• ಹೋಂ
  • »
  • ನ್ಯೂಸ್
  • »
  • Jobs
  • »
  • Career Advice: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಯನ್ನು ಆಯ್ಕೆ ಮಾಡುವ ಮುನ್ನ ಇವುಗಳ ಬಗ್ಗೆ ತಿಳಿದಿರಲೇಬೇಕು

Career Advice: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಯನ್ನು ಆಯ್ಕೆ ಮಾಡುವ ಮುನ್ನ ಇವುಗಳ ಬಗ್ಗೆ ತಿಳಿದಿರಲೇಬೇಕು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಹಾಗೂ ಹಣಕಾಸು ಜನಪ್ರಿಯ ವೃತ್ತಿ ಆಯ್ಕೆ ಎಂದೆನಿಸಿದೆ. ಆ ನಿಟ್ಟಿನಲ್ಲಿ ವೃತ್ತಿ ಮಾರ್ಗದರ್ಶನ ಇಲ್ಲಿದೆ ನೋಡಿ.

  • Share this:

ಶಿಕ್ಷಣ (Education) ಪೂರ್ಣಗೊಳಿಸಿದ ನಂತರ ಯಾವ ವೃತ್ತಿಯಲ್ಲಿ (Career) ಮುಂದುವರಿಯಬೇಕು ಎಂಬುದು ಕೊಂಚ ಕಷ್ಟಕರ ಕೆಲಸವಾಗಿದೆ. ವೃತ್ತಿ ಎಂಬುದು ಮುಂದಿನ ಭವಿಷ್ಯದ ಭದ್ರ ಬುನಾದಿಯಾಗಿರುತ್ತದೆ. ಹಾಗಾಗಿ ಸರಿಯಾದ ವೃತ್ತಿಯನ್ನು ಆಯ್ಕೆಮಾಡುವ ಸಂದರ್ಭದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು ಅಂತೆಯೇ ಸರಿಯಾಗಿ ಯೋಚಿಸಿ ಮುಂದುವರಿಯಬೇಕು.


ಸೂಕ್ತ ಮಾಹಿತಿಯು ಅಗತ್ಯವಾಗಿದೆ


ವೃತ್ತಿ ಆಯ್ಕೆಯನ್ನು ಹೇಗೆ ಮಾಡಬೇಕು, ಯಾವ ವಿಧದಲ್ಲಿ ಮಾಡಬೇಕು ಎಂಬುದು ಹೆಚ್ಚಿನ ಪದವೀಧರರ ಮುಂದಿರುವ ಸಮಸ್ಯೆಯಾಗಿದೆ. ಈ ಸಮಯದಲ್ಲಿ ಅವರಿಗೆ ಸೂಕ್ತ ಮಾಹಿತಿಯ ಅಗತ್ಯವಿರುತ್ತದೆ. ಮಾಹಿತಿಗಳು ಸಾಕಷ್ಟಿದ್ದರೆ ಹೆಚ್ಚಿನ ಆಯ್ಕೆಗಳು ದೊರೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಹಾಗೂ ಹಣಕಾಸು ಜನಪ್ರಿಯ ವೃತ್ತಿ ಆಯ್ಕೆ ಎಂದೆನಿಸಿದೆ.


ಈ ಅಂಶಗಳನ್ನು ಪರಿಗಣಿಸಿ


ನವದೆಹಲಿಯ ಫಾರ್ಚೂನ್ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ಬ್ಯುಸಿನೆಸ್ (ಎಫ್‌ಐಐಬಿ) ಯಲ್ಲಿ ಪ್ರಾಕ್ಟೀಸ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊಫೆಸರ್ ಇಂದ್ರಜಿತ್ ಲಾಹಿರಿ ಪ್ರಕಾರ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ವೃತ್ತಿಯನ್ನು ಆಯ್ಕೆಮಾಡುವಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸುವುದು ಮುಖ್ಯ.




ಮಹತ್ವಾಕಾಂಕ್ಷೆಯ ಪರಿಣಿತರ ಗುಂಪು


ಮಹತ್ವಾಕಾಂಕ್ಷೆಯ, ಸುಶಿಕ್ಷಿತ ಸಹೋದ್ಯೋಗಿಗಳ ಗುಂಪಿನ ನೆರವನ್ನು ಪಡೆದುಕೊಳ್ಳಿ. ಬ್ಯಾಂಕ್‌ಗಳು ಹಾಗೂ ಹಣಕಾಸು ಕ್ಷೇತ್ರಗಳು ಇಂತಹ ಉದ್ಯೋಗಿಗಳಿಗೇನೇ ಮನ್ನಣೆ ನೀಡುತ್ತವೆ.


ಬ್ಯಾಂಕಿಂಗ್ ಸಂಬಂಧಿತ ಪ್ರಕ್ರಿಯೆಗಳನ್ನು ನಡೆಸುವ ವಿಶ್ವವಿದ್ಯಾಲಯಗಳ ಸಹಾಯವನ್ನು ಪಡೆದುಕೊಳ್ಳಬಹುದು. ಇದರಿಂದ ಬ್ಯಾಂಕಿಂಗ್ ಉದ್ಯೋಗಕ್ಕೆ ಸುಲಭವಾಗಿ ಪ್ರವೇಶ ಪಡೆದುಕೊಳ್ಳಬಹುದು.


ಉನ್ನತ ಪ್ಯಾಕೇಜ್‌ಗಳು


ಪ್ರತಿಭಾವಂತ ಉದ್ಯಮಿಗಳಿಗೆ ಸಂಸ್ಥೆಗಳು ಉನ್ನತ ಪ್ಯಾಕೇಜ್‌ಗಳು ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುತ್ತವೆ. ನಿಮ್ಮ ಸಂಸ್ಥೆ ಈ ರೀತಿಯ ಸೌಲಭ್ಯಗಳನ್ನು ಒದಗಿಸುತ್ತವೆಯೇ ಎಂಬುದನ್ನು ಪರೀಕ್ಷಿಸಿ.


ಗ್ರಾಹಕರಿಗೆ ಆದ್ಯತೆ


ಸ್ಪರ್ಧೆಯು ತೀವ್ರವಾಗಿದೆ ಮತ್ತು ಗ್ರಾಹಕ-ಕೇಂದ್ರಿತ ವಿಧಾನವನ್ನು ಇರಿಸಿಕೊಳ್ಳಲು ಬ್ಯಾಂಕುಗಳು ವಿಕಸನಗೊಂಡಿವೆ. ಉತ್ಪನ್ನಗಳ ವಿನ್ಯಾಸ, ಸಂಪರ್ಕ ಕೇಂದ್ರದ ಡ್ಯಾಶ್‌ಬೋರ್ಡ್‌ಗಳು, ಸಾಲದ ವಹಿವಾಟು ಸಮಯ ಇತ್ಯಾದಿಗಳಲ್ಲಿ ಚಿಲ್ಲರೆ ಬ್ಯಾಂಕ್‌ಗಳು ಮುಂಚೂಣಿಯಲ್ಲಿರುವ ವೃತ್ತಿಜೀವನವನ್ನು ಉತ್ತೇಜಕ ಸ್ಥಳವನ್ನಾಗಿ ಮಾಡಲು ತಂತ್ರಜ್ಞಾನವನ್ನು ಬ್ಯಾಂಕಿಂಗ್ ವಲಯಗಳು ಹೆಚ್ಚಾಗಿ ಬಳಸುತ್ತಿವೆ. ಹಾಗಾಗಿ ನೀವು ಉದ್ಯೋಗ ಮಾಡಲು ಬಯಸುವ ಬ್ಯಾಂಕ್‌ಗಳು ಗ್ರಾಹಕರಿಗೆ ಆದ್ಯತೆ ನೀಡುತ್ತದೆಯೇ ಎಂಬುದನ್ನು ಗಮನಿಸಿ.




ಸ್ಕೇಲಿಂಗ್


ಸ್ಥಾಪನೆಗೊಂಡ ಬ್ಯಾಂಕ್‌ಗಳು ಪ್ರಗತಿ ಹಾಗೂ ಮುಂದಿನ ಅಭಿವೃದ್ಧಿಗಳನ್ನು ಸ್ಕೇಲಿಂಗ್ ಮಾಡಲು ಹಿಂಜರಿಯುವುದಿಲ್ಲ. ಸ್ಕೇಲಿಂಗ್, ಸಂಸ್ಥೆಗಳಿಗೆ ಹೊಸ ಮಾರುಕಟ್ಟೆಗಳು, ಶಾಖೆಗಳು, ಗ್ರಾಹಕರು ಮತ್ತು ಉದ್ಯೋಗಿಗಳನ್ನು ಒದಗಿಸುತ್ತದೆ.


ಕ್ರೆಡಿಟ್ ಕಾರ್ಡ್‌ಗಳಂತಹ ಉತ್ಪನ್ನಗಳಿಗೆ ದೂರದ ಮಾರಾಟ ಪಡೆಯು FMCG ವಿತರಣಾ ಜಾಲದಂತಿದೆ. ಈ ವಿಸ್ತರಣೆಯು ಹೆಚ್ಚುತ್ತಿರುವ ಜವಾಬ್ದಾರಿ ಮತ್ತು ಕೌಶಲ್ಯದ ಅವಕಾಶಗಳೊಂದಿಗೆ ಇನ್ನಷ್ಟು ವಿಫುಲತೆಯನ್ನು ಸೃಷ್ಟಿಸಿದೆ. ಹಾಗಾಗಿ ಬ್ಯಾಂಕ್ ಸ್ಕೇಲಿಂಗ್ ಹೇಗಿದೆ ಎಂಬುದನ್ನು ಅರಿತುಕೊಳ್ಳಿ


ಡಿಜಿಟಲ್ ಕ್ರಾಂತಿ


ಡಿಜಿಟಲ್ ಬ್ಯಾಂಕಿಂಗ್ ಮತ್ತು ಫಿನ್‌ಟೆಕ್ ಕ್ರಾಂತಿಯ ಮುಂಚೆಯೇ ಐಟಿ ಎಂಜಿನಿಯರ್‌ಗಳಿಗೆ ಇದು ಬಹಳ ಲಾಭದಾಯಕ ವೃತ್ತಿಜೀವನದ ಆಯ್ಕೆಯಾಗಿದೆ. ಈಗ ಹಣದ ವಹಿವಾಟುಗಳು ಹೆಚ್ಚು ಜಟಿಲವಾಗಿರುವುದರಿಂದ ಬ್ಯಾಂಕಿಂಗ್ ತಂತ್ರಜ್ಞಾನ ಕ್ರಾಂತಿಗಳು ಮತ್ತು ಸ್ಟಾರ್ಟ್‌ಅಪ್‌ಗಳ ಮಿಶ್ರಣ ಎಂದೆನಿಸಿದೆ.


ಕಲಿಕೆ ಮತ್ತು ಅಭಿವೃದ್ಧಿ


ಬ್ಯಾಂಕುಗಳು ವಿಶೇಷತೆಗಾಗಿ ವ್ಯಾಪಕವಾದ ಕ್ಷೇತ್ರಗಳನ್ನು ಹೊಂದಿವೆ, ಮತ್ತು ಪ್ರಮುಖ ಬ್ಯಾಂಕುಗಳು ತಮ್ಮ ಸಿಬ್ಬಂದಿಯನ್ನು ಇನ್ನಷ್ಟು ಪ್ರಚಂಡರು ಹಾಗೂ ನಿಪುಣರನ್ನಾಗಿಸುವತ್ತ ಒಲವು ತೋರಿವೆ.


ಇದರಿಂದ ಉದ್ಯೋಗಿಗಳಿಗೆ ಆಸಕ್ತಿಗಳನ್ನು ಹೆಚ್ಚಿಸಲು ಅವಕಾಶವನ್ನು ರಚಿಸಲು ಸಹಕಾರಿಯಾಗಿದೆ. ಹೆಚ್ಚಿನ ಬ್ಯಾಂಕುಗಳು ತಾಂತ್ರಿಕ ಹಾಗೂ ಕೌಶಲ್ಯಪೂರ್ಣ ಉತ್ತಮ-ಯೋಜಿತ ತರಬೇತಿ ಕಾರ್ಯಕ್ರಮಗಳನ್ನು ಹೊಂದಿವೆ. ಇವುಗಳು ತಮ್ಮ ವೃತ್ತಿಜೀವನದ ವಿವಿಧ ಹಂತಗಳಲ್ಲಿ ಸಿಬ್ಬಂದಿಗೆ ಅಮೂಲ್ಯವಾದ ಮಾನ್ಯತೆಯನ್ನೊದಗಿಸುತ್ತದೆ.


ಇದನ್ನೂ ಓದಿ: Business Analytics ವೃತ್ತಿಪರರು ಈಗ ಪ್ರತಿ ಕಂಪನಿಗೂ ಬೇಕು; ವೃತ್ತಿ ವ್ಯಾಪ್ತಿಯ ಸಂಪೂರ್ಣ ಮಾಹಿತಿ ಇಲ್ಲಿದೆ


ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಒದಗಿಸುವ ಈ ಯೋಜನೆಗಳು ಉದ್ಯೋಗಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸುತ್ತವೆ ಹಾಗೂ ವಿದೇಶ ಪ್ರಯಾಣಕ್ಕೆ ಅನುಕೂಲತೆಯನ್ನು ಒದಗಿಸುತ್ತದೆ. ಇದರಿಂದ ಶಾಖೆಗಳಿಗೆ ಅಥವಾ ಅಂಗಸಂಸ್ಥೆಗಳಿಗೆ ವರ್ಗಾವಣೆಗೆ ಅವಕಾಶಗಳಿಗೆ ಕಾರಣವಾಗಬಹುದು.

top videos


    ಬ್ಯಾಂಕಿಂಗ್ ಮತ್ತು ಫೈನಾನ್ಸ್‌ನಲ್ಲಿ ವೃತ್ತಿಜೀವನವು ಅನೇಕ ಆಕರ್ಷಣೆಗಳನ್ನು ಹೊಂದಿದ್ದು ಉದ್ಯೋಗಿ ಹೆಚ್ಚು ಜಾಗರೂಕತೆ ಹಾಗೂ ಮುತುವರ್ಜಿಯಿಂದ ಮುಂದುವರಿಯಬೇಕು.

    First published: