• ಹೋಂ
  • »
  • ನ್ಯೂಸ್
  • »
  • Jobs
  • »
  • Virtual Job Interview ಸಮಯದಲ್ಲಿ ಅಭ್ಯರ್ಥಿಗಳು ಈ 2 ವಸ್ತುಗಳನ್ನು ಸಮೀಪವೇ ಇಟ್ಟುಕೊಂಡಿರಬೇಕು

Virtual Job Interview ಸಮಯದಲ್ಲಿ ಅಭ್ಯರ್ಥಿಗಳು ಈ 2 ವಸ್ತುಗಳನ್ನು ಸಮೀಪವೇ ಇಟ್ಟುಕೊಂಡಿರಬೇಕು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಿಮ್ಮ ಸಮೀಪ ಒಂದು ಪೆನ್ ಹಾಗೂ ಪುಸ್ತಕವನ್ನು ಇರಿಸಿಕೊಳ್ಳಿ. ಸಂದರ್ಶಕರು ಕೇಳುವ ಪ್ರಶ್ನೆಗಳು, ನೀವು ಮಾಡಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸುವಾಗ ಅದನ್ನು ಪುಸ್ತಕದಲ್ಲಿ ನೋಟ್ ಮಾಡಿಕೊಳ್ಳಿ.

  • Trending Desk
  • 4-MIN READ
  • Last Updated :
  • others, India
  • Share this:

ಉದ್ಯೋಗ ಸಂದರ್ಶನ (Job Interview) ಎಂಬುದು ಪ್ರತಿಯೊಬ್ಬ ಉದ್ಯೋಗಿ ತನ್ನ ವೃತ್ತಿಜೀವನದಲ್ಲಿ (Career) ಎದುರಿಸುವ ಅಗ್ನಿಪರೀಕ್ಷೆ ಎಂದೇ ಹೇಳಬಹುದು. ಉದ್ಯೋಗಿ (Employee) ವೃತ್ತಿಗೆ ಅರ್ಹರೇ ಎಂಬುದನ್ನು ನಿರ್ಧರಿಸುವುದರಿಂದ ಹಿಡಿದು ಅವರಲ್ಲಿರುವ ಕ್ರಿಯಾತ್ಮಕತೆ, ಸೃಜನಶೀಲತೆ, ಉದ್ಯೋಗಾರ್ಹತೆ, ವಿದ್ಯಾಭ್ಯಾಸ ಹೀಗೆ ಪ್ರತಿಯೊಂದು ವಿವರಗಳನ್ನು ಸಂದರ್ಶನದಲ್ಲಿ ಮನದಟ್ಟು ಮಾಡಿಕೊಳ್ಳಲಾಗುತ್ತದೆ. ಕೊನೆಗೆ ಸಂದರ್ಶಕರು ಉದ್ಯೋಗಿ ಅರ್ಹರು ಹೌದೇ ಅಲ್ಲವೇ ಎಂಬುದನ್ನು ನಿರ್ಧರಿಸುತ್ತಾರೆ.


ವರ್ಚುವಲ್ ಸಂದರ್ಶನ


ಸಂದರ್ಶನಗಳಲ್ಲಿ ಹಲವಾರು ವಿಧಗಳಿದ್ದು ಇತ್ತೀಚಿನ ದಿನಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸಂದರ್ಶನ ಅಥವಾ ವರ್ಚುವಲ್ ಸಂದರ್ಶನ ಹೆಚ್ಚು ಪ್ರಚಲಿತದಲ್ಲಿದೆ. ಕೋವಿಡ್ ಸಮಯದಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದ ಈ ಸಂದರ್ಶನ ವಿಧ ಇಂದು ಹೆಚ್ಚಿನ ಕಂಪನಿಗಳು ಖಾಯಂ ಆಗಿಸಿಕೊಂಡಿವೆ. ಅಂತೆಯೇ ದೂರದಲ್ಲಿರುವ ಉದ್ಯೋಗಿಗಳನ್ನು ಸಂದರ್ಶಿಸಲು ನೇಮಕಾತಿ ನಿರ್ವಾಹಕರು, ಎಚ್‌ಆರ್‌ಗಳು ವಿಡಿಯೋ ಪರಿಕರಗಳನ್ನು ಬಳಸುತ್ತಿದ್ದಾರೆ.


ವರ್ಚುವಲ್ ಸಂದರ್ಶನಕ್ಕೆ ಕೆಲವೊಂದು ಟಿಪ್ಸ್


ಯಾವುದೇ ರೀತಿಯ ಸಂದರ್ಶನ ಇರಲಿ ಉದ್ಯೋಗಿ ವೇಳೆ ಅತಿಯಾದ ಹೆದರಿಕೆ ಹಾಗೂ ಚಡಪಡಿಕೆಯನ್ನು ಅನುಭವಿಸುತ್ತಾರೆ. ಉದ್ಯೋಗ ದೊರೆಯುತ್ತದೋ ಇಲ್ಲವೋ ಎಂಬ ತರ್ಕಕ್ಕೆ ಒತ್ತಡಕ್ಕೆ ಬಲಿಯಾಗುತ್ತಾರೆ. ಆದರೆ ಇಂದಿನ ಲೇಖನದಲ್ಲಿ ನಾವು ನೀಡುವ ಕೆಲವೊಂದು ಟಿಪ್ಸ್‌ಗಳು ವಿಡಿಯೋ ಹಾಗೂ ಮುಖಾಮುಖಿ ಸಂದರ್ಶನ ಎರಡಕ್ಕೂ ಸಹಕಾರಿಯಾಗಿದೆ.


Job Interview Tips
ಪ್ರಾತಿನಿಧಿಕ ಚಿತ್ರ


ಆರಂಭಿಕ ರೀಸರ್ಚ್ ಮಾಡಿಕೊಳ್ಳಿ


ಸಂದರ್ಶನದ ಅಂತಿಮ ಸುತ್ತಿಗೆ ಅಥವಾ ನೇರವಾಗಿ ಉದ್ಯೋಗ ಆಫರ್ ಅನ್ನು ಪಡೆದುಕೊಳ್ಳಲು ರೀಸರ್ಚ್ ನೆರವಾಗಲಿದೆ. ಕಂಪನಿಯ ಕುರಿತು ಸಂಶೋಧನೆ ಮಾಹಿತಿ ಸಂಗ್ರಹಿಸುವಿಕೆ ಮಾಡಿಕೊಳ್ಳಿ. ಕಂಪನಿಯ ವೆಬ್‌ಸೈಟ್ ಅಥವಾ ಲಿಂಕ್ಡ್‌ಇನ್ ಪುಟವನ್ನು ಜಾಲಾಡಿ. ಸಂಸ್ಥೆಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸುವ ಮೂಲಕ ಹೆಚ್ಚುವರಿ ಮಾಹಿತಿ ಕಲೆಹಾಕಿ.


ಸಂದರ್ಶಕರ ಬಗ್ಗೆ ಮಾಹಿತಿ ಸಂಗ್ರಹಿಸಿ


ಸಂದರ್ಶಕರ ಲಿಂಕ್ಡ್‌ಇನ್ ಪ್ರೊಫೈಲ್‌ಗಳನ್ನು ಪರಿಶೀಲಿಸಿ ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಬಯೋಡೇಟಾ ನೋಡಿ. ನಿಮಗೂ ಅವರಿಗೂ ಏನಾದರೂ ಸಾಮ್ಯತೆ ಅಂದರೆ ಒಂದೇ ವಿಶ್ವವಿದ್ಯಾಲಯದಲ್ಲಿ ಕಲಿತಿರುವುದು ಇತ್ಯಾದಿ ಮಾಹಿತಿಗಳನ್ನು ಸಿದ್ಧಪಡಿಸಿ.


ಹುದ್ದೆಯ ಬಗ್ಗೆ ತಿಳಿದುಕೊಳ್ಳಿ


ಸ್ಯಾಲರಿ.ಕಾಮ್ ಅಥವಾ ಗ್ಲಾಸ್‌ಡೋರ್‌ನಂತಹ ವೆಬ್‌ಸೈಟ್‌ಗಳಲ್ಲಿ ಸಂಬಳ ಪರಿಶೀಲನೆ ನಡೆಸಿ. ವಿದ್ಯಾಭ್ಯಾಸ ಅರ್ಹತೆಗಳನ್ನು ಪರಿಶೀಲನೆ ಮಾಡಿ.




ತಂತ್ರಜ್ಞಾನ ಪರಿಕರಗಳ ಪರಿಶೀಲನೆ ನಡೆಸಿ


ನಿಮ್ಮಲ್ಲಿರುವ ಕ್ಯಾಮೆರಾ ಮೈಕ್ರೋಫೋನ್ ಹಾಗೂ ಲೈಟ್‌ಗಳನ್ನು ಪರಿಶೀಲಿಸಿ. ಸಂದರ್ಶನದ ಸಮಯದಲ್ಲಿ ಉತ್ತಮ ಇಂಟರ್ನೆಟ್ ಸಂಪರ್ಕ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.  ನೀವು ಕುಳಿತುಕೊಳ್ಳುವ ಹಿನ್ನಲೆಯ ಬಗ್ಗೆಯೂ ಅರಿವಿರಲಿ. ವಿಡಿಯೋದಲ್ಲಿ ನಿಮ್ಮ ಮುಖ ಹಾಗೂ ನಿಮ್ಮ ಹಿಂದಿನ ಪರಿಸರ ಕಂಡುಬರುವುದರಿಂದ ಅದನ್ನು ಸ್ವಚ್ಛವಾಗಿರಿಸಿಕೊಳ್ಳಿ.


ಸಂದರ್ಶನದ ಸಮಯದಲ್ಲಿ ಏನು ಮಾಡಬೇಕು? 


ಸಂದರ್ಶನದ ಸಮಯದಲ್ಲಿ ನಿಮ್ಮ ಕ್ಯಾಮೆರಾದತ್ತ ನೋಟವಿಡಿ. ನಿಮ್ಮ ಸಂದರ್ಶನ ನಡೆಸುವ ಮುಖವನ್ನು ಆದಷ್ಟು ದಿಟ್ಟಿಸಿಕೊಂಡು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ. ನಗುಮುಖ ಹೊಂದಿರಿ ಹಾಗೂ ಸಾಧ್ಯವಾದಷ್ಟು ಕೇಳಿರುವ ಪ್ರಶ್ನೆಗಳಿಗೆ ಸಮಾಧಾನ ತಾಳ್ಮೆಯಿಂದ ಉತ್ತರಿಸಿ ಗೊತ್ತಿಲ್ಲದೇ ಇದ್ದರೆ ನಯವಾಗಿ ತಿಳಿದಿಲ್ಲ ಎಂಬುದಾಗಿ ತಿಳಿಸಿ.


ನಿಮ್ಮ ಸಮೀಪ ಒಂದು ಪೆನ್ ಹಾಗೂ ಪುಸ್ತಕವನ್ನು ಇರಿಸಿಕೊಳ್ಳಿ. ಸಂದರ್ಶಕರು ಕೇಳುವ ಪ್ರಶ್ನೆಗಳು, ನೀವು ಮಾಡಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸುವಾಗ ಅದನ್ನು ಪುಸ್ತಕದಲ್ಲಿ ನೋಟ್ ಮಾಡಿಕೊಳ್ಳಿ.


ಇದನ್ನೂ ಓದಿ: Success Story: ಕೇವಲ 17 ದಿನ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ ಪಾಸ್ ಆದ IPS ಅಕ್ಷತ್; ಇವರ ಪತ್ನಿ IAS ಅಧಿಕಾರಿ


ಸಂದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ?


ಸಂದರ್ಶನಕ್ಕೆ ಹಾಜರಾಗುವ ಮುನ್ನ ನೀವೇ ನಿಮ್ಮಷ್ಟಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಒಳಿತು. ಇದರಿಂದ ಸಂದರ್ಶನದ ವೇಳೆಯಲ್ಲಿ ಕಾಣಿಸಿಕೊಳ್ಳುವ ಭಯವನ್ನು ಹೋಗಲಾಡಿಸಬಹುದು. ಪ್ರಶ್ನೆಗಳನ್ನು ತಯಾರಿಸಿಕೊಂಡು ಉತ್ತರಗಳನ್ನು ಸಿದ್ಧಪಡಿಸಿ ಅದನ್ನು ಅಭ್ಯಾಸ ಮಾಡಿಕೊಳ್ಳಿ.


ನಿಮ್ಮ ಬಗ್ಗೆ ಹೇಳಿ ನಿಮ್ಮನ್ನು ನಾವೇಕೆ ಆಯ್ಕೆಮಾಡಬೇಕು?, ಇಲ್ಲಿ ಕೆಲಸ ಮಾಡಬೇಕು ಎಂದು ನೀವೇಕೆ ಬಯಸುತ್ತೀರಿ?, ನೀವು ಎದುರಿಸಿರುವ ಹೆಚ್ಚು ಸವಾಲಿನ ಪ್ರಾಜೆಕ್ಟ್ ಬಗ್ಗೆ ತಿಳಿಸಿ ಮೊದಲಾದ ಪ್ರಶ್ನೆಗಳು ಸಾಮಾನ್ಯವಾಗಿರುತ್ತವೆ. ಇದಕ್ಕೆ ಆಕರ್ಷಕ ಉತ್ತರಗಳನ್ನು ಮೊದಲೇ ಸಿದ್ಧಪಡಿಸಿ ತಯಾರಾಗಿರಿ. ಉದ್ಯೋಗ ಹುಡುಕಾಟ ಪ್ರಕ್ರಿಯೆಯಲ್ಲಿ ಧನಾತ್ಮಕವಾಗಿರಿ.

First published: