• ಹೋಂ
  • »
  • ನ್ಯೂಸ್
  • »
  • Jobs
  • »
  • UPSC Success Story: ತಾಯಿ-ಮಗಳು ಇಬ್ಬರೂ IAS ಅಧಿಕಾರಿಗಳು; ಇವರ ಜೀವನವೇ ಒಂದು ಆದರ್ಶ

UPSC Success Story: ತಾಯಿ-ಮಗಳು ಇಬ್ಬರೂ IAS ಅಧಿಕಾರಿಗಳು; ಇವರ ಜೀವನವೇ ಒಂದು ಆದರ್ಶ

ಟೀನಾ ದಾಬಿ, ಹಿಮಾಲಿ

ಟೀನಾ ದಾಬಿ, ಹಿಮಾಲಿ

ಟೀನಾ ದಾಬಿ ಅವರ ತಾಯಿ ಹಿಮಾಲಿ ಕೂಡ ತಮ್ಮ ಮಗಳಂತೆ ಯುಪಿಎಸ್‌‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದವರು ಮತ್ತು ಒಮ್ಮೆ ಭಾರತೀಯ ಎಂಜಿನಿಯರಿಂಗ್ ಸೇವೆಗಳ ಅಧಿಕಾರಿಯಾಗಿದ್ದರು ಎಂದರೆ ಐಇಎಸ್ ಅಧಿಕಾರಿಯಾಗಿದ್ದರು.  ಐಎಎಸ್ ಅಧಿಕಾರಿಯಾಗುವ ತಮ್ಮ ಗುರಿಯನ್ನು ಸಾಧಿಸಲು ಟೀನಾ ದಾಬಿಗೆ ಸಹಾಯ ಮಾಡುವ ಸಲುವಾಗಿ ಹಿಮಾಲಿ ಕಾಂಬ್ಳೆ ಅವರು ಇಷ್ಟಪಟ್ಟು ಪರೀಕ್ಷೆ ಬರೆದು ಟಾಪರ್ ಆಗಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ತಮ್ಮ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದರು.

ಮುಂದೆ ಓದಿ ...
  • Share this:

‘ತಾಯಿಯಂತೆ ಮಗಳು ನೂಲಿನಂತೆ ಸೀರೆ’ ಅನ್ನೋ ಮಾತು ಅನೇಕ ಬಾರಿ ನಮ್ಮ ಕಿವಿಯ ಮೇಲೆ ಬಿದ್ದಿರುತ್ತದೆ. ಆದರೆ ಇದಕ್ಕೆ ತಕ್ಕ ಉದಾಹರಣೆ (Example) ಎಂಬಂತೆ ಇಲ್ಲಿದೆ ತಾಯಿ ಮತ್ತು ಮಗಳ ಜೋಡಿ. ಈ ತಾಯಿ (Mother) ಮತ್ತು ಮಗಳ ಜೋಡಿ, ಈ ಮೇಲಿನ ಮಾತನ್ನು ಅಕ್ಷರಶಃ ನಿಜ ಮಾಡಿದೆ. ಇಲ್ಲಿ ನಾವು ಹೇಳಲು ಹೊರಟಿರುವ ತಾಯಿ ಮತ್ತು ಮಗಳ ಜೋಡಿ ಅಂತಿಂಥದ್ದಲ್ಲ. ಇಬ್ಬರು ತುಂಬಾನೇ ಕಷ್ಟಕರವಾದ ಸ್ಪರ್ಧಾತ್ಮಕ ಪರೀಕ್ಷೆ (Exam) ಅಂತ ಹೇಳಲಾಗುವ ಯುಪಿಎಸ್‌ಸಿ (UPSC) ಪರೀಕ್ಷೆಯಲ್ಲಿ ಟಾಪರ್  ಆಗಿರುವವರು.


2016 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ರು ಟೀನಾ ದಾಬಿ
2016 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಟೀನಾ ದಾಬಿ ಅವರು ಬಹುತೇಕರಿಗೆ ನೆನಪಿನಲ್ಲಿ ಉಳಿದಿರುತ್ತಾರೆ. ಏಕೆಂದರೆ ಇವರು ಈಗ ಭಾರತದ ಅತ್ಯಂತ ಜನಪ್ರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು. ಟೀನಾ ದಾಬಿ 2016 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ನಂತರ ತಕ್ಷಣದ ಮಾನ್ಯತೆಯನ್ನು ಪಡೆದರು. ಅವರು ಈಗ ದೇಶಾದ್ಯಂತ ಲಕ್ಷಾಂತರ ಐಎಎಸ್ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಟೀನಾ ದಾಬಿ ಅವರು ಪ್ರಸ್ತುತ ರಾಜಸ್ಥಾನದ ಜೈಸಲ್ಮೇರ್ ನ ಜಿಲ್ಲಾಧಿಕಾರಿ ಮತ್ತು ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಕಳೆದ ವರ್ಷ ಐಎಎಸ್ ಅಧಿಕಾರಿಯಾದ ಪ್ರದೀಪ್ ಗವಾಂಡೆ ಅವರನ್ನ ಮದುವೆಯಾದ ಟೀನಾ


ಕಳೆದ ವರ್ಷ ಟೀನಾ ದಾಬಿ ಅವರು ವೃತ್ತಿಯಲ್ಲಿ ವೈದ್ಯರಾದ ಮತ್ತು ಐಎಎಸ್ ಅಧಿಕಾರಿಯಾದ ಪ್ರದೀಪ್ ಗವಾಂಡೆ ಅವರನ್ನು ವಿವಾಹವಾಗಿದ್ದರು. ಟೀನಾ ದಾಬಿ ಬಗ್ಗೆ ಬಹುತೇಕರಿಗೆ ಹೆಚ್ಚು ತಿಳಿದಿದ್ದರೂ, ಅವರ ತಾಯಿ ಹಿಮಾನಿ ಕಾಂಬ್ಳೆ ಅವರ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ.


ಇದನ್ನೂ ಓದಿ: UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡು, ಯಾವುದೇ ಕೋಚಿಂಗ್ ಸಹಾಯವಿಲ್ಲದೆ IRS ಆದ ಚಂದ್ರಶೇಖರ್


ಈ ಲೇಖನದಲ್ಲಿ, ಟೀನಾ ದಾಬಿ ಅವರ ತಾಯಿ ಹಿಮಾನಿ ಕಾಂಬ್ಳೆ ಮತ್ತು ಅವರ ಪುತ್ರಿಯರಾದ ಟೀನಾ ದಾಬಿ ಮತ್ತು ಐಎಎಸ್ ಅಧಿಕಾರಿ ರಿಯಾ ದಾಬಿ ಅವರ ಯಶಸ್ಸಿಗಾಗಿ ಅವರು ಮಾಡಿದ ತ್ಯಾಗಗಳ ಬಗ್ಗೆ ಇಲ್ಲಿ ತಿಳಿಸುತ್ತಿದ್ದೇವೆ ನೋಡಿ.


ಟೀನಾ ದಾಬಿ ಅವರ ತಾಯಿ ಹಿಮಾಲಿ ಸಹ ಯುಪಿಎಸ್‌ಸಿ ಟಾಪರ್ ಅಂತೆ..


ಟೀನಾ ದಾಬಿ ಅವರ ತಾಯಿ ಹಿಮಾಲಿ ಕೂಡ ತಮ್ಮ ಮಗಳಂತೆ ಯುಪಿಎಸ್‌‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದವರು ಮತ್ತು ಒಮ್ಮೆ ಭಾರತೀಯ ಎಂಜಿನಿಯರಿಂಗ್ ಸೇವೆಗಳ ಅಧಿಕಾರಿಯಾಗಿದ್ದರು ಎಂದರೆ ಐಇಎಸ್ ಅಧಿಕಾರಿಯಾಗಿದ್ದರು.  ಐಎಎಸ್ ಅಧಿಕಾರಿಯಾಗುವ ತಮ್ಮ ಗುರಿಯನ್ನು ಸಾಧಿಸಲು ಟೀನಾ ದಾಬಿಗೆ ಸಹಾಯ ಮಾಡುವ ಸಲುವಾಗಿ ಹಿಮಾಲಿ ಕಾಂಬ್ಳೆ ಅವರು ಇಷ್ಟಪಟ್ಟು ಪರೀಕ್ಷೆ ಬರೆದು ಟಾಪರ್ ಆಗಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ತಮ್ಮ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದರು.




ಯುಪಿಎಸ್‌ಸಿ ಪರೀಕ್ಷೆಯ ಬಗ್ಗೆ ಏನ್ ಹೇಳಿದ್ರು ನೋಡಿ ಟೀನಾ ತಾಯಿ ಹಿಮಾಲಿ?


"ಈ ಪರೀಕ್ಷೆಗೆ ತಯಾರಿ ನಡೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಈ ಪರೀಕ್ಷೆ ತುಂಬಾನೇ ಕಠಿಣವಾಗಿರುತ್ತದೆ" ಎಂದು ಟೀನಾ ದಾಬಿ ಅವರ ತಾಯಿ ಹಿಮಾಲಿ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು.


ಟೀನಾ ದಾಬಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಮತ್ತು ಐಎಎಸ್ ಅಧಿಕಾರಿಯಾಗುವ ಮೂಲಕ ತನ್ನ ತಾಯಿ ತನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡರು. ಟೀನಾ ದಾಬಿ ಅವರ ತಾಯಿ ಹಿಮಾಲಿ ಅವರು ಕೂಡ ಮೌಲಾನಾ ಆಜಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಭೋಪಾಲ್ ನಲ್ಲಿ ಓದುವಾಗ ಟಾಪರ್ ಆಗಿದ್ದರು.

First published: