನ್ ಇಂಡಿಯಾ: ಫ್ರಮ್ ಡ್ರೀಮ್ಸ್ ಟು ಬಿಲಿಯನ್-ಡಾಲರ್ ಸೈಯೆಂಟ್:  ಬಿವಿಆರ್ ಮೋಹನ್ ರೆಡ್ಡಿಯವರು ಬರೆದಿರುವ ಈ ಪುಸ್ತಕ 1974 ರಲ್ಲಿ ಐಐಟಿ ಕಾನ್ಪುರದ ಆವರಣದಿಂದ ಹೊರಬಂದ ಯುವಕನೊಬ್ಬ ಉದ್ಯಮಿಯಾಗಲು ಮತ್ತು ದೇಶ-ನಿರ್ಮಾಣಕ್ಕೆ ಕೊಡುಗೆ ನೀಡುವ ಕನಸನ್ನು ಹೊಂದಿರುವ ಕಥೆಯ ಸುತ್ತ ಇದೆ. ಸ್ಕಾಲರ್‌ಶಿಪ್‌ನಲ್ಲಿ ಸಾಗರೋತ್ತರ ಶಿಕ್ಷಣ ಪಡೆದು, ನಲವತ್ತನೇ ವಯಸ್ಸಿನಲ್ಲಿ ತನ್ನ ಜೀವನದ ಧ್ಯೇಯವನ್ನು ಪ್ರಾರಂಭಿಸುವ ಮೊದಲು ಅನುಭವಿಸಿದ ಹತ್ತಾರು ಸೋಲುಗಳು ಮತ್ತು ನಂತರದ ಗೆಲುವು ವ್ಯಾಪಾರಿಗಳಿಗೆ ನಿಜಕ್ಕೂ ಸ್ಪೂರ್ತಿ. ಬಿವಿಆರ್ ಮೋಹನ್ ರೆಡ್ಡಿಯವರು ಬರೆದ ಪೆಂಗ್ವಿನ್ ರಾಂಡಮ್ ಹೌಸ್ ಪ್ರಕಟಿಸಿದ ಈ ಪುಸ್ತಕ ಸದ್ಯ ಅಮೇಜಾನ್‌ನಲ್ಲಿ ಲಭ್ಯವಿದೆ.
  2. ಮೇವರಿಕ್ ಎಫೆಕ್ಟ್: ದಿ ಇನ್‌ಸೈಡ್ ಸ್ಟೋರಿ ಆಫ್ ಇಂಡಿಯಾಸ್ ಐಟಿ ರೆವಲ್ಯೂಷನ್: 1970ರ ದಶಕದ ಮಧ್ಯಭಾಗದಲ್ಲಿ, ಅಮೇರಿಕನ್ ಕನಸನ್ನು ಜೀವಿಸುವ ಇಪ್ಪತ್ತರ ಹರೆಯದ ಯುವಕ ಹರೀಶ್ ಮೆಹ್ತಾ ಡೇಟಾಬೇಸ್ ಮ್ಯಾನೇಜರ್ ಎಂಬ ಲಾಭದಾಯಕ ಕೆಲಸವನ್ನು ಬಿಟ್ಟು ಭಾರತಕ್ಕೆ ಹಿಂತಿರುಗುತ್ತಾನೆ. ಆ ಸಮಯದಲ್ಲಿ, ಭಾರತವು ಯಾವುದೇ ಐಟಿ ಉದ್ಯಮವನ್ನು ಹೊಂದಿರಲಿಲ್ಲ ಮತ್ತು ಕಂಪ್ಯೂಟರ್‌ಗಳು ಕೂಡ ತುಂಬಾ ಹೊಸದಾಗಿದ್ದವು. ಈ ಸಂದರ್ಭದಲ್ಲಿ ಯುವ ಹರೀಶ್ ಮೆಹ್ತಾ ಅವರು ಇತರ ಐಟಿ ಉದ್ಯಮಿಗಳನ್ನು ಒಗ್ಗೂಡಿಸಿ ಭಾರತೀಯ ಐಟಿಯಲ್ಲಿ ಕ್ರಾಂತಿಯನ್ನುಂಟು ಮಾಡುವ ವಿಶ್ವ-ಬೀಟಿಂಗ್ ಅಸೋಸಿಯೇಷನ್ ​​ಅನ್ನು ರೂಪಿಸಿದರು. ಹೀಗೆ ಇಬರ ಕಥೆ ಹೇಳುವ ಈ ಪುಸ್ತಕ ವ್ಯಾಪಾರಿಗಳಿಗೆ ಓದಲು ಒಂದೊಳ್ಳೆ ಆಯ್ಕೆ. ಪುಸ್ತಕ ಅಮೇಜಾನ್‌ನಲ್ಲಿ ಲಭ್ಯವಿದೆ.

  3. ಡಾಲ್ಫಿನ್ ಮತ್ತು ಶಾರ್ಕ್: ಸ್ಟೋರಿಸ್‌ ಆನ್‌ ಎಂಟರ್‌ಪ್ರೆನಿನ್ಯೂರ್ಶಿಪ್
  ನಮಿತಾ ಥಾಪರ್ ಅವರು ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ತೀರ್ಪುಗಾರರಾಗಿ ಮತ್ತು ಫಾರ್ಮಾ ಕಂಪನಿಯಾದ ಎಂಕ್ಯೂರ್ ಮತ್ತು ಅವರ ಸ್ವಂತ ಉದ್ಯಮಶೀಲತಾ ಅಕಾಡೆಮಿಯ ಭಾರತದ ವ್ಯವಹಾರವನ್ನು ನಡೆಸುತ್ತಿರುವ ಅನುಭವವನ್ನು ಈ ಪುಸ್ತಕವು ವಿವರಿಸುತ್ತದೆ. ಇಂದಿನ ನಾಯಕರು ಶಾರ್ಕ್ (ಆಕ್ರಮಣಕಾರಿ ನಾಯಕ) ಮತ್ತು ಡಾಲ್ಫಿನ್ (ಅನುಭೂತಿಯ ನಾಯಕ) ನಡುವೆ ಸಮತೋಲನವನ್ನು ಹೇಗೆ ಸಾಧಿಸಬೇಕು ಎಂಬುದನ್ನು ಪುಸ್ತಕವು ಒತ್ತಿಹೇಳುತ್ತದೆ. ಈ ಪುಸ್ತಕವನ್ನು ಪೆಂಗ್ವಿನ್ ರಾಂಡಮ್ ಹೌಸ್ ಪ್ರಕಟಿಸಿದ್ದು, ಅಮೇಜಾನ್‌ನಲ್ಲಿ ಲಭ್ಯವಿದೆ.
  4. ರಾಹುಲ್ ಬಜಾಜ್: ಎನ್‌ ಎಕ್ಸ್ಟ್ರಾಡಿನರಿ ಲೈಫ್‌, ಆಫಿಷಿಯಲಿ ಬಯೋಗ್ರಫಿ ಆಫ್‌ ದಿ ಚೇರ್‌ಮನ್‌ ಆಫ್‌ ಬಜಾಜ್‌ ಗ್ರೂಪ್: ಬಿಲಿಯನೇರ್ ಉದ್ಯಮಿ, ಬಜಾಜ್ ಗ್ರೂಪ್‌ನ ಗೌರವಾನ್ವಿತ ಅಧ್ಯಕ್ಷ ರಾಹುಲ್ ಬಜಾಜ್ ಅವರ ಜೀವನ ಕಥೆಯಾಗಿದೆ. ಈ ಪುಸ್ತಕವು ಕೇವಲ ರಾಹುಲ್ ಬಜಾಜ್ ಅವರ ಕಥೆಯಲ್ಲ ಆದರೆ ಭಾರತದ ಕಥೆಯಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಹುಲ್ ಬಜಾಜ್ ಅವರ ತಾಯಿ ಜೈಲಿನಲ್ಲಿದ್ದ ಸಮಯದಿಂದ ಅವರ ಘಟನಾತ್ಮಕ ಜೀವನದ ಮಾಹಿತಿಯನ್ನು ಲೇಖಕರು ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಅನಿರ್ಬಂಧಿತ ಸಂದರ್ಶನಗಳನ್ನು ಆಧರಿಸಿ, ಪುಸ್ತಕವು ಉಪಾಖ್ಯಾನಗಳು, ವ್ಯವಹಾರ ಕಲಿಕೆ ಮತ್ತು ರಾಜಕೀಯ ಎಲ್ಲವನ್ನೂ ಪುಸ್ತಕದಲ್ಲಿ ತಿಳಿಯಬಹುದು.
  ಈ ಪುಸ್ತಕವನ್ನು ಪೆಂಗ್ವಿನ್ ರಾಂಡಮ್ ಹೌಸ್ ಪ್ರಕಟಿಸಿದ್ದು, ಅಮೇಜಾನ್‌ನಲ್ಲಿ ಲಭ್ಯವಿದೆ

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು