• ಹೋಂ
  • »
  • ನ್ಯೂಸ್
  • »
  • Jobs
  • »
  • Top 10 Careers: ಭಾರತದಲ್ಲಿ ಈ 10 ವೃತ್ತಿಗಳನ್ನು ಆಯ್ಕೆ ಮಾಡಿದ್ರೆ ಎಂದಿಗೂ ಉದ್ಯೋಗ ಕೊರತೆ ಎದುರಾಗಲ್ಲ

Top 10 Careers: ಭಾರತದಲ್ಲಿ ಈ 10 ವೃತ್ತಿಗಳನ್ನು ಆಯ್ಕೆ ಮಾಡಿದ್ರೆ ಎಂದಿಗೂ ಉದ್ಯೋಗ ಕೊರತೆ ಎದುರಾಗಲ್ಲ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈ ಲೇಖನದಲ್ಲಿ ಆ ಹತ್ತು ಅತ್ಯುತ್ತಮ ವೃತ್ತಿಗಳು ಯಾವುವು ಹಾಗೂ ಭಾರತದಲ್ಲಿ ಅವುಗಳಿಗಿರುವ ಬೇಡಿಕೆಗಳೇನು ಎಂಬುದನ್ನು ತಿಳಿದುಕೊಳ್ಳೋಣ.

  • Share this:

ವೃತ್ತಿಜೀವನ (Career) ಇದೇ ರೀತಿ ಇರಬೇಕು, ಇಷ್ಟು ಸಂಬಳ ದೊರೆಯಬೇಕು ಎಂಬುದೇ ಎಲ್ಲಾ ಉದ್ಯೋಗಿಗಳ  ಕನಸಾಗಿರುತ್ತದೆ. ದುಡಿಯುವ ಉದ್ಯಮದಲ್ಲಿ ದೊರೆಯುವ ಸಂಬಳ (Salary) ಮುಂದಿನ ಭವಿಷ್ಯಕ್ಕೂ ಉಪಕಾರಿಯಾಗಿರಬೇಕು ಅಂದರೆ ಉಳಿತಾಯದ ರೂಪದಲ್ಲಿ ಕೈಯಲ್ಲಿ ಉಳಿಯಬೇಕು ಎಂಬುದು ಹೆಚ್ಚಿನವರ ಹಂಬಲವಾಗಿರುತ್ತದೆ.


ಉಳಿತಾಯಕ್ಕೆ ತಕ್ಕ ಸಂಬಳ ಬೇಕು ಎಂದಾದರೆ ಆ ಉದ್ಯೋಗ ಕೊಂಚ ಉತ್ತಮ ವರಮಾನವನ್ನೂ ನೀಡುವಂತಿರಬೇಕು, ಉತ್ತಮ ವೃತ್ತಿಜೀವನವನ್ನು ಒದಗಿಸುವಂತಿರಬೇಕು. ಈ ಲೇಖನದಲ್ಲಿ ಆ ಹತ್ತು ಅತ್ಯುತ್ತಮ ವೃತ್ತಿಗಳು ಯಾವುವು ಹಾಗೂ ಭಾರತದಲ್ಲಿ ಅವುಗಳಿಗಿರುವ ಬೇಡಿಕೆಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಇಲ್ಲಿ ನೀಡಿರುವ ಉದ್ಯೋಗಗಳು ವೃತ್ತಿಪರರಿಗೆ ಉತ್ತಮ ಭವಿಷ್ಯವನ್ನು ಒದಗಿಸುವುದು ಮಾತ್ರವಲ್ಲದೆ ವೃತ್ತಿ ಬೆಳವಣಿಗೆಗೂ ಅವಕಾಶವನ್ನೊದಗಿಸುತ್ತದೆ.


1) ಹೆಲ್ತ್‌ಕೇರ್


ವಿಶ್ವಆರೋಗ್ಯ ಸಂಸ್ಥೆಯ ಪ್ರಕಾರ, ಭಾರತಕ್ಕೆ ಬರೋಬ್ಬರಿ 1.8 ಮಿಲಿಯನ್ ವೈದ್ಯರು, ದಾದಿಯರು, ಆಯಾಗಳು ಬೇಕಾಗಿದ್ದು, 2030 ರಲ್ಲಿ ಪ್ರತಿ 10,000 ನಾಗರಿಕರಿಗೆ 44.5 ಹೆಲ್ತ್‌ಕೇರ್ ಉದ್ಯೋಗಿಗಳ ಅಗತ್ಯವಿದೆ ಎಂದಾಗಿದೆ.


2) ಎಥಿಕಲ್ ಹ್ಯಾಕಿಂಗ್


ಸೈಬರ್ ದಾಳಿಯ ಸಂದರ್ಭದಲ್ಲಿ ಎಥಿಕಲ್ ಹ್ಯಾಕರ್‌ಗಳು ಪರಿಹಾರವನ್ನೊದಗಿಸುತ್ತಾರೆ. ವ್ಯಕ್ತಿ, ಸಂಸ್ಥೆ, ವ್ಯಾಪಾರಗಳಿಗೆ ಸಹಕಾರಿಯಾಗಿರುತ್ತಾರೆ. 2023 ರ ಕೊನೆಯಲ್ಲಿ ಎಥಿಕಲ್ ಹ್ಯಾಕರ್‌ಗಳ ಸಂಖ್ಯೆಯಲ್ಲಿ 20% ಅಧಿಕವಾಗಲಿದೆ ಎಂದು ತಿಳಿಸಲಾಗಿದೆ.


3) ಆಕ್ಚುರಿಯಲ್ ಸೈನ್ಸ್


ಆಕ್ಚುರಿಯಲ್ ಸೈನ್ಸ್ ಆರ್ಥಿಕ ಮತ್ತು ವಿಮಾ ವಲಯದಲ್ಲಿನ ಅಪಾಯಗಳನ್ನು ನಿರ್ಣಯಿಸುತ್ತದೆ. ಈ ಉದ್ಯೋಗ ಭಾರತ ಹಾಗೂ ಹೊರದೇಶಗಳಲ್ಲಿ ವಿಫುಲ ಅವಕಾಶಗಳನ್ನೊದಗಿಸುತ್ತದೆ ಹಾಗೂ ಅಭ್ಯರ್ಥಿಯ ಕೌಶಲ್ಯ ಹಾಗೂ ಪರಿಣಿತಿಯನ್ನುಸರಿಸಿ ಅರ್ಹತೆ ಗಳಿಸುತ್ತಾರೆ.


4) ಬ್ಯಾಂಕಿಂಗ್


ಭಾರತದ ಆರ್ಥಿಕತೆಯ ಬೆನ್ನುಲುಬು ಎಂದೇ ಹೆಸರುವಾಸಿಯಾಗಿರುವ ಬ್ಯಾಂಕ್‌ಗಳು ಉದ್ಯೋಗ ಅವಕಾಶಗಳನ್ನೊದಗಿಸುವಲ್ಲಿ ಕೂಡ ಪರಿಣಾಮಕಾರಿಯಾಗಿವೆ. ಪದವಿ ಹಾಗೂ ಸ್ನಾತಕೋತ್ತರ ಪದವೀಧರರು ಅಂತೆಯೇ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದವರು ಬ್ಯಾಂಕಿಂಗ್ ವಲಯವನ್ನು ಆರಿಸಿಕೊಳ್ಳಬಹುದು.


ಪ್ರಾತಿನಿಧಿಕ ಚಿತ್ರ


5) ಡೇಟಾ ಸೈನ್ಸ್


ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಹೆಚ್ಚು ಸಂಬಳವಿರುವ ಉದ್ಯೋಗವೆಂದರೆ ಡೇಟಾ ಸೈನ್ಸ್ ಆಗಿದೆ. ಹೆಲ್ತ್‌ಕೇರ್ ವಿಭಾಗ, ಇನ್‌ಫಾರ್ಮೇಶನ್ ಟೆಕ್ನಾಲಜಿ, ಬ್ಯಾಂಕಿಂಗ್ ಹಾಗೂ ಎಜ್ಯುಕೇಶನ್ ಮೊದಲಾದ ಕ್ಷೇತ್ರಗಳಲ್ಲಿ ಡೇಟಾ ಸೈನ್ಸ್ ವೃತ್ತಿನಿರತರಿಗೆ ವಿಫುಲ ಅವಕಾಶಗಳಿವೆ.


6) ಯುಎಕ್ಸ್ ಡಿಸೈನ್


ಯೂಸರ್ ಎಕ್ಸ್‌ಪೀರಿಯನ್ಸ್ ಡಿಸೈನರ್ಸ್ ಭಾರತದ ಐಟಿ ವಲದಲ್ಲಿ ಹೆಚ್ಚು ಬೇಡಿಕೆ ಇರುವ ವೃತ್ತಿಯಾಗಿದೆ. ಇದು ಅತ್ಯುತ್ತಮ ಸಂಬಳವನ್ನು ಒಳಗೊಂಡಿದೆ.


7) ಡಿಜಿಟಲ್ ಮಾರ್ಕೆಟಿಂಗ್


ಡಿಜಿಟಲ್ ಅಂಕಿಅಂಶಗಳು ಯಾವುದೇ ಬ್ಯುಸಿನೆಸ್‌ನ ಬೆಳವಣಿಗೆಗೆ ಸಹಕಾರಿಯಾಗಿದ್ದು, ಇದು ಕೂಡ ಉತ್ತಮ ವಿಫುಲ ಅವಕಾಶವಿರುವ ಉದ್ಯೋಗ ಎಂದೆನಿಸಿದೆ. ನಿರಂತರ ವೃತ್ತಿ ಸುಧಾರಣೆಯನ್ನು ಈ ಕ್ಷೇತ್ರದಲ್ಲಿ ಅಭ್ಯರ್ಥಿ ಪಡೆದುಕೊಳ್ಳಬಹುದು.




8) ಆರ್ಟಿಫಿಶಿಯಲ್ ಇಂಟಲಿಜೆನ್ಸಿ


ಪ್ರವರ್ಧಮಾನಕ್ಕೆ ಬರುತ್ತಿರುವ ವೃತ್ತಿಕ್ಷೇತ್ರಗಳಲ್ಲಿ ಎಐ ಕೂಡ ಒಂದು. ಬೇರೆ ಬೇರೆ ಕ್ಷೇತ್ರಗಳಾದ ಶಿಕ್ಷಣ, ಕೃಷಿ, ಸೈಬರ್ ಭದ್ರತೆ ಹಾಗೂ ಅಟೊಮೊಬೈಲ್ ಕೃತಕ ಬುದ್ಧಿಮತ್ತೆ ಪದವೀಧರರು ಹಾಗೂ ಇಂಜಿನಿಯರ್‌ಗಳಿಗೆ ವಿಫುಲ ಉದ್ಯೋಗವಕಾಶಗಳನ್ನು ಒದಗಿಸುತ್ತಿದೆ.


9) ಲಾಜಿಸ್ಟಿಕ್ಸ್ ಏಂಡ್ ಸಪ್ಲೈ ಚೈನ್


ದೇಶದಲ್ಲಿ ಅತ್ಯಂತ ಅಭಿವೃದ್ಧಿ ಕಾಣುತ್ತಿರುವ ಕ್ಷೇತ್ರವಾಗಿರುವ ಲಾಜಿಸ್ಟಿಕ್ಸ್ ಏಂಡ್ ಸಪ್ಲೈ ಚೈನ್ ತಯಾರಿಕೆ, ಸೇಲ್ಸ್ ಹಾಗೂ ಆಪರೇಶನಲ್ ಪ್ಲಾನಿಂಗ್, ಇನ್ವೆಂಟರಿ ಮ್ಯಾನೇಜ್‌ಮೆಂಟ್ ಹಾಗೂ ರಿಸೋರ್ಸ್ ಅಕ್ವಿಸಿಶನ್‌ನಲ್ಲಿ ಸಾಕಷ್ಟು ವೃತ್ತಿ ಸೌಲಭ್ಯಗಳನ್ನು ಅವಕಾಶಗಳನ್ನು ಲಾಜಿಸ್ಟಿಕ್ಸ್ ಏಂಡ್ ಸಪ್ಲೈ ಚೈನ್ ಒದಗಿಸುತ್ತದೆ.


ಇದನ್ನೂ ಓದಿ: Career Tips: ಕೆಲಸ ಬದಲಿಸುವಾಗ ಜಾಸ್ತಿ ಸಂಬಳ ಒಂದನ್ನೇ ನೋಡಬೇಡಿ, ಈ ಸೌಲಭ್ಯಗಳ ಬಗ್ಗೆಯೂ ಇರಲಿ ಗಮನ


10) ಹಾಸ್ಟಿಟಾಲಿಟಿ ಹಾಗೂ ಟೂರಿಸಂ


ಭಾರತ ಪ್ರವಾಸ ಹಾಗೂ ಪ್ರಯಾಣ ವಿಧವಾದ ಅನೇಕ ಅಂಶಗಳಿಗೆ ತವರೂರು ಎಂದೆನಿಸಿದೆ. ಹಾಸ್ಪಿಟಾಲಿಟಿ ಹಾಗೂ ಟೂರಿಸಂ ಕ್ಷೇತ್ರದಲ್ಲಿ ಕೂಡ ಉದ್ಯೋಗಾಂಕ್ಷಿಗಳಿಗೆ ವಿಫುಲ ಅವಕಾಶಗಳಿದ್ದು ಈ ಕ್ಷೇತ್ರವನ್ನು ಉದ್ಯೋಗಿಗಳು ಬಳಸಿಕೊಳ್ಳಬಹುದಾಗಿದೆ.

top videos


    ಟ್ರಾವೆಲ್ ಹಾಗೂ ಟೂರಿಸಂ, ಫುಡ್ ಹಾಗೂ ಬೇವರೇಜ್, ಅಕೊಮೊಡೇಶನ್, ಎಂಟರ್ಟೈನ್‌ಮೆಂಟ್ ಹಾಗೂ ರಿಕ್ರಿಯೇಶನ್ ವಿಭಾಗಗಳಲ್ಲಿ ಅಭ್ಯರ್ಥಿಗಳು ಸೂಕ್ತ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.

    First published: