• ಹೋಂ
  • »
  • ನ್ಯೂಸ್
  • »
  • Jobs
  • »
  • Top 10 Courses: ಬೇಗ ಬೇಗ ಸಂಬಳ ಡಬಲ್ ಆಗಬೇಕೇ? ಈ 10 ಕೋರ್ಸ್​ಗಳಲ್ಲಿ ಒಂದನ್ನು ಮಾಡಿ

Top 10 Courses: ಬೇಗ ಬೇಗ ಸಂಬಳ ಡಬಲ್ ಆಗಬೇಕೇ? ಈ 10 ಕೋರ್ಸ್​ಗಳಲ್ಲಿ ಒಂದನ್ನು ಮಾಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈ ಕೋರ್ಸ್​ಗಳನ್ನು ಮಾಡಿದ್ರೆ ಶೀಘ್ರವಾಗಿ ನಿಮ್ಮ ಸಂಬಳ ದುಪ್ಪಟ್ಟಾಗುತ್ತದೆ. ಅಂತಹ 10 ಆಯ್ದ ಕೋರ್ಸ್‌ಗಳ ಬಗ್ಗೆ ಮಾಹಿತಿಯನ್ನುಇಲ್ಲಿ ನೀಡಿದ್ದೇವೆ.

  • Share this:

ನೀವು 10ನೇ ತರಗತಿ ಬಳಿಕ ಪಿಯುನಲ್ಲಿ (PUC) ವಿಜ್ಞಾನ ವಿಭಾಗ (Science Stream)ತೆಗೆದುಕೊಂಡಿದ್ದರೆ, ಸಾಮಾನ್ಯವಾಗಿ ಸಾಂಪ್ರದಾಯಿಕ ಕೋರ್ಸ್‌ಗಳಾದ B.Tech, MBBS, B.Sc ಇತ್ಯಾದಿಗಳಲ್ಲಿ ಪ್ರವೇಶವನ್ನು ತೆಗೆದುಕೊಳ್ಳಲು ನಿರ್ಧರಿಸಿರುತ್ತೀರಿ. ಆದರೆ ಈ ಆಯ್ಕೆಗಳ ಆಚೆಗೆ ಸೈನ್ಸ್​ ವಿದ್ಯಾರ್ಥಿಗಳು ಬೇರೆ ಕೋರ್ಸ್​ಗಳನ್ನು ಮಾಡಬಹುದು. ಈ ಕೋರ್ಸ್​ಗಳನ್ನು ಮಾಡಿದ್ರೆ ಶೀಘ್ರವಾಗಿ ನಿಮ್ಮ ಸಂಬಳ ದುಪ್ಪಟ್ಟಾಗುತ್ತದೆ. ನಿಮಗೆ ಅಂತಹ 10 ಆಯ್ದ ಕೋರ್ಸ್‌ಗಳ ಬಗ್ಗೆ ಮಾಹಿತಿಯನ್ನುಇಲ್ಲಿ ನೀಡಿದ್ದೇವೆ. ಇವುಗಳಲ್ಲಿ ಕೆಲವು ಪದವಿ ಮತ್ತು ಕೆಲವು ಡಿಪ್ಲೊಮಾಗಳೂ ಸೇರಿವೆ.  


1) ಬಿಎಸ್ಸಿ-ನರ್ಸಿಂಗ್: ಕೋರ್ಸ್​ನ ಹೆಸರೇ ಸೂಚಿಸುವಂತೆ ನರ್ಸ್ ಕೆಲಸ ಸಿಗುತ್ತದೆ. ಈ ಕೋರ್ಸ್ ಮಾಡಿದ ನಂತರ ನಿಮಗೆ ಮುಂದೆ ಓದಲು ಇಷ್ಟವಿಲ್ಲದಿದ್ದರೆ, ನಿಮಗೆ ತಕ್ಷಣ ಕೆಲಸ ಸಿಗುತ್ತದೆ. ಸದಾ ಬೇಡಿಕೆಯಲ್ಲಿರುವ ಉದ್ಯೋಗವೆಂದರೆ ನರ್ಸ್​​​​​​ ಎನ್ನಬಹುದು.


2) ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ: ಕಡಿಮೆ ಸಮಯದಲ್ಲಿ ಕಲಿಯುವ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸಿದರೆ, ನೀವು ಎರಡು ವರ್ಷಗಳ ಡಿಪ್ಲೊಮಾವನ್ನು ತೆಗೆದುಕೊಳ್ಳುವ ಮೂಲಕ ಉದ್ಯೋಗವನ್ನು ಪ್ರಾರಂಭಿಸಬಹುದು. ಈ ಡಿಪ್ಲೊಮಾ ಸರ್ಕಾರಿ ಮತ್ತು ಖಾಸಗಿ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಲಭ್ಯವಿದೆ.


3) ಅನಿಮೇಷನ್ ಮತ್ತು ಮಲ್ಟಿಮೀಡಿಯಾ: ಈ ಕೋರ್ಸ್ ಮೂರು ವರ್ಷಗಳ ಅವಧಿಯದ್ದಾಗಿದೆ. ಇದು ಅನೇಕ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿದೆ. ಎರಡು ವರ್ಷಗಳ ಅಧ್ಯಯನ ಮುಗಿದ ನಂತರವೇ ವಿದ್ಯಾರ್ಥಿಗಳು ಕೆಲಸ ಪಡೆಯಲು ಪ್ರಾರಂಭಿಸುತ್ತಾರೆ. ಉದ್ಯೋಗ ಕೊರತೆಯ ಸಮಸ್ಯೆಯೇ ಇಲ್ಲ. ಸಿನಿಮಾ, ಧಾರಾವಾಹಿಗಳಲ್ಲಿ ಭಾರಿ ಬೇಡಿಕೆ ಇದೆ.




4) ಮಾಹಿತಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ: ಈ ಕೋರ್ಸ್ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಹೋಲುತ್ತದೆ. ಈ ಕೋರ್ಸ್ ಮೂಲಕ ತಮ್ಮ ಭವಿಷ್ಯವನ್ನು ಸುಧಾರಿಸಬಹುದು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗಗಳು ಸುಲಭವಾಗಿ ದೊರೆಯುತ್ತವೆ.


5) ಸಿಎ: ಸಿಎ ಆಗಲು ಕಾಮರ್ಸ್ ಅಗತ್ಯ ಎಂಬ ತಪ್ಪು ಕಲ್ಪನೆ ಸಾಮಾನ್ಯರಲ್ಲಿದೆ. ವಿಜ್ಞಾನದವರೂ ಆಸಕ್ತಿ ಇದ್ದರೆ ಸಿಎ ಆಗುವ ಯೋಚನೆ ಮಾಡಬಹುದು. ನೀವು ಕಷ್ಟಪಟ್ಟು ಕೆಲಸ ಮಾಡಿದರೆ, ಈ ಕೋರ್ಸ್ ಸುಮಾರು ಐದು ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ. ಕೋರ್ಸ್ ಪೂರ್ಣಗೊಳ್ಳುವ ಮೊದಲೇ ಹಣ ಬರಲು ಪ್ರಾರಂಭಿಸುತ್ತದೆ.


6) ಸಿಎಸ್: ಕಂಪನಿ ಕಾರ್ಯದರ್ಶಿ ಅಂದರೆ CS, ಭಾರತ ಸರ್ಕಾರವು ಪ್ರತಿ ಕಂಪನಿಗೆ ಕಂಪನಿ ಕಾರ್ಯದರ್ಶಿಯನ್ನು ಕಡ್ಡಾಯಗೊಳಿಸಿದಾಗಿನಿಂದ ಈ ಕೋರ್ಸ್ ಡಿಮ್ಯಾಂಡ್​ ಬಂದಿದೆ. ಸಿಎಯಂತೆ ಉದ್ಯೋಗ ಮತ್ತು ಅಭ್ಯಾಸದ ಸೌಲಭ್ಯವೂ ಇದೆ. ಈ ಕೋರ್ಸ್​ ಮಾಡಲು ಸಹ ನಾಲ್ಕೈದು ವರ್ಷಗಳು ಬೇಕಾಗುತ್ತವೆ.




7) ಐದು ವರ್ಷಗಳ ಕಾನೂನು ಕೋರ್ಸ್: ನಿಮಗೆ ಕಾನೂನಿನಲ್ಲಿ ಆಸಕ್ತಿ ಇದ್ದರೆ ಈ ಟ್ರೆಂಡಿಂಗ್ ಕೋರ್ಸ್ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ಈ ಕೋರ್ಸ್‌ಗೆ ಉತ್ತಮ ಸ್ಥಳವೆಂದರೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ. ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಸಾಧ್ಯವಾಗದಿದ್ದರೆ, ಈ ಕೋರ್ಸ್ ಅನೇಕ ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳಲ್ಲಿಯೂ ಲಭ್ಯವಿದೆ.


8) ಚಲನಚಿತ್ರ ಮತ್ತು ವಿಡಿಯೋ ನಿರ್ಮಾಣ: ಈ ಕೋರ್ಸ್‌ಗೆ ಪದವಿ ಮತ್ತು ಡಿಪ್ಲೊಮಾ ಎರಡೂ ಲಭ್ಯವಿದೆ. ಪದವಿಯನ್ನು ಮೂರು ವರ್ಷಗಳಲ್ಲಿ ಮತ್ತು ಡಿಪ್ಲೊಮಾವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಬಹುದು. ಆದರೆ ಅನಿಮೇಷನ್‌ನಂತೆ ಇಲ್ಲಿಯೂ ಉದ್ಯೋಗಕ್ಕಾಗಿ ಹಲವು ದಿಕ್ಕುಗಳಲ್ಲಿ ಅವಕಾಶದ ಬಾಗಿಲು ತೆರೆಯುತ್ತದೆ. ನಿಮ್ಮ ಕೆಲಸವನ್ನು ನೀವು ಸ್ವತಂತ್ರವಾಗಿಯೂ ಮಾಡಬಹುದು.


ಇದನ್ನೂ ಓದಿ: Google Digital Marketing ಕೋರ್ಸ್ ಮಾಡಿದವರಿಗೆ ಭರ್ಜರಿ ಉದ್ಯೋಗಾವಕಾಶ, ದೊಡ್ಡ ಸಂಬಳ ಸಿಗೋದು ಪಕ್ಕಾ


9) BCA: ಈ ಮೂರು ವರ್ಷಗಳ ಕೋರ್ಸ್ ನಿಮ್ಮ ಭವಿಷ್ಯದ ಬಾಗಿಲು ತೆರೆಯುವ ಸಾಮರ್ಥ್ಯವನ್ನು ಹೊಂದಿದೆ. ಈ ಕೋರ್ಸ್‌ಗಾಗಿ ನೀವು ಅಲೆದಾಡಬೇಕಾಗಿಲ್ಲ. ಹೆಚ್ಚಿನ ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಇದು ಲಭ್ಯವಿದೆ.


10) BPharm: ಈ ನಾಲ್ಕು ವರ್ಷದ ಕೋರ್ಸ್ ಕೂಡ ಇತ್ತೀಚಿನ ದಿನಗಳಲ್ಲಿ ಟ್ರೆಂಡಿಂಗ್ ಆಗಿದೆ. ರೋಗಗಳು ಹೆಚ್ಚಾಗುತ್ತಿವೆ, ರೋಗಿಗಳು ಹೆಚ್ಚಾಗುತ್ತಿದ್ದಾರೆ, ಔಷಧ ಅಂಗಡಿಗಳೂ ಹೆಚ್ಚುತ್ತಿವೆ. ಇದರಿಂದ ಔಷಧ ಕಾರ್ಖಾನೆಗಳು ಹೆಚ್ಚುತ್ತಿವೆ. ನಿಮಗೆ ನಾಲ್ಕು ವರ್ಷಗಳ ಕೋರ್ಸ್ ಮಾಡಲು ಇಷ್ಟವಿಲ್ಲದಿದ್ದರೆ, ನೀವು ಡಿಪ್ಲೊಮಾ ಕೂಡ ಮಾಡಬಹುದು.

Published by:Kavya V
First published: