• ಹೋಂ
  • »
  • ನ್ಯೂಸ್
  • »
  • Jobs
  • »
  • Career Options: ವಿಜ್ಞಾನ ವಿಷಯದಲ್ಲಿ ಪದವಿ ಮಾಡಿದ ನಂತರ ಮುಂದೇನು? 10ಕ್ಕೂ ಹೆಚ್ಚು ಆಯ್ಕೆಗಳು ಇಲ್ಲಿವೆ

Career Options: ವಿಜ್ಞಾನ ವಿಷಯದಲ್ಲಿ ಪದವಿ ಮಾಡಿದ ನಂತರ ಮುಂದೇನು? 10ಕ್ಕೂ ಹೆಚ್ಚು ಆಯ್ಕೆಗಳು ಇಲ್ಲಿವೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

3 ವರ್ಷಗಳ B.Sc ಪದವಿಯ ನಂತರ ಯಾವ ಕೋರ್ಸ್​ಗಳನ್ನು ಮಾಡಬಹುದು? ಯಾವೆಲ್ಲಾ ವೃತ್ತಿ ಆಯ್ಕೆಗಳಿವೆ ಅನ್ನೋದನ್ನು ತಿಳಿಯೋಣ.

  • Share this:

ವಿಜ್ಞಾನವು (Science) ಉನ್ನತ ಅಧ್ಯಯನ ಮತ್ತು ಉದ್ಯೋಗಕ್ಕಾಗಿ (Job) ಹಲವಾರು ಆಯ್ಕೆಗಳೊಂದಿಗೆ “ಅವಕಾಶಗಳ ಸಾಗರ” (Opportunities) ಎಂದೇ ಹೇಳಲಾಗುತ್ತದೆ. ಬ್ಯಾಚುಲರ್ ಆಫ್ ಸೈನ್ಸ್ (Bachelor of Science) ಭಾರತದಲ್ಲಿ ಅತ್ಯಂತ ಜನಪ್ರಿಯ ಪದವಿಗಳಲ್ಲಿ ಒಂದಾಗಿದೆ. ಏಕೆಂದರೆ ಇದು ವಿವಿಧ ವೃತ್ತಿಪರ ಆಯ್ಕೆಗಳಿಗೆ (Career Options) ಕಾರಣವಾಗುತ್ತದೆ. ಇದರ ಮುಖ್ಯ ಅನುಕೂಲವೆಂದರೆ ಬಿಎಸ್‌ಸಿ ಪದವೀಧರರು ಉನ್ನತ ಶಿಕ್ಷಣಕ್ಕಾಗಿ ವಿವಿಧ ವಿಷಯದ ಆಯ್ಕೆಗಳನ್ನು ಹೊಂದಿರುತ್ತಾರೆ.


ಬ್ಯಾಚುಲರ್ ಆಫ್ ಸೈನ್ಸ್ ಅಥವಾ B.Sc ಎಂಬುದು ಪಿಯುಸಿಯಲ್ಲಿ ವಿಜ್ಞಾನವನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಇರುವಂಥ ಸರಳ ಆಯ್ಕೆಯಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಗಣಿತವು B.Sc ಅಧ್ಯಯನದ ಪ್ರಮುಖ ವಿಷಯಗಳಾಗಿರುತ್ತವೆ.


ನೀವು B.Sc ಯಲ್ಲಿ ಪದವಿ ಪಡೆಯುವುದನ್ನು ಪರಿಗಣಿಸಿದರೆ ಆಯ್ಕೆ ಮಾಡಲು ಹಲವಾರು ವಿಷಯಗಳು ಮತ್ತು ವಿಶೇಷತೆಗಳಿವೆ. ಆದಾಗ್ಯೂ, ನಿಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಎಂಎಸ್‌ಸಿ ಪದವಿಯನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ಅಲ್ಲದೇ ಬಿಎಸ್‌ಸಿ ಪದವಿಗಳಿಸಿದ ವಿದ್ಯಾರ್ಥಿಗಳು ಬೋಧನೆ, ತಾಂತ್ರಿಕ ಬರವಣಿಗೆ ಮತ್ತು ಸಂಶೋಧನಾ ವಿಶ್ಲೇಷಣೆ ಮುಂತಾದ ವೃತ್ತಿ ಆಯ್ಕೆ ಮಾಡಿಕೊಳ್ಳಬಹುದು.


ಹಾಗಿದ್ರೆ ಮೂರು ವರ್ಷಗಳ ಈ ಪದವಿಯ ನಂತರ ಯಾವ ಉನ್ನತ ಶಿಕ್ಷಣ ಕೋರ್ಸ್‌ಗಳನ್ನು ಮಾಡಬಹುದು? ಅಥವಾ ಯಾವೆಲ್ಲ ವೃತ್ತಿ ಆಯ್ಕೆ ಮಾಡಿಕೊಳ್ಳಬಹುದು ಅನ್ನೋದನ್ನು ತಿಳಿಯೋಣ.


1. ಎಂ.ಎಸ್‌ಸಿ (ಮಾಸ್ಟರ್ ಆಫ್ ಸೈನ್ಸ್): ಬಿಎಸ್‌ಸಿ ಪದವಿ ಪಡೆದ ನಂತರ ಉನ್ನತ ಅಧ್ಯಯನಕ್ಕಾಗಿ ಎಂ.ಎಸ್‌ಸಿ ಮಾಡುವುದು ಅತ್ಯಂತ ಸ್ಪಷ್ಟವಾದ ಆಯ್ಕೆಯಾಗಿದೆ. ಇದು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮುಂತಾದವುಗಳಲ್ಲಿ ವಿಶೇಷತೆಯನ್ನು ಒದಗಿಸುತ್ತದೆ. ಇನ್ನು ಎಂ.ಎಸ್.ಸಿ ನಂತರ ನೀವು ಈ ಕೆಳಗಿನ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.


*ಪ್ರಾಧ್ಯಾಪಕ


*ಪ್ರಯೋಗಾಲಯ ತಂತ್ರಜ್ಞ


*ಸಹಾಯಕ ಪ್ರಾಧ್ಯಾಪಕ


*ರಾಸಾಯನಿಕ ವಿಶ್ಲೇಷಕ


*ಆಹಾರ ಮತ್ತು ಔಷಧ ನಿರೀಕ್ಷಕರು


*ಜೀವರಸಾಯನಶಾಸ್ತ್ರಜ್ಞ, ಸಂಖ್ಯಾಶಾಸ್ತ್ರಜ್ಞ


*ಗಣಿತಜ್ಞ


*ಸಂಶೋಧನಾ ವಿಜ್ಞಾನಿ


*ಜೂನಿಯರ್ ರಿಸರ್ಚ್ ಫೆಲೋ


2. ಎಂ.ಸಿ.ಎ (ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್): ಎಂ.ಸಿ.ಎ ಎನ್ನುವುದು ಕಂಪ್ಯೂಟರ್ ಸೈನ್ಸ್ ಮೇಲೆ ಕೇಂದ್ರೀಕರಿಸುವ ಎಂ.ಎಸ್‌ಸಿ ಯಂತಹ ಸ್ನಾತಕೋತ್ತರ ಮಟ್ಟದ ಕಾರ್ಯಕ್ರಮವಾಗಿದೆ. ಎಂ.ಸಿ.ಎ ಕೋರ್ಸ್‌ , ಸಿಸ್ಟಮ್ಸ್ ಮ್ಯಾನೇಜ್ಮೆಂಟ್, ಸಿಸ್ಟಮ್ಸ್ ಅಭಿವೃದ್ಧಿ, ಸಿಸ್ಟಮ್ಸ್ ಇಂಜಿನಿಯರಿಂಗ್ ವಿಷಯಗಳನ್ನೂ ಒಳಗೊಂಡಿದೆ. ಎಂಸಿಎ ಪದವಿ ಹೊಂದಿರುವವರು ಈ ಕೆಳಗಿನ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.


*ಕಂಪ್ಯೂಟರ್ ಸಿಸ್ಟಮ್ ವಿಶ್ಲೇಷಕ


*ತಾಂತ್ರಿಕ ಸಲಹೆಗಾರ


*ಡೇಟಾಬೇಸ್ ನಿರ್ವಾಹಕರು


*ಹಾರ್ಡ್‌ವೇರ್ ಇಂಜಿನಿಯರ್


*ವೆಬ್ ಡಿಸೈನರ್ ಅಥವಾ ವೆಬ್ ಡೆವಲಪರ್


*ಪ್ರಾಜೆಕ್ಟ್ ಮ್ಯಾನೇಜರ್


*ಸಾಫ್ಟ್‌ವೇರ್‌ ಡೆವಲಪರ್


* ಸಾಫ್ಟ್‌ವೇರ್‌ ಇಂಜಿನಿಯರ್


*ಸಾಫ್ಟ್‌ವೇರ್ ಆರ್ಕಿಟೆಕ್ಟ್ ಮತ್ತು ಸಾಫ್ಟ್‌ವೇರ್ ಕನ್ಸಲ್ಟೆಂಟ್.


ಪ್ರಾತಿನಿಧಿಕ ಚಿತ್ರ


3. ಎಂ.ಬಿ.ಎ (ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್): ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಪದವಿಯು ವೃತ್ತಿಪರ ಪದವಿಯಾಗಿದ್ದು ಅದು ವ್ಯಾಪಾರ ಆಡಳಿತದಲ್ಲಿ ಶೈಕ್ಷಣಿಕ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡುತ್ತದೆ.


ಇದನ್ನು ನೀವು ಬಿಎಸ್‌ಸಿ ನಂತರ ಮಾಡಬಹುದು. ಎಂಬಿಎ ಪದವೀಧರರಿಗೆ ಲಭ್ಯವಿರುವ ಕೆಲವು ಉನ್ನತ-ಪ್ರೊಫೈಲ್ ಮ್ಯಾನೇಜರ್ ಹುದ್ದೆಗಳು ಹೀಗಿವೆ:


*ಮಾನವ ಸಂಪನ್ಮೂಲ ವ್ಯವಸ್ಥಾಪಕ


*ಕಾರ್ಯಾಚರಣೆ ಮುಖ್ಯಸ್ತ


*ಉತ್ಪನ್ನದ ನಿರ್ವಾಹಕ


*ಹಣಕಾಸು ವ್ಯವಸ್ಥಾಪಕ


*ವಾಣಿಜ್ಯ ಪ್ರಭಂದಕ


*ಯೋಜನಾ ವ್ಯವಸ್ಥಾಪಕರು


4. ಬಿ.ಇಡಿ : ಬಿಎಸ್‌ಸಿ ನಂತರ ಹೆಚ್ಚು ಬೇಡಿಕೆಯಿರುವ ವೃತ್ತಿ ಆಯ್ಕೆಗಳಲ್ಲಿ ಬಿ.ಇಡಿ (B.Ed) ಒಂದಾಗಿದೆ. ಸಮರ್ಥ ಶಿಕ್ಷಕರು ಮತ್ತು ಪ್ರಾಧ್ಯಾಪಕರಾಗಬಹುದಾದ ವಿದ್ಯಾರ್ಥಿಗಳಿಗೆ ಬಿ.ಇಡಿ ಪದವಿಗಳು ಉತ್ತಮ ವೃತ್ತಿ ಆಯ್ಕೆಯಾಗಿವೆ.


ಬೋಧನೆಯು ಉದ್ಯೋಗ ಭದ್ರತೆ, ಉದ್ಯೋಗ ತೃಪ್ತಿ, ಉತ್ತಮ ಸಂಬಳ ಮತ್ತು ಹೊಂದಿಕೊಳ್ಳುವ ವೇಳಾಪಟ್ಟಿಯನ್ನು ಒದಗಿಸುತ್ತದೆ. ಇದು ಪದವೀಧರರಿಗೆ ಅವರ ಬೋಧನಾ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲು ವಿವಿಧ ಮತ್ತು ವಿಶಿಷ್ಟವಾದ ಶಿಕ್ಷಣ ತಂತ್ರಗಳಲ್ಲಿ ತರಬೇತಿ ನೀಡುತ್ತದೆ.


5. ಸರ್ಕಾರಿ ಪರೀಕ್ಷೆಗಳು: ಬಿ.ಎಸ್‌ಸಿ ಪದವಿ ಪಡೆದ ನಂತರ, ನೀವು ಹಲವಾರು ಸರ್ಕಾರಿ ಪರೀಕ್ಷೆಗಳನ್ನು ಬರೆಯಬಹುದು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, *ಯುಪಿಎಸ್‌ಸಿ


*ಐಎಎಫ್


*ಐಎಫ್‌ಎಸ್‌ಪರೀಕ್ಷೆಗಳು


*ಆರ್‌ಬಿಐ ಪರೀಕ್ಷೆಗಳು


*ಏಮ್ಸ್‌ ನರ್ಸಿಂಗ್ ಅಧಿಕಾರಿ


*ಐಎಆರ್‌ಐ ಪ್ರಯೋಗಾಲಯ ಸಹಾಯಕ


*ಎಲ್‌ಐಸಿ – ಎಎಒ ಮತ್ತು ಎಸ್‌ಬಿಐ ಪಿಒ


6. ಪಿಜಿಡಿಎಂ ನಂತಹ ತಾಂತ್ರಿಕ ಅಲ್ಪಾವಧಿಯ ಕೋರ್ಸ್‌ಗಳು: ಬಿಎಸ್‌ಸಿ ಪದವಿ ಪಡೆದ ನಂತರ ಮತ್ತೊಂದು ವೃತ್ತಿ ಆಯ್ಕೆಯೆಂದರೆ ಅಲ್ಪಾವಧಿಯ ತಾಂತ್ರಿಕ ಕೋರ್ಸ್‌ಗಳು. ಅದು ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷತೆಯನ್ನು ನೀಡುತ್ತದೆ. ಅವುಗಳಲ್ಲಿ ಮುಖ್ಯವಾದ ಕೋರ್ಸ್‌ಗಳ ವಿವರ ಹೀಗಿದೆ.


*ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ (PGDM)


*ವ್ಯಾಪಾರ ಲೆಕ್ಕಪತ್ರ ನಿರ್ವಹಣೆ ಮತ್ತು ತೆರಿಗೆ (BAT)


*ಪ್ರಮಾಣೀಕೃತ ಹಣಕಾಸು ಯೋಜಕರು (CFP)


*ಡೇಟಾ ದೃಶ್ಯೀಕರಣ


*ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಡಿಪ್ಲೊಮಾ ಮತ್ತು ಡೇಟಾ ಸೈನ್ಸ್‌ನಲ್ಲಿ ಸರ್ಟಿಫಿಕೇಟ್‌ ಪ್ರೋಗ್ರಾಂ


7. ಡೇಟಾ ಸೈನ್ಸ್: ಡೇಟಾ ಸೈನ್ಸ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯ ವೃತ್ತಿಪರ ಆಯ್ಕೆಗಳಲ್ಲಿ ಒಂದಾಗಿದೆ. ಕೃತಕ ಬುದ್ಧಿಮತ್ತೆ( AI) ಮತ್ತು ಮೆಷಿನ್ ಲರ್ನಿಂಗ್‌ನಂತಹ ಡೇಟಾ ಸೈನ್ಸ್ ತಂತ್ರಜ್ಞಾನಗಳು ಜನಪ್ರಿಯವಾದಂತೆ ಅನುಭವಿ ಮತ್ತು ಪ್ರಮಾಣೀಕೃತ ಡೇಟಾ ಸೈನ್ಸ್ ತಜ್ಞರ ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮವಾಗಿ, ಡೇಟಾ ಸೈನ್ಸ್ ಸರ್ಟಿಫಿಕೇಟ್‌ ಪ್ರೋಗ್ರಾಂಗಳು ಮತ್ತು ಇಂಥ ಕೋರ್ಸ್‌ಗಳ ಅಗತ್ಯವು ಹೆಚ್ಚಾಗಿದೆ.


Data Science Courses


ನೀವು ಸಿಂಪ್ಲಿಲರ್ನ್‌ನಿಂದ ಡೇಟಾ ಸೈನ್ಸ್‌ ಸರ್ಟಿಫಿಕೇಶನ್‌ ಕೋರ್ಸ್‌ಗಳು ಮತ್ತು ಇತರ ಸಂಬಂಧಿತ ಕೋರ್ಸ್‌ಗಳಿಗೆ ಸುಲಭವಾಗಿ ಸೇರಿಕೊಳ್ಳಬಹುದು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ವ್ಯಾಪಾರ ವಿಶ್ಲೇಷಕ (ಬ್ಯುಸಿನೆಸ್‌ ಅನಾಲಿಸ್ಟ್‌) ಡೇಟಾ ಸೈನ್ಸ್ ಸರ್ಟಿಫಿಕೇಶನ್‌, ಡೇಟಾ ಅನಾಲಿಟಿಕ್ಸ್ ಸರ್ಟಿಫಿಕೇಶನ್‌ ಮುಂತಾದವು.


8. ಮಷಿನ್‌ ಲರ್ನಿಂಗ್: ಡೇಟಾ ಸೈನ್ಸ್‌ನ ಉಪವಿಭಾಗವಾದ‌ ಮಶಿನ್‌ ಲರ್ನಿಂಗ್‌ಗೆ ಹೆಚ್ಚು ಬೇಡಿಕೆಯಿದೆ. ಮೆಷಿನ್ ಲರ್ನಿಂಗ್ ಅಪ್ಲಿಕೇಷನ್‌ಗಳು ಐಟಿಯಿಂದ ಆರೋಗ್ಯ ಮತ್ತು ಶಿಕ್ಷಣದವರೆಗೆ ಆಧುನಿಕ ಉದ್ಯಮದ ಎಲ್ಲಾ ಕ್ಷೇತ್ರಗಳನ್ನು ನಿಯಂತ್ರಿಸುತ್ತವೆ.


ತರಬೇತಿ ಪಡೆದ ಮತ್ತು ಅನುಭವಿ ಮೆಷಿನ್ ಲರ್ನಿಂಗ್ ತಜ್ಞರ ಬೇಡಿಕೆ ಹೆಚ್ಚುತ್ತಿದ್ದಂತೆ ಅನೇಕ ಜನರು ಆನ್‌ಲೈನ್ ಮೆಷಿನ್ ಲರ್ನಿಂಗ್ ಸರ್ಟಿಫಿಕೇಶನ್‌ ಕೋರ್ಸ್‌ಗಳನ್ನು ಮಾಡುತ್ತಿದ್ದಾರೆ.


9. ಮ್ಯಾನೇಜ್‌ಮೆಂಟ್‌: B.Sc ನಂತರ, ಮತ್ತೊಂದು ವೃತ್ತಿಪರ ಸಾಧ್ಯತೆಯು ಮ್ಯಾನೇಜ್‌ಮೆಂಟ್‌ ಆಗಿದೆ. ವ್ಯವಹಾರ ನಿರ್ವಹಣೆ, ನಾಯಕತ್ವ ಮತ್ತು ನಾವೀನ್ಯತೆಗಳ ಬಗ್ಗೆ ಕಲಿಯಲು ಮ್ಯಾಜೇನ್‌ಮೆಂಟ್‌ ಕೋರ್ಸ್‌ಗಳು ಅತ್ಯಂತ ಸ್ವೀಕಾರಾರ್ಹ ವಿಧಾನವಾಗಿದೆ.


ವ್ಯವಹಾರ ಕೌಶಲ್ಯ ಮತ್ತು ಉತ್ಪಾದಕತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.


10. ಎಲ್‌ಎಲ್‌ಎಂ (LLM): ಬಿಎಸ್‌ಸಿ ನಂತರ ಎಲ್‌ಎಲ್‌ಎಂ ಅಥವಾ ಮಾಸ್ಟರ್ ಆಫ್ ಲಾ ಮತ್ತೊಂದು ವೃತ್ತಿ ಆಯ್ಕೆಯಾಗಿದೆ. ಎಲ್‌ಎಲ್‌ಎಂ ಎನ್ನುವುದು ನಿಮ್ಮ ಶೈಕ್ಷಣಿಕ ಕಾನೂನು ಜ್ಞಾನವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಸ್ನಾತಕೋತ್ತರ ಪದವಿಯಾಗಿದೆ. ಇದು ನಿಮಗೆ ಆಸಕ್ತಿಯ ನಿರ್ದಿಷ್ಟ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ.


B.Sc ನಂತರ ಮುಂದುವರಿಸಲು ಉನ್ನತ ಶೈಕ್ಷಣಿಕ ಕೋರ್ಸ್‌ಗಳು


ಬಿಎಸ್‌ಸಿ ಪದವಿ ಪಡೆದ ನಂತರ ನೀವು ಹಲವು ಪ್ರಮುಖ ಕೋರ್ಸ್‌ಗಳನ್ನು ಮಾಡಬಹುದು. ಈ ಕೋರ್ಸ್‌ಗಳ ಸಹಾಯದಿಂದ ನೀವು ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.


ಕಾಲಾನಂತರದಲ್ಲಿ ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬಹುದು. ನಿಮ್ಮ ವೃತ್ತಿಜೀವನಕ್ಕೆ ಹೆಚ್ಚುವರಿ ಉತ್ತೇಜನ ನೀಡಲು ಮತ್ತು ನಿಮ್ಮ ರೆಸ್ಯೂಮ್‌ನಲ್ಲಿ ಗೋಲ್ಡನ್ ಟಿಕೆಟ್ ಆಗಿ ಕಾರ್ಯನಿರ್ವಹಿಸಲು ಈ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅಂಥ ಪ್ರಮುಖ ಕೋರ್ಸ್‌ ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.


*ಬ್ಯುಸಿನೆಸ್‌ ಲೀಡರ್‌ಗಳಿಗಾಗಿ ಡೇಟಾ ಸೈನ್ಸ್


*ವ್ಯಾಪಾರ ವಿಶ್ಲೇಷಣೆ (ಬ್ಯುಸಿನೆಸ್‌ ಅನಾಲಿಸ್ಟ್‌)


*ಆರ್ ಜೊತೆಗೆ ಡೇಟಾ ಸೈನ್ಸ್‌ಗಾಗಿ ಪ್ರೋಗ್ರಾಮಿಂಗ್


*ಡೇಟಾ ದೃಶ್ಯೀಕರಣ


*ಹಣಕಾಸು ಎಂಜಿನಿಯರಿಂಗ್ ಮತ್ತು ಕೃತಕ ಬುದ್ಧಿಮತ್ತೆ


*ನೈಸರ್ಗಿಕ ಭಾಷಾ ಸಂಸ್ಕರಣೆ


*ಪೈಥಾನ್‌


*ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ


*ಪೈಟಾರ್ಚ್‌ (PyTorch): ಆಳವಾದ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆ


*ಮಾಹಿತಿ ತಂತ್ರಜ್ಞಾನದಲ್ಲಿ ಎಂಬಿಎ


*ಬಿಸಿಎ


*ಎಂಸಿಎ


*ಎಂಬಿಎ ಇನ್ ಕಮ್ಯುನಿಕೇಷನ್ ಮ್ಯಾನೇಜ್ಮೆಂಟ್, ಎಂಬಿಎ ಇನ್ ಪ್ರೊಡಕ್ಷನ್ ಮ್ಯಾನೇಜ್ ಮೆಂಟ್




B.Sc ನಂತರ ವೃತ್ತಿ ಅವಕಾಶಗಳು


B.Sc ಪದವೀಧರರಿಗೆ ಹಲವಾರು ವೃತ್ತಿ ಅವಕಾಶಗಳಿವೆ. ನೀವು ನಿರ್ದಿಷ್ಟ ಕೋರ್ಸ್ ಅನ್ನು ಅನುಸರಿಸಿದ ನಂತರ, ಪದವೀಧರರು ಅಥವಾ ಸ್ನಾತಕೋತ್ತರ ಪದವೀಧರರು ತಮ್ಮ ಕೌಶಲ್ಯಗಳು, ವಿಶೇಷತೆ ಮತ್ತು ಆಸಕ್ತಿಯ ಕ್ಷೇತ್ರವನ್ನು ಅವಲಂಬಿಸಿ ಕೆಳಗಿನ ವಲಯಗಳಲ್ಲಿ ಉದ್ಯೋಗಾವಕಾಶಗಳನ್ನು ಹುಡುಕಬಹುದು.


*ತೈಲ ಉದ್ಯಮ


*ಕೃಷಿ ಉದ್ಯಮ


*ಶಿಕ್ಷಣ ಸಂಸ್ಥೆಗಳು


*ಆಹಾರ ಸಂಸ್ಥೆಗಳು


*ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು


*ಆಸ್ಪತ್ರೆಗಳು


*ಆರೋಗ್ಯ ರಕ್ಷಣೆ ಒದಗಿಸುವವರು


*ರಾಸಾಯನಿಕ ಉದ್ಯಮ


*ಪರೀಕ್ಷಾ ಪ್ರಯೋಗಾಲಯಗಳು


*ಕೈಗಾರಿಕಾ ಪ್ರಯೋಗಾಲಯಗಳು


*ಸಂಶೋಧನಾ ಸಂಸ್ಥೆಗಳು


*ಜೈವಿಕ ತಂತ್ರಜ್ಞಾನ ಸಂಸ್ಥೆಗಳು


*ಅರಣ್ಯ ಸೇವೆಗಳು


*ವನ್ಯಜೀವಿ ಮತ್ತು ಮೀನುಗಾರಿಕೆ ಇಲಾಖೆಗಳು


ಒಟ್ಟಾರೆ, ಬಿಎಸ್‌ಸಿ ಪದವಿ ಎಂದರೆ ತೀರಾ ಸಾಮಾನ್ಯ ಎಂದು ಭಾವಿಸುವ ಅಗತ್ಯವಿಲ್ಲ. ಅದನ್ನು ಪೂರ್ಣಗೊಳಿಸಿದ ನಂತರ ನಿಮಗೆ ಸೂಕ್ತವಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

top videos


    B.Sc ಹೆಚ್ಚು ಭರವಸೆಯ ವೃತ್ತಿಪರ ಮಾರ್ಗವಾಗಿದೆ. ಬಿಎಸ್‌ಸಿ ನಂತರ ಅನೇಕ ಉದ್ಯೋಗಾವಕಾಶಗಳಿವೆ. ಆದರೆ ನಿಮ್ಮ ಆಸಕ್ತಿಯ ಕ್ಷೇತ್ರಗಳನ್ನು ಮಾತ್ರ ನೀವು ಗುರುತಿಸುವುದು ಮುಖ್ಯ.

    First published: