• ಹೋಂ
 • »
 • ನ್ಯೂಸ್
 • »
 • Jobs
 • »
 • Future Careers: 10 ವರ್ಷಗಳ ಬಳಿಕವೂ ಬೇಡಿಕೆಯಲ್ಲಿ ಉಳಿಯುವ 15 ವೃತ್ತಿಗಳಿವು; ಈ ಉದ್ಯೋಗಗಳು ನಿಜಕ್ಕೂ ಸೇಫ್

Future Careers: 10 ವರ್ಷಗಳ ಬಳಿಕವೂ ಬೇಡಿಕೆಯಲ್ಲಿ ಉಳಿಯುವ 15 ವೃತ್ತಿಗಳಿವು; ಈ ಉದ್ಯೋಗಗಳು ನಿಜಕ್ಕೂ ಸೇಫ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಯಾವ ವೃತ್ತಿ ಆಯ್ಕೆ ಮಾಡಿಕೊಂಡರೆ ಭವಿಷ್ಯವಿದೆ ಎಂಬುದನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಭವಿಷ್ಯದ ಉನ್ನತ ಉದ್ಯೋಗಗಳನ್ನು ಊಹಿಸಲು ಕಷ್ಟವಾಗಿದ್ದರೂ, ಬೆಳವಣಿಗೆ ಹೊಂದಬಹುದಾದ ಕೌಶಲ್ಯಗಳನ್ನು (Skills) ಗುರುತಿಸಬಹುದು.

 • Trending Desk
 • 3-MIN READ
 • Last Updated :
 • Share this:

  ಇದು ತಂತ್ರಜ್ಞಾನದ (Technology) ಯುಗ. ಈ ತಂತ್ರಜ್ಞಾನವು ನಿರೀಕ್ಷೆಗೂ ಮೀರಿ ಇಂದು ಜಗತ್ತನ್ನು ಆವರಿಸಿಕೊಳ್ಳುತ್ತಿದೆ. ಕಳೆದ 10 ವರ್ಷಗಳ ಹಿಂದೆ ಕಲ್ಪನೆಗೂ ಮೀರಿದ ವಿಷಯಗಳು ಇಂದು ತೀರಾ ಸಾಮಾನ್ಯ ಎನ್ನುವಂತಾಗಿದೆ. ಇನ್ನು ಓದು, ಉದ್ಯೋಗ (Job), ವೃತ್ತಿ (Career) ಆಯ್ಕೆಯಲ್ಲಿ ನಾವು ಹೆಚ್ಚು ಜಾಗರೂಕರಾಗಿರಬೇಕು. ಯಾವ ಕ್ಷೇತ್ರಕ್ಕೆ ಹೆಚ್ಚು ಬೇಡಿಕೆಯಿದೆ. ಯಾವ ವೃತ್ತಿ ಆಯ್ಕೆ ಮಾಡಿಕೊಂಡರೆ ಭವಿಷ್ಯವಿದೆ ಎಂಬುದನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಭವಿಷ್ಯದ ಉನ್ನತ ಉದ್ಯೋಗಗಳನ್ನು ಊಹಿಸಲು ಕಷ್ಟವಾಗಿದ್ದರೂ, ಬೆಳವಣಿಗೆ ಹೊಂದಬಹುದಾದ ಕೌಶಲ್ಯಗಳನ್ನು (Skills) ಗುರುತಿಸಬಹುದು.


  ಈ ಬಗ್ಗೆ ಬ್ರೂಸ್ ಆಂಡರ್ಸನ್, ಲಿಂಕ್ಡ್‌ಇನ್‌ಗಾಗಿ ಬರೆಯುತ್ತಾ, ನೇಮಕಾತಿಯ ಭವಿಷ್ಯ ಹೇಗಿರುತ್ತದೆ ಎಂಬುದನ್ನು ವಿವರಿಸಿದ್ದಾರೆ. ಆ ಪ್ರಕಾರ ಭವಿಷ್ಯದಲ್ಲಿ ಬೇಡಿಕೆ ಹೆಚ್ಚಾಗಬಹುದಾದ ವೃತ್ತಿಗಳು ಹೀಗಿವೆ ನೋಡಿ.


  1. ಅಂಗ ಸೃಷ್ಟಿಕರ್ತ ಅಥವಾ ಆರ್ಗನ್‌ ಕ್ರಿಯೇಟರ್‌ : ಅಂಗಗಳ ಸೃಷ್ಟಿಕರ್ತನ ಕೆಲಸವು ಕಸಿ ಮಾಡಲು ಬಳಸುವ ಅಂಗಗಳನ್ನು ವಿನ್ಯಾಸಗೊಳಿಸುವುದು, ಮುದ್ರಿಸುವುದು ಮತ್ತು ಪರೀಕ್ಷಿಸುವುದಾಗಿದೆ. ಇದಕ್ಕೆ ಅಂಗಾಂಶ ಇಂಜಿನಿಯರಿಂಗ್, 3D ಮುದ್ರಣ ಮತ್ತು ವೈದ್ಯಕೀಯ ಸಂಶೋಧನೆಯಲ್ಲಿ ಉನ್ನತ ಮಟ್ಟದ ಪರಿಣತಿಯ ಅಗತ್ಯವಿರುತ್ತದೆ.


  ಜೊತೆಗೆ ಅಂಗಗಳ ಅಭಿವೃದ್ಧಿಯಲ್ಲಿನ ಸಂಕೀರ್ಣ ಜೈವಿಕ ಮತ್ತು ಶಾರೀರಿಕ ಪ್ರಕ್ರಿಯೆಗಳ ಸಂಪೂರ್ಣ ತಿಳುವಳಿಕೆ ಅಗತ್ಯವಿರುತ್ತದೆ. ಆದ್ರೆ ಭವಿಷ್ಯದಲ್ಲಿ ಆರ್ಗನ್ ಕ್ರಿಯೇಟರ್ ಕೆಲಸವು ಇನ್ನೂ ಊಹಾತ್ಮಕವಾಗಿದ್ದರೂ, ಈ ಪರಿಣತಿಗೆ ಮುಂದೆ ಬೇಡಿಕೆಯು ಹೆಚ್ಚಾಗಬಹುದು ಎನ್ನಲಾಗುತ್ತದೆ.


  2. ಭೂಕಂಪದ ಮುನ್ಸೂಚಕರು: ಪ್ರಪಂಚದ ಅನೇಕ ದೇಶಗಳು ಭೂಕಂಪಗಳಿಗೆ ಒಳಗಾಗುತ್ತವೆ. ಇದು ಭೂಕಂಪದ ಮೇಲ್ವಿಚಾರಣೆ, ಅಪಾಯದ ಮೌಲ್ಯಮಾಪನ ಮತ್ತು ವಿಪತ್ತು ಯೋಜನೆಗಳ ಮೇಲೆ ಕೇಂದ್ರೀಕರಿಸಿದ ಸ್ಥಾನಗಳು ಸೇರಿದಂತೆ ಭೂಕಂಪದ ಸಂಶೋಧನೆ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳಿಗೆ ಕಾರಣವಾಗಬಹುದು.


  ಯಾವುದೇ ಸ್ಪಷ್ಟ ಮಾದರಿಯ ಕೊರತೆಯಿಂದಾಗಿ ವಿಶ್ವಾಸಾರ್ಹ ಭೂಕಂಪದ ಮುನ್ಸೂಚನೆ ಹೆಚ್ಚು ನಿಖರವಾಗಿಲ್ಲ. ಆದಾಗ್ಯೂ, ಬಿಗ್‌ ಡೇಟಾ ಮತ್ತು ಕೃತಕ ಬುದ್ಧಿಮತ್ತೆಗಳು ಇದನ್ನು ಸುಧಾರಿಸಲು ಸಹಾಯ ಮಾಡುತ್ತದೆ.


  Earthquake of magnitude 1 point 8 hits Kodagu mrq
  ಸಾಂದರ್ಭಿಕ ಚಿತ್ರ


  ಈ ಸಮಯದಲ್ಲಿ "ಭೂಕಂಪನ ಮುನ್ಸೂಚಕ" ಕೆಲಸವು ಪರಿಪೂರ್ಣ ವೃತ್ತಿಯಾಗಿ ರೂಪುಗೊಂಡಿಲ್ಲವಾದರೂ ಭೂಕಂಪಗಳ ಅಧ್ಯಯನ ಮತ್ತು ಭೂಕಂಪ ಶಾಸ್ತ್ರಜ್ಞರ ಕೆಲಸವು ಪ್ರಮುಖ ಕ್ಷೇತ್ರವಾಗಿದೆ. ಕಂಪನಗಳ ಅಪಾಯವು ಗುರುತಿಸುವಂಥ ತಜ್ಞರ ಬೇಡಿಕೆ ಹೆಚ್ಚುವ ನಿರೀಕ್ಷೆಯಿದೆ.


  3. ಮಾನಸಿಕ ಆರೋಗ್ಯ ವೃತ್ತಿಪರರು: ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯ ಅರಿವು ಬೆಳೆದಂತೆ, ಮಾನಸಿಕ ಆರೋಗ್ಯದ ಚಿಕಿತ್ಸಕರು, ಸಲಹೆಗಾರರು, ಸಾಮಾಜಿಕ ಕಾರ್ಯಕರ್ತರ ಅಗತ್ಯವು ಬೆಳೆಯುತ್ತದೆ. ಪರಿಣಾಮವಾಗಿ, ಹೆಚ್ಚಿನ ಜನರು ತಮ್ಮ ಮಾನಸಿಕ ಆರೋಗ್ಯ ಕಾಳಜಿಗಾಗಿ ಮಾನಸಿಕ ಆರೋಗ್ಯ ಸೇವೆಗಳನ್ನು ಹುಡುಕುತ್ತಿದ್ದಾರೆ.


  ಆಧುನಿಕ ಜೀವನವು ಹಲವರಿಗೆ ಕಷ್ಟದ್ದಾಗಿದೆ. ಅಂಥವರು ಒತ್ತಡ ಮತ್ತು ಆಘಾತ ಅನುಭವಿಸುತ್ತಾರೆ. ಆದ್ದರಿಂದ ಇಂತಹ ಮಾನಸಿಕ ಒತ್ತಡ ನಿಭಾಯಿಸಲು ಮತ್ತು ಚೇತರಿಸಿಕೊಳ್ಳಲು ಸಹಾಯ ಮಾಡುವಂಥ ಮಾನಸಿಕ ಆರೋಗ್ಯ ವೃತ್ತಿಪರರ ಅಗತ್ಯವಿದೆ.


  ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡುತ್ತಿರುವುದರಿಂದ ಹೆಚ್ಚಿನ ಜನರು ಚಿಕಿತ್ಸೆ ಮತ್ತು ಸೇವೆಗಳನ್ನು ಪಡೆಯುತ್ತಿದ್ದಾರೆ.


  4. ನವೀಕರಿಸಬಹುದಾದ ಇಂಧನ ತಂತ್ರಜ್ಞರು, ಎಂಜಿನಿಯರ್‌ಗಳು: COVID-19 ಸಾಂಕ್ರಾಮಿಕವು ನವೀಕರಿಸಬಹುದಾದ ಇಂಧನ ಉದ್ಯೋಗಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ ಎನ್ನಬಹುದು. ನವೀಕರಿಸಬಹುದಾದ ಇಂಧನ ಕ್ಷೇತ್ರವು ಮುಂಬರುವ ವರ್ಷಗಳಲ್ಲಿ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ.


  ಇದು ಸೌರ ಮತ್ತು ಪವನ ಶಕ್ತಿ, ಜೈವಿಕ ಶಕ್ತಿ, ಜಲವಿದ್ಯುತ್ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿಗೆ ಕಾರಣವಾಗುತ್ತದೆ. ಅಬುಧಾಬಿ ಮೂಲದ ಇಂಟರ್ನ್ಯಾಷನಲ್ ರಿನ್ಯೂವಬಲ್ ಎನರ್ಜಿ ಏಜೆನ್ಸಿ (IRENA) ಪ್ರಕಾರ, 2010 ರಿಂದ ನವೀಕರಿಸಬಹುದಾದ ಇಂಧನ ಉದ್ಯೋಗಗಳು ಸ್ಥಿರವಾಗಿ ಬೆಳೆಯುತ್ತಿವೆ.


  top 7 Highest Paying engineering jobs


  5. ಡೇಟಾ ವಿಶ್ಲೇಷಕರು ಮತ್ತು ವಿಜ್ಞಾನಿಗಳು: "ಬಿಗ್‌ ಡೇಟಾ" ನಮ್ಮ ಆಧುನಿಕ ಡಿಜಿಟಲ್ ಚಾಲಿತ ಜೀವನದ ಸತ್ಯವಾಗಿದೆ ಎಂದರೆ ತಪ್ಪಾಗುವುದಿಲ್ಲ. ತಂತ್ರಜ್ಞಾನದ ಪ್ರಸರಣ ಮತ್ತು ವ್ಯವಹಾರಗಳ ಡಿಜಿಟಲೀಕರಣದೊಂದಿಗೆ, ಡೇಟಾಗಳು ನಿರಂತರವಾಗಿ ಹೆಚ್ಚುತ್ತಿವೆ. ಹೀಗಾಗಿ "ಬಿಗ್‌ ಡೇಟಾ"ವನ್ನು ವಿಶ್ಲೇಷಿಸುವ ಮತ್ತು ಅರ್ಥ ಮಾಡಿಕೊಳ್ಳುವ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗಿದೆ.


  ಗ್ರಾಹಕರ ನಡವಳಿಕೆ, ಮಾರುಕಟ್ಟೆ ಪ್ರವೃತ್ತಿಗಳು ಮತ್ತು ಕಾರ್ಯಾಚರಣೆಗಳ ಒಳನೋಟಗಳನ್ನು ಪಡೆಯಲು ಮುಂತಾದವುಗಳಿಗಾಗಿ ಡೇಟಾ ವಿಶ್ಲೇಷಣೆಯು ನಿರ್ಣಾಯಕವಾಗಿದೆ. ಹೀಗಾಗಿ ಡೇಟಾದಿಂದ ಅಮೂಲ್ಯವಾದ ಒಳನೋಟಗಳನ್ನು ಹೊರತೆಗೆಯಬಲ್ಲ ವೃತ್ತಿಪರರಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ.


  6. AI ಮತ್ತು ಮಶಿನ್‌ ಲರ್ನಿಂಗ್‌ ಸ್ಪೆಷಲಿಸ್ಟ್: ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ತಜ್ಞರು ಹೆಚ್ಚಿನ ಬೇಡಿಕೆ ಹೊಂದಿದ್ದಾರೆ. ಏಕೆಂದರೆ ಹೆಚ್ಚು ಹೆಚ್ಚು ಸಂಸ್ಥೆಗಳು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮತ್ತು ಮಶಿನ್‌ ಲರ್ನಿಂಗ್‌ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸಲು, ದಕ್ಷತೆಯನ್ನು ಸುಧಾರಿಸಲು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಅಳವಡಿಸಿಕೊಳ್ಳುತ್ತವೆ.ನೈಸರ್ಗಿಕ ಭಾಷಾ ಸಂಸ್ಕರಣೆ ಸೇರಿದಂತೆ ಹೆಚ್ಚಿನ ಕೌಶಲ್ಯಗಳು ಇದಕ್ಕೆ ಅಗತ್ಯವಾಗಿರುತ್ತವೆ.


  ಇನ್ನು ಸದ್ಯ, ಅರ್ಹ AI ಮತ್ತು ML ತಜ್ಞರ ಕೊರತೆಯಿದೆ. ಇದು ಹೆಚ್ಚಿನ ಬೇಡಿಕೆ ಮತ್ತು ಸ್ಪರ್ಧಾತ್ಮಕ ಸಂಬಳಕ್ಕೆ ಕಾರಣವಾಗುತ್ತಿದೆ. ಇದರಿಂದ ಈ ಕ್ಷೇತ್ರದ ಪರಿಣಿತರು ವೆಚ್ಚ ಉಳಿತಾಯ, ಹೆಚ್ಚಿದ ಆದಾಯ ಮತ್ತು ಸುಧಾರಿತ ಗ್ರಾಹಕರ ಅನುಭವಗಳ ಮುಂತಾದ ಪ್ರಯೋಜನಗಳನ್ನು ಪಡೆಯಬಹುದು.


  ಇದನ್ನೂ ಓದಿ: Highest Paying Jobs: ಎಲ್ಲಾ ಇಂಜಿನಿಯರ್​ಗಳಿಗೂ ಬೇಡಿಕೆ ಇಲ್ಲ, ಈ ವಿಭಾಗದಲ್ಲಿ ಓದಿದವರಿಗೆ ಮಾತ್ರ ದೊಡ್ಡ ಸಂಬಳದ ಉದ್ಯೋಗ


  7. ಸಾಫ್ಟ್‌ವೇರ್‌ ಡೆವಲಪರ್‌ಗಳು, ಪ್ರೋಗ್ರಾಮರ್‌ಗಳು : ಹೆಚ್ಚು ಹೆಚ್ಚು ವ್ಯವಹಾರಗಳು ತಮ್ಮ ಕಾರ್ಯಾಚರಣೆಗಳನ್ನು ಡಿಜಿಟೈಸ್ ಮಾಡಿದಂತೆ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ದಾಸ್ತಾನು ನಿರ್ವಹಣಾ ವ್ಯವಸ್ಥೆಗಳವರೆಗೆ ಆ ಕಾರ್ಯಾಚರಣೆಗಳನ್ನು ಬೆಂಬಲಿಸಲು ಸಾಫ್ಟ್‌ವೇರ್‌ಗೆ ಬೇಡಿಕೆ ಹೆಚ್ಚುತ್ತಿದೆ.


  ಮೊಬೈಲ್ ಸಾಧನಗಳು ಮತ್ತು ಅಪ್ಲಿಕೇಶನ್‌ಗಳ ಪ್ರಸರಣವು iOS ಮತ್ತು Android ಪ್ಲಾಟ್‌ಫಾರ್ಮ್‌ಗಳಿಗೆ ಮೊಬೈಲ್ ಆಪ್‌ ರಚಿಸುವ ಡೆವಲಪರ್‌ಗಳಿಗೆ ಬೇಡಿಕೆಗೆ ಕಾರಣವಾಗಿದೆ.


  NIT Karnataka Recruitment 2023 apply for network engineer posts
  ಸಾಂದರ್ಭಿಕ ಚಿತ್ರ


  ಸಂಪರ್ಕಿತ ಸಾಧನಗಳು ಮತ್ತು ನೆಟ್‌ವರ್ಕ್‌ಗಳಿಗಾಗಿ ಸಾಫ್ಟ್‌ವೇರ್ ಅನ್ನು ನಿರ್ಮಿಸುವ ಮತ್ತು ಸಂಯೋಜಿಸುವ ಡೆವಲಪರ್‌ಗಳ ಬೇಡಿಕೆಗೆ ಕಾರಣವಾಗುತ್ತದೆ.


  8. ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸಾಮಾಜಿಕ ಮಾಧ್ಯಮ ತಜ್ಞರು: ಡಿಜಿಟಲ್ ಚಾನೆಲ್‌ಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆಯಿಂದಾಗಿ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸಾಮಾಜಿಕ ಮಾಧ್ಯಮ ವಿಶೇಷ ಉದ್ಯೋಗಗಳು ಬೇಡಿಕೆಯಲ್ಲಿವೆ. ಅದೇ ಸಮಯದಲ್ಲಿ, ಗ್ರಾಹಕರು ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿರುವುದೂ ಇದಕ್ಕೆ ಕಾರಣವಾಗಿದೆ.


  ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಸಂಖ್ಯೆ ಹೆಚ್ಚಾದಂತೆ, ಒಂದು ಪ್ರಮುಖ ಪ್ರಯೋಜನವೆಂದರೆ DM/SM ಪ್ರಚಾರಗಳನ್ನು ತತ್‌ಕ್ಷಣದಲ್ಲಿ ಅಳೆಯಬಹುದು ಮತ್ತು ವಿಶ್ಲೇಷಿಸಬಹುದು. ಇದು ವ್ಯವಹಾರಗಳು ಮತ್ತು ಸಂಸ್ಥೆಗಳಿಗೆ ನೈಜ ಸಮಯದಲ್ಲಿ ತಮ್ಮ ಕಾರ್ಯತಂತ್ರಗಳನ್ನು ಆಪ್ಟಿಮೈಸ್ ಮಾಡಲು ಅನುಮತಿ ನೀಡುತ್ತದೆ.


  9. ಗ್ರಾಹಕ ಸೇವಾ ಪ್ರತಿನಿಧಿಗಳು ಮತ್ತು ಅನುಭವ ನಿರ್ವಾಹಕರು: ಗ್ರಾಹಕರ ತೃಪ್ತಿ ಅನ್ನೋದು ವ್ಯಾಪಾರ - ವ್ಯವಹಾರದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಇದಕ್ಕಾಗಿ ಅತ್ಯುತ್ತಮ ಗ್ರಾಹಕ ಸೇವೆ ಮತ್ತು ಅನುಭವಗಳನ್ನು ಒದಗಿಸುವುದು ಗ್ರಾಹಕ ನಿರ್ಣಾಯಕವಾಗಿದೆ. ಇದು ದೀರ್ಘಾವಧಿಯ ವ್ಯಾಪಾರ ಯಶಸ್ಸಿಗೆ ಕಾರಣವಾಗುತ್ತದೆ.


  ಹೆಚ್ಚು ಮುಖ್ಯವಾಗಿ, ಉತ್ತಮ ಗ್ರಾಹಕ ಸೇವೆ ಮತ್ತು ಅನುಭವಗಳು ಗ್ರಾಹಕರು ಹೆಚ್ಚಾಗಲು ಕಾರಣವಾಗಬಹುದು. ಇದು ಕಾಲಾನಂತರದಲ್ಲಿ ಆದಾಯವನ್ನು ಹೆಚ್ಚಿಸುತ್ತದೆ. ಸಕಾರಾತ್ಮಕ ಗ್ರಾಹಕ ಸೇವಾ ಅನುಭವವು ಹೆಚ್ಚಿದ ಮಾರಾಟ ಮತ್ತು ಆದಾಯಕ್ಕೆ ಕಾರಣವಾಗಬಹುದು. ಏಕೆಂದರೆ ತೃಪ್ತ ಗ್ರಾಹಕರು ಮತ್ತೆ ಮತ್ತೆ ಖರೀದಿ ಮಾಡುತ್ತಾರೆ.


  ಹಾಗೆಯೇ ಬೇರೆಯವರಿಗೂ ಶಿಫಾರಸು ಮಾಡುತ್ತಾರೆ. ಸ್ಪರ್ಧಾತ್ಮಕ ಉದ್ಯಮಗಳಲ್ಲಿ ಅತ್ಯುತ್ತಮ ಗ್ರಾಹಕ ಸೇವೆ ಮತ್ತು ಅನುಭವಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.


  10. ಸುಸ್ಥಿರ ಕೃಷಿ ಮತ್ತು ಆಹಾರ ಉತ್ಪಾದನಾ ತಜ್ಞರು: ಜಾಗತಿಕ ಜನಸಂಖ್ಯೆಯು ಹೆಚ್ಚಾದಂತೆ ಆಹಾರದ ಬೇಡಿಕೆಯು ಹೆಚ್ಚಾಗುತ್ತದೆ. ಸದಾ ಹೆಚ್ಚಿನ ಬೇಡಿಕೆಯನ್ನು ಸಮರ್ಥವಾಗಿ ಮತ್ತು ಜವಾಬ್ದಾರಿಯುತವಾಗಿ ಪೂರೈಸಲು ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಜನರ ಅಗತ್ಯವಿರುತ್ತದೆ.
  ಹವಾಮಾನ ಬದಲಾವಣೆಯನ್ನು ಗಮನಿಸಿದರೆ, ದೀರ್ಘಕಾಲೀನ ಆಹಾರ ಉತ್ಪಾದನೆಯನ್ನು ಮಾಡಲು ಮತ್ತು ಪರಿಸರವನ್ನು ರಕ್ಷಿಸಲು ಸುಸ್ಥಿರ ಕೃಷಿ ಪದ್ಧತಿಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ.


  ಇಂದು ಗ್ರಾಹಕರು ತಮ್ಮ ಆಹಾರದ ಆಯ್ಕೆಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ. ಹೆಚ್ಚು ಸುಸ್ಥಿರವಾದ, ಸಾವಯವ ಮೂಲವನ್ನು ಹುಡುಕುತ್ತಿದ್ದಾರೆ. ಏತನ್ಮಧ್ಯೆ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿನ ಪ್ರಗತಿಗಳು ಸುಸ್ಥಿರ ಕೃಷಿ ಪದ್ಧತಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ.


  ಉದಾಹರಣೆಗೆ ನಿಖರವಾದ ಕೃಷಿ, ಲಂಬ ಕೃಷಿ ಮತ್ತು ಪುನರುತ್ಪಾದಕ ಕೃಷಿ. ಇನ್ನು, ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಮತ್ತು ಆಹಾರ ಉತ್ಪಾದನೆಯ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸರ್ಕಾರಗಳು ಮತ್ತು ಸಂಸ್ಥೆಗಳು ನೀತಿ-ನಿಬಂಧನೆಗಳನ್ನು ಜಾರಿಗೆ ತರುತ್ತಿವೆ.


  11. ಶಿಕ್ಷಣ ಮತ್ತು ತರಬೇತಿ ವೃತ್ತಿಪರರು: ಶಿಕ್ಷಕರು, ತರಬೇತುದಾರರ ಬೇಡಿಕೆಯು ಹೆಚ್ಚಾಗುತ್ತಿದೆ. ಇಂದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕೌಶಲ್ಯ ಮತ್ತು ಜ್ಞಾನವನ್ನು ಪಡೆದುಕೊಳ್ಳುವ ಅಗತ್ಯ ಹೆಚ್ಚಾಗಿದೆ.


  ಇದಕ್ಕಾಗಿ ಶಿಕ್ಷಣ ತಜ್ಞರು ಮತ್ತು ತರಬೇತುದಾರರಿಗೆ ಈ ಅಗತ್ಯಗಳನ್ನು ಪೂರೈಸುವ ತರಬೇತಿ ಕಾರ್ಯಕ್ರಮ ನೀಡುವುದೂ ಅಷ್ಟೇ ಮುಖ್ಯವಾಗಿದೆ. ಜಾಗತಿಕ ಜನಸಂಖ್ಯೆಯು ಬೆಳೆಯುತ್ತಿದೆ ಮತ್ತು ಅದರೊಂದಿಗೆ ಶಿಕ್ಷಣ ಮತ್ತು ತರಬೇತಿಯ ಬೇಡಿಕೆ ಕೂಡ ಹೆಚಾಗುತ್ತಿದೆ.


  ಉದ್ಯೋಗ ಮಾರುಕಟ್ಟೆಗೆ ತಯಾರಾಗಲು ಹೆಚ್ಚಿನ ಜನರು ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಬಯಸುತ್ತಾರೆ. ಕಲಿಕೆಗೆ ಅನುಕೂಲವಾಗುವಂತೆ ಶಿಕ್ಷಕರು ಮತ್ತು ತರಬೇತುದಾರರ ಅವಶ್ಯಕತೆಯೂ ಹೆಚ್ಚಿರುತ್ತದೆ.


  Shishuniketan Sainink School Recruitment 2023 apply for teaching posts.
  ಸಾಂದರ್ಭಿಕ ಚಿತ್ರ


  ಅಲ್ಲದೇ ತಂತ್ರಜ್ಞಾನದ ಪ್ರಗತಿಯು ನಾವು ಕಲಿಯುವ ಮತ್ತು ಕೆಲಸ ಮಾಡುವ ವಿಧಾನವನ್ನು ಬದಲಾಯಿಸುತ್ತಿದೆ. ಶಿಕ್ಷಕರು ಮತ್ತು ತರಬೇತುದಾರರು ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುವ ಅಗತ್ಯವಿದೆ. ಅವುಗಳನ್ನು ಸರಿಯಾದ ತರಬೇತಿ ನೀಡುವ ಮೂಲಕ ಪರಿಣಾಮಕಾರಿಯಾಗಿ ಜಾರಿಗೆ ತರುವುದು ಸಾಧ್ಯವಾಗುತ್ತದೆ.


  12. ಸೈಬರ್ ಸೆಕ್ಯುರಿಟಿ ತಜ್ಞರು: ಇಂದು ಬಹಳಷ್ಟು ಕಾರಣಗಳಿಗಾಗಿ ಸೈಬರ್‌ ಸೆಕ್ಯುರಿಟಿ ಉದ್ಯೋಗಗಳು ಹೆಚ್ಚು ಬೇಡಿಕೆಯಲ್ಲಿವೆ. ಸದ್ಯ ಜಾಗತಿಕವಾಗಿ ನುರಿತ ಸೈಬರ್‌ ಸೆಕ್ಯುರಿಟಿ ವೃತ್ತಿಪರರ ಕೊರತೆಯಿದೆ.


  ಅಂದರೆ ಬೇಡಿಕೆ ಹೆಚ್ಚಿರುವುದರಿಂದ ಉದ್ಯೋಗಾವಕಾಶಗಳು ಹೇರಳವಾಗಿವೆ ಎನ್ನಬಹುದು. ಅಲ್ಲದೇ ಇಂದು ತಂತ್ರಜ್ಞಾನದ ಮೇಲೆ ಅವಲಂಬನೆ ಹೆಚ್ಚಾಗಿರುವುದೂ ಇದಕ್ಕೆ ಮತ್ತೊಂದು ಕಾರಣವಾಗಿದೆ.


  ತಂತ್ರಜ್ಞಾನದ ಬಳಕೆಯು ಎಲ್ಲೆಡೆ ಹೆಚ್ಚಾದಂತೆ, ಸೈಬರ್ ಬೆದರಿಕೆಗಳು ಮತ್ತು ಸೂಕ್ಷ್ಮ ಡೇಟಾ ಮತ್ತು ಸಿಸ್ಟಮ್‌ಗಳನ್ನು ಅಪಾಯದಿಂದ ರಕ್ಷಿಸುವ ಅಗತ್ಯತೆ ಹೆಚ್ಚುತ್ತಿದೆ.


  ಇದಲ್ಲದೆ, ಅನೇಕ ಕೈಗಾರಿಕೆಗಳು ಮತ್ತು ಸಂಸ್ಥೆಗಳು ಡೇಟಾ ಸುರಕ್ಷತೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ಹೆಚ್ಚು ಜಾಗರೂಕತೆ ವಹಿಸುತ್ತಿವೆ. ಇದು ಸೈಬರ್ ಸೆಕ್ಯುರಿಟಿ ವೃತ್ತಿಪರರ ಅಗತ್ಯವನ್ನು ಸೃಷ್ಟಿಸುತ್ತದೆ.


  ತಂತ್ರಜ್ಞಾನವು ವಿಕಸನಗೊಳ್ಳುತ್ತಿದ್ದಂತೆ, ಹೊಸ ಬೆದರಿಕೆಗಳು ಮತ್ತು ಅಪಾಯಗಳು ಹೆಚ್ಚುತ್ತಿವೆ. ಈ ಬೆದರಿಕೆಗಳಿಂದ ಪಾರಾಗಿ ರಕ್ಷಣೆ ಪಡೆಯಲು ಸೈಬರ್‌ ಸೆಕ್ಯುರಿಟಿ ವೃತ್ತಿಪರರ ಅಗತ್ಯವೂ ಹೆಚ್ಚುತ್ತಿದೆ.
  13. ಸ್ವಯಂಚಾಲಿತ ಕಾರುಗಳ ತಂತ್ರಜ್ಞರು: Tesla, BYD, Nio, Waymo, GM, Hyundai, Cruise, Pony.ai, ಮತ್ತು Ford ಸೇರಿದಂತೆ ಹಲವು ಕಂಪನಿಗಳು ಸ್ವಯಂ ಚಾಲಿತ ಕಾರುಗಳನ್ನು ತಯಾರಿಸಲಿವೆ. ಸ್ವಯಂ ಚಾಲನಾ ವಾಹನಗಳು ತಾವಾಗಿಯೇ ಚಾಲನೆ ಮಾಡುತ್ತವೆ.


  ಸ್ವಯಂಚಾಲಿತ ಕಾರುಗಳು ಇಂದಿನ ಆಂತರಿಕ ದಹನಕಾರಿ ಎಂಜಿನ್ ಕಾರುಗಳಿಗಿಂತ ಹೆಚ್ಚು ಸಂಕೀರ್ಣವಾಗಿದ್ದು, ಅತ್ಯಾಧುನಿಕ ವಿನ್ಯಾಸವನ್ನು ಹೊಂದಿರುತ್ತವೆ. ಇದಕ್ಕಾಗಿ ಸ್ವತಂತ್ರವಾದ ವಾಹನಗಳು ಅಥವಾ ರೋಬೋ-ಟ್ಯಾಕ್ಸಿಗಳು ಮತ್ತು ಸಾರಿಗೆ ಡ್ರೋನ್‌ಗಳೊಂದಿಗೆ ಸಮಸ್ಯೆಗಳನ್ನು ಪತ್ತೆಹಚ್ಚುವ ಕೌಶಲ್ಯ ಇರಬೇಕಾಗುತ್ತದೆ.


  ಅಲ್ಲದೇ ಅದನ್ನು ಸರಿಪಡಿಸಲು ಅಗತ್ಯವಿರುವ ಕೌಶಲ್ಯಗಳನ್ನು ಮತ್ತು ಜ್ಞಾನವನ್ನು ಹೊಂದಿರಬೇಕಾದ ಅಗತ್ಯವಿದೆ. ಜೊತೆಗೆ ಸ್ವಾಯತ್ತ ವಾಹನ ಮೆಕ್ಯಾನಿಕ್‌ಗೆ ವಿಶಿಷ್ಟ ವ್ಯವಸ್ಥೆಗಳು ಮತ್ತು ಘಟಕಗಳಲ್ಲಿ ವಿಶೇಷ ತರಬೇತಿಯ ಅಗತ್ಯವಿರುತ್ತದೆ.


  ಸ್ವಾಯತ್ತ ಕಾರುಗಳು ರಸ್ತೆಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿದ್ದಂತೆ, ತರಬೇತಿ ಪಡೆದ ಮತ್ತು ನುರಿತ ಸ್ವಾಯತ್ತ ಕಾರ್ ಮೆಕ್ಯಾನಿಕ್‌ಗಳ ಬೇಡಿಕೆಯು ಹೆಚ್ಚಾಗುವ ನಿರೀಕ್ಷೆಯಿದೆ.


  14. ಹೆಲ್ತ್‌ಕೇರ್‌ ವೃತ್ತಿಪರರು: ದಾದಿಯರು, ವೈದ್ಯರು ಮತ್ತು ಆರೋಗ್ಯ ತಂತ್ರಜ್ಞರಂತಹ ಆರೋಗ್ಯ ವೃತ್ತಿಪರರು ಉದ್ಯೋಗ ಮಾರುಕಟ್ಟೆಯಲ್ಲಿ ಪ್ರವರ್ಧಮಾನಕ್ಕೆ ಬರಲು ಒಂದು ಕಾರಣವೆಂದರೆ ವಯಸ್ಸಾದ ಜನಸಂಖ್ಯೆ. ವಯಸ್ಸಾದವರು ಹೆಚ್ಚಿದಂತೆ ವಿಶೇಷವಾಗಿ ದೀರ್ಘಕಾಲದ ಕಾಯಿಲೆ, ಅನಾರೋಗ್ಯದಿಂದಾಗಿ ಆರೋಗ್ಯ ಸೇವೆಗಳ ಬೇಡಿಕೆಯು ಹೆಚ್ಚಾಗುತ್ತದೆ.


  ಇದಲ್ಲದೆ, ವೈದ್ಯಕೀಯ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿನ ಪ್ರಗತಿಯು ಚಿಕಿತ್ಸೆಗಳ ವ್ಯಾಪ್ತಿಯನ್ನು ಹೆಚ್ಚಿಸಿದೆ. ರೋಗಿಗಳಿಗೆ ಇಂದು ಹೆಚ್ಚಿನ ಅಭಿವೃದ್ಧಿ ಹೊಂದಿದ ಚಿಕಿತ್ಸೆಗಳು ಸಿಗುತ್ತವೆ.


  indian students who studied in medical in china are not allowed medical practice in india
  ಸಾಂದರ್ಭಿಕ ಚಿತ್ರ


  ಹಾಗಾಗಿ ಈ ತಂತ್ರಜ್ಞಾನಗಳನ್ನು ನಿರ್ವಹಿಸಲು ವಿಶೇಷ ಆರೋಗ್ಯ ವೃತ್ತಿಪರರ ಅಗತ್ಯವಿದೆ. ರೋಗಿಗಳ ಫಲಿತಾಂಶಗಳನ್ನು ಸುಧಾರಿಸುವ ಹೊಸ ಚಿಕಿತ್ಸಾ ಆಯ್ಕೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಈ ಪರಿಕರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಜ್ಞಾನ ಮತ್ತು ಕೌಶಲ್ಯ ಹೊಂದಿರುವ ಆರೋಗ್ಯ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತದೆ.


  ಅಲ್ಲದೆ, COVID-19 ಸಾಂಕ್ರಾಮಿಕವು ಆರೋಗ್ಯ ವೃತ್ತಿಪರರು ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದೆ. ಭವಿಷ್ಯದ ಆರೋಗ್ಯ ಬಿಕ್ಕಟ್ಟುಗಳಿಗೆ ತಯಾರಿ ಎಂಬಂತೆ ಈ ವ್ಯವಸ್ಥೆಗಳನ್ನು ಬಲಪಡಿಸಲು ಸರ್ಕಾರಗಳು ಮತ್ತು ಸಂಸ್ಥೆಗಳು ಹೂಡಿಕೆ ಮಾಡುವ ಸಾಧ್ಯತೆಯಿದೆ.


  15. ಡ್ರೋನ್ ಟ್ರಾಫಿಕ್ ಆಪ್ಟಿಮೈಸರ್: ಲಿಂಕ್ಡ್‌ಇನ್ ಪ್ರಕಾರ, ಮುಂದಿನ ದಿನಗಳಲ್ಲಿ ಡ್ರೋನ್‌ಗಳ ಬಳಕೆ ಹೆಚ್ಚು ವ್ಯಾಪಕವಾಗಿರುತ್ತದೆ. ಇನ್ನು, ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಕೂಡ ಡ್ರೋನ್‌ಗಳ ಬಳಕೆ ಅಥವಾ ಎಲೆಕ್ಟ್ರಿಕ್ ವಿಮಾನಗಳು ಏರಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.


  ಆದರೂ, ಅಲ್ಲಿನ ಅವ್ಯವಸ್ಥೆಯನ್ನು ತಡೆಗಟ್ಟಲು ವಿಮಾನ ಮಾರ್ಗಗಳ ಮೇಲೆ ಕಣ್ಣಿಡುವುದು ಅಗತ್ಯವಾಗಿದೆ. ವಿಮಾನಯಾನ ನಿಯಂತ್ರಕರು ಈಗಾಗಲೇ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.


  ಸಾರಿಗೆ, ಕೃಷಿ, ನಿರ್ಮಾಣ ಮತ್ತು ವಿತರಣೆಯಂತಹ ವಿವಿಧ ಕೈಗಾರಿಕೆಗಳಲ್ಲಿ ಡ್ರೋನ್‌ಗಳ ಹೆಚ್ಚುತ್ತಿರುವ ಬಳಕೆಯಿಂದಾಗಿ ಡ್ರೋನ್ ಟ್ರಾಫಿಕ್ ಆಪ್ಟಿಮೈಸರ್‌ನ ಕೆಲಸವು ಬೆಳೆಯುವ ಸಾಧ್ಯತೆಯಿದೆ. ಡ್ರೋನ್ ಬಳಕೆಯ ಕುರಿತಾದ ನಿಯಮಗಳು ಹೆಚ್ಚು ಸಂಕೀರ್ಣವಾಗುತ್ತಿದ್ದಂತೆ, ಈ ನಿಬಂಧನೆಗಳನ್ನು ನ್ಯಾವಿಗೇಟ್ ಮಾಡಲು ಪರಿಣತಿಯನ್ನು ಹೊಂದಿರುವ ವೃತ್ತಿಪರರ ಬೇಡಿಕೆಯೂ ಹೆಚ್ಚಾಗುತ್ತದೆ.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು