• ಹೋಂ
  • »
  • ನ್ಯೂಸ್
  • »
  • Jobs
  • »
  • SBI ಪ್ರೊಬೇಷನರಿ ಆಫೀಸರ್ ಹುದ್ದೆಯ ಸಂದರ್ಶನಕ್ಕೆ ತಯಾರಾಗಲು ಪ್ರಮುಖ ಸಲಹೆಗಳು ಇಲ್ಲಿವೆ

SBI ಪ್ರೊಬೇಷನರಿ ಆಫೀಸರ್ ಹುದ್ದೆಯ ಸಂದರ್ಶನಕ್ಕೆ ತಯಾರಾಗಲು ಪ್ರಮುಖ ಸಲಹೆಗಳು ಇಲ್ಲಿವೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

SBI PO Interview: ಎಸ್‌ಬಿಐ ಸಂದರ್ಶನ ನಡೆಸುವ ಕ್ರಮ ಭಿನ್ನವಾಗಿದೆ. ಅಭ್ಯರ್ಥಿಯು ಹುದ್ದೆಗೆ ಸೂಕ್ತ ವ್ಯಕ್ತಿ ಹೌದೇ, ಅಲ್ಲವೇ ಎಂಬುದನ್ನು ಸಂದರ್ಶನವನ್ನಾಧರಿಸಿ ಆಯ್ಕೆ ಮಾಡಲಾಗುತ್ತದೆ.

  • Share this:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) 10 ಮಾರ್ಚ್ 2023 ರಂದು ಎಸ್‌ಬಿಐ PO (ಪ್ರೊಬೇಷನರಿ ಆಫೀಸರ್) ಮುಖ್ಯ ಫಲಿತಾಂಶವನ್ನು ಪ್ರಕಟಿಸಿದೆ. ಈಗ ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಸಂದರ್ಶನದ (PO Interview) ಅಂತಿಮ ಹಂತ ಮಾತ್ರ ಬಾಕಿ ಉಳಿದಿದ್ದು ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಲು ಈ ಹಂತ ಒಂದು ಪ್ರಮುಖ ಮತ್ತು ಸವಾಲಿನದ್ದಾಗಿದೆ.


ಸಂದರ್ಶನಕ್ಕೆ ಸಿದ್ಧತೆ


ಎಸ್‌ಬಿಐ ಸಂದರ್ಶನ ನಡೆಸುವ ಕ್ರಮ ಇತರ ಸಂದರ್ಶನಗಳಿಗಿಂತ ಭಿನ್ನವಾಗಿದೆ. ಅಭ್ಯರ್ಥಿಯು ಹುದ್ದೆಗೆ ಸೂಕ್ತ ವ್ಯಕ್ತಿ ಹೌದೇ, ಅಲ್ಲವೇ ಎಂಬುದನ್ನು ಸಂದರ್ಶನವನ್ನಾಧರಿಸಿ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಯ ಸಾಮಾನ್ಯ ಜ್ಞಾನ ಹಾಗೂ ಇನ್ನಿತರ ಅಂಶಗಳನ್ನು ಪರೀಕ್ಷಿಸಲಾಗುತ್ತದೆ. ಈ ಸಮಯದಲ್ಲಿ ಉದ್ಯೋಗಾಂಕ್ಷಿ ಸರ್ವ ವಿಧದಲ್ಲೂ ಸಂದರ್ಶನಕ್ಕೆ ಸಿದ್ಧರಾಗಬೇಕಾಗುತ್ತದೆ.


ಈ ಸಮಯದಲ್ಲಿ ಸಂದರ್ಶನದ ಸುತ್ತಿನಲ್ಲಿ ನಿಮ್ಮನ್ನು ಸರಿಯಾಗಿ ಪ್ರಸ್ತುತಪಡಿಸುವುದು ಅವಶ್ಯಕ. ಈ ಪೋಸ್ಟ್‌ನಲ್ಲಿ, ಮುಂಬರುವ ಎಸ್‌ಬಿಐ PO ಸಂದರ್ಶನ 2023 ಗಾಗಿ ನಾವು ಸಂದರ್ಶನ ಸಲಹೆಗಳನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.


ಎಸ್‌ಬಿಐ ಪ್ರೊಬೇಷನರಿ ಆಫೀಸರ್ 2023 ಗಾಗಿ ಪ್ರಮುಖ ಸಂದರ್ಶನ ಸಲಹೆಗಳು


ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಬ್ಯಾಂಕಿಂಗ್ ವಲಯದಲ್ಲೇ ಅತ್ಯಂತ ಪ್ರತಿಷ್ಠಿತ ಉದ್ಯೋಗಗಳಲ್ಲಿ ಒಂದೆನಿಸಿದೆ. ಎಸ್‌ಬಿಐ ವಿಶೇಷ ಬ್ಯಾಂಕಿಂಗ್ ವಲಯವಾಗಿದ್ದು ತನ್ನ ಉದ್ಯೋಗಿಗಳನ್ನು ವೃತ್ತಿಪರವಾಗಿ ಪ್ರೋತ್ಸಾಹಿಸುತ್ತದೆ ಹಾಗೂ ಅವರ ಮುಂದುವರಿಕೆಗೆ ನೆರವಾಗುತ್ತದೆ.




ಪ್ರೊಬೇಷನರಿ ಆಫೀಸರ್ ಸಂದರ್ಶನಕ್ಕೆ ಸಿದ್ಧರಾಗಲು ಉದ್ಯೋಗಾಂಕ್ಷಿಗಳು ಉತ್ತಮವಾಗಿ ಸಿದ್ಧರಾಗಬೇಕು. ಹೇಗೆ ಸಿದ್ಧರಾಗಬೇಕು ಎಂಬ ಮಾಹಿತಿ ಇಲ್ಲಿದೆ


ಸಂಪೂರ್ಣ ಪರಿಚಯ ಅಗತ್ಯ


ಅಭ್ಯರ್ಥಿಗಳು ತಮ್ಮ ಸಂಪೂರ್ಣ ಪರಿಚಯವನ್ನು ಮಾಡಲು ಸಿದ್ಧರಾಗಿರಬೇಕು. ತಮ್ಮ ಹೆಸರಿನ ಸರಿಯಾದ ಅರ್ಥವನ್ನು ಉದ್ಯೋಗಾಂಕ್ಷಿಗಳು ತಿಳಿದುಕೊಂಡಿರಬೇಕು ಏಕೆಂದರೆ ಒಮ್ಮೊಮ್ಮೆ ಸಂದರ್ಶನ ನಡೆಸು ಪ್ಯಾನಲ್ ಸದಸ್ಯರು ಅಭ್ಯರ್ಥಿಯ ಹೆಸರಿನ ಅರ್ಥವನ್ನು ಕೇಳಬಹುದು ಹಾಗಾಗಿ ಸರಿಯಾಗಿ ಸಿದ್ಧರಾಗಿರಬೇಕು.


ವೇಷ ಭೂಷಣದತ್ತ ಗಮನ ಹರಿಸಿ


ನಿಮ್ಮನ್ನು ಕುರಿತು ಸಂದರ್ಶಕರಲ್ಲಿ ಮೆಚ್ಚುಗೆ ಬರುವಂತೆ ನಡೆದುಕೊಳ್ಳಬೇಕಾದುದು ಮುಖ್ಯವಾಗಿದೆ. ಹಾಗಾಗಿ ನಿಮ್ಮ ವೇಷ ಭೂಷಣದತ್ತ ಗಮನ ಹರಿಸಿ. ತುಂಬಾ ಗಾಢ ಬಣ್ಣದ ಅಂತೆಯೇ ಮಿನುಗುವ ವಸ್ತ್ರಗಳನ್ನು ಧರಿಸಬೇಡಿ. ಗಾಢ ಸುವಾಸನೆಯ ಸುಗಂಧ ದ್ರವ್ಯಗಳನ್ನು ಬಳಸದಿರಿ. ಸಂದರ್ಶನಕ್ಕೆ 2-3 ದಿನಗಳ ಮೊದಲು ನಿಮ್ಮ ಸಂಪೂರ್ಣ ಉಡುಪನ್ನು ಸಿದ್ಧವಾಗಿಟ್ಟುಕೊಳ್ಳಿ.




ಉದ್ನಿಗ್ನತೆ ತೋರ್ಪಡಿಸಿಕೊಳ್ಳದಿರಿ


ಸಂದರ್ಶಕರ ಮುಂದೆ ನೀವು ಕುಳಿತಿದ್ದ ಸಮಯದಲ್ಲಿ ಹೆಚ್ಚು ಉದ್ನಿಗ್ನತೆಗೆ ಒಳಗಾದಂತೆ ತೋರ್ಪಡಿಸಿಕೊಳ್ಳದಿರಿ. ಸಂದರ್ಶನಕ್ಕೆ ಹಾಜರಾಗುವ ಮುನ್ನ ಕನ್ನಡಿಯ ಮುಂದೆ ನಿಂತು ಸಂದರ್ಶನಕ್ಕೆ ಸಿದ್ಧರಾಗಿ. ಇದರಿಂದ ತನ್ನಷ್ಟಕ್ಕೆ ಧೈರ್ಯ ಮೂಡುತ್ತದೆ.


ಪ್ರಚಲಿತ ವಿದ್ಯಮಾನಗಳ ಕುರಿತು ಅಭ್ಯರ್ಥಿ ತಿಳಿದುಕೊಂಡಿರಬೇಕು


ಸಂದರ್ಶನದ ದಿನ ಮುಖ್ಯಾಂಶಗಳ ಬಗ್ಗೆ ಪ್ರಚಲಿತ ವಿದ್ಯಮಾನಗಳ ಕುರಿತು ಅಭ್ಯರ್ಥಿಗಳಿಗೆ ಸಂದರ್ಶಕರು ಪ್ರಶ್ನೆಗಳನ್ನು ಕೇಳಬಹುದು ಹಾಗಾಗಿ ಆ ದಿನದ ಸುದ್ದಿಪತ್ರಿಕೆಗಳನ್ನು ವಿಷದವಾಗಿ ಓದಿಕೊಳ್ಳಿ ಯಾವುದಾದರೂ ಪ್ರಚಲಿತ ಘಟನೆಗಳಿದ್ದರೆ ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ.


ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳಿ


ಸಂದರ್ಶನದುದ್ದಕ್ಕೂ ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳಿ. ಸಕಾರಾತ್ಮಕ ಮನೋಭಾವ ನಿಮ್ಮಲ್ಲಿರಲಿ. ಸಂದರ್ಶಕರು ಮಾತನಾಡುವಾಗ ಮಧ್ಯೆ ಮಾತನಾಡದಿರಿ. ಅವರು ಮಾತು ಮುಗಿಸಿದ ನಂತರ ನಿಮ್ಮ ಅನಿಸಿಕೆಗಳನ್ನು ಅವರ ಮುಂದಿಡಿ. ಏನಾದರೂ ಪ್ರಶ್ನೆಗಳಿದ್ದರೂ ಈ ಸಮಯದಲ್ಲಿಯೇ ಅವರಲ್ಲಿ ಕೇಳಿ.


ಇದನ್ನೂ ಓದಿ: Interview Tips: ಸಂದರ್ಶನ ಕೊಠಡಿಗೆ ಎಂಟ್ರಿ ಕೊಡುತ್ತಿದ್ದಂತೆ ಈ ರೀತಿ ಇಂಪ್ರೆಷನ್ ಕ್ರಿಯೇಟ್ ಮಾಡಿ


ಅಭ್ಯರ್ಥಿ ಕುಳಿತುಕೊಳ್ಳುವ ಭಂಗಿ ಮುಖ್ಯವಾಗಿದೆ


ಸಂದರ್ಶನದ ವೇಳೆ ನೀವು ಕುಳಿತುಕೊಳ್ಳುವ ಭಂಗಿ ಕೂಡ ಮುಖ್ಯವಾಗಿರುತ್ತದೆ. ಸರಿಯಾಗಿ ನೇರವಾಗಿ ಸಂದರ್ಶಕರ ಮೆಚ್ಚುಗೆಗೆ ಪಾತ್ರವಾಗುವ ರೀತಿಯಲ್ಲಿ ಕುಳಿತುಕೊಳ್ಳಬೇಕು ಹಾಗಾಗಿ ಆದಷ್ಟು ಸರಿಯಾಗಿ ಕುಳಿತುಕೊಳ್ಳಲು ಅಭ್ಯಾಸ ನಡೆಸಿ ಇದರಿಂದ ಸಂದರ್ಶನದ ಸಮಯದಲ್ಲಿ ಸರಿಯಾಗಿ ಕುಳಿತುಕೊಳ್ಳುವ ಭಂಗಿಯನ್ನು ಅಭ್ಯಸಿಸಿ.

First published: