• ಹೋಂ
  • »
  • ನ್ಯೂಸ್
  • »
  • Jobs
  • »
  • Career Plan: ವೃತ್ತಿ ಆಯ್ಕೆ ಬಗ್ಗೆ ಚಿಂತೆಯೇ? ಈ 3 ಮೂರು ಮಾರ್ಗಗಳನ್ನು ಅನುಸರಿದ್ರೆ ನಿಮ್ಮ ನಿರ್ಧಾರ ಸರಿಯಾಗಿರುತ್ತೆ

Career Plan: ವೃತ್ತಿ ಆಯ್ಕೆ ಬಗ್ಗೆ ಚಿಂತೆಯೇ? ಈ 3 ಮೂರು ಮಾರ್ಗಗಳನ್ನು ಅನುಸರಿದ್ರೆ ನಿಮ್ಮ ನಿರ್ಧಾರ ಸರಿಯಾಗಿರುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೃತ್ತಿ ಯೋಜನೆ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಸಾಮರ್ಥ್ಯ, ನಿಮ್ಮ ಆಸಕ್ತಿಗಳಿಗೆ ಸರಿಹೊಂದುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಮಾಡುತ್ತದೆ.

  • Share this:

ಭವಿಷ್ಯದ (Future) ಚಿಂತೆ ಎಲ್ಲರಿಗೂ ಇರುತ್ತದೆ. ಆದರೆ ವೃತ್ತಿ (Career) ಆತಂಕವು ಕೆಲವೊಮ್ಮೆ ನಿಮ್ಮ ಹಾದಿ ತಪ್ಪಿಸಬಹುದು. ನೀವು ಅಂತಿಮ ವರ್ಷದ ಪದವಿ ಹಂತದಲ್ಲಿದ್ದರೆ ಈಗಾಗಲೇ ಅಸೈನ್‌ಮೆಂಟ್‌ಗಳು ಮತ್ತು ಪರೀಕ್ಷೆಗಳ ಒತ್ತಡವನ್ನು ಅನುಭವಿಸಿರುತ್ತೀರಾ. ಇದರೊಂದಿಗೆ ವೃತ್ತಿಜೀವನದ ಆತಂಕ ನಿಮ್ಮನ್ನು ಇನ್ನಷ್ಟು ಕಂಗಾಲಾಗುವಂತೆ ಮಾಡಬಹುದು. ಅಲ್ಲದೇ ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.


ಅಂದಹಾಗೆ ವೃತ್ತಿ ಯೋಜನೆ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಸಾಮರ್ಥ್ಯ, ನಿಮ್ಮ ಆಸಕ್ತಿಗಳಿಗೆ ಸರಿಹೊಂದುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಮಾಡುತ್ತದೆ. ಇದು ನಿಮ್ಮ ಗುರಿಗಳನ್ನು ಸಾಧಿಸಲು ಮೆಟ್ಟಿಲುಗಳಂತೆ ಕೆಲಸ ಮಾಡುತ್ತವೆ.


ಇದರೊಂದಿಗೆ ವೈಫಲ್ಯಗಳಿಗೆ ಸಿದ್ಧರಾಗುವುದು ಕೂಡ ಮುಖ್ಯ. ಅದರಿಂದ ಹತಾಶರಾಗುವ ಬದಲು ವೈಫಲ್ಯವನ್ನು ನಿಮ್ಮನ್ನು ನೀವು ಗಟ್ಟಿಗೊಳಿಸಲು ಬಳಸಿಕೊಳ್ಳಿ. ಹೆಚ್ಚುವರಿಯಾಗಿ, ವೃತ್ತಿ ಸಲಹೆಗಾರರೊಂದಿಗೆ ಮಾತನಾಡುವುದು ಒಂದು ಉತ್ತಮ ಕ್ರಮವಾಗಿದೆ. ಏಕೆಂದರೆ ಅವರು ನಿಮ್ಮ ವೃತ್ತಿ ಯೋಜನೆಯನ್ನು ಬೆಂಬಲಿಸಬಹುದು.


ವೃತ್ತಿಯ ಆತಂಕವನ್ನು ಹೋಗಲಾಡಿಸಲು ತಂತ್ರಗಳು


ವೃತ್ತಿಜೀವನದ ಆತಂಕವು ಭವಿಷ್ಯದಲ್ಲಿ ನೀವು ನಿಜವಾಗಿ ಏನನ್ನು ಸಾಧಿಸಲು ಬಯಸುತ್ತೀರಿ ಎಂದು ಯೋಚಿಸುವ ನಿಮ್ಮ ಸಾಮರ್ಥ್ಯವನ್ನೇ ಕುಂಠಿತಗೊಳಿಸಬಹುದು. ಈ ಒತ್ತಡವನ್ನು ತಪ್ಪಿಸಲು ಸೂಕ್ತವಾದ ಮಾರ್ಗವೆಂದರೆ ನಿಮ್ಮ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಅನ್ವೇಷಿಸಲು ಪ್ರಾರಂಭಿಸುವುದು. ನಿಮ್ಮ ಆಸಕ್ತಿಯ ಕ್ಷೇತ್ರಗಳು ಯಾವವು ಅನ್ನೋದನ್ನು ಖಚಿತಮಾಡಿಕೊಂಡ ಬಳಿಕ ನಿಮ್ಮ ಪರಿಪೂರ್ಣ ವೃತ್ತಿ ಮಾರ್ಗವನ್ನು ಗುರುತಿಸಲು ನೀವು ಅವುಗಳ ಮೇಲೆ ಆಳವಾದ ಸಂಶೋಧನೆ ಪ್ರಾರಂಭಿಸಬಹುದು.


ಇದರ ಜೊತೆಗೆ ವಾಸ್ತವಿಕ ಗುರಿಗಳನ್ನು ಹೊಂದಿಸುವುದು ಅತ್ಯಗತ್ಯ. ಅಲ್ಲದೆ, ಸಕಾರಾತ್ಮಕ ದೃಷ್ಟಿಕೋನವು ನಿಮ್ಮನ್ನು ಬಹಳ ದೂರ ತೆಗೆದುಕೊಂಡು ಹೋಗುತ್ತದೆ. ಸಕಾರಾತ್ಮಕ ದೃಷ್ಟಿಕೋನವನ್ನು ಕಾಪಾಡಿಕೊಳ್ಳುವುದು ನಿಮಗೆ ಯಾವುದು ಉತ್ತಮ ಎಂಬುದನ್ನು ನಿರ್ಧರಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ.


How to choose the right career counsellor
ಪ್ರಾತಿನಿಧಿಕ ಚಿತ್ರ


ಅಂತಿಮವಾಗಿ, ವೃತ್ತಿ ಸಲಹೆಗಾರರ ​​ಸಲಹೆಯನ್ನು ಪಡೆಯಿರಿ ಮತ್ತು ನಿಮ್ಮ ಆಸಕ್ತಿಗಳು ಮತ್ತು ಆಯ್ಕೆಗಳನ್ನು ಅವರೊಂದಿಗೆ ಚರ್ಚಿಸಿ. ನಿಮ್ಮ ಭವಿಷ್ಯದ ಮಾರ್ಗವನ್ನು ನಿರ್ಧರಿಸಲು ಅವರು ನಿಮಗೆ ಸಹಾಯ ಮಾಡುತ್ತಾರೆ.


ವೃತ್ತಿ ಯೋಜನೆಗಾಗಿ ಮೂರು ಮಾರ್ಗಗಳು


1. ಆಶಾವಾದಿಯಾಗಿರಿ: ನಿಮ್ಮ ವೃತ್ತಿ ಮಾರ್ಗವನ್ನು ಕಂಡುಕೊಳ್ಳುವಾಗ, ಆಶಾವಾದಿ ವಿಧಾನವನ್ನು ಅಳವಡಿಸಿಕೊಳ್ಳುವುದು ಖಂಡಿತವಾಗಿಯೂ ಅವಶ್ಯಕ. ನಾವು ಕೆಲವು ಕ್ಷೇತ್ರಗಳಿಗೆ ನಮ್ಮನ್ನು ಸೀಮಿತಗೊಳಿಸಿಕೊಳ್ಳುವ ಸಂದರ್ಭಗಳಿವೆ.


ಆದರೂ ಆ ಕ್ಷೇತ್ರಗಳ ಹೊರಗೆ ಉತ್ತಮ ನಿರೀಕ್ಷೆಗಳು ಇರಬಹುದು. ನಿಮ್ಮ ಸ್ವಂತ ವ್ಯಕ್ತಿತ್ವವನ್ನು ನಿರ್ಮಿಸಲು ನಿಮ್ಮ ಗಡಿಯಿಂದ ಹೊರಬರುವುದು ಮತ್ತು ನಿಮ್ಮ ದಾರಿಯಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಸ್ವಾಗತಿಸುವ ಅಗತ್ಯವಿದೆ.


2. ನಿಮ್ಮ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಿ: ವೃತ್ತಿಯ ಒತ್ತಡದಿಂದ ಹೊರಬರಲು ಉತ್ತಮ ಮಾರ್ಗವೆಂದರೆ ನಿಮ್ಮ ಸಾಮರ್ಥ್ಯಗಳನ್ನು ಪರೀಕ್ಷಿಸುವುದು. ನಿಮ್ಮ ಆಸಕ್ತಿಗಳು ಮತ್ತು ಕೌಶಲ್ಯಗಳನ್ನು ತಿಳಿದುಕೊಳ್ಳುವುದು.


ಇದು ನಿಮಗಾಗಿ ಸರಿಯಾದ ವೃತ್ತಿ ಮಾರ್ಗವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಆದರೂ ಕೆಲವೊಮ್ಮೆ, ನಮ್ಮ ಸಾಮರ್ಥ್ಯಗಳನ್ನು ಗುರುತಿಸಲು ಕಷ್ಟಕರವಾಗುವ ಸಂದರ್ಭಗಳಿರುತ್ತವೆ. ಅಂತಹ ಸಂದರ್ಭಗಳಲ್ಲಿ, ರಚನಾತ್ಮಕ ಆಲೋಚನೆಗಳನ್ನು ಮಾಡುವುದು ಒಳ್ಳೆಯದು.




3. ನಿಮ್ಮದೇ ಆದ ದಾರಿಯನ್ನು ಕಂಡುಕೊಳ್ಳಿ: ಪ್ರತಿಯೊಬ್ಬರ ಜೀವನ ಪಯಣವು ವಿಶಿಷ್ಟವಾಗಿರುತ್ತದೆ. ನಾವು ನಮ್ಮನ್ನು ಇತರರೊಂದಿಗೆ ಹೋಲಿಸಿದಾಗ ನಮ್ಮ ಕಷ್ಟಗಳೇ ದೊಡ್ಡದು ಎಂದುಕೊಳ್ಳುತ್ತೇವೆ. ವಿಶೇಷವಾಗಿ ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್‌ಗಳ ಈ ಯುಗದಲ್ಲಿ, ಇತರರ ಸಾಧನೆಗಳನ್ನು ನೋಡುವ ಮೂಲಕ ನಾವು ಅತಿಯಾದ ಭಾವನೆ ಹೊಂದುತ್ತೇವೆ.


ಇದು ನಮ್ಮ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿ, ನಿಮ್ಮ ವೃತ್ತಿಜೀವನವನ್ನು ಯೋಜಿಸುವಾಗ, ನಿಮ್ಮನ್ನು ಇತರರೊಂದಿಗೆ ಹೋಲಿಸುವ ಬದಲು ನಿಮ್ಮ ಸ್ವಂತ ವೈಯಕ್ತಿಕ ಸಾಮರ್ಥ್ಯದ ಮೇಲೆ ಗಮನ ಕೇಂದ್ರೀಕರಿಸಿ.


ಇದನ್ನೂ ಓದಿ: Bank Job Exams: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬೇಕೆಂದರೆ ಈ ಟಾಪ್ 5 ಪರೀಕ್ಷೆಗಳಿಗೆ ತಯಾರಿ ನಡೆಸಿ


ಒಟ್ಟಾರೆ, ನಮ್ಮ ವೃತ್ತಿಜೀವನದ ಬಗ್ಗೆ ನಮಗೆ ಖಚಿತತೆಯಿಲ್ಲದಿರುವ ಸಂದರ್ಭಗಳಲ್ಲಿ ನಮ್ಮ ಒತ್ತಡ ಮತ್ತು ಆತಂಕ ಹೆಚ್ಚಾಗುತ್ತದೆ. ಇಂಥ ಉದ್ವೇಗವನ್ನು ಹೋಗಲಾಡಿಸಲು, ನಿಮ್ಮ ಆಸಕ್ತಿಗಳನ್ನು ಲೆಕ್ಕಾಚಾರ ಮಾಡುವುದು ಮತ್ತು ನೀವು ನಿಮ್ಮ ಸಾಮರ್ಥ್ಯದ ಜೊತೆಗೆ ಹೇಗೆ ಮುಂದುವರಿಯಲು ಬಯಸುತ್ತೀರಿ ಎಂಬುದನ್ನು ಯೋಜಿಸುವುದು ಉತ್ತಮ.


ಅಲ್ಲದೇ ಹೋಲಿಕೆಗಳನ್ನು ಮಾಡುವುದನ್ನು ತಪ್ಪಿಸಿ. ಬದಲಾಗಿ ನಿಮ್ಮದೇ ಆದ ವಿಶಿಷ್ಟ ವೃತ್ತಿ ಮಾರ್ಗವನ್ನು ರೂಪಿಸುವುದರ ಮೇಲೆ ಕೇಂದ್ರೀಕರಿಸುವುದು ಒಳ್ಳೆಯದು.

top videos
    First published: