• ಹೋಂ
 • »
 • ನ್ಯೂಸ್
 • »
 • Jobs
 • »
 • Salary Negotiation: ಉದ್ಯೋಗ ಸಂದರ್ಶನದಲ್ಲಿ ಸಂಬಳದ ಬಗ್ಗೆ ಕೇಳುವ ಪ್ರಶ್ನೆಗೆ ನಿಮ್ಮ ಉತ್ತರ ಹೀಗಿರಲಿ

Salary Negotiation: ಉದ್ಯೋಗ ಸಂದರ್ಶನದಲ್ಲಿ ಸಂಬಳದ ಬಗ್ಗೆ ಕೇಳುವ ಪ್ರಶ್ನೆಗೆ ನಿಮ್ಮ ಉತ್ತರ ಹೀಗಿರಲಿ

ಇಂದಿನ ಲೇಖನದಲ್ಲಿ ಸಂಬಳಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹೇಗೆ ಉತ್ತರಿಸಬಹುದು ಎಂಬ ಮಾಹಿತಿ ನೀಡಿದ್ದೇವೆ.

 • Share this:

ಉದ್ಯೋಗದಲ್ಲಿ(Job) ಸಂಬಳದ ಕುರಿತು ವಿಚಾರ ವಿಮರ್ಶೆ ನಡೆಸುವುದು ಹೆಚ್ಚು ನಿರ್ಣಯಾತ್ಮಕ ಅಂತೆಯೇ ಕಠಿಣ ಹಂತ ಕೂಡ ಹೌದು. ಒಮ್ಮೊಮ್ಮೆ ಅಭ್ಯರ್ಥಿ ತನಗೆ ಬೇಕಾದ ಸಂಬಳದ ಅಪೇಕ್ಷೆಯನ್ನಿಟ್ಟುಕೊಂಡು ಸಂದರ್ಶನ (Internship) ಎದುರಿಸುತ್ತಾರೆ, ಈ ಸಮಯದಲ್ಲಿ ಅವರು ಕೇಳಿದ ಸಂಬಳ ದೊರೆತರೆ ಇನ್ನು ಕೆಲವೊಮ್ಮೆ ಉದ್ಯಮದಾರ ನೀಡುವ ಸಂಬಳದಲ್ಲೇ (Salary) ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.


ಸಂದರ್ಶನದಲ್ಲಿ ನಿಮ್ಮ ಪರ್ಫಾಮೆನ್ಸ್ ಮುಖ್ಯವಾಗಿರುತ್ತದೆ


ಸಂದರ್ಶನ ಸಮಯದಲ್ಲಿ ನಿಮ್ಮ ಪರ್ಫಾಮೆನ್ಸ್ ಸಂದರ್ಶಕರಿಗೆ ಮೆಚ್ಚುಗೆಯಾದರೆ ನೀವು ಕೇಳಿದ ಸಂಬಳಕ್ಕೆ ಟಕ್ಕನೆ ಅವರು ಒಪ್ಪಿಕೊಂಡು ಬಿಡುತ್ತಾರೆ. ಅಸಲಿಗೆ ನೀವು ಸಂದರ್ಶನದಲ್ಲಿ ಹೇಗೆ ವರ್ತಿಸುತ್ತೀರಿ ಎಂಬುದು ಮುಖ್ಯವಾಗಿರುತ್ತದೆ. ಇಂದಿನ ಲೇಖನದಲ್ಲಿ ಸಂಬಳಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹೇಗೆ ಉತ್ತರಿಸಬಹುದು ಎಂಬ ಮಾಹಿತಿ ನೀಡಿದ್ದೇವೆ.


ಸಂದರ್ಶನಕ್ಕೆ ಮುನ್ನ ನಿಮ್ಮ ಸಾಧನೆ ಸಂಬಳವನ್ನು ನಿರ್ಣಯಿಸುತ್ತದೆ


ಹೆಚ್ಚಿನ ಬ್ಯುಸಿನೆಸ್‌ಗಳು ಅಭ್ಯರ್ಥಿಯ ಸ್ಥಾನ, ಅನುಭವ ಹಾಗೂ ಸ್ಥಳದ ಪ್ರಕಾರ ಉದ್ಯೋಗಿಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಆಧರಿಸಿವೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಬಳವನ್ನು ನಿರ್ಧರಿಸಲಾಗುತ್ತದೆ.
ಹಾಗಾಗಿ ಈ ಅಂಶವನ್ನು ತಿಳಿದುಕೊಂಡು ಉದ್ಯೋಗದಾತರ ವೇತನ ಶ್ರೇಣಿಯ ಉನ್ನತ ವ್ಯಾಪ್ತಿಯನ್ನು ಗುರಿಯಾಗಿಸಿಕೊಂಡು ವೇತನದ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸುವುದು ಮುಖ್ಯವಾಗಿರುತ್ತದೆ.


ವೇತನ ಆಧಾರಿತ ಪ್ರಶ್ನೆಗಳಿಗೆ ಉತ್ತರಿಸುವುದು ಹೇಗೆ


ವೃತ್ತಿ ಅನುಭವಿ ಹಾಗೂ ತಜ್ಞರಾದ ಕ್ರಿಸ್ಟೋಫ್ ಪಾಪ್ಪೆ ವೇತನಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಲಹೆಗಳನ್ನು ನೀಡಿದ್ದು ಅಭ್ಯರ್ಥಿಗೆ ಇಂತಹ ಪ್ರಶ್ನೆಗಳನ್ನು ಕೇಳಿದಾಗ ಸಂದರ್ಶಕರಿಗೆ ಮರುಪ್ರಶ್ನೆ ಹಾಕುವ ಅವಕಾಶ ಅಭ್ಯರ್ಥಿಗಿರುತ್ತದೆ ಎಂದು ತಿಳಿಸಿದ್ದಾರೆ.


ಅಭ್ಯರ್ಥಿ ಸಂದರ್ಶಕರಿಗೆ ಮೆಚ್ಚುಗೆಯಾಗಿದ್ದಾರೆ ಎಂದರೆ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗೆ ಹೆಚ್ಚಿನ ನಿಯಂತ್ರಣ ಹಾಗೂ ಅವಕಾಶಗಳಿರುತ್ತವೆ ಎಂಬುದು ಕ್ರಿಸ್ಟೋಫ್ ಮಾತಾಗಿದೆ. ಸಂದರ್ಶನದ ಆರಂಭದಲ್ಲೇ ಸಂಬಳದ ವಿಚಾರ ಬಂದಾಗ ಅಭ್ಯರ್ಥಿ ಮರಳಿ ಸಂದರ್ಶಕರಿಗೆ ಈ ವಿಚಾರವಾಗಿ ಪ್ರಶ್ನೆಗಳನ್ನು ಕೇಳಬಹುದು ಎಂದು ಕ್ರಿಸ್ಟೋಫ್ ತಿಳಿಸುತ್ತಾರೆ.


ಅವರ ಪ್ರಕಾರ ವೇತನ ಎಂಬುದು ಅಭ್ಯರ್ಥಿಗೆ ಪ್ರಯೋಜನಗಳು, ಸಂಸ್ಕೃತಿ, ಸವಾಲು ಮೊದಲಾದ ಪ್ಯಾಕೇಜ್‌ಗಳ ಭಾಗ ಎಂದೆನಿಸಿದೆ. ನಿಮಗೆ ಇದಕ್ಕಾಗಿ ಹೆಚ್ಚಿನ ಸಮಯ ಬೇಕು ಎಂದಾದಲ್ಲಿ ಅದನ್ನು ತೆಗೆದುಕೊಳ್ಳಿ ಆದರೆ ನಿಮ್ಮ ಉತ್ತರದಲ್ಲಿ ಸ್ಪಷ್ಟತೆ ಇರಲಿ ಎಂದು ಕ್ರಿಸ್ಟೋಫ್ ತಿಳಿಸುತ್ತಾರೆ.
ಪ್ರಶ್ನೆಯನ್ನು ಮರುನಿರ್ದೇಶಿಸಿ


ಸಂದರ್ಶನದ ಸಮಯದಲ್ಲಿ ವೇತನ ಆಧಾರಿತ ಪ್ರಶ್ನೆಗಳು ಬಂದಾಗ ಅದನ್ನು ಜಾಣ್ಮೆಯಿಂದ ಎದುರಿಸಿ ಎಂದೇ ಕ್ರಿಸ್ಟೋಫ್ ಅಭ್ಯರ್ಥಿಗಳಿಗೆ ಸೂಚಿಸುತ್ತಾರೆ. ಸಂದರ್ಶನ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಿರುವುದಾಗಿ ಅಭ್ಯರ್ಥಿ ಈ ಸಮಯದಲ್ಲಿ ಸಂದರ್ಶನಕಾರರಿಗೆ ಮನವರಿಕೆ ಮಾಡಿಕೊಡಬಹುದು ಅಂತೆಯೇ ನೀವು ನಿರ್ದಿಷ್ಟಪಡಿಸಿರುವ ವೇತನ ಎಷ್ಟಾಗಿದೆ ಎಂದು ಅಭ್ಯರ್ಥಿ ಸಂದರ್ಶಕರಿಗೆ ಪ್ರಶ್ನೆ ಕೇಳಬಹುದು ಎಂದು ಅವರು ತಿಳಿಸುತ್ತಾರೆ.


ನಿಮ್ಮ ಮೂಲ ಸಂಬಳವನ್ನು ಆಧರಿಸಿಕೊಂಡು ಅದಕ್ಕಿಂತ ಹೆಚ್ಚಿನ ಸಂಬಳ ಕೇಳಿ


ಪ್ರಸ್ತುತ ಕಂಪನಿಯಲ್ಲಿ ನೀವು ಎಷ್ಟು ಸಂಬಳ ಪಡೆದುಕೊಳ್ಳುತ್ತಿದ್ದೀರಿ ಎಂಬುದನ್ನು ಚರ್ಚಿಸಿ. ಇದಕ್ಕಿಂತ ರೂ 10,000 ಇಲ್ಲವೇ 20,000 ಹೆಚ್ಚುವರಿ ಸಂಬಳವನ್ನು ನಾನು ಬಯಸುತ್ತೇನೆ ಎಂಬುದನ್ನು ನೇರವಾಗಿ ತಿಳಿಸಿ.


ನೀವು ತೆಗೆದುಕೊಳ್ಳುವ ಜವಾಬ್ದಾರಿ ಹಾಗೂ ಹುದ್ದೆ ಕೂಡ ಇಲ್ಲಿ ಮುಖ್ಯವಾಗಿರುವುದರಿಂದ ಅದಕ್ಕನುಗುಣವಾಗಿ ಸಂಬಳ ಏರಿಕೆಯನ್ನು ಮಾಡಬಹುದಾಗಿದೆ.


ವೇತನ ಸಂಬಂಧಿತ ಪ್ರಶ್ನೆಗಳಿಗೆ ಅಂಜದಿರಿ


ನಿಮಗೆ ಉದ್ಯೋಗದ ಅವಶ್ಯಕತೆ ಇದ್ದಂತೆ ಸಂಬಳ ಕೂಡ ಮುಖ್ಯವಾಗಿರುತ್ತದೆ, ಹಾಗಾಗಿ ವೇತನ ಸಂಬಂಧಿತ ಪ್ರಶ್ನೆಗಳಿಗೆ ಅಂಜದೆ ಅಳುಕದೆ ನಾಚಿಕೆ ಪಡದೆ ನೇರವಾಗಿ ಉತ್ತರಿಸಿ. ನೀವು ಎಷ್ಟು ಸಂಬಳ ಬಯಸುತ್ತೀರಿ ಎಂಬುದನ್ನು ಹೇಳಿ ಹಾಗೂ ಏತಕ್ಕಾಗಿ ಈ ಸಂಬಳ ನಿಮಗೆ ಬೇಕಾಗಿದೆ ಎಂಬ ಅಂಶವನ್ನು ಸಂದರ್ಶಕರಿಗೆ ಮನವರಿಕೆ ಮಾಡಿಕೊಡಿ.


ಇದನ್ನೂ ಓದಿ: Career Options: ಲಕ್ಷಗಳಲ್ಲಿ ಸಂಬಳ ಪಡೆಯಬೇಕೇ? ಈ ಐದರಲ್ಲಿ ಒಂದನ್ನು ಆಯ್ಕೆ ಮಾಡಿದ್ರೂ ಸಾಕು

top videos


  ಹೆಚ್ಚಿನ ಸಂಬಳ ಹೇಳಿದಲ್ಲಿ ಕೆಲಸ ಕಳೆದುಕೊಳ್ಳಬಹುದು ಎಂಬ ಭಯದಿಂದ ಕೆಲವೊಂದು ಅಭ್ಯರ್ಥಿಗಳು ಉನ್ನತ ಸಂಬಳದ ಪ್ರಸ್ತಾವನೆಯನ್ನೇ ಮಾಡುವುದಿಲ್ಲ ಎಂದು ಕ್ರಿಸ್ಟೋಫ್ ತಿಳಿಸುತ್ತಾರೆ.

  First published: