ಬೋರ್ಡ್ ಎಕ್ಸಾಮ್ ಫಲಿತಾಂಶಗಳು (Board Exam Results) ಪ್ರಕಟಗೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳು ಶಾಲಾ ಶಿಕ್ಷಣವನ್ನು ಪೂರೈಸಿ ಕಾಲೇಜುಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪ್ರವೇಶಿಸುತ್ತಾರೆ. ಇದರೊಂದಿಗೆ ವೃತ್ತಿಯ (Career) ಬಗ್ಗೆಯೂ ಕೆಲವೊಂದು ಗುರಿಗಳನ್ನು ಇಟ್ಟುಕೊಳ್ಳುವುದು ಹೆಚ್ಚುವರಿ ಕಲಿಕೆಗೆ ಸಹಾಯಕವಾಗಿದೆ. ಹಾಗಿದ್ದರೆ ವಿದ್ಯಾರ್ಥಿಗೆ ಯಾವ ವೃತ್ತಿ ಉತ್ತಮ ಮತ್ತು ಯಾವ ಕೋರ್ಸ್ (Professional Courses) ಒಳ್ಳೆಯದು ಎಂಬುದನ್ನು ನ್ಯೂಸ್ 18 ತಂಡ ಸಲಹೆ ನೀಡುತ್ತದೆ.
ಷೇರು ಮಾರುಕಟ್ಟೆ ಎಂಬುದು ಕಲಿಕೆಯ ಸಮಯದಲ್ಲಿ ನಿಧಾನವಾಗಿ ತಿಳಿದುಕೊಳ್ಳುವ ಒಂದು ಉತ್ತಮ ವೃತ್ತಿಯಾಗಿದ್ದು, ಇದರಲ್ಲಿ ಪಳಗುವ ಮೂಲಕ ವೃತ್ತಿಯನ್ನು ಪೂರ್ಣಾವಧಿಯಾಗಿಯೂ ಪರಿವರ್ತಿಸಿಕೊಳ್ಳಬಹುದಾಗಿದೆ.
ಷೇರು ಮಾರುಕಟ್ಟೆಯ ಜ್ಞಾನ ಅವಶ್ಯಕ
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ವೃದ್ಧಿಯಾಗುತ್ತದೆ ಎಂಬುದು ವಾಡಿಕೆಯಲ್ಲಿರುವ ಮಾತಾಗಿದೆ. ಆದರೆ ಷೇರು ಮಾರುಕಟ್ಟೆಯ ಬಗ್ಗೆ ಜ್ಞಾನ ಹೊಂದಿದವರಿಗೆ ಮಾತ್ರ ಇದು ಹೇಗೆ ಎಂಬುದು ತಿಳಿದಿರುತ್ತದೆ. ಷೇರು ಮಾರುಕಟ್ಟೆಯ ಒಳಹೊರಗನ್ನು ಬಲ್ಲವರು ಹಣ ಹೂಡಿಕೆ ಮಾಡಿ ಲಾಭವನ್ನು ಗಳಿಸುತ್ತಾರೆ.
ಷೇರುಮಾರುಕಟ್ಟೆಯಲ್ಲಿ ವ್ಯವಹಾರ
ವ್ಯವಹಾರದಲ್ಲಿ ಹಣವನ್ನು ಹೂಡಿಕೆ ಮಾಡಿದಾಗ ಮತ್ತು ಹಣವನ್ನು ಹೂಡಿಕೆ ಮಾಡುವ ವ್ಯಕ್ತಿಯೂ ಅದರಲ್ಲಿ ಗಳಿಸಿದ ಲಾಭದಲ್ಲಿ ಪಾಲು ಹೊಂದಿರುತ್ತಾನೆ. ಆ ಭಾಗವನ್ನು ಷೇರು ಎಂದು ಕರೆಯಲಾಗುತ್ತದೆ. ಈಗಾಗಲೇ ಚಾಲನೆಯಲ್ಲಿರುವ ಅಥವಾ ಹೊಸ ಕಂಪನಿಯ ಷೇರುಗಳನ್ನು ಖರೀದಿಸುವ ಯಾರಾದರೂ ಅದರ ಷೇರುದಾರರಾಗುತ್ತಾರೆ.
ಷೇರು ಮಾರುಕಟ್ಟೆಯ ಕಾರ್ಯನಿರ್ವಹಣೆ
ಕಂಪನಿಯ ಷೇರುಗಳನ್ನು ಮಾರಾಟ ಮಾಡುವ ಮತ್ತು ಖರೀದಿಸುವವರ ನಡುವೆ ಬ್ರೋಕರ್‌ಗಳು ಸಹ ಕೆಲಸ ಮಾಡುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡಲು, ಮೊದಲು ಆ ಕ್ಷೇತ್ರವನ್ನು ಅಧ್ಯಯನ ಮಾಡಬೇಕು. ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಯಾವ ಕೋರ್ಸ್‌ಗಳು ನಿಮಗೆ ಸಹಾಯ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ಸ್ಟಾಕ್ ಮಾರ್ಕೆಟ್‌ನಲ್ಲಿ ಡಿಪ್ಲೊಮಾ ಕೋರ್ಸ್:
ಈ ಕೋರ್ಸ್‌ನ ಅವಧಿ 12 ತಿಂಗಳುಗಳು. ವೃತ್ತಿ ಸಂಬಳ 25,000 ರಿಂದ 40,000 ರೂ. ಈ ಕೋರ್ಸ್ ಸೇರ್ಪಡೆ ಸಿದ್ಧಾಂತ, ಪ್ರಾಯೋಗಿಕ, ಮೂಲಭೂತ ಮತ್ತು ತಾಂತ್ರಿಕತೆಯನ್ನು ಕಲಿಸಲಾಗುತ್ತದೆ.
NSE ಅಕಾಡೆಮಿ: NSE ವಿವಿಧ ಪ್ರಮಾಣೀಕರಣ ಕಾರ್ಯಕ್ರಮಗಳನ್ನು ನೀಡುತ್ತದೆ. ಅವುಗಳ ವಿವರ ಹೀಗಿದೆ:
NSE ಅಕಾಡೆಮಿಯ ಸರ್ಟಿಫೈಡ್ ಮಾರ್ಕೆಟ್ ಪ್ರೊಫೆಷನಲ್ (NCMP),
ಹಣಕಾಸು ಮಾರುಕಟ್ಟೆಗಳಲ್ಲಿ NSE ಅಕಾಡೆಮಿ ಪ್ರಮಾಣೀಕರಣ - NCFM,
NCFM ಅಡಿಪಾಯ, ಮಧ್ಯಂತರ, ಮುಂದುವರಿದ ಕೋರ್ಸ್‌ಗಳು.
NSE FinBasic ಮತ್ತು 5- ಪ್ರಮಾಣೀಕೃತ ಮಾರುಕಟ್ಟೆ ವೃತ್ತಿಪರ NCMP
ಇದನ್ನೂ ಓದಿ: CMA Course ಮಾಡಿದ್ರೆ ಅಕೌಂಟಿಂಗ್ ಕ್ಷೇತ್ರದಲ್ಲಿ ದೊಡ್ಡ ಸಂಬಳದ ಉದ್ಯೋಗಗಳು ಸಿಗೋದು ಗ್ಯಾರೆಂಟಿ
BSE ಅಕಾಡೆಮಿ: ಇದು ಅನೇಕ ಕೋರ್ಸ್‌ಗಳನ್ನು ಸಹ ಒದಗಿಸುತ್ತದೆ. ವಿಶೇಷವಾಗಿ ಮಾರುಕಟ್ಟೆ ಹೂಡಿಕೆದಾರರು ಮತ್ತು ಮಾರುಕಟ್ಟೆಯ ಬಗ್ಗೆ ತಮ್ಮ ಜ್ಞಾನವನ್ನು ಮೆರುಗುಗೊಳಿಸಲು ಬಯಸುವವರಿಗೆ ಇಲ್ಲಿ ಕೋರ್ಸ್ ಒದಗಿಸಲಾಗಿದೆ. ಕೆಲವು ಪ್ರಮಾಣಪತ್ರ ಕೋರ್ಸ್‌ಗಳು ಹೀಗಿವೆ:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ