• ಹೋಂ
  • »
  • ನ್ಯೂಸ್
  • »
  • Jobs
  • »
  • Success Story: ಈ IAS ಅಧಿಕಾರಿಗಳು ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ಪಾಸ್ ಮಾಡಿದ್ದಾರಂತೆ!

Success Story: ಈ IAS ಅಧಿಕಾರಿಗಳು ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ಪಾಸ್ ಮಾಡಿದ್ದಾರಂತೆ!

ಒಂದೇ ಪ್ರಯತ್ನದಲ್ಲಿ ಯುಪಿಎಸ್​ಸಿ​ ಎಕ್ಸಾಂ ಪಾಸ್​ ಆದವರು

ಒಂದೇ ಪ್ರಯತ್ನದಲ್ಲಿ ಯುಪಿಎಸ್​ಸಿ​ ಎಕ್ಸಾಂ ಪಾಸ್​ ಆದವರು

Success Story: ಯುಪಿಎಸ್​​ಸಿ ಪರೀಕ್ಷೆ ಭಾರತದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆ ಆಗಿದ್ದರಿಂದ ಇದನ್ನು ಮೊದಲನೇ ಪ್ರಯತ್ನದಲ್ಲಿಯೇ ಅನೇಕರಿಗೆ ಪಾಸ್​​ ಮಾಡಲು ಆಗುವುದಿಲ್ಲ. ಇದಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತದೆ. ಇಲ್ಲಿ ಕೆಲ ಪ್ರತಿಭಾವಂತ ಐಎಎಸ್ ಅಧಿಕಾರಿಗಳು ತಮ್ಮ ಮೊದಲ ಪ್ರಯತ್ನದಲ್ಲಿಯೇ ಈ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಯುಪಿಎಸ್‌ಸಿ ಪರೀಕ್ಷೆ (UPSC Exam) ಅಥವಾ ನಾಗರಿಕ ಸೇವಾ ಪರೀಕ್ಷೆ ಎಂದರೆ ಸಾಕು ಈ ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳು ಪಾಸ್ ಮಾಡುವುದಕ್ಕೆ ಒಂದೆರಡು ವರ್ಷಗಳ ಕಠಿಣ ಪರಿಶ್ರಮ ಬೇಕೇ ಬೇಕು ಅಂತಾರೆ. ಹೌದು, ಈ ಮಾತು ನಿಜ, ಆದರೆ ಕೆಲ ಪ್ರತಿಭಾವಂತರು ಈ ಪರೀಕ್ಷೆಯನ್ನು ತಮ್ಮ ಮೊದಲ ಪ್ರಯತ್ನದಲ್ಲಿಯೇ ಒಳ್ಳೆಯ ಕ್ರಮಾಂಕ ಗಳಿಸುವುದರ ಜೊತೆಗೆ ಪಾಸ್ ಮಾಡುತ್ತಾರೆ. ಇನ್ನೂ ಕೆಲವರು ಎರಡು ಮೂರು ವರ್ಷಗಳ ಸತತ ಅಧ್ಯಯನ ಮತ್ತು ಪರಿಶ್ರಮದಿಂದ ತಮ್ಮ ಎರಡನೇ ಪ್ರಯತ್ನದಲ್ಲಿ ಅಥವಾ ಮೂರನೇ ಪ್ರಯತ್ನದಲ್ಲಿ ಈ ಪರೀಕ್ಷೆಯನ್ನು ಪಾಸ್ ಮಾಡುತ್ತಾರೆ. ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು (Compitative Exam) ಬರೆಯುವ ಅಭ್ಯರ್ಥಿಗಳ ಪರೀಕ್ಷೆಯ ತಯಾರಿ ಮತ್ತು ಪರೀಕ್ಷೆಗೆ ಹಾಕುವ ಪರಿಶ್ರಮ ವ್ಯಕ್ತಿಯಿಂದ ವ್ಯಕ್ತಿಗೆ ತುಂಬಾನೇ ಭಿನ್ನವಾಗಿರುತ್ತದೆ.


ಕೆಲವರು ಈ ಪರೀಕ್ಷೆಗೆ ದಿನವಿಡೀ ಕುಳಿತುಕೊಂಡು 9-10 ಗಂಟೆಗಳ ಕಾಲ ಓದಿದರೆ, ಇನ್ನೂ ಕೆಲವು ಅಭ್ಯರ್ಥಿಗಳು ದಿನದಲ್ಲಿ ಸರಿಯಾಗಿ ಪ್ಲ್ಯಾನ್ ಮಾಡಿಕೊಂಡು 5-6 ತಾಸುಗಳಷ್ಟೆ ಅಭ್ಯಾಸ ಮಾಡುತ್ತಾರೆ. ಕೆಲವರು ಅನೇಕ ಪುಸ್ತಕಗಳನ್ನು ರೆಫರ್ ಮಾಡಿದರೆ, ಇನ್ನೂ ಕೆಲವರು ಕೇವಲ ಒಂದೇ ಒಂದು ಪುಸ್ತಕವನ್ನು ರೆಫರ್ ಮಾಡುವುದರ ಜೊತೆಗೆ ಪ್ರತಿದಿನ ದಿನಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ.


ಈ ಪರೀಕ್ಷೆ ಭಾರತದಲ್ಲಿಯೇ ಅತ್ಯಂತ ಕಠಿಣವಾದ ಪರೀಕ್ಷೆ ಆಗಿದ್ದರಿಂದ ಇದನ್ನು ಮೊದಲನೇ ಪ್ರಯತ್ನದಲ್ಲಿಯೇ ಅನೇಕರಿಗೆ ಪಾಸ್​​ ಮಾಡಲು ಆಗುವುದಿಲ್ಲ ಅಂತ ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತದೆ. ಇಲ್ಲಿ ಕೆಲ ಪ್ರತಿಭಾವಂತ ಐಎಎಸ್ ಅಧಿಕಾರಿಗಳು ತಮ್ಮ ಮೊದಲ ಪ್ರಯತ್ನದಲ್ಲಿಯೇ ಈ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ ನೋಡಿ.


ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಒಂದು ಉತ್ತಮವಾದ ಆಯ್ಕೆ, ಕಾರಣ ಇಲ್ಲಿದೆ ನೋಡಿ


ಭಾವನಾ ಗಾರ್ಗ್


ಭಾವನಾ ಗಾರ್ಗ್ ಅವರು 1999 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇದಕ್ಕೂ ಮೊದಲು ಅವರು ಐಐಟಿ ಕಾನ್ಪುರದಲ್ಲಿ ಎಂಜಿನಿಯರಿಂಗ್ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಪ್ರಸ್ತುತ, ಅವರು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ಎಂದರೆ ಯುಐಡಿಎಐ ನ ಡೆಪ್ಯೂಟಿ ಜನರಲ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಅಂಕುರ್ ಗಾರ್ಗ್


ಹರಿಯಾಣದ ಈ ಅಭ್ಯರ್ಥಿ 2002 ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದರು. ಅಂಕುರ್ ಆ ವರ್ಷ ಪರೀಕ್ಷೆಯನ್ನು ಪಾಸ್ ಮಾಡಿದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿಯಾಗಿದ್ದರು.


ಐಎಎಸ್ ಅಧಿಕಾರಿಯಾಗುವುದು ಅವರ ಬಾಲ್ಯದ ಕನಸಾಗಿತ್ತು ಮತ್ತು ಅಂಕುರ್ ಅವರು ಟಾಪ್ 10 ರ್ಯಾಂಕ್ ನಲ್ಲಿ ಸ್ಥಾನ ಪಡೆಯುತ್ತಾರೆ ಅನ್ನೋ ವಿಶ್ವಾಸ ಅವರಿಗೆ ಮೊದಲಿನಿಂದಲೂ ಇತ್ತಂತೆ.


ರೂಪಾ ಮಿಶ್ರಾ


ಮಧ್ಯಪ್ರದೇಶದ ರೂಪಾ ಮಿಶ್ರಾ ಅವರು 2003 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಈ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದ ಒಡಿಶಾದ ಮೊದಲ ಮಹಿಳೆ ಮತ್ತು ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ವಿವಾಹಿತ ಮಹಿಳೆ.


ಒಂದೇ ಪ್ರಯತ್ನದಲ್ಲಿ ಐಎಎಸ್​ ಎಕ್ಸಾಂ ಪಾಸ್​ ಆದವರು


ಪರೀಕ್ಷೆ ಬರೆಯುವ ಮೊದಲು, ಅವರು ಎಂಬಿಎ ಪೂರ್ಣಗೊಳಿಸಿದ್ದರು ಮತ್ತು ಪ್ರಸ್ತುತ ನವದೆಹಲಿಯಲ್ಲಿ ಜಲ ಶಕ್ತಿಗಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.


ಶಹಾ ಫೈಸಲ್


ಶಹಾ ಫೈಸಲ್ ಅವರು 2009 ರಲ್ಲಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಅಗ್ರಸ್ಥಾನ ಪಡೆದರು ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಈ ಸಾಧನೆ ಮಾಡಿದ ಮೊದಲಿಗರಾಗಿದ್ದಾರೆ. ಪ್ರಸ್ತುತ ಇವರು ಭಾರತೀಯ ಅಧಿಕಾರಿ ಭಾರತದ ಸಾಂಸ್ಕೃತಿಕ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಟೀನಾ ದಾಬಿ


ನವದೆಹಲಿಯ ಟೀನಾ ದಾಬಿ ಅವರು 2015 ರಲ್ಲಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದಲ್ಲಿ ಮೊದಲ ರ್ಯಾಂಕ್ ಪಡೆದು ಉತ್ತೀರ್ಣರಾದರು. ಪ್ರಸ್ತುತ ಅವರು ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಜಿಲ್ಲಾಧಿಕಾರಿ ಮತ್ತು ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.




ಕನಿಶಕ್ ಕಟಾರಿಯಾ


ರಾಜಸ್ಥಾನದ ಈ ಹುಡುಗ 2018 ರಲ್ಲಿ ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ನೊಂದಿಗೆ ಪಾಸ್ ಆದವರು. ಅದಕ್ಕೂ ಮೊದಲು ಅವರು ಐಐಟಿ ಬಾಂಬೆಯಿಂದ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು.

First published: