ಉದ್ಯೋಗ (Job) ವಿಷಯಕ್ಕೆ ಬಂದಾಗ ಹಿಂದೆಂದಿಗಿಂತಲೂ ಹೆಚ್ಚು ಸ್ಪರ್ಧೆ (Competition) ಈಗ ಇದೆ. ಕಾಂಪಿಟೇಷನ್ ಮಧ್ಯೆ ಒಳ್ಳೆಯ ಕೆಲಸ ಪಡೆಯುವುದು ಸುಲಭದ ಮಾತಲ್ಲ. ಬೇಗ ಒಳ್ಳೆಯ ಕೆಲಸ ಸಿಗಬೇಕು ಎಂದರೆ ಓದು ಒಂದೇ ಸಾಲದು. ಜೊತೆಗೆ ಕೌಶಲ್ಯಗಳನ್ನು (Skills) ಹೊಂದಿರುವ ಅಭ್ಯರ್ಥಿಗಳಿಗೆ ಕಂಪನಿಗಳು ಮಣೆ ಹಾಕುತ್ತವೆ. ಡಿಗ್ರಿ ಜೊತೆಗೆ ಕೆಲವೊಂದು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡುವುದು ನಿಮ್ಮನ್ನು ನಿಮ್ಮ ಕನಸಿನ ಉದ್ಯೋಗದತ್ತ ಕರೆದೊಯ್ಯುತ್ತದೆ. ಈ ಹಿನ್ನೆಲೆ ನಿಮಗಾಗಿ ಅಂತಹ 3 ಕೋರ್ಸ್‌ಗಳನ್ನು ತಂದಿದ್ದೇವೆ.
ನೀವು ಪದವೀಧರರಾಗಿದ್ದು ಖಾಸಗಿ ಕಂಪನಿಗಳು ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಕಂಪನಿಗಳು ವೃತ್ತಿಪರ ಕೋರ್ಸ್‌ನಲ್ಲಿ ಪದವಿ ಅಥವಾ ಡಿಪ್ಲೊಮಾ ಹೊಂದಿರುವವರಿಗೆ ಮಾತ್ರ ಉದ್ಯೋಗ ನೀಡುತ್ತಿರುವುದು ಇದರ ಹಿಂದಿನ ದೊಡ್ಡ ಕಾರಣವಾಗಿದೆ. ಹಾಗಾಗಿ ಆ 3 ಕೋರ್ಸ್‌ಗಳು ಯಾವುವು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
1) ವಿದೇಶಿ ಭಾಷಾ ಕೋರ್ಸ್
ಅನೇಕ ವಿದೇಶಿ ಕಂಪನಿಗಳು ಭಾರತದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿವೆ. ಅನೇಕ ದೇಶಗಳು ಇಲ್ಲಿ ತಮ್ಮ ವ್ಯಾಪಾರ ಘಟಕಗಳನ್ನು ಸ್ಥಾಪಿಸುತ್ತಿವೆ. ಉದಾಹರಣೆಗೆ, ಜಪಾನ್, ಕೊರಿಯಾ, ಚೀನಾ, ಜರ್ಮನಿ, ಸಿಂಗಾಪುರ್, ಸೌದಿ ಅರೇಬಿಯಾದಂತಹ ದೇಶಗಳ ಉದ್ಯಮಿಗಳು ಈಗ ಭಾರತದಲ್ಲಿ ವ್ಯಾಪಾರ ಮಾಡಲು ಬಯಸುತ್ತಾರೆ. ಈ ವಿದೇಶಿ ಕಂಪನಿಗಳು ಪದವಿಯ ಜೊತೆಗೆ ಈ ಎರಡು ದೇಶಗಳ ಭಾಷೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಯುವಕರನ್ನು ಹುಡುಕುತ್ತವೆ. ಅನುವಾದಕರಾಗಿ ಕೆಲಸ ಮಾಡುವವರನ್ನು ಕಂಪನಿ ಎದುರು ನೋಡುತ್ತೆ.
ನೀವು ಪದವಿಯನ್ನು ಮಾಡುತ್ತಿದ್ದರೆ, ಉತ್ತಮ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಕೋರ್ಸ್ ನಿಮಗೆ ಉತ್ತಮವಾಗಿರುತ್ತದೆ. ನೀವು ಕೆಲವು ವಿದೇಶಿ ಭಾಷೆಗಳನ್ನು ಕಲಿತರೆ ಒಳ್ಳೆಯ ಉದ್ಯೋಗವನ್ನು ಸುಲಭವಾಗಿ ಪಡೆಯಬಹುದು. ವಿದೇಶಿ ಭಾಷೆ ಕಲಿಯಲು ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಎರಡೂ ಮಾದರಿಯ ಕೋರ್ಸ್‌ಗಳು ಲಭ್ಯವಿದೆ. ಈ ಕೋರ್ಸ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್ ಮೂಲಕ ಮಾಡಬಹುದು.
2) ಆಫೀಸ್ ಮ್ಯಾನೇಜ್‌ಮೆಂಟ್
ಆಫೀಸ್ ಮ್ಯಾನೇಜ್ ಮೆಂಟ್ ಗೊತ್ತಿದ್ದರೆ ನೀವು ಹಣ ಮತ್ತು ಪ್ರತಿಷ್ಠೆ ಎರಡನ್ನೂ ಗಳಿಸಬಹುದು. ಪದವಿಯ ಜೊತೆಗೆ, ನೀವು ಕಚೇರಿ ನಿರ್ವಹಣೆಯಲ್ಲಿ ಪ್ರಮಾಣಪತ್ರ ಕೋರ್ಸ್ ಮಾಡಬಹುದು. ಈ ಕೋರ್ಸ್ ಎರಡು ವಿಧವಾಗಿದೆ. ಒಂದು 6 ತಿಂಗಳು ಮತ್ತು ಇನ್ನೊಂದು 1 ವರ್ಷ. ಭಾರತದಲ್ಲಿ ಈ ಕೋರ್ಸ್ ಅನ್ನು ನೀಡುವ ಅನೇಕ ಆಫ್‌ಲೈನ್ ಮತ್ತು ಆನ್‌ಲೈನ್ ಸಂಸ್ಥೆಗಳಿವೆ. ಈ ಕೋರ್ಸ್‌ನ ಶುಲ್ಕವೂ ಹೆಚ್ಚಿಲ್ಲ. ಆದ್ದರಿಂದ ನೀವು ಪದವಿ ಮುಗಿದ ನಂತರ ಆಫೀಸ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಬಹುದು.
3) ಪರ್ಸನಾಲಿಟಿ ಡೆವಲೆಪ್ಮೆಂಟ್ ಕೋರ್ಸ್
ಸರ್ಕಾರಿ ನೌಕರಿಯಾಗಲಿ ಅಥವಾ ಖಾಸಗಿ ಉದ್ಯೋಗವಾಗಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವ್ಯಕ್ತಿತ್ವದ ಕಡೆಗೆ ಗಮನ ಹರಿಸಬೇಕು. ನೀವು ಪ್ರಸ್ತುತ ಪದವಿಯಲ್ಲಿದ್ದರೆ, ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ಪಡೆಯುವ ಆಸೆಯಿದ್ದರೆ ಈ ಕೋರ್ಸ್ ನಿಮಗೆ ಸೂಕ್ತವಾಗಿದೆ. ಪದವಿಯ ಜೊತೆಗೆ ವ್ಯಕ್ತಿತ್ವ ವಿಕಸನದಲ್ಲಿ ಸರ್ಟಿಫಿಕೇಟ್ ಅಥವಾ ಡಿಪ್ಲೊಮಾ ಕೋರ್ಸ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ