• ಹೋಂ
  • »
  • ನ್ಯೂಸ್
  • »
  • Jobs
  • »
  • Career Tips: ವೃತ್ತಿಜೀವನದಲ್ಲಿ ಸಿಲುಕಿಕೊಂಡಿರುವಂತೆ ಅನ್ನಿಸುತ್ತಿದೆಯೇ? ಅದರಿಂದ ಹೊರಬರಲು ಇಲ್ಲಿವೆ ಸಲಹೆಗಳು

Career Tips: ವೃತ್ತಿಜೀವನದಲ್ಲಿ ಸಿಲುಕಿಕೊಂಡಿರುವಂತೆ ಅನ್ನಿಸುತ್ತಿದೆಯೇ? ಅದರಿಂದ ಹೊರಬರಲು ಇಲ್ಲಿವೆ ಸಲಹೆಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಧ್ಯಯನದ ಪ್ರಕಾರ, 75 ಪ್ರತಿಶತಕ್ಕಿಂತ ಹೆಚ್ಚು ಜನರು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಜೀವನದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಭಾವಿಸುತ್ತಾರಂತೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಸಿಲುಕಿ ಹಾಕಿಕೊಂಡಿದ್ದೀರಿ ಎಂದು ಭಾವಿಸಲು ವಿವಿಧ ಕಾರಣಗಳಿವೆ.

  • Share this:

ಕೆಲವೊಮ್ಮೆ ಕೆಲಸ (Job) ಮಾಡ್ತಾ ಮಾಡ್ತಾ ಅನೇಕ ವರ್ಷಗಳು ಆದ ನಂತರ ಅನೇಕರಿಗೆ ತಾವು ಮಾಡುವ ಕೆಲಸದಲ್ಲಿ ಒಂದು ರೀತಿಯ ಸಿಲುಕಿಕೊಂಡಿರುವ (Stuck), ಅದರಿಂದ ಹೊರಗೆ ಬಾರದ ಒಂದು ಸ್ಥಿತಿ ಅನುಭವಕ್ಕೆ ಬರುವುದು ಸಹಜ. ಮಾಡುತ್ತಿರುವ ಕೆಲಸ ಬಿಟ್ಟು ಬೇರೆ ಹೊಸ ಕೆಲಸವನ್ನು ಹುಡುಕುವುದು ಅಥವಾ ಮಾಡುತ್ತಿರುವ ಕೆಲಸದಲ್ಲಿ ಅಷ್ಟೊಂದು ಪ್ರಗತಿ ಇರದೆ ಇದ್ದರೆ ಅದನ್ನು ಬದಲಾಯಿಸಬೇಕು ಅಂತ ಅಂದುಕೊಂಡರೂ ಸಹ ಬೇರೆ ಕೆಲಸಗಳು ಅಷ್ಟು ಸುಲಭವಾಗಿ ಸಿಗದೇ ಇರುವುದು..


ಹೀಗೆ ಅನೇಕ ಸಮಸ್ಯೆಗಳ ಜೊತೆಗೆ ಒಮ್ಮೊಮ್ಮೆ ಕೆಲಸ ಮಾಡಿಕೊಂಡು ಹೋಗಬೇಕಾಗುತ್ತದೆ. ಇಂತಹ ಸಿಲುಕಿಕೊಂಡಿರುವ ಭಾವನೆ ಎಲ್ಲರಿಗೂ ಬರುತ್ತದೆಯೇ ಅಥವಾ ನಮಗೊಬ್ಬರಿಗೆ ಈ ರೀತಿಯಾಗಿ ಅನ್ನಿಸುತ್ತಿದೆ ಅಂತ ಅನೇಕ ಬಾರಿ ನಾವು ತಲೆ ಕೆಡೆಸಿಕೊಂಡಿರುತ್ತೇವೆ.


ಒರಾಕಲ್ ನಡೆಸಿದ ಅಧ್ಯಯನ ಹೇಳುವುದೇನು ಗೊತ್ತೇ?


ಒರಾಕಲ್ ನಡೆಸಿದ ಅಧ್ಯಯನದ ಪ್ರಕಾರ, 75 ಪ್ರತಿಶತಕ್ಕಿಂತ ಹೆಚ್ಚು ಜನರು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಜೀವನದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಭಾವಿಸುತ್ತಾರಂತೆ.


ನಿಮ್ಮ ವೃತ್ತಿಜೀವನದಲ್ಲಿ ನೀವು ಸಿಲುಕಿ ಹಾಕಿಕೊಂಡಿದ್ದೀರಿ ಎಂದು ಭಾವಿಸಲು ವಿವಿಧ ಕಾರಣಗಳಿವೆ. ಬಹುಶಃ ನೀವು ತಂತ್ರಜ್ಞಾನ ಉದ್ಯಮದಲ್ಲಿ ವರ್ಷಗಳಿಂದ ಕೆಲಸ ಮಾಡಿರಬಹುದು. ಆಗ ನಿಮಗೆ ಅದರ ಬಗ್ಗೆ ತುಂಬಾನೇ ಉತ್ಸಾಹ ಇರುತ್ತದೆ. ವರ್ಷಗಳು ಉರುಳಿದಂತೆ ಆ ಉತ್ಸಾಹ ಹಾಗೆಯೇ ಇರುವುದಿಲ್ಲ ಅಂತ ಹೇಳಬಹುದು.


Midlife Career here is best career options after 40 years.
ಸಾಂದರ್ಭಿಕ ಚಿತ್ರ


ಅಥವಾ ನೀವು ದಶಕಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಅಥವಾ ಉಳಿದಿದ್ದೀರಿ, ಏಕೆಂದರೆ ವೇತನ ಮತ್ತು ನಿಮಗೆ ಸಿಗುವ ಪ್ರಯೋಜನಗಳು ಈ ಕಂಪನಿಯಲ್ಲಿ ಚೆನ್ನಾಗಿವೆ. ಆದರೂ ಕೆಲಸವು ನಿಮಗೆ ಅಷ್ಟೊಂದು ಆಸಕ್ತಿದಾಯಕ ಅಂತ ಅನ್ನಿಸುತ್ತಿಲ್ಲ ಅಂತಾದರೆ ನಿಮಗೆ ಈ ಸಿಲುಕಿ ಹಾಕಿಕೊಂಡಿರುವ ಭಾವನೆ ಬರುತ್ತದೆ ಅಂತ ಹೇಳಬಹುದು.


ವೃತ್ತಿಜೀವನದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾವನೆ ಏಕೆ ಬರುವುದು?


ಸಮಯ ಕಳೆದಂತೆ, ಆ ಪ್ರಯೋಜನಗಳು ನಿಮಗೆ ಅಷ್ಟೊಂದು ಉತ್ತಮವಾದುದ್ದು ಅಂತ ಅನ್ನಿಸುವುದಿಲ್ಲ ಮತ್ತು ನೀವು ಅಲ್ಲಿಂದ ಎದ್ದು ಬೇರೆ ಕಂಪನಿಗೆ ಹೋಗಬೇಕು ಅಂತ ನೋಡುತ್ತೀರಿ.


ಆದರೆ ನಿಮಗೆ ಅಲ್ಲಿನ ಕೆಲಸಕ್ಕೆ ಬೇಕಾದ ಕೌಶಲ್ಯಗಳು ಇಲ್ಲದೆ ಇರುವುದರಿಂದ ಆ ಕೆಲಸ ಸಹ ಸಿಗುವುದು ಕಷ್ಟಕರವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಸ್ವಲ್ಪ ಸಮಯದವರೆಗೆ ಸಿಲುಕಿ ಹಾಕಿಕೊಂಡಿರುವ ಭಾವನೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ನೀವು ಹೀಗೆ ಹೆಣಗಾಡುತ್ತಿದ್ದರೆ, ಅದರ ಬಗ್ಗೆ ಏನಾದರೂ ಮಾಡುವ ಸಮಯ ಬಂದಿದೆ ಅಂತ ಅದರ ಸಂಕೇತವಾಗಿರುತ್ತದೆ.


ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಕೆಲಸವನ್ನು ನಾವು ಬದಲಾಯಿಸಿದಾಗ ಅದು ಯಾವಾಗಲೂ ಅಷ್ಟೊಂದು ಸುಲಭವಾಗಿರುವುದಿಲ್ಲ. ಏಕೆಂದರೆ ನಾವು ಮನುಷ್ಯರು ಅನಿಶ್ಚಿತತೆಯನ್ನು ಇಷ್ಟಪಡುವುದಿಲ್ಲ. ನೀವು ಹೀಗೆ ವೃತ್ತಿಜೀವನದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾವನೆ ಹೊಂದಿದ್ದರೆ, ಆ ಭಾವನೆಯಿಂದ ಹೊರಬರಲು ಇಲ್ಲಿವೆ ನೋಡಿ 10 ಸಲಹೆಗಳು.


ನಿಮಗೆ ಸಿಲುಕಿಕೊಂಡ ಭಾವನೆ ಏಕೆ ಬರುತ್ತಿದೆ ಅಂತ ತಿಳಿದುಕೊಳ್ಳಿ


ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ವೃತ್ತಿಜೀವನದಲ್ಲಿ ನೀವು ಏಕೆ ಸಿಲುಕಿಕೊಂಡಿದ್ದೀರಿ ಎಂಬುದನ್ನು ನಿರ್ಧರಿಸುವುದು. ನೀವು ಯಾವಾಗಲೂ ಬಡ್ತಿ ಬೇಕು ಅನ್ನೋ ಆಸೆಯಲ್ಲಿ ಇರುವುದು ಇದಕ್ಕೆ ಕಾರಣವೇ? ಅಥವಾ ನಿಮಗೆ ಸಿಗುತ್ತಿರುವ ಸಂಬಳ ಮತ್ತು ಪ್ರಯೋಜನಗಳು ಎಷ್ಟು ಆಕರ್ಷಕವಾಗಿವೆಯೆಂದರೆ, ನೀವು ಎಷ್ಟೇ ಸವಾಲುಗಳನ್ನು ಎದುರಿಸುತ್ತಿದ್ದರೂ ಸಹ ಅದನ್ನು ಬಿಡುವುದು ನಿಮಗೆ ಕಷ್ಟಕರವಾಗಿದೆ.


ಅದೇನೇ ಇರಲಿ, ಸ್ವಲ್ಪ ಆತ್ಮಶೋಧನೆ ಮಾಡಿಕೊಳ್ಳಿ, ಇದರಿಂದ ನಿಮ್ಮ ಜೀವನದಲ್ಲಿ ಏನು ಕೊರತೆಯಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ.




ನಿಮ್ಮ ಮೌಲ್ಯಗಳ ಬಗ್ಗೆ ಸ್ಪಷ್ಟತೆ ಪಡೆಯಿರಿ


ನಿಮ್ಮ ಕಂಪನಿಯ ವ್ಯವಸ್ಥೆಯು ನಿಮ್ಮ ವೃತ್ತಿಜೀವನದ ಮೌಲ್ಯಗಳೊಂದಿಗೆ ಹೊಂದಿಕೆಯಾದಾಗ ನೀವು ತುಂಬಾನೇ ಸಂತೋಷವಾಗಿರುತ್ತೀರಿ. ವಾಸ್ತವವಾಗಿ, ಕೆಲಸದ ತೃಪ್ತಿಯು ಇತರ ಯಾವುದೇ ಅಂಶಕ್ಕಿಂತ ನಿಮ್ಮ ಕೆಲಸದ ವಾತಾವರಣದೊಂದಿಗೆ ನಿಮ್ಮ ಮೌಲ್ಯಗಳು ಹೇಗೆ ಹೊಂದಿಕೆಯಾಗುತ್ತವೆ ಎಂಬುದರ ಮೇಲೆ ಹೆಚ್ಚು ನಿರ್ಧರಿಸಲ್ಪಡುತ್ತದೆ. ಆದ್ದರಿಂದ, ನಿಮ್ಮ ಆದ್ಯತೆಗಳನ್ನು ಸ್ಪಷ್ಟಪಡಿಸಲು ನಿಮ್ಮ ಕೆಲಸದ ಮೌಲ್ಯಗಳನ್ನು ವಿಶ್ಲೇಷಿಸುವುದು ಮುಖ್ಯವಾಗುತ್ತದೆ.


ನಿಮ್ಮ ಮನಸ್ಸನ್ನು ತೆರೆದಿಡಿ


ಹೆಚ್ಚಿನ ಜನರು ತಾವು ಇರುವ ಸ್ಥಳದಿಂದ ಯೋಚಿಸಲು ಶುರು ಮಾಡುತ್ತಾರೆ, ಎಂದರೆ ತಮ್ಮಲ್ಲಿರುವ ಕೌಶಲ್ಯಗಳೊಂದಿಗೆ ತಾವು ಏನು ಮಾಡಬಹುದು? ಆ ಆಲೋಚನಾ ಮಾರ್ಗವು ನಿಮಗೆ ಸಂಕುಚಿತ ನೋಟವನ್ನು ಮಾತ್ರ ನೀಡುತ್ತದೆ. ಬದಲಾಗಿ, ಸಾಧ್ಯತೆಗಳಿಗೆ ನಿಮ್ಮ ಮನಸ್ಸನ್ನು ತೆರೆದಿಡಿ.


ನಿಮ್ಮಲ್ಲಿರುವ ಕೌಶಲ್ಯಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ನೀವು ಎಲ್ಲಿರಲು ಬಯಸುತ್ತೀರೋ ಅಲ್ಲಿಂದ ಪ್ರಾರಂಭಿಸಿ. ನಿಮ್ಮನ್ನು ಭವಿಷ್ಯದಲ್ಲಿ ಯಾವ ಸ್ಥಾನದಲ್ಲಿ ನಿಮ್ಮನ್ನು ನೀವು ನೋಡುತ್ತೀರಿ ಅಂತ ಅರಿತುಕೊಳ್ಳಿರಿ.


ನೀವು ವರ್ಷಗಳಿಂದ ಪ್ರಯತ್ನಿಸಲು ಹಂಬಲಿಸುತ್ತಿರುವ ಯಾವುದಾದರೂ ವೃತ್ತಿ ಇದೆಯೇ? ನೀವು ಹೆಚ್ಚು ಆನಂದಿಸುವ ವಿಷಯಗಳು ಯಾವುವು ಅಂತ ಮೊದಲು ತಿಳಿದುಕೊಳ್ಳಿರಿ.


ದೂರದೃಷ್ಟಿಯನ್ನು ಬೆಳೆಸಿಕೊಳ್ಳಿ


ನಿಮ್ಮ ವೃತ್ತಿಜೀವನದಲ್ಲಿ ನೀವು ಸಿಲುಕಿಕೊಂಡಾಗ, ನಿಮ್ಮ ಜೀವನವು ಮುಂದೆ ಹೇಗಿರಬೇಕೆಂದು ನೀವು ಬಯಸುತ್ತೀರಿ ಎಂದು ಊಹಿಸಲು ಇದು ಸಹಾಯ ಮಾಡುತ್ತದೆ. ಶಾಂತವಾದ ಸ್ಥಳದಲ್ಲಿ ಈ ವ್ಯಾಯಾಮವನ್ನು ಪೂರ್ಣಗೊಳಿಸಲು ಕನಿಷ್ಠ 30 ನಿಮಿಷಗಳನ್ನು ತೆಗೆದುಕೊಳ್ಳಿ. 90ನೇ ವಯಸ್ಸಿನಲ್ಲಿ ನಿಮ್ಮ ಆದರ್ಶ ವೃತ್ತಿಜೀವನವನ್ನು ಹಿಂತಿರುಗಿ ನೋಡುವಾಗ ನೀವು ಸಂತೋಷವಾಗಿರುತ್ತೀರಿ ಎಂದು ಕಲ್ಪಿಸಿಕೊಳ್ಳಿ.


ಅದು ಹೇಗೆ ಕಾಣುತ್ತದೆ? ನೀವು ಏನನ್ನು ಸಾಧಿಸಿದ್ದೀರಿ? ನಿಮಗೆ ಏನನಿಸುತ್ತಿದೆ? ನಿಮಗೆ ಸಾಧ್ಯವಾದಷ್ಟು ವಿವರಗಳನ್ನು ಬರೆಯಿರಿ. ಈ ವ್ಯಾಯಾಮ ಮಾಡುವುದರಿಂದ ನೀವು ನಿಜವಾಗಿಯೂ ಏನನ್ನು ಬಯಸುತ್ತೀರಿ ಎಂಬುದು ನಿಮಗೆ ಅರ್ಥವಾಗುತ್ತದೆ.


ನಿಮ್ಮ ವೈಫಲ್ಯಗಳನ್ನು ಗುರುತಿಸಿ ಅವುಗಳಿಂದ ಪಾಠ ಕಲಿಯಿರಿ


ನಮ್ಮಲ್ಲಿ ಅನೇಕರು ಅನುಭವಗಳನ್ನು ಒಂದು ರೀತಿಯ ಮೆಟ್ಟಿಲುಗಳು ಅಂತ ಕರೆಯುವ ಬದಲು ಅವುಗಳನ್ನು ವೈಫಲ್ಯಗಳು ಎಂದು ಹಣೆಪಟ್ಟಿ ಕಟ್ಟುತ್ತಾರೆ. ಆದರೂ, ಈ ಕ್ಷಣದಲ್ಲಿ ನೀವು ಯಾವುದನ್ನು ವೈಫಲ್ಯವೆಂದು ತಿಳಿದುಕೊಂಡಿರುತ್ತಿರೋ ನಾಳೆ ಅದೇ ನಿಮ್ಮ ಮಹತ್ತರ ಯಶಸ್ಸಿಗೆ ಕಾರಣವಾಗಬಹುದು.


do you want happy career life follow this
ಸಾಂಕೇತಿಕ ಚಿತ್ರ


ಸಹಾಯವನ್ನು ಪಡೆಯಿರಿ 


ಬೆಂಬಲವಿಲ್ಲದೆ ಯಾರೂ ಪರಿವರ್ತನೆಯ ಅವಧಿಯನ್ನು ದಾಟಲು ಸಾಧ್ಯವಿಲ್ಲ. ಇದು ನಿಮ್ಮ ಪ್ರಮುಖ ಸ್ನೇಹಿತರು, ಕುಟುಂಬ, ಸಹೋದ್ಯೋಗಿಗಳು ಮತ್ತು ಮಾರ್ಗದರ್ಶಕರ ಕಡೆಗೆ ವಾಲುವ ಸಮಯವಾಗಿರುತ್ತದೆ. ನಿಷ್ಪಕ್ಷಪಾತ ವೃತ್ತಿಪರ ದೃಷ್ಟಿಕೋನವನ್ನು ಒದಗಿಸಬಲ್ಲ ವೃತ್ತಿ ತರಬೇತುದಾರನನ್ನು ನೇಮಿಸಿಕೊಳ್ಳುವುದನ್ನು ಸಹ ನೀವು ಪರಿಗಣಿಸಬಹುದು.


ಹೊಸ ವಿಷಯಗಳನ್ನು ಟ್ರೈ ಮಾಡಿ


ನೀವು ಸಿಲುಕಿ ಹಾಕಿಕೊಂಡಿರುವ ಭಾವನೆ ನಿಮ್ಮನ್ನು ಸ್ವಲ್ಪ ಸಮಯದವರೆಗೆ ಅದೇ ಒಂದು ಚಿಂತನೆಯಲ್ಲಿ ಮುಳುಗಿರುವಂತೆ ಮಾಡುವ ಸಾಧ್ಯತೆಯಿದೆ. ವಿಷಯಗಳನ್ನು ಬದಲಾಯಿಸುವ ಸಮಯ ಇದು. ಹೊಸ ವಿಷಯಗಳನ್ನು ಪ್ರಯತ್ನಿಸಲು ನಿಮ್ಮನ್ನು ಪ್ರೇರೇಪಿಸಿಕೊಳ್ಳಿ. ಹೊಸ ಹವ್ಯಾಸವನ್ನು ಬೆಳೆಸಿಕೊಳ್ಳಿರಿ, ನೀವು ಆಸಕ್ತಿ ಹೊಂದಿರುವ ಛಾಯಾಗ್ರಹಣ ತರಗತಿಗೆ ಸೇರಿಕೊಳ್ಳಿ.


ಈ ಹಿಂದೆ ಅಪರಿಚಿತ ವ್ಯಕ್ತಿಗಳು ಮತ್ತು ಆಲೋಚನೆಗಳೊಂದಿಗೆ ತೊಡಗಿಸಿಕೊಳ್ಳಲು ಅಪರಿಚಿತ ಸಂದರ್ಭಗಳಲ್ಲಿ ನಿಮ್ಮನ್ನು ಇರಿಸಿಕೊಳ್ಳಿ. ಆ ರೀತಿಯಾಗಿ, ನೀವು ಹೊಸ ಜನರೊಂದಿಗೆ ಬೆರೆಯಲು ಮತ್ತು ಹೊಸ ಮಾಹಿತಿಯನ್ನು ನೀವು ಜೀವನದಲ್ಲಿ ಪಡೆದುಕೊಳ್ಳಬಹುದು.


ಹೊಸ ಅನುಭವವನ್ನು ಪಡೆಯಲು ಇದ್ದ ಸ್ಥಳದಿಂದ ಬೇರೆಡೆಗೆ ಹೋಗಿ


ಸಹಾಯವನ್ನು ಪಡೆಯುವುದು ಮತ್ತು ಹೊಸ ಅನುಭವಗಳನ್ನು ಸ್ವೀಕರಿಸುವುದರ ಹೊರತಾಗಿ, ಇದ್ದ ಸ್ಥಳವನ್ನು ಬಿಟ್ಟು ಸ್ವಲ್ಪ ಬೇರೆಡೆಗೆ ಹೋಗಿ ಬನ್ನಿ.


ಸಿಲುಕಿ ಹಾಕಿಕೊಂಡಿರುವ ಭಾವನೆ ನಿಮ್ಮನ್ನು ಆವರಿಸಿದೆ ಎಂದರೆ, ನೀವು ಬದಲಾಗಲು ಸ್ಫೂರ್ತಿ ಪಡೆದಿಲ್ಲ ಎಂದರ್ಥ. ಪ್ರೇರಕ ಭಾಷಣಕಾರ ಜಿಮ್ ರಾನ್ ಅವರು “ನೀವು ಯಾರೊಂದಿಗೆ ಸಹವಾಸ ಮಾಡುತ್ತೀರಿ ಎಂಬುದು ನಿಮ್ಮ ದೃಷ್ಟಿಕೋನದ ಮೇಲೆ ಪ್ರಭಾವ ಬೀರುತ್ತದೆ. ನೀವು ಅನುಕರಿಸಲು ಬಯಸುವ ಜನರೊಂದಿಗೆ ಹೆಚ್ಚು ಸಮಯ ಕಳೆದರೆ, ನೀವು ಹೆಚ್ಚು ಸ್ಫೂರ್ತಿ ಪಡೆಯುತ್ತೀರಿ. ಜೊತೆಗೆ, ನೀವು ಅದೇ ಸಮಯದಲ್ಲಿ ನಿಮ್ಮ ನೆಟ್ವರ್ಕ್ ಅನ್ನು ಸಹ ವಿಸ್ತರಿಸಿಕೊಳ್ಳುತ್ತೀರಿ" ಎನ್ನುತ್ತಾರೆ.


ಚಿಕ್ಕ-ಪುಟ್ಟ ಅಭ್ಯಾಸಗಳೊಂದಿಗೆ ಸಣ್ಣದಾಗಿ ಪ್ರಾರಂಭಿಸಿ


ಸೂಕ್ಷ್ಮ ಅಭ್ಯಾಸಗಳು ಗಮನಾರ್ಹ ಫಲಿತಾಂಶಗಳನ್ನು ನೋಡಲು ನೀವು ಪ್ರತಿದಿನ ತೆಗೆದುಕೊಳ್ಳಬಹುದಾದ ಸಣ್ಣ ಕ್ರಮಗಳಾಗಿವೆ. ದೊಡ್ಡ ಗುರಿಗಳನ್ನು ನಿಭಾಯಿಸಲು ಇದು ಉತ್ತಮ ಮಾರ್ಗವಾಗಿದೆ.


ಇದನ್ನೂ ಓದಿ: Career Tips: ಮಧ್ಯವಯಸ್ಸಿನಲ್ಲಿ ವೃತ್ತಿ ಬದಲಾಯಿಸುತ್ತಿದ್ದರೆ ಈ 5 ಉದ್ಯೋಗಗಳ ಆಯ್ಕೆ ಬೆಸ್ಟ್


ಏಕೆಂದರೆ ನೀವು ನಿರುತ್ಸಾಹಗೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಉದಾಹರಣೆಗೆ, ನಿಮ್ಮ ನೆಟ್ವರ್ಕ್ ಅನ್ನು ವಿಸ್ತರಿಸಲು ನೀವು ಬಯಸಿದರೆ, ಪ್ರತಿದಿನ 10 ಜನರನ್ನು ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿ. ನಂತರ ಕಾಲಾನಂತರದಲ್ಲಿ, ಆ ಸಂಖ್ಯೆಯನ್ನು ಪ್ರತಿದಿನ 20 ಜನರಿಗೆ ಹೆಚ್ಚಿಸಿಕೊಳ್ಳಿ. ಶೀಘ್ರದಲ್ಲಿಯೇ ಇದು ನಿಮ್ಮ ದಿನಚರಿಯ ಭಾಗವಾಗುತ್ತದೆ.


ಎಂದಿಗೂ ಬಿಟ್ಟುಕೊಡಬೇಡಿ


ಸಿಲುಕಿ ಹಾಕಿಕೊಂಡಿರುವ ಭಾವನೆ ನಿಮ್ಮನ್ನು ಆವರಿಸಿಕೊಂಡಾಗ ನೀವು ವಿಚಲಿತರಾಗುವುದು, ತಾಳ್ಮೆ ಕಳೆದುಕೊಳ್ಳುವುದು ಎಲ್ಲವೂ ಸಹಜ. ಆದರೆ ಇದು ನಿಧಾನವಾಗಿ ಬದಲಾಗುವ ವಿಷಯವಾಗಿದೆ ಅಂತ ತಿಳಿದುಕೊಳ್ಳಿ ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಎಂದಿಗೂ ಬಿಟ್ಟುಕೊಡಬೇಡಿ.

top videos


    ಏನೇ ಬಂದರೂ ಅದನ್ನು ಎದುರಿಸಿ ಮುನ್ನಡೆಯಿರಿ. ಬದಲಾವಣೆಯು ನಾವು ನಿಜವಾಗಿಯೂ ನಂಬಬಹುದಾದ ಏಕೈಕ ವಿಷಯವಾಗಿದೆ ಅಂತ ಹೇಳಬಹುದು.

    First published: