ಉದ್ಯೋಗಕ್ಕೆ ರಾಜೀನಾಮೆ (Resignation) ನೀಡುವುದು ಸಿಂಪಲ್ ವಿಷಯ ಅಲ್ಲವೇ ಅಲ್ಲ. ಎಲ್ಲಾ ರೀತಿಯಲ್ಲೂ ಯೋಚಿಸಿಯೇ ನಿರ್ಧಾರ ತೆಗೆದುಕೊಳ್ಳಬೇಕು. ಪ್ಲ್ಯಾನ್ಡ್ ಆಗಿ ಯೋಚಿಸಿ ಬೇರೆಡೆ ಉದ್ಯೋಗ (Job) ಹುಡುಕಿಕೊಂಡು, ಸದ್ಯದ ಕೆಲಸ ಬಿಟ್ಟರೆ ಯಾವುದೇ ತೊಂದರೆ ಇಲ್ಲ. ಆದರೆ ಸಡನ್ ಆಗಿ ರಿಸೈನ್ ಮಾಡುವ ಮುನ್ನ ಎಚ್ಚರಿಕೆ ವಹಿಸಲೇ ಬೇಕು. ಆಫೀಸ್ ನಲ್ಲಿ ರಾಜಕೀಯ (Office Politics), ಗಾಸಿಪ್, ಪ್ರಮೋಷನ್-ಸ್ಯಾಲರಿ ಹೈಕ್ ಸಿಗದಿರುವುದಕ್ಕೆ ಅಥವಾ ರಜೆ ನೀಡಿದ್ದಾಗ ಭಾವೋದ್ವೇಗಕ್ಕೆ ಒಳಗಾಗಿ ಅನೇಕ ಉದ್ಯೋಗಿಗಳು ತಕ್ಷಣಕ್ಕೆ ನಿರ್ಧಾರ ತೆಗೆದುಕೊಂಡು ರಾಜೀನಾಮೆ ಮುಂದಾಗುತ್ತಾರೆ.
ನಿಮಗೆ, ನಿಮ್ಮ ಕೆಲಸಕ್ಕೆ ಗೌರವ ಇಲ್ಲದ ಕಡೆ ಮುಂದುವರಿಯುವ ಅಗತ್ಯವಿಲ್ಲ. ಆದರೆ ಏಕಾಏಕಿ ರಾಜೀನಾಮೆಗೂ ಮುನ್ನ ಕೆಲ ವಿಷಯಗಳನ್ನು ಬಗ್ಗೆ ಯೋಚಿಸಲೇಬೇಕು.
1) ತಾಳ್ಮೆಯಿಂದಿರಿ: ಆದಷ್ಟು ಶಾಂತವಾಗಿ ಯೋಚಿಸಲು ಪ್ರಯತ್ನಿ. ಎಷ್ಟೇ ಅಸಮಾಧಾನ ಇದ್ದರೂ ಕಚೇರಿಯಲ್ಲಿ ಯಾರ ಮೇಲೆಯೂ ಕೂಗಾಡಬೇಡಿ. ಕೋಪದ ಕೈಗೆ ಬುದ್ಧಿ ಕೊಡಬೇಡಿ. ರಾಜೀನಾಮೆಯೇ ನಿಮ್ಮ ಅಂತಿಮ ನಿರ್ಧಾರವಾಗಿದ್ದರೆ, ಲೆಟರ್ ಕೊಟ್ಟು ಹೊರ ನಡೆಯಿರಿ.
2) ರಾಜೀನಾಮೆಗೆ ನಿರ್ದಿಷ್ಟ ಕಾರಣವೇನು ಎಂದು ಯೋಚಿಸಿ: ನೀವು ಕೆಲಸ ಏಕೆ ಬೇಡವಾಗಿದೆ ಎಂಬುದನ್ನು ಮೊದಲು ಕಂಡು ಹಿಡಿಯಿರಿ. ಕಚೇರಿ ರಾಜಕೀಯ, ಆಡಳಿತದಿಂದ ಕಿರುಕುಳ, ವಿಶ್ರಾಂತಿಯಿಲ್ಲದೆ ಅತಿಯಾದ ಕೆಲಸ, ಅಗತ್ಯಕ್ಕಿಂತ ಕಡಿಮೆ ಸಂಬಳ.. ಹೀಗೆ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ. ಎಲ್ಲದಕ್ಕೂ ರಾಜೀನಾಮೆಯೇ ಪರಿಹಾರ ಎನಿಸಿದರೆ ಮುಂದುವರೆಯಿರಿ.
3) ಅನುಭವಿಗಳಿಂದ ಸಲಹೆ ಪಡೆಯಿರಿ : ನಿಮ್ಮ ಕಚೇರಿ ಸಮಸ್ಯೆಗಳನ್ನು ನಿಮ್ಮ ಫೀಲ್ಡಿನ ಅನುಭವಿ ಜನರೊಂದಿಗೆ ಹಂಚಿಕೊಳ್ಳಿ. ಕೆಲಸಕ್ಕೆ ರಾಜೀನಾಮೆ ನೀಡುವ ನಿರ್ಧಾರ ಸರಿಯೋ ತಪ್ಪೋ ಎಂದು ಕೇಳಿ. ಹೊರಗಿನ ಇತರ ಕಂಪನಿಗಳಲ್ಲೂ ಇದೇ ರೀತಿಯ ಸಮಸ್ಯೆಗಳಿವೆಯೇ? ಈ ಕೆಲಸ ಬಿಟ್ಟರೆ ಉತ್ತಮ ಕೆಲಸ ಸಿಗಬಹುದೇ? ಖಾಲಿ ಹುದ್ದೆಗಳಿವೆಯೇ? ಈ ಪ್ರಶ್ನೆಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ. ನಂತರ ಕೆಲಸ ಬಿಡಲು ನಿರ್ಧರಿಸಿ.
4) ಮುಂದಿನ ಪ್ಲ್ಯಾನ್ ಏನು: ಒಮ್ಮೆ ನೀವು ನಿಮ್ಮ ಕೆಲಸವನ್ನು ತೊರೆಯಲು ನಿರ್ಧರಿಸಿದ ನಂತರ, ಮುಂದಿನ ಕೆಲಸವನ್ನು ಹುಡುಕಲು ಪ್ರಾರಂಭಿಸಿ. ನೀವು ಸೇರಲು ಬಯಸುವ ಸಂಸ್ಥೆಗಳನ್ನು ಪಟ್ಟಿ ಮಾಡಿ. ನಿಮ್ಮ ರೆಸ್ಯೂಮ್ ನಲ್ಲಿ ಮಾಹಿತಿಯನ್ನು ಅಪ್ ಡೇಟ್ ಮಾಡಿ.
5) ಸಡನ್ ಆಗಿ ತಿಂಗಳ ಸಂಬಳ ನಿಂತರೆ ಹೇಗೆ? : ನೀವು ಪ್ರಸ್ತುತ ಎಷ್ಟು ಹಣವನ್ನು ಹೊಂದಿದ್ದೀರಿ ಎಂಬುದನ್ನು ಲೆಕ್ಕ ಹಾಕಿ. ಮಾಸಿಕ ಕಂತುಗಳಿದ್ದರೆ, ಅಗತ್ಯವಿರುವ ಮೊತ್ತವನ್ನು ಹೊಂದಿಸಿ. ಯಾಕೆಂದರೆ ತಕ್ಷಣಕ್ಕೆ ಕೆಲಸ ಸಿಕ್ಕರೂ ಸಂಬಳ ಸಿಗುವುದಿಲ್ಲ. ಆದ್ದರಿಂದ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಹಣವನ್ನು ಹೊಂದಿಸಿ.
6) ಸರಿಯಾದ ಆಯ್ಕೆ ಮಾಡಿ : ಬೇರೆಡೆ ಕೆಲಸ ಸಿಕ್ಕೊಡನೆ ತಕ್ಷಣ ಒಪ್ಪಂದಕ್ಕೆ ಸಹಿ ಹಾಕಬೇಡಿ. ಅದಕ್ಕೂ ಮುನ್ನ ಅಲ್ಲಿ ನಿಮಗೆ ಪರಿಚಯವಿರುವವರು ಯಾರಾದರೂ ಇದ್ದರೆ, ಕಂಪನಿಯ ಕೆಲಸದ ವಾತಾವರಣ, ಸಂಬಳ, ರಜೆಗಳು, ಕಚೇರಿ ಸಮಯ ಇತ್ಯಾದಿಗಳ ಬಗ್ಗೆ ಕೇಳಿ. ನಂತರ ನಿರ್ಧರಿಸಿ ಅಗ್ರಿಮೆಂಟ್ ಗೆ ಸೈನ್ ಮಾಡಿ.
ಇದನ್ನೂ ಓದಿ: Interview Tips-30: ಜಾಬ್ ಇಂಟರ್ವ್ಯೂನಲ್ಲಿ ಇವುಗಳ ಬಗ್ಗೆ ಮಾತನಾಡಿದ್ರೆ, ಖಂಡಿತಾ ಕೆಲಸ ಸಿಗಲ್ಲ
7) ಎಚ್ಚರಿಕೆ: ಯಾವುದೇ ಕಂಪನಿಗೆ ಹೋದರೂ ಕಚೇರಿ ರಾಜಕೀಯ, ಕೆಲಸದ ಒತ್ತಡ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ನೀವು ಅವುಗಳನ್ನು ನಿಭಾಯಿಸುವ ಕಲೆ ತಿಳಿದಿರಲೇಬೇಕು. ಕೆಲಸ ಬಿಡುವುದೇ ಎಲ್ಲದಕ್ಕೂ ಪರಿಹಾರವಾಗಿರೋದಿಲ್ಲ. ಮುಂದಿನ ಕಂಪನಿಯಲ್ಲೂ ಇದೇ ಸಮಸ್ಯೆಗಳು ಎದುರಾಗಬಹುದು. ಆಗಲೂ ರಾಜೀನಾಮೆ ಕೊಡುತ್ತೀರಾ? ಹೀಗೆ ಎಲ್ಲೆಡೆ ಕೆಲಸ ಬಿಡುತ್ತಾ ಹೋದರೆ ವೃತ್ತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ