ವೃತ್ತಿ ಹಾಗೂ ವೈಯಕ್ತಿಕ ಜೀವನ (Career and Personal Life) ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ಎರಡನ್ನೂ ಸಮಾನವಾಗಿ ಕೊಂಡೊಯ್ಯುವುದು ಉತ್ತಮ ಉದ್ಯೋಗಿಯ (Employee) ಲಕ್ಷಣವಾಗಿದೆ. ಅದಾಗ್ಯೂ ಒಮ್ಮೊಮ್ಮೆ ವೃತ್ತಿ ಹಾಗೂ ಜೀವನ ಎರಡನ್ನೂ ಸಮಾನವಾಗಿ ಕೊಂಡೊಯ್ಯುವುದು ಸವಾಲಾಗಿ ಪರಿಣಮಿಸುತ್ತದೆ. ಅದಕ್ಕಾಗಿ ಇಂದಿನ ಲೇಖನದಲ್ಲಿ ಕೆಲವೊಂದು ಸಲಹೆಗಳನ್ನು (Tips) ನೀಡುತ್ತಿದ್ದೇವೆ.
ಹೊಸ ವರ್ಷಕ್ಕಾಗಿ ಉತ್ತಮ ವೃತ್ತಿ ಉದ್ದೇಶಗಳನ್ನಿರಿಸಿಕೊಂಡು ಪ್ರತಿಯೊಬ್ಬ ಉದ್ಯೋಗಿಯು ಮುಂದುವರಿಯಬೇಕು ಎಂಬುದು ಈ ಸಲಹೆಯ ಮುಖ್ಯ ಉದ್ದೇಶವಾಗಿದೆ. ಈ ಸಮಯದಲ್ಲಿ ವೈಯಕ್ತಿಕ ಜೀವನಕ್ಕೂ ಯಾವುದೇ ಕುಂದು ಕೊರತೆ ಬಾರದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಒತ್ತಡರಹಿತವಾಗಿ ಹೇಗಿರಬಹುದು? ಎಂಬುದೇ ಈ ಲೇಖನದ ಮುಖ್ಯ ಸಾರವಾಗಿದೆ.
ವರ್ಷದ ಕೊನೆಯಲ್ಲಿ ಕಾಡುವ ಅವ್ಯಕ್ತ ನೋವು
ವರ್ಷದ ಕೊನೆಯ ವಾರದಲ್ಲಿದ್ದೀರಿ ಹಾಗೂ ಆ ವರ್ಷದಲ್ಲಿ ಏನೂ ಸಾಧಿಸಿಲ್ಲ ಎಂಬ ನೀರಸ ಭಾವ ನಿಮ್ಮಲ್ಲಿ ತುಂಬಿಕೊಂಡಿದೆ, ಹಾಗಿದ್ದಾಗ ನಿಖರವಾದ ಯೋಜನೆಗಳನ್ನಿರಿಸಿಕೊಂಡು ಮುಂದಡಿ ಇದೆ ಎಂದೇ ಉದ್ಯೋತ ತಜ್ಞರು ಸಲಹೆ ನೀಡುತ್ತಾರೆ.
ನಿಮ್ಮ ಟಾರ್ಗೆಟ್ ಮಿಸ್ ಆಗಿರುವುದರ ಬಗ್ಗೆ ಮರುಕ ಪಡದೆ ಮುಂದಿನ ದಾರಿಯನ್ನು ಹೇಗೆ ನಿರ್ಮಿಸುವುದು ಎಂಬುದರತ್ತ ಗಮನಹರಿಸಿ. ಗುರಿಯನ್ನಿರಿಸಿಕೊಂಡು ಕೆಲಸ ಮಾಡಿ ಇದರಿಂದ ಸೂಕ್ತ ಯೋಜನೆಗಳನ್ನು ಮಾಡಬಹುದು.
ಗುರಿಯನ್ನು ಈಡೇರಿಸಲು ಇಂದಿನಿಂದಲೇ ತಯಾರಿ ನಡೆಸಿ
ನಿಮ್ಮ ಗುರಿಯ ಕುರಿತು ನಿಮ್ಮನ್ನು ಪ್ರೋತ್ಸಾಹಿಸುವವರು ನೀವೇ ಆಗಿರಬೇಕು. ನಿಮ್ಮ ಉದ್ಯೋಗಿ ಗುಂಪಿನಲ್ಲಿ ಯಾರಾದರೂ ಪ್ರಮೋಶನ್ ಪಡೆದುಕೊಂಡಿದ್ದಾರೆ ಎಂದಾದಲ್ಲಿ ಅವರು ಹೇಗೆ ಈ ಗುರಿಯನ್ನು ಸಾಧಿಸಿದರು ಎಂಬುದನ್ನು ಅರಿತುಕೊಳ್ಳಿ.
ಅವರು ನಡೆದ ಅದೇ ಹಾದಿ ನಿಮಗೂ ಯಶಸ್ಸನ್ನು ತಂದುಕೊಡಬಹುದು ಎಂದು ಯೋಚಿಸದಿರಿ. ಅವರು ಪಾಲಿಸಿರುವ ಸಲಹೆಗಳನ್ನು ಅನ್ವಯಿಸಿ. ಈ ಸಲಹೆಗಳನ್ನು ಅನ್ವಯಿಸುವ ಮುನ್ನ ಅವು ಎಷ್ಟು ಪ್ರಭಾವಶಾಲಿ ಎಂಬುದನ್ನು ಅರಿತುಕೊಳ್ಳಿ.
ಇದನ್ನೂ ಓದಿ: Career Tips: ಜಾಬ್ ಆಫರ್ ಅನ್ನು ತಿರಸ್ಕರಿಸುವಾಗ ಯಾವ ಕಾರಣಗಳನ್ನು ನೀಡುವುದು ಸೂಕ್ತ?
ಗುರಿ ಮುಟ್ಟಲು ಯಾವ ಸಂಪನ್ಮೂಲ ಸಹಕಾರಿ
ನಿಮ್ಮ ಸಹೋದ್ಯೋಗಿಗಳಿಂದ ಸಲಹೆಗಳನ್ನು ಪಡೆದ ನಂತರ ಯಾವೆಲ್ಲಾ ಕ್ಷೇತ್ರಗಳಲ್ಲಿ ನೀವು ಗಮನ ಹರಿಸಬೇಕು ಎಂಬುದು ನಿಮಗೆ ಅರಿವಾಗುತ್ತದೆ. ನಿಮ್ಮ ಕೌಶಲ್ಯಗಳನ್ನು ಹೇಗೆ ಸುಧಾರಿಸಬಹುದು, ಯಾವೆಲ್ಲಾ ವಿಷಯದಲ್ಲಿ ನೀವು ಹಿನ್ನಡೆ ಅನುಭವಿಸುತ್ತಿದ್ದೀರಿ ಮೊದಲಾದ ಅಂಶಗಳನ್ನು ಪಟ್ಟಿಮಾಡಿ.
ನಿಮ್ಮ ಗುರಿ ಸಾಧಿಸಲು ಯಾವೆಲ್ಲಾ ಅಂಶಗಳು ಈ ಹಿಂದೆ ಸಹಕಾರಿಯಾಗಿವೆ
ಹಿಂದಿನ ಯಾವ ಸಲಹೆಗಳು ನಿಮಗೆ ಸಹಕಾರಿಯಾಗಿವೆ ಎಂಬುದರತ್ತ ಗಮನ ಹರಿಸಿ. ಯಾವುದು ಯಾವ ಸಮಯದಲ್ಲಿ ನಡೆಯಬೇಕು ಎಂಬುದರ ಸುಳಿವು ನಿಮಗೆ ದೊರೆಯುತ್ತದೆ. ನಿಮ್ಮ ವೈಯಕ್ತಿಕ ಜೀವನಕ್ಕೂ ಈ ಸಮಯದಲ್ಲಿ ಸಮಯ ನೀಡಿ. ನಿಮ್ಮ ಆರಂಭಿಕ ಗುರಿಗೆ ನೀವು ಬದ್ಧರಾಗಿರುವಿರಾ ಎಂಬುದನ್ನು ಮನನ ಮಾಡಿಕೊಳ್ಳಿ.
ಯಾವುದೇ ಗುರಿಯನ್ನು ಈಡೇರಿಸಿಕೊಳ್ಳುವ ಮುನ್ನ ಸೂಕ್ತ ಯೋಜನೆಗಳು ಸಹಕಾರಿಯಾಗಿರುತ್ತದೆ. ಈ ಯೋಜನೆಗಳನ್ನು ಒಂದೊಂದಾಗಿ ಅಳವಡಿಸಿ. ಅಳವಡಿಸಿದ ನಂತರ ಯಾವೆಲ್ಲಾ ಯಶಸ್ಸು ನಿಮಗೆ ದೊರೆತಿದೆ ಎಂಬುದನ್ನು ಮನನ ಮಾಡಿಕೊಳ್ಳಿ.
ಒತ್ತಡದಲ್ಲಿದ್ದಾಗ ಯಾವ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು?
ನಿಮ್ಮ ಗುರಿ ಸಾಧನೆಯ ಯೋಜನೆಯಲ್ಲಿ ಅಡ್ಡಿ ಆತಂಕಗಳು ಸರ್ವೇ ಸಾಮಾನ್ಯವಾದುದು. ನಿಮ್ಮ ಅನುಭವಕ್ಕೆ ತಕ್ಕಂತಹ ಸಂಬಳ ದೊರೆಯದಿರದು. ನಿಮ್ಮ ಹಿರಿಯ ಅಧಿಕಾರಿ ನಿಮಗೆ ಬೆಂಬಲವನ್ನು ನೀಡದೇ ಇರಬಹುದು. ಸಮಸ್ಯೆ ಏನು ಎಂಬುದರ ಅರಿವಿಲ್ಲದೆ ನಿಮಗೆ ಪರಿಹಾರವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಸಮಯದಲ್ಲಿ ಸಾಧ್ಯವಾದಷ್ಟು ನಿಮ್ಮ ಸ್ನೇಹಿತರು ಹಿತೈಷಿಗಳಿಂದ ಬೆಂಬಲವನ್ನು ಪಡೆದುಕೊಳ್ಳಿ ಅವರ ಜೊತೆ ಸಮಾಲೋಚನೆ ನಡೆಸಿ.
ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ನಿಭಾಯಿಸುವ ಸಮಯದಲ್ಲಿ ಹಲವಾರು ಸಮಸ್ಯೆಗಳು ಎದುರಾಗಬಹುದು. ಈ ಸಮಯದಲ್ಲಿ ಸೂಕ್ತ ಯೋಜನೆ ಹಾಗೂ ಉದ್ದೇಶಿತ ಗುರಿ ನೆರವಾಗುತ್ತದೆ. ಯಾವುದೇ ಸಲಹೆಗಳನ್ನು ಪಾಲಿಸುವ ಮುನ್ನ ವೃತ್ತಿ ಹಾಗೂ ಜೀವನಕ್ಕೆ ಇದು ಎಷ್ಟು ಸಹಕಾರಿ ಎಂಬುದನ್ನು ವಿಶ್ಲೇಷಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ