• ಹೋಂ
  • »
  • ನ್ಯೂಸ್
  • »
  • Jobs
  • »
  • Layoffs ಇರಲಿ ಇಲ್ಲದಿರಲಿ IT ಕ್ಷೇತ್ರದಲ್ಲಿ ನಿಮ್ಮ ಉದ್ಯೋಗ ಸೇಫ್ ಆಗಿರಲು ಈ ಟಿಪ್ಸ್ ಪಾಲಿಸಿ

Layoffs ಇರಲಿ ಇಲ್ಲದಿರಲಿ IT ಕ್ಷೇತ್ರದಲ್ಲಿ ನಿಮ್ಮ ಉದ್ಯೋಗ ಸೇಫ್ ಆಗಿರಲು ಈ ಟಿಪ್ಸ್ ಪಾಲಿಸಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಐಟಿ ವೃತ್ತಿಜೀವನದ ಯಶಸ್ಸಿನ ಹಾದಿಯನ್ನು ಹೇಗೆ ನಿರ್ಮಿಸಬೇಕು ಎಂಬುದರ ಕುರಿತು ಪರಿಣತರು ನೀಡಿದ ಕೆಲವು ಸಲಹೆಗಳು ಇಲ್ಲಿವೆ.

  • Share this:

ಐಟಿ ಪ್ರಪಂಚ (IT Field) ಇಂದಿನ ಯುವಪೀಳಿಗೆಯನ್ನು ಹೆಚ್ಚು ಆಕರ್ಷಿಸುತ್ತಿರುವ ಕ್ಷೇತ್ರವಾಗಿದೆ. ಇದು ಹೆಚ್ಚು ವೇತನವನ್ನು (Salary) ನೀಡುವ ಉದ್ಯೋಗವಾಗಿದೆ (Job). ಆದರೆ ಈ ಕ್ಷೇತ್ರ ಉದ್ಯೋಗಿಗಳಿಗೆ ಅನಿಶ್ಚಿತವಾಗಿದೆ. ಇಲ್ಲಿ ವೃತ್ತಿ (Career)  ನಿರ್ಮಿಸಿಕೊಳ್ಳುವುದು ಅಷ್ಟು ಸುಲಭವಲ್ಲ.


ಹೀಗಾಗಿ ಐಟಿ ಕ್ಷೇತ್ರದಲ್ಲಿ ಶಾಶ್ವತವಾದ ವೃತ್ತಿಜೀವನವನ್ನು ಹೇಗೆ ನಿರ್ಮಿಸಿಕೊಳ್ಳಬೇಕು? ಐಟಿ ವೃತ್ತಿಜೀವನದ ಯಶಸ್ಸಿನ ಹಾದಿಯನ್ನು ಹೇಗೆ ನಿರ್ಮಿಸಬೇಕು ಎಂಬುದರ ಕುರಿತು ಪರಿಣತರು ನೀಡಿದ ಕೆಲವು ಸಲಹೆಗಳು ಇಲ್ಲಿವೆ:


1. ಹೆಚ್ಚು ಹೆಚ್ಚು ಕಲಿಯಿರಿ


ಇತ್ತೀಚೆಗೆ ಹೆಚ್ಚು ಅನುಭವ ಇರುವ ಟೆಕಿಗಳನ್ನು ಉದ್ಯೋಗದಿಂದ ವಜಾಗೊಳಿಸುತ್ತಿರುವ ಸುದ್ದಿಯನ್ನು ನೀವು ಕೇಳಿರಬಹುದು. ಇದು ಏನು ತೋರಿಸುತ್ತದೆ? ಹೆಚ್ಚು ನುರಿತ ತಂತ್ರಜ್ಞಾನ ವೃತ್ತಿಪರರು ಸಹ ಈ ಕ್ಷೇತ್ರದಲ್ಲಿ ಪ್ರಸ್ತುತವಾಗಿ ಉಳಿಯಲು ಹೆಚ್ಚಿನ ಕಲಿಕೆಯನ್ನು ಮುಂದುವರಿಸಬೇಕು ಎಂದು ತೋರಿಸುತ್ತದೆ. ಇದು ಸೈಬರ್‌ ಸೆಕ್ಯುರಿಟಿಯಂತಹ ಬೇಡಿಕೆಯ ವಲಯಗಳಿಗೂ ಅನ್ವಯಿಸುತ್ತದೆ. ಮ್ಯಾನೇಜ್‌ಮೆಂಟ್ ತನ್ನ ಇನ್-ಹೌಸ್ ಸೆಕ್ಯುರಿಟಿ ತಂಡವನ್ನು ಮ್ಯಾನೇಜ್ಡ್ ಸೆಕ್ಯುರಿಟಿ ಸರ್ವಿಸ್ ಪ್ರೊವೈಡರ್ (MSSP) ನೊಂದಿಗೆ ಬದಲಾಯಿಸಲು ಇದ್ದಕ್ಕಿದ್ದಂತೆ ನಿರ್ಧರಿಸಿದ ಕಂಪನಿಗಳ ಉದಾಹರಣೆಗಳಿವೆ. ಹೀಗಾಗಿ ಸುರಕ್ಷಿತವಾಗಿದ್ದ ದೀರ್ಘಾವಧಿಯ ವೃತ್ತಿಜೀವನವು ಕ್ಷಣದಲ್ಲಿಯೇ ಇಲ್ಲವಾಗಬಹುದು. ಹೀಗಾಗಿ, ಹೊಸ ತಂತ್ರಜ್ಞಾನ ಕೌಶಲ್ಯಗಳು, ಪ್ರೋಗ್ರಾಮಿಂಗ್ ಭಾಷೆಗಳನ್ನು ಕಲಿಯುವುದನ್ನು ಮುಂದುವರಿಸಿ.




2. ನಿಮ್ಮ ಟೆಕ್ ಮತ್ತು ಬಿಸಿನೆಸ್ ಕೌಶಲಗಳನ್ನು ಬ್ಯಾಲೆನ್ಸ್ ಮಾಡಿ


ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಐಟಿ ಅಥವಾ ಸೈಬರ್‌ ಸೆಕ್ಯುರಿಟಿ ಕೌಶಲ್ಯಗಳನ್ನು ಹೊಂದಿರುತ್ತಾರೆ. ಹೀಗಾಗಿ ತಾಂತ್ರಿಕ ಪ್ರಾವೀಣ್ಯತೆಯ ಮೇಲೆ ಸಂಪೂರ್ಣವಾಗಿ ಸ್ಪರ್ಧಿಸುವುದು ಕಠಿಣವಾಗಬಹುದು, ವಿಶೇಷವಾಗಿ ಕಿರಿಯ ಅರ್ಜಿದಾರರಿಗೆ ಹೆಚ್ಚು ಕಷ್ಟವಾಗಬಹುದು. ವ್ಯಾಪಾರ ಮತ್ತು ಸಂವಹನ ಕೌಶಲ್ಯಗಳನ್ನು ಪಡೆದುಕೊಳ್ಳುವುದರಿಂದ ಹೈಯರ್-ಪೇಯಿಂಗ್ ಎಕ್ಸಿಕ್ಯೂಟಿವ್ ಮತ್ತು ಸಿ-ಮಟ್ಟದ ಸ್ಥಾನಗಳಲ್ಲಿ ನಿಮ್ಮ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ. ಹೊಸ ಅವಕಾಶಗಳನ್ನು ತೆರೆಯುವ ಕ್ಷೇತ್ರಗಳಿಗೆ ನಿಮ್ಮ ಕೌಶಲ್ಯ ಮತ್ತು ಅನುಭವವನ್ನು ವಿಸ್ತರಿಸಿ. ಜೊತೆಗೆ ಹೆಚ್ಚಿನ ತಾಂತ್ರಿಕ ಕೌಶಲ್ಯಗಳನ್ನು ಪಡೆಯಿರಿ. ನೀವು ಕೆಲಸ ಮಾಡಲು ಬಯಸುವ ಕಂಪನಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಹೊಂದಿರಿ. ಇದರಿಂದ ನಿಮಗೆ ಅನುಕೂಲವಾಗುತ್ತದೆ ಎಂದು ಸ್ಟೋರೇಜೋ ಲೊ ಗ್ರೂಪ್‌ನ ವಿಶ್ಲೇಷಕ ಗ್ರೆಗ್ ಶುಲ್ಜ್ ಹೇಳುತ್ತಾರೆ.


3. ನಿಮ್ಮ ಸಿವಿಗಳನ್ನು ಯಾವಾಗಲೂ ಅಪಡೇಟ್ ಮಾಡಿರಿ


ನಿಮ್ಮ ಸಿವಿಗಳನ್ನು ನೀವು ನಿಯಮಿತವಾಗಿ ಅಪಡೇಟ್ ಮಾಡುತ್ತಿರಬೇಕು ಎಂದು ಪೊಲಾರ್ಡ್ ಶಿಫಾರಸು ಮಾಡುತ್ತಾರೆ. ನೀವು ಹೊಸ ಕೌಶಲ್ಯವನ್ನು ಪಡೆದರೆ ತಕ್ಷಣವೇ ನಿಮ್ಮ ರೆಸ್ಯೂಮ್‌ನಲ್ಲಿ ಸೇರಿಸಿ. ಇದರಿಂದ ನಿಮಗೆ ಇರುವ ಕೌಶಲ್ಯ ಮತ್ತು ಅನುಭವಗಳ ಬಗ್ಗೆ ನಿಮ್ಮ ಉದ್ಯೋಗದಾತರಿಗೆ ಸರಿಯಾಗಿ ತಿಳಿಯುತ್ತದೆ.


4. ಒಳ್ಳೆಯ ಟೆಕ್ ಮಾರ್ಗದರ್ಶಕರನ್ನು ಹುಡುಕಿ


ನಿಮ್ಮ ಪ್ರಸ್ತುತ ಸಂಸ್ಥೆಯೊಳಗೆ, ನೆಟ್‌ವರ್ಕಿಂಗ್ ಮೂಲಕ ಮತ್ತು ತರಬೇತಿ ಅವಕಾಶಗಳ ಸಮಯದಲ್ಲಿ ನೀವು ಮಾರ್ಗದರ್ಶಕರನ್ನು ಹುಡುಕಿ. ಅವರು ನಿಮಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲ ಮಾರ್ಗದರ್ಶನರನ್ನು ಹುಡುಕಿ. ಅವರು ನಿಮಗೆ ಅವಕಾಶಗಳನ್ನು ಗುರುತಿಸಲು ಮತ್ತು ಪ್ರಮೋಷನ್ ಹೊಂದಲು ಸಹಾಯ ಮಾಡುತ್ತಾರೆ.


5. ಬೋಲ್ಡ್ ಆಗಿರಿ - ನೀವು ಹೆಚ್ಚಿನ ಅವಶ್ಯಕತೆಗಳನ್ನು ಹೊಂದಿದ್ದರೆ ಎಂಟರ್‌ಪ್ರೈಸ್ ಐಟಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ


ಕೆಲವೊಮ್ಮೆ ಈ ಜಾಬ್ ಪೋಸ್ಟಿಂಗ್‌ಗಳು ಉದ್ಯೋಗಿಗಳಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತವೆ. ಅವರಿಗೆ ಬೇಕಾಗಿರುವುದು ಕೆಳಮಟ್ಟದ ಐಟಿ ಸಿಬ್ಬಂದಿ ಆದರೆ ಅವರು ಸ್ಟೀವ್ ಜಾಬ್ಸ್, ಲಿನಸ್ ಟೊರ್ವಾಲ್ಡ್ಸ್ ಮತ್ತು ಟಿಮ್ ಬರ್ನರ್ಸ್-ಲೀ ನಂತಹ ಪ್ರತಿಭೆಗಳಿಗೆ ಮಾತ್ರ ಸೂಕ್ತವಾಗುವ ಉದ್ಯೋಗ ವಿವರಣೆಯನ್ನು ಬರೆಯುತ್ತಾರೆ . ಅವರು ಉಲ್ಲೇಖಿಸುವ ವೇತನವೂ ಸಹ ಕೆಲವೊಮ್ಮೆ ಸರಿ ಇರುವುದಿಲ್ಲ. ಹೀಗಾಗಿ ನೀವು ಅನೇಕ ಉದ್ಯೋಗ ಪೋಸ್ಟಿಂಗ್‌ಗಳಲ್ಲಿ ಅವರು ಕೇಳಿದ ಕೌಶಲಗಳಿಗೆ ಹೊಂದಿಕೆಯಾಗದಿರುವ ಸಾಧ್ಯತೆಯಿದೆ. ಆದರೆ ನೀವು ಅನೇಕ ಪ್ರದೇಶಗಳಲ್ಲಿ ಅವರಿಗೆ ಎಷ್ಟು ಹತ್ತಿರದಲ್ಲಿದ್ದೀರಿ ಎಂಬುದನ್ನು ತೋರಿಸಲು ನಿಮ್ಮ ರೆಸ್ಯೂಮ್ ಜೊತೆಗೆ ಒಂದು ವಿನಂತಿಯನ್ನು ಸೇರಿಸಿ. ನೀವು ನೀಡಿದ ರೆಸ್ಯೂಮ್‍ನಲ್ಲಿ ಅವರು ಕೇಳಿದ ಕೌಶಲಗಳನ್ನು ಹೈಲೈಟ್ ಮಾಡಿ.




6. ನಿಮಗೆ ಟೆಕ್ ಟ್ರೇನಿಂಗ್ ನೀಡುವ ಕಂಪನಿಗಳನ್ನು ಹುಡುಕಿಸೆಂಗೇಜ್ ಗ್ರೂಪ್‌ ಮಾಡಿದ ಅಧ್ಯಯನ ಪ್ರಕಾರ 66% ಕಾರ್ಮಿಕರು ಉದ್ಯೋಗದಾತ-ಪ್ರಾಯೋಜಿತ ತರಬೇತಿಯು ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಂಬುತ್ತಾರೆ. ಕೆಲವು ಕಂಪನಿಗಳು ನಿಮಗೆ ಉತ್ತಮ ವೇತನವನ್ನು ನೀಡುವುದರ ಜೊತೆಗೆ ತರಬೇತಿಯನ್ನು ನೀಡುತ್ತವೆ. ಇಂತಹ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆಯಿರಿ. ಇದರಿಂದ ನಿಮ್ಮ ಪ್ರತಿಭೆಗೆ ಮನ್ನಣೆ ಸಿಗುತ್ತದೆ. ನಿಮ್ಮ ಭವಿಷ್ಯ ಸುರಕ್ಷಿತವಾಗಿರುತ್ತದೆ. ಉದ್ಯೋಗ ಸೇರುವುದಕ್ಕೆ ಮುಂಚೆ ಕಂಪನಿಯ ನಿಜವಾದ ಫಲಿತಾಂಶಗಳು ಮತ್ತು ಪುರಾವೆಗಳನ್ನು ನೋಡಲು ಕಂಪನಿಯ ಕುರಿತು ಸಾಕಷ್ಟು ಚೆನ್ನಾಗಿ ಸಂಶೋಧನೆ ಮಾಡಿ.


7. ಅದೇ ಗುಂಪಿನಲ್ಲಿ ಸೇರಬೇಡಿ


ನೀವು ನಿಮ್ಮ ವೃತ್ತಿ ಜೀವನದಲ್ಲಿ ಹೆಚ್ಚು ಮುಂದುವರೆಯಲು ನೀವು ಬಯಸುವ ಉದ್ಯೋಗದ ಕುರಿತು ಹೆಚ್ಚಿನ ನಿರ್ದಿಷ್ಟ ಮಾಹಿತಿಯನ್ನು ಹೊಂದಿರುವುದು ಅಗತ್ಯವಾಗಿದೆ. ಇದು ನಿಮಗೆ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಸಹಾಯ ಮಾಡುತ್ತದೆ. ಅದು ನಿಮ್ಮ ಯಶಸ್ಸಿನ ಸಾಧ್ಯತೆಗಳನ್ನು ಬಹುಮಟ್ಟಿಗೆ ಹೆಚ್ಚಿಸಬಹುದು.


ಫಾಸ್ಟಹಾಸ್ಟ್ ಡೇಟಾ ಕಳೆದ ವರ್ಷದಲ್ಲಿ ಟೆಕ್ ಉದ್ಯೋಗಗಳಿಗಾಗಿ ಹೆಚ್ಚು ಆನ್‌ಲೈನ್ ಹುಡುಕಾಟಗಳನ್ನು ಮಾಡಲಾಗಿದೆ ಎಂದು ತೋರಿಸಿದೆ. ಈ ಡಾಟಾ ಕ್ಲೌಡ್ ಎಂಜಿನಿಯರಿಂಗ್ ಸ್ಥಾನಗಳಿಗೆ 156% ಹೆಚ್ಚಳ, ಡೇಟಾ ಅನೈಲೈಸ್ಟ್ ಉದ್ಯೋಗಗಳಿಗೆ 86%, ಸಾಫ್ಟ್‌ವೇರ್ ಡೆವಲಪರ್‌ಗಳಿಗೆ 50%, ಫ್ರಂಟ್ ಎಂಡ್ ಡೆವಲಪರ್‌ಗಳಿಗೆ 46% ಮತ್ತು 26% ವೆಬ್ ಡೆವಲಪರ್ ಸ್ಥಾನಗಳಿಗೆ ಹುಡುಕಾಟ ನಡೆಸಲಾಗಿದೆ ಎಂದು ತೋರಿಸಿದೆ.


"ವಜಾಗೊಳಿಸುವಿಕೆಯಿಂದಾಗಿ ಉದ್ಯೋಗ ಕಳೆದುಕೊಂಡವರು ಹೊಸ ಉದ್ಯೋಗಕ್ಕಾಗಿ ಹೆಚ್ಚು ಹುಡುಕಾಟ ಮಾಡುತ್ತಾರೆ. ಇದು ಸಹ ಪರಿಣಾಮ ಬೀರುತ್ತದೆ. ಹೀಗಾಗಿ ಉಳಿದ ಅನೇಕ ಉದ್ಯೋಗಿಗಳು ತಮ್ಮ ಸ್ಥಾನಗಳ ಭವಿಷ್ಯದ ಬಗ್ಗೆ ಅಸಮಾಧಾನವನ್ನು ಅನುಭವಿಸಬಹುದು." ಎಂದು ಫಾಸ್ಟ್‌ಹೋಸ್ಟ್‌ಗಳ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಮಿಚೆಲ್ ಸ್ಟಾರ್ಕ್ ಹೇಳಿದರು. "


8. ಸರ್ಟಿಫಿಕೇಟ್‍ಗಳನ್ನು ಪಡೆಯಿರಿ (ವಿಶೇಷವಾಗಿ ಗೂಗಲ್ ಮತ್ತು ಎ ಡಬ್ಲ್ಯೂ ಎಸ್ ಕೌಶಲ್ಯಗಳಿಗಾಗಿ)


ಫೂಟ್ ಪಾರ್ಟ್‌ನರ್ಸ್‌ನ ಮುಖ್ಯ ವಿಶ್ಲೇಷಕ ಡೇವಿಡ್ ಫೂಟ್ ಪ್ರಕಾರ, ಕೆಲವು ಸರ್ಟಿಫೀಕೇಟಗಳು ನಿರ್ದಿಷ್ಟ ಕ್ಷೇತ್ರಗಳಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿವೆ. ಸೈಬರ್ ಸೆಕ್ಯುರಿಟಿ ಯಲ್ಲಿ ಸರ್ಟಿಫಿಕೇಷನಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಅವರು ಹೇಳುತ್ತಾರೆ. ನೀವು ಹೆಚ್ಚಿಗೆ ಗಳಿಸಬಹುದಾದ ಇತರ ಕ್ಷೇತ್ರಗಳೆಂದರೆ ಸ್ಕ್ರಮ್, ಎಂಟರ್‌ಪ್ರೈಸ್ ಆರ್ಕಿಟೆಕ್ಚರ್ ಫ್ರೇಮ್‌ವರ್ಕ್‌ಗಳು ಮತ್ತು ಕೆಲವು ಹೈಪರ್‌ಸ್ಕೇಲರ್ ಕೋರ್ಸ್‌ಗಳು. ಇವು ನಿಮಗೆ ಹೆಚ್ಚಿನ ವೇತನವನ್ನು ತಂದುಕೊಡಬಹುದು.ಸರ್ಟಿಫೀಕೇಷನಗಳಿಗಿಂತ ನೀವು ಪಡೆಯುವ ಕೌಶಲ್ಯಗಳು ಹೆಚ್ಚು ಮಹತ್ವವನ್ನು ಹೊಂದಿರುತ್ತವೆ ಎಂಬುದು ನೆನೆಪಿರಲಿ.


  • ಗೂಗಲ್ ಸರ್ಟಿಫೈಡ್ ಡಾಟಾ ಇಂಜನೀಯರ್

  • ಗೂಗಲ್ ಸರ್ಟಿಫೈಡ್ ಪ್ರೊಫೆಷನಲ್ ಕ್ಲೌಡ್ ಆರ್ಕಿಟೆಕ್ಟ್

  • ಅಮೇಜಾನ್ ವೆಬ್ ಸರ್ವೋಸ್ ( ಎ ಡಬ್ಲ್ಯೂ ಎಸ್) ಸರ್ಟಿಫೈಡ್ ಸಾಲುಷನ್ ಆರ್ಕಿಟೆಕ್ಟ್-ಅಸೋಸಿಯೇಟ್

  • ಸರ್ಟಿಫೈಡ್ ಇನ್ ರಿಸ್ಕ್ ಎಂಡ್ ಇನಫಾರ್ಮೇಶನ್ ಸಿಸ್ಟಮ್ಸ್ ಕಂಟ್ರೋಲ್ (CRISC)

  • ಸರ್ಟಿಫೈಡ್ ಇನಫಾರ್ಮೇಶನ್ ಸಿಸ್ಟಮ್ಸ್ ಸೆಕ್ಯುರಿಟಿ ಪ್ರೊಫೆಷನಲ್ (CISSP)

  • ಸರ್ಟಿಫೈಡ್ ಇನಫಾರ್ಮೇಶನ್ ಸೆಕ್ಯುರಿಟಿ ಮ್ಯಾನೇಜರ್ (CISM)


ಇದನ್ನೂ ಓದಿ: Career Opportunities: ನಿಮಗೆ ಮೆಟಾವರ್ಸ್ ಗೇಮಿಂಗ್​ನಲ್ಲಿ ಆಸಕ್ತಿಯಿದ್ದರೆ ಇಲ್ಲಿವೆ ನೋಡಿ ಅನೇಕ ವೃತ್ತಿ ಅವಕಾಶಗಳು


9. ಕೌಶಲ್ಯಗಳು


ಸರ್ಟಿಫೈ ಅಲ್ಲದ ತಾಂತ್ರಿಕ ಕೌಶಲ್ಯಗಳ 23-ವರ್ಷದ ಫರಫಾರ್ಮೆನ್ಸ್ ಪರಿಹಾರದ ವಿಷಯದಲ್ಲಿ ಸರ್ಟಿಫೈಡ್ ಕೌಶಲ್ಯಗಳಿಗಿಂತ 33% ಹೆಚ್ಚಾಗಿದೆ ಎಂದು ಫೂಟ್ ಒತ್ತಿಹೇಳಿದರು.ಉದ್ಯೋಗದಾತರು ಕೌಶಲ್ಯಗಳನ್ನು ಬಯಸುತ್ತಾರೆ, ಪ್ರಮಾಣಪತ್ರಗಳಲ್ಲ ಮತ್ತು ಸಾಮಾನ್ಯವಾಗಿ ಕೆಲವು ಉನ್ನತ ಕೌಶಲ್ಯಗಳಿಗೆ ಯಾವುದೇ ಪ್ರಮಾಣಪತ್ರಗಳಿಲ್ಲ.ಈಗ ಪೈಥಾನ್ ಅಥವಾ ಜಾವಾ ಪ್ರೋಗ್ರಾಮರ್ ಆಗಲು ಅಥವಾ ಎಐ ಎಮ್ ಲೂಪ್ಸ್ ಡೇಟಾ ಇಂಜಿನಿಯರಿಂಗ್ ಮತ್ತು ಡೇಟಾ ತಂತ್ರಗಾರಿಕೆಯಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಯಾವುದೇ ಪ್ರಮಾಣಪತ್ರಗಳ ಅಗತ್ಯವಿಲ್ಲ ಎಂದು ಅವರು ಹೇಳಿದರು.


10 ವಿವೇಚನೆಯಿಂದ ಆರಿಸಿ


ಪ್ರಸ್ತುತ ಹೈ-ಮೊಮೆಂಟಮ್ ತಂತ್ರಜ್ಞಾನಗಳು ಅಪ್ಲೈಡ್ ಎ ಐ, ಕ್ವಾಂಟಮ್ ಕಂಪ್ಯೂಟಿಂಗ್, ಸುಧಾರಿತ ಪ್ರಕ್ರಿಯೆಯ ಆಟೊಮೇಷನ್, ಎಡ್ಜ್, ಟ್ರಸ್ಟ್ ಆರ್ಕಿಟೆಕ್ಚರ್, ಸಾಫ್ಟ್‌ವೇರ್ 2.0 ಮತ್ತು ಇತರವುಗಳನ್ನು ಒಳಗೊಂಡಿವೆ. ಈ ವಿಶಾಲ ಪ್ರದೇಶಗಳು ಬಹು ತಂತ್ರಜ್ಞಾನಗಳು ಮತ್ತು ಕೌಶಲ್ಯಗಳನ್ನು ಒಳಗೊಂಡಿರುತ್ತವೆ.


ನೀವು ಕೆಲಸ ಮಾಡಲು ಬಯಸುವ ಟೆಕ್ನಾಲಜಿ ಕ್ಲಸ್ಟರ್ ಅನ್ನು ಆಯ್ಕೆ ಮಾಡಿ -ಉದಾಹರಣೆಗೆ ಎಡ್ಜ್, ಕ್ಲೌಡ್, ಮೊಬಿಲಿಟಿ, 5ಜಿ . ಇದರಿಂದ ನಿಮ್ಮ ಭವಿಷ್ಯಕ್ಕೆ ಅನುಕೂಲವಾಗುತ್ತದೆ.


ಜನರು ಒಂದೇ ಒಂದು ವಿಶಿಷ್ಟ ವಿಭಾಗದಲ್ಲಿ ವಿಶೇಷ ಪರಿಣತಿ ಪಡೆಯುವ ಬದಲು ಈ ತಂತ್ರಜ್ಞಾನ ಕ್ಲಸ್ಟರ್‌ಗಳಲ್ಲಿ ಮೂರು ಅಥವಾ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚಿನ ಕಲಿಕೆ ಸಾಮರ್ಥ್ಯವನ್ನು ಹೊಂದುವ ಮೂಲಕ ಶಾಶ್ವತ ವೃತ್ತಿಜೀವನವನ್ನು ರೂಪಿಸಬಹುದು .


11 ದೂರದೃಷ್ಟಿ ಇರಲಿ


ಉದ್ಯೋಗಾರ್ಥಿಗಳಿಗೆ, ಇತ್ತೀಚೆಗೆ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ದೂರದೃಷ್ಟಿ ಇರುವುದು ಅಗತ್ಯ. ಇಂದಿನ ಕ್ಷಣದ ಅಗತ್ಯಗಳನ್ನು ಪೂರೈಸಲು ಅಲ್ಪಾವಧಿಯ ಉದ್ಯೋಗದ ಕುರಿತು ತಲೆಕೆಡಿಸಕೊಳ್ಳಬೇಡಿ. ನಿಮಗೆ ಭವಿಷ್ಯದಲ್ಲಿ ಉದ್ಯೋಗ ಭದ್ರತೆಯನ್ನು ಒದಗಿಸುವಂತಹ ಉದ್ಯೋಗಗಳತ್ತ ಗಮನ ನೀಡಿ.ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ನೀವು ಎಲ್ಲಿ ಇರಬೇಕೇಂದು ಬಯಸುತ್ತೀರಿ ಎಂಬುದರ ಮೇಲೆ ನಿಮ್ಮ ಯೋಜನೆಯನ್ನುರೂಪಿಸಿ.

top videos


    "ಐಟಿಯಲ್ಲಿ ಉತ್ತಮ ವೃತ್ತಿಜೀವನ ಎಂದರೆ ನೀವು ದೀರ್ಘಾವಧಿಯಲ್ಲಿ ಏನು ಮಾಡಬೇಕೆಂದು ಬಯಸುತ್ತೀರಿ ನಿರ್ಧರಿಸುವುದು ಮತ್ತು ಅದನ್ನು ಹೇಗೆ ಸಾಧಿಸುವುದು ಎಂಬುದರ ಕುರಿತು ಕಾರ್ಯತಂತ್ರದ ಯೋಜನೆ ಮಾಡುವುದು ಕಾಲಾನಂತರದಲ್ಲಿ ಅದನ್ನು ಕಾರ್ಯರೂಪಕ್ಕೆ ತರುವುದು " ಎಂದು ಶುಲ್ಜ್ ಹೇಳುತ್ತಾರೆ.

    First published: