• Home
 • »
 • News
 • »
 • jobs
 • »
 • Employee Apps: ಉದ್ಯೋಗಿಗಳ ಬಳಿ ಈ 4 ಆ್ಯಪ್ಸ್ ಇರಲೇಬೇಕು; ಅರ್ಧದಷ್ಟು ಕೆಲಸ ಸುಲಭ ಆಗುತ್ತೆ

Employee Apps: ಉದ್ಯೋಗಿಗಳ ಬಳಿ ಈ 4 ಆ್ಯಪ್ಸ್ ಇರಲೇಬೇಕು; ಅರ್ಧದಷ್ಟು ಕೆಲಸ ಸುಲಭ ಆಗುತ್ತೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಪ್ರಮುಖ ನಿರ್ಧಾರಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಎಲ್ಲರಿಗೂ ತಿಳಿಸಲು ಇದು ಸಹಕಾರಿಯಾಗಿದೆ. ಸರಳವಾಗಿ ಹೇಳೋದಾದರೆ ಇವು ಕೆಲಸದ ವಾತಾವರಣದಲ್ಲಿ ಸಂವಹನಕ್ಕಾಗಿ ಬಳಸುವ ಒಂದು ರೀತಿಯ ಮೊಬೈಲ್ ಚಾನಲ್‌ಗಳಾಗಿವೆ.

 • Trending Desk
 • 3-MIN READ
 • Last Updated :
 • Share this:

  ಉದ್ಯೋಗಿಗಳು (Employees) ಈಗ ಅವರ ಕಂಪನಿಗೆ ಸಂಬಂಧಪಟ್ಟ ವೆಬ್‌ ಬ್ರೌಸರ್‌ನಲ್ಲೇ (Web Browser) ಕೆಲಸ ಮಾಡೋ ಕಾಲ ಹೊರಟುಹೋಗಿದೆ. ಉದ್ಯೋಗಿಗಳಿಗೆ ಎಲ್ಲಿಬೇಕಾದರೂ ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಲಿಕೇಶನ್‌ಗಳು (Mobile Apps) ಈಗ ಮೊಬೈಲ್‌ ಫೋನ್‌ನಲ್ಲೇ ಲಭ್ಯವಿವೆ. ಈ ಅಪ್ಲಿಕೇಶನ್‌ಗಳು ಕಂಪನಿಗಳು ತಮ್ಮ ಕೆಲಸಗಾರರನ್ನು ಪ್ರತಿದಿನ ನವೀಕೃತವಾಗಿರಿಸಲು ಅನುಮತಿಸುತ್ತದೆ.


  ಪ್ರಮುಖ ಕಾರ್ಪೊರೇಟ್ ನಿರ್ಧಾರಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಎಲ್ಲರಿಗೂ ತಿಳಿಸಲು ಇದು ಸಹಕಾರಿಯಾಗಿದೆ. ಸರಳವಾಗಿ ಹೇಳೋದಾದರೆ ಇವು ಕೆಲಸದ ವಾತಾವರಣದಲ್ಲಿ ಸಂವಹನಕ್ಕಾಗಿ ಬಳಸುವ ಒಂದು ರೀತಿಯ ಮೊಬೈಲ್ ಚಾನಲ್‌ಗಳಾಗಿವೆ.


  ಜಿಮೇಲ್‌, ಎಂಎಸ್‌ ಟೀಮ್‌, ಔಟ್‌ ಲುಕ್‌, ವೇಳಾಪಟ್ಟಿ ಹೀಗೆ ಹಲವು ಕೆಲಸಗಳನ್ನು ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ ಮೂಲಕ ಮಾಡಬಹುದು. ಉದ್ಯೋಗಿ ಅಪ್ಲಿಕೇಶನ್‌ನಲ್ಲಿ ಪ್ರತಿಯೊಬ್ಬರಿಗೂ ಅವರ ಸ್ಮಾರ್ಟ್‌ಫೋನ್ ಸಾಧನಗಳಲ್ಲಿ ಪ್ರವೇಶವನ್ನು ನೀಡಲಾಗುತ್ತದೆ ಮತ್ತು ಅವರು ಎಲ್ಲಿದ್ದರೂ ಎಲ್ಲಾ ಮಾಹಿತಿಯು ಲಭ್ಯವಿರುತ್ತದೆ.


  ಉದ್ಯೋಗಿ ಮೊಬೈಲ್ ಅಪ್ಲಿಕೇಶನ್‌ಗಳ ಪ್ರಯೋಜನ


  ಈ ಮೊಬೈಲ್ ಸಂವಹನಗಳ ಅಪ್ಲಿಕೇಶನ್ ಉದ್ಯೋಗಿ ಸಂಬಂಧಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಕೆಲಸದ ಉತ್ಪಾದಕತೆಯನ್ನೂ ಸಹ ಹೆಚ್ಚಿಸುತ್ತವೆ ಮುಖ್ಯವಾಗಿ ಉದ್ಯೋಗಿಗಳ ಸಮಯವನ್ನು ಉಳಿಸುತ್ತದೆ. ಸ್ಲಾಕ್, ಟ್ರೆಲ್ಲೊ ಮತ್ತು ಮೈಕ್ರೋಸಾಫ್ಟ್ ಟೀಮ್‌ನಂತಹ ಹಲವು ಅಪ್ಲಿಕೇಷನ್‌ಗಳು ಈಗಾಗ್ಲೇ ಉದ್ಯೋಗಿಗಳಿಗೆ ಲಭ್ಯವಿದ್ದು, ಅಂತೆಯೇ ಇನ್ನೂ ಕೆಲ ಜನಪ್ರಿಯ ಹೊಸ ಅಪ್ಲಿಕೇಶನ್‌ಗಳು ಉದ್ಯೋಗಿಗಳಿಗೆ ಲಭ್ಯವಿದೆ.
  ಈ ಅಪ್ಲಿಕೇಶನ್‌ಗಳು ಮನೆಯಲ್ಲಿ, ಕಚೇರಿಯಲ್ಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಉತ್ತಮ ಸಂಪನ್ಮೂಲಗಳಾಗಿವೆ. ಅತ್ಯಾಧುನಿಕ ಸಾಫ್ಟ್‌ವೇರ್ ಅನ್ನು ಬಳಸುವ ಮೂಲಕ ಕೆಲಸದ ಉತ್ಪಾದಕತೆಯನ್ನು ಉದ್ಯೋಗಿಗಳು ಹೆಚ್ಚಿಸಬಹುದಾಗಿದೆ.


  ಹಾಗಾದರೆ ನಾವಿಲ್ಲಿ ಹೊಸ 4 ಉದ್ಯೋಗಿ ಮೊಬೈಲ್ ಅಪ್ಲಿಕೇಶನ್‌ಗಳ ಬಗ್ಗೆ ತಿಳಿಯೋಣ.


  1) ಸ್ಕೆಡುಲೋ (skedulo)


  ಸ್ಕೆಡುಲೋ ಅಪ್ಲಿಕೇಶನ್ ಅನ್ನು ಡೆಸ್ಕ್‌ಲೆಸ್ ವರ್ಕ್‌ಫೋರ್ಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಡೆಲಿವರಿ ಬಾಯ್‌, ಚಿಲ್ಲರೆ ಕೆಲಸಗಾರರು, ಫೀಲ್ಡ್‌ ವರ್ಕರ್ಸ್‌, ಮನೆಯೊಳಗಿನ ಆರೈಕೆ ಕೆಲಸಗಾರರು ಮತ್ತು ವಾಣಿಜ್ಯ ಕ್ಲೀನರ್‌ಗಳನ್ನು ಸೇರಿ ಕೆಲ ಕೆಲಸಗಾರರಿಗೆ ಸಹಾಯ ಮಾಡಲು ಸ್ಕೆಡುಲೋ ಅನ್ನು ವಿನ್ಯಾಸಗೊಳಿಸಲಾಗಿದೆ. Android ಮತ್ತು iOS ಸಾಧನಗಳೆರಡನ್ನೂ ಬೆಂಬಲಿಸುವ ಅಪ್ಲಿಕೇಶನ್ ವೇಳಾಪಟ್ಟಿ, ಸಮಯ ನಿರ್ವಹಣೆ ಮತ್ತು ವಿಶ್ಲೇಷಣೆ ಮತ್ತು ಡೇಟಾ ವರದಿಗಾಗಿ ಒಂದೇ ವ್ಯವಸ್ಥೆಯನ್ನು ಬಳಸಲು ಕೆಲಸಗಾರರು ಮತ್ತು ವ್ಯವಸ್ಥಾಪಕರಿಗೆ ಅನುಮತಿಸುತ್ತದೆ.
  ಇಲ್ಲಿ ಕೆಲಸಗಾರರು ಹೊಸದಾಗಿ ನಿಯೋಜಿಸಲಾದ ಉದ್ಯೋಗಗಳನ್ನು ವೀಕ್ಷಿಸಬಹುದು, ಪ್ರವೇಶ ಮತ್ತು ವೇಳಾಪಟ್ಟಿಗಳನ್ನು ಹಂಚಿಕೊಳ್ಳಬಹುದು ಮತ್ತು ಪರಸ್ಪರ ಸಂದೇಶವನ್ನು ಕಳುಹಿಸಬಹುದು ಮತ್ತು ಸೈಟ್‌ನಲ್ಲಿ, ಕ್ಲೈಂಟ್ ವಿವರಗಳು ಮತ್ತು ಕಾರ್ಯ ಪಟ್ಟಿಗಳು ಕೆಲಸವನ್ನು ಪೂರ್ಣಗೊಳಿಸಲು ಅವರಿಗೆ ಸಹಾಯ ಮಾಡುತ್ತದೆ. ಅವರು ಆಫ್‌ಲೈನ್‌ನಲ್ಲಿದ್ದರೂ ಸಹ ಫೋಟೋಗಳು, ಸಹಿಗಳು, ಟಿಪ್ಪಣಿಗಳು ಮತ್ತು ಹೆಚ್ಚಿನದನ್ನು ಸೆರೆಹಿಡಿಯಲು ಮತ್ತು ಕಳುಹಿಸಲು ಅಪ್ಲಿಕೇಶನ್ ಸಹಾಯ ಮಾಡುತ್ತದೆ.
  ಈ ಅಪ್ಲಿಕೇಷನ್‌ ಬೆಲೆ ಮಾಹಿತಿಗಾಗಿ ನೀವು Skedulo ಅನ್ನು ಸಂಪರ್ಕಿಸಿ ತಿಳಿದುಕೊಳ್ಳಬೇಕಿದೆ..


  2) 15Five
  15ಫೈವ್‌ ಅಪ್ಲಿಕೇಷನ್ 2022 ರಲ್ಲಿ ಟಾಪ್‌ ಹತ್ತರಲ್ಲಿ ಇದ್ದ ಅಪ್ಲಿಕೇಶನ್. 15ಫೈವ್ ಅಪ್ಲಿಕೇಶನ್ ಮ್ಯಾನೇಜರ್‌ಗಳು ಮತ್ತು ಉದ್ಯೋಗಿಗಳನ್ನು ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲು ಸಂಪರ್ಕಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. 15ಫೈವ್ ವರದಿಗಳನ್ನು ಬರೆಯಲು ಪ್ರತಿ ವಾರ 15 ನಿಮಿಷಗಳನ್ನು ಮತ್ತು ಅವುಗಳನ್ನು ಓದಲು ಐದು ನಿಮಿಷಗಳನ್ನು ನೌಕರರು ಮೀಸಲಿಡಬೇಕು ಎಂದರ್ಥ. ಪ್ಯಾಟಗೋನಿಯಾ ಸಂಸ್ಥಾಪಕ ಯ್ವಾನ್ ಚೌನಾರ್ಡ್ ಮತ್ತು ಮಾಜಿ ಸುಂಡಿಯಾ ಸಿಇಒ ಬ್ರಾಡ್ ಒಬರ್‌ವಾಗರ್ ಈ ಅಭ್ಯಾಸವನ್ನು ಸ್ಥಾಪಿಸಿದವರಲ್ಲಿ ಮೊದಲಿಗರಾಗಿದ್ದರು.
  ಸ್ವಯಂ ವಿಮರ್ಶೆಗಳು ಮತ್ತು ಉದ್ಯೋಗಿಗಳಿಗೆ ತಮ್ಮ ಗೆಳೆಯರಿಂದ ನೈಜ-ಸಮಯದ ಪ್ರತಿಕ್ರಿಯೆಯನ್ನು ಕೋರಲು ಅವಕಾಶ ನೀಡುವ ಆಯ್ಕೆಯನ್ನು ಸಹ ಇದು ಒಳಗೊಂಡಿದೆ.


  15ಫೈವ್ ವ್ಯಾಪಾರ ಯೋಜನೆಗಳು ತಿಂಗಳಿಗೆ ಪ್ರತಿ ಬಳಕೆದಾರರಿಗೆ $‌ 8 ರಿಂದ ಪ್ರಾರಂಭವಾಗುತ್ತವೆ.


  Mobile Numerology if your Sim including 8 Number Luck


  3) ವೆನ್‌ ಐ ವರ್ಕ್‌ ( When I work)
  ವೆನ್‌ ಐ ವರ್ಕ್‌ ಉದ್ಯೋಗಿ ಮೊಬೈಲ್ ಅಪ್ಲಿಕೇಶನ್‌ 2020ರಲ್ಲಿ, ವೇಳಾಪಟ್ಟಿ, ಟೈಮ್ ಟ್ರ್ಯಾಕಿಂಗ್ ಮತ್ತು ಟೀಮ್ ಮೆಸೇಜಿಂಗ್ ಅಪ್ಲಿಕೇಶನ್‌ಗಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ʼವೆನ್‌ ಐ ವರ್ಕ್‌ʼ ಮೂಲಕ ಉದ್ಯೋಗಿಗಳು ತಮ್ಮ ವೇಳಾಪಟ್ಟಿಯನ್ನು ಸುಲಭವಾಗಿ ವೀಕ್ಷಿಸಬಹುದು, ಸಮಯವನ್ನು ವಿನಂತಿಸಬಹುದು, ಶಿಫ್ಟ್ ಗಳ ಬಗ್ಗೆ ತಿಳಿಯಬಹುದು ಮತ್ತು ಇತರ ಉದ್ಯೋಗಿಗಳ ಶಿಫ್ಟ್‌ಗಳನ್ನು ಸಹ ತಿಳಿಯಬಹುದು.
  ಉದ್ಯೋಗಿಗಳು ತಕ್ಷಣ ಶಿಫ್ಟ್‌ ಅನ್ನು ಬದಲಾಯಿಸಿದಲ್ಲಿ ಅದನ್ನು ಇದರಲ್ಲಿ ಹಾಕುವ ಮೂಲಕ ಎಲ್ಲರಿಗೂ ಶೀಘ್ರವೇ ಮಾಹಿತಿ ರವಾನೆಯಾಗುತ್ತದೆ. ʼವೆನ್‌ ಐ ವರ್ಕ್‌ʼ ನ ಮತ್ತೊಂದು ವಿಶೇಷತೆ ಎಂದರೆ ನಿಯೋಜಿಸಲಾದ ಕಾರ್ಯಗಳನ್ನು ಪರಿಶೀಲಿಸಬಹುದು ಮತ್ತು ವೈಯಕ್ತಿಕ ಫೋನ್ ಸಂಖ್ಯೆಗಳನ್ನು ಬಹಿರಂಗಪಡಿಸದೆಯೇ ಇತರ ತಂಡದ ಸದಸ್ಯರೊಂದಿಗೆ ಸಂವಹನ ಮಾಡಬಹುದು.


  ಉದ್ಯೋಗಿಗಳನ್ನು ತ್ವರಿತವಾಗಿ ಆನ್‌ಬೋರ್ಡ್ ಮಾಡಲು, ವೇಳಾಪಟ್ಟಿಗಳನ್ನು ರಚಿಸಲು ಮತ್ತು ಉದ್ಯೋಗಿ ವಿನಂತಿಗಳನ್ನು ನಿರ್ವಹಿಸಲು ವ್ಯವಸ್ಥಾಪಕರು ಅಪ್ಲಿಕೇಶನ್ ಅನ್ನು ಬಳಸಬಹುದು. ಸ್ವಯಂಚಾಲಿತ ವೇಳಾಪಟ್ಟಿಯು ಉದ್ಯೋಗಿ ಅರ್ಹತೆಗಳು, ಲಭ್ಯತೆ ಮತ್ತು ಶಿಫ್ಟ್ ಪ್ರಾಶಸ್ತ್ಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ, ಇದರಿಂದಾಗಿ ವೇಳಾಪಟ್ಟಿ, ಶಿಫ್ಟ್‌ ರಚಿಸುವ ತಾಪತ್ರಯ ವ್ಯವಸ್ಥಾಪಕರಿಗೆ ಇರುವುದಿಲ್ಲ.
  ʼವೆನ್‌ ಐ ವರ್ಕ್‌ʼ ಯೋಜನೆಗಳು ತಿಂಗಳಿಗೆ ಪ್ರತಿ ಬಳಕೆದಾರರಿಗೆ $2.50 ರಿಂದ ಪ್ರಾರಂಭವಾಗುತ್ತವೆ
  4) ಕ್ಲಿಕ್‌ಅಪ್ (ClickUp)
  ಗ್ರೂಪ್ ಚಾಟ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಮತ್ತು ಟಾಸ್ಕ್ ಪೂರ್ಣಗೊಳಿಸುವಿಕೆ ಸೇರಿದಂತೆ ಹೆಚ್ಚಿನ ಉತ್ಪಾದಕತೆಯ ಅಪ್ಲಿಕೇಶನ್‌ಗಳನ್ನು ಬದಲಿಸಲು ಕ್ಲಿಕ್‌ಅಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ನೀವೇನಾದರೂ Slack ಅಥವಾ Trello ನಂತಹ ಜನಪ್ರಿಯ ಸಾಧನಗಳನ್ನು ಹೊಂದಿದ್ದರೆ ನೀವು ಅವುಗಳನ್ನು ಕ್ಲಿಕ್‌ಅಪ್‌ನೊಂದಿಗೆ ಸಂಯೋಜಿಸಬಹುದು.


  ಕ್ಲಿಕ್‌ಅಪ್ ಪ್ರಾಜೆಕ್ಟ್ ಮತ್ತು ಟಾಸ್ಕ್ ಬೋರ್ಡ್‌ಗಳು, ಸಂಯೋಜಿತ ಚಾಟ್ ವೀಕ್ಷಣೆ ಮತ್ತು ಗುರಿಗಳು / ಪ್ರಗತಿ ಬೋರ್ಡ್ ಸೇರಿ ಬಹು ವೀಕ್ಷಣೆ ಪ್ರಕಾರಗಳನ್ನು ಬೆಂಬಲಿಸುತ್ತದೆ, ಇದರಿಂದಾಗಿ ಉದ್ಯೋಗಿಗಳು ಉತ್ತಮವಾದ ರೀತಿಯಲ್ಲಿ ಡೇಟಾವನ್ನು ವೀಕ್ಷಿಸಬಹುದು. ಕ್ಲಿಕ್‌ಅಪ್ ಬರವಣಿಗೆಯ ಅಪ್ಲಿಕೇಶನ್ ಅನ್ನು ಸಹ ಹೊಂದಿದೆ, ಆದ್ದರಿಂದ ಉದ್ಯೋಗಿಗಳು ಮಾರ್ಕೆಟಿಂಗ್ ಪ್ರಚಾರಕ್ಕಾಗಿ ತ್ವರಿತವಾಗಿ ನಕಲನ್ನು ರಚಿಸಬಹುದು.


  Is your mobile number 2 So let your life change Numerology


  ಕ್ಲಿಕ್‌ಅಪ್ ವೈಶಿಷ್ಟ್ಯಗಳು iOS, Android ಮತ್ತು ವೆಬ್ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿದೆ, ಆದ್ದರಿಂದ ಉದ್ಯೋಗಿಗಳು ಯಾವುದೇ ಸಾಧನದಲ್ಲಿ ಇದನ್ನು ಬಳಸಬಹುದು. ಪ್ಲಾಟ್‌ಫಾರ್ಮ್‌ಗಳಾದ್ಯಂತ ವೈಶಿಷ್ಟ್ಯಗಳು ಒಂದೇ ಆಗಿರುತ್ತವೆ ಮತ್ತು ಬಳಕೆದಾರರು ತಮ್ಮ ಫೋನ್‌ನಲ್ಲಿ ಅಥವಾ ವೆಬ್ ಮೂಲಕ ಅಪ್ಲಿಕೇಶನ್‌ಗೆ ಸೈನ್ ಇನ್ ಮಾಡಬಹುದು. ಕ್ಲಿಕ್‌ಅಪ್ ತಂಡ ಮತ್ತು ವ್ಯಾಪಾರ ಯೋಜನೆಗಳು ಪ್ರತಿ ಬಳಕೆದಾರರಿಗೆ ತಿಂಗಳಿಗೆ $5 ರಿಂದ ಪ್ರಾರಂಭವಾಗುತ್ತವೆ.

  Published by:Kavya V
  First published: