ಕೆಲಸ ಹುಡುಕಬೇಕು (Job Search) ಎಂದೊಡನೆ ಮೊಬೈಲ್ ಹಿಡಿದು ಅನೇಕ ಜಾಬ್ ಸರ್ಚ್ ವೆಬ್ ಸೈಟ್ (Job Search Sites), ಮೊಬೈಲ್ ಆ್ಯಪ್ಗಳನ್ನು ತಡಕಾಡುತ್ತೇವೆ. ಅದರಲ್ಲಿ ವಿಶ್ವಾಸಾರ್ಹನಿಯ ಸೈಟ್ಗಳ ಸಂಖ್ಯೆ ತುಂಬಾನೇ ಕಡಿಮೆ. ಕೆಲವೇ ಕೆಲವು ಸೂಕ್ತವಾದ ವೇದಿಕೆಗಳಲ್ಲಿ ಲಿಂಕ್ಡ್ ಇನ್ (Linkedin) ಕೂಡ ಒಂದು. ಇಲ್ಲಿ ಸಾವಿರಾರು ಜನ ಕೆಲಸ ಪಡೆದುಕೊಂಡಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಮಾತ್ರವಲ್ಲ, ಒಳ್ಳೆಯ ಕೆಲಸಗಾರರನ್ನು ಆಯ್ಕೆ ಮಾಡಿಕೊಳ್ಳಲು ಕಂಪನಿಗಳಿಗೂ ಈ ಸೈಟ್ ತುಂಬಾನೇ ಸಹಾಯಕ.
ಲಿಂಕ್ಡ್ ಇನ್ನಲ್ಲಿ ಕೆಲಸ ಹುಡುಕುವುದು ಸುಲಭ, ಆದರೂ ಕೆಲವೊಂದು ಟ್ರಿಕ್ಸ್ ಬಳಸಿದರೆ ಒಳ್ಳೆಯ ಕೆಲಸಗಳು ಬೇಗ ಸಿಗುತ್ತದೆ. ಪ್ರತಿದಿನ ಲಕ್ಷಾಂತರ ಉದ್ಯೋಗಗಳನ್ನು ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ನಿಮಗೆ ಸರಿಹೊಂದುವ ಪೋಸ್ಟಿಂಗ್ಗಳನ್ನು ನೀವು ಕಂಡು ಹಿಡಿಯುವುದು ಮುಖ್ಯವಾಗಿದೆ. ಲಿಂಕ್ಡ್ಇನ್ನಲ್ಲಿ ಉದ್ಯೋಗಗಳನ್ನು ಹುಡುಕಲು ಅನುಸರಿಸಬೇಕಾದ ಹಂತಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಆ ನಿಟ್ಟಿನಲ್ಲಿ ಒಂದಷ್ಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಲಿಂಕ್ಡ್ಇನ್ನಲ್ಲಿ ಉದ್ಯೋಗ ಹುಡುಕುವುದು ಹೇಗೆ?
ಉದ್ಯೋಗಾಕಾಂಕ್ಷಿಗಳು ಮೊದಲಿಗೆ ಲಿಂಕ್ಡ್ಇನ್ನಲ್ಲಿ ಅಕೌಂಟ್ ಅನ್ನು ಕ್ರಿಯೇಟ್ ಮಾಡಬೇಕು. ಈ ಹಂತದಲ್ಲಿ ಹೇಳುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು. ನಂತರ ಹೋಮ್ಪೇಜ್ನಲ್ಲಿರು ಉದ್ಯೋಗಗಳ ಐಕಾನ್ಅ ನ್ನು ಗಮನಿಸಬೇಕು. ಅಭ್ಯರ್ಥಿಗಳು ನಂತರ ಪುಟದ ಮೇಲ್ಭಾಗದಲ್ಲಿರುವ ಹುಡುಕಾಟ ಪಟ್ಟಿಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಕೀವರ್ಡ್ಗಳು, ಶೀರ್ಷಿಕೆ, ಕೌಶಲ್ಯ ಅಥವಾ ಕಂಪನಿಯ ಹೆಸರನ್ನು ಟೈಪ್ ಮಾಡಿ.
ಅಭ್ಯರ್ಥಿಗಳನ್ನು ಹುಡುಕಾಟ ಫಲಿತಾಂಶಗಳ ಪುಟಕ್ಕೆ ನಿರ್ದೇಶಿಸಲಾಗುತ್ತದೆ. ಅಲ್ಲಿ ಅವರು ಉದ್ಯೋಗದ ಪೋಸ್ಟ್ ಮತ್ತು ಸ್ಥಳದ ಆದ್ಯತೆಗೆ ಸರಿಹೊಂದುವ ಉದ್ಯೋಗದ ಪೋಸ್ಟಿಂಗ್ಗಳ ಪಟ್ಟಿ ಕಾಣುತ್ತದೆ. ಅರ್ಹತೆಗಳು ಮತ್ತು ಅನುಭವದ ಆಧಾರದ ಮೇಲೆ ಲಿಂಕ್ಡ್ಇನ್ ಸೂಚಿಸಿದ ಉದ್ಯೋಗ ಪೋಸ್ಟ್ಗಳಿಂದ ಆಯ್ಕೆ ಮಾಡುವುದು ಉದ್ಯೋಗವನ್ನು ಹುಡುಕುವ ಇನ್ನೊಂದು ಮಾರ್ಗವಾಗಿದೆ.
ಫಿಲ್ಟರ್ಗಳನ್ನು ಸೆಲೆಕ್ಟ್ ಮಾಡಿ
ಇದಕ್ಕಾಗಿ ಅಭ್ಯರ್ಥಿಗಳು ಅನುಭವ, ಶಿಕ್ಷಣ ಮತ್ತು ಇತರ ಅಗತ್ಯವಿರುವ ಮಾಹಿತಿಯೊಂದಿಗೆ ಲಿಂಕ್ಡ್ಇನ್ ಪ್ರೊಫೈಲ್ ಅನ್ನು ಅಪ್ಡೇಟ್ ಮಾಡಬೇಕು. ಸರ್ಚ್ ರಿಸಲ್ಟ್ ಪುಟದ ಮೇಲ್ಭಾಗದಲ್ಲಿರುವ ಫಿಲ್ಟರ್ ಆಯ್ಕೆಗಳನ್ನು ಬಳಸುವುದು ಇನ್ನೊಂದು ಮಾರ್ಗವಾಗಿದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಫಿಲ್ಟರ್ಗಳನ್ನು ಸಲೆಕ್ಟ್ ಮಾಡಿದ ನಂತರ, ಜಾಬ್ ಅಲರ್ಟ್ ಟಾಗಲ್ ಆನ್ ಮಾಡಬಹುದು. ಜಾಬ್ ಅಲರ್ಟ್ ಅನ್ನು ಸಹ ಹೊಂದಿಸಬಹುದು.
ಹೊಸ ಸ್ಕಿಲ್ಗಳೊಂದಿಗೆ ನಿಮ್ಮ ಪ್ರೊಫೈಲ್ ಅನ್ನು ಅಪ್ಡೇಟ್ ಮಾಡುತ್ತೀರಿ
ನಿಮ್ಮ ಪ್ರೊಫೈಲ್ಗೆ ಸಂಬಂಧಿತ ಕೌಶಲ್ಯಗಳನ್ನು ಸೇರಿಸುವುದು ತುಂಬಾನೇ ಮುಖ್ಯ. ಮೂರು ತಿಂಗಳೊಳಗೆ ಉದ್ಯೋಗವನ್ನು ಕಂಡುಕೊಂಡ 90% ಕ್ಕಿಂತ ಹೆಚ್ಚು ಜನರು ತಮ್ಮ ಪ್ರೊಫೈಲ್ನಲ್ಲಿ ಐದು ಅಥವಾ ಹೆಚ್ಚಿನ ಕೌಶಲ್ಯಗಳನ್ನು ಪಟ್ಟಿ ಮಾಡಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ನಿಮ್ಮ ಪ್ರೊಫೈಲ್ ಎದ್ದು ಕಾಣಲು ವಿಭಿನ್ನ ಪದಗಳನ್ನು ಬಳಸಿ.
ನಿಮ್ಮಿಷ್ಟದ ಕಂಪನಿಗಳನ್ನು ಗುರಿಯಾಗಿಸಿಕೊಂಡು ಟ್ರಿಕ್ಸ್ ಬಳಸಿ
ನಿಮಗೆ ಯಾವ ಕಂಪನಿಯಲ್ಲಿ ಉದ್ಯೋಗ ಬೇಕೋ, ಆ ಕಂಪನಿಯ ಪೋಸ್ಟ್ಗಳನ್ನು ಗಮನಿಸುತ್ತಿರಿ. ಇಲ್ಲಿ ಹೊಸ ಕಾಂಟ್ಯಾಕ್ಟ್ಗಳನ್ನು ಮಾಡಿಕೊಳ್ಳಿ. ತಮ್ಮ ನೆಟ್ವರ್ಕ್ ಅನ್ನು ಬೆಳೆಸಿಕೊಳ್ಳಬೇಕು. ಲಿಂಕ್ಡ್ಇನ್ ಪ್ರೊಫೈಲ್ಗೆ ನಿಮ್ಮ ಕ್ಷೇತ್ರದಿಂದ ಜನರನ್ನು ಸೇರಿಸಿ, ಅವರ ಪೋಸ್ಟ್ಗಳಲ್ಲಿ ತೊಡಗಿಸಿಕೊಳ್ಳಿ. ನೀವು ಆಸಕ್ತಿ ಹೊಂದಿರುವ ಕಂಪನಿಗಳು ಅಥವಾ ಉದ್ಯಮಗಳಲ್ಲಿ ಕೆಲಸ ಮಾಡುವ ಯಾರಾದರೂ ಸಂಪರ್ಕ ಹೊಂದಿರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ