ಮಹಿಳೆಯರು (Women) ಪುರುಷರಷ್ಟೇ (Men) ಸಮಾನತೆ, ಅರ್ಹತೆ ಹಾಗೂ ಗೌರವವನ್ನು ಸಮಾಜದಲ್ಲಿ ಪಡೆದುಕೊಂಡಿದ್ದಾರೆ ಎಂಬುದು ಎಲ್ಲಾ ಕಡೆಯೂ ಕೇಳಿಬರುತ್ತಿರುವ ಮಾತಾಗಿದೆ. ಆದರೆ ಈ ಸಮಾನತೆಯ ಮಾತು ಬರೀ ಬಾಯಿ ಮಾತಿಗೆ ಭಾಷಣಗಳಿಗೆ ಸೀಮಿತವಾಗಿದೆ. ಇನ್ನು ಕೂಡ ಮಹಿಳೆಯರು ಪುರುಷರಿಗಿಂತ ಹಿಂದುಳಿದಿದ್ದಾರೆ ಎಂಬುದಾಗಿ ಡೇಟಿಂಗ್ (Dating) ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ ಆ್ಯಪ್ ಬಂಬಲ್ (Bambal) ತಿಳಿಸಿದೆ.
ಬಂಬಲ್ ಸಮೀಕ್ಷೆಯಲ್ಲಿ ಏನಿದೆ?
ಈ ಕುರಿತು ಸಮೀಕ್ಷೆ ನಡೆಸಿರುವ ಆ್ಯಪ್ ಬಂಬಲ್, ವಾರ್ಷಿಕ ವರದಿಯಲ್ಲಿ ಮಹಿಳೆಯರು ಪುರುಷರಿಗಿಂತ ಅನೇಕ ವಿಷಯಗಳಲ್ಲಿ ಅಸಮಾನತೆ ಎದುರಿಸುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಕಂಡುಕೊಂಡಿದೆ.
ಸರಿಸುಮಾರು 2500 ಭಾರತೀಯರ (18+) ಸಮೀಕ್ಷೆಯ ಆಧಾರದ ಮೇಲೆ ಸಂಬಂಧ, ವೃತ್ತಿ, ಲಿಂಗ, ಹಣಕಾಸು, ಹೆಚ್ಚಿನ ಸಮಾನತೆಯ ಪ್ರಸ್ತುತ ಸ್ಥಿತಿಯ ಸುತ್ತ ನೈಜವಾದ ಅಂತರ ಮತ್ತು ಅಸಮಾತೆ ಇನ್ನೂ ಸಹ ಜೀವಂತವಾಗಿದೆ ಎಂಬುವುದನ್ನು ತೋರಿಸಿ ಕೊಟ್ಟಿದೆ.
"ಕುಟುಂಬಕ್ಕಾಗಿ ವೃತ್ತಿಜೀವನ ತ್ಯಾಗ ಮಾಡುತ್ತಾರೆ ಮಹಿಳೆಯರು"
ಮಹಿಳೆಯರ ಹಾಗೂ ಪುರುಷರ ಆಲೋಚನೆಗಳಲ್ಲಿ ಭಿನ್ನತೆಯನ್ನು ಪ್ರದರ್ಶಿಸಿರುವ ಸಮೀಕ್ಷೆ ಹೆಚ್ಚಿನ ಸಮಯದಲ್ಲಿ ಮಹಿಳೆಯರೇ ಪ್ರತಿಯೊಂದು ವಿಷಯದಲ್ಲಿ ತ್ಯಾಗ ಮಾಡುತ್ತಾರೆ ಎಂಬುದನ್ನು ಬಹಿರಂಗಪಡಿಸಿದೆ. ಕುಟುಂಬದ ವಿಚಾರ ಬಂದಾಗ ಮಹಿಳೆ ಹಿಂದೆ ಮುಂದೆ ನೋಡದೇ ಕುಟುಂಬಕ್ಕೆ ಆದ್ಯತೆ ನೀಡಿ ವೃತ್ತಿ ಜೀವನವನ್ನು ತ್ಯಾಗ ಮಾಡುತ್ತಾರೆ ಎಂದು ಡೇಟಿಂಗ್ ಆ್ಯಪ್ ಸಮೀಕ್ಷೆ ಬಹಿರಂಗಪಡಿಸಿದೆ.
ಒಟ್ಟಿನಲ್ಲಿ 32% ಮಹಿಳೆಯರು ಎಲ್ಲಾ ವಿಷಯದಲ್ಲೂ ಪುರುಷರಿಗಿಂತ ಹಿನ್ನಡೆಯಲ್ಲಿರುವುದನ್ನು ಆ್ಯಪ್ ತಿಳಿಸಿದೆ. ಇನ್ನೂ ಲಿಂಗ ಸಮಾನತೆ, ವೃತ್ತಿ ಸಮಾನತೆ, ಆರ್ಥಿಕ ಸಮಾನತೆ ಬಗ್ಗೆ ಹೇಗೆಲ್ಲಾ ಪ್ರತಿಕ್ರಿಯೆ ಬಂದಿದೆ ಎಂಬುದನ್ನು ಇಲ್ಲಿ ನೋಡಿ.
ಲಿಂಗ ಸಮಾನತೆ
ಪುರುಷರು ಮತ್ತು ಮಹಿಳೆಯರು ಸಮಾನರು ಮತ್ತು ಎಲ್ಲಾ ವಿಷಯಗಳಲ್ಲಿ ಸಮಾನ ಅವಕಾಶಗಳನ್ನು ನೀಡಬೇಕು ಎಂಬ ಲಿಂಗ ಸಮಾನತೆಯ ನಿರ್ಧಾರವನ್ನು ಅಂಗೀಕರಿಸುತ್ತಾರೆ ಎಂದು 95% ದಷ್ಟು ಸಮೀಕ್ಷೆಯ ಪ್ರತಿಸ್ಪಂದಕರು ಒಮ್ಮತದಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ವರದಿ ಕಂಡುಹಿಡಿದಿದೆ.
ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದ 95% ದಷ್ಟು ಜನರು, ಮಹಿಳೆಯ ಹಕ್ಕುಗಳನ್ನು ಸುಧಾರಿಸುವುದು ವಿಶ್ವವನ್ನು ಮತ್ತಷ್ಟು ಎತ್ತರದ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದವರಲ್ಲಿ 87% ದಷ್ಟು ಮಹಿಳೆಯರಾಗಿದ್ದು ಮಹಿಳೆಯರು ವೃತ್ತಿ, ಸಂಬಂಧ ಹಾಗೂ ಕುಟುಂಬದ ನಡುವೆ ರಾಜಿಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ವೃತ್ತಿ ಸಮಾನತೆ
ವೃತ್ತಿ ಕ್ಷೇತ್ರದಲ್ಲಿ ಜನರು ಏನು ಬಯಸುತ್ತಾರೆ ಹಾಗೂ ಪ್ರಸ್ತುತ ಯಾವ ಸ್ಥಿತಿಯನ್ನು ಅನುಭವಿಸುತ್ತಾರೆ ಎಂಬುದನ್ನು ಅಧ್ಯಯನ ತಿಳಿಸಿದೆ. 89% ದಷ್ಟು ಮಹಿಳೆಯರು ತಿಳಿಸಿರುವಂತೆ, ಮಕ್ಕಳ ಕಾಳಜಿಯ ವಿಷಯದಲ್ಲಿ ಅಸಮಾನತೆ ಇರುವುದರಿಂದ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟು ಐದರಲ್ಲಿ 4 ಪ್ರತಿಕ್ರಿಯೆ ನೀಡಿದವರ ಪ್ರಕಾರ 68% ಪುರುಷ ಪ್ರತಿಕ್ರಿಯೆದಾರರು ಹಾಗೂ 76% ಮಹಿಳಾ ಪ್ರತಿಕ್ರಿಯೆದಾರರ ಪ್ರಕಾರ ಮಹಿಳೆಯರು ಹೆರಿಗೆ ರಜೆಯನ್ನು ತೆಗೆದುಕೊಳ್ಳುವುದು ಅವರ ವೃತ್ತಿಜೀವನಕ್ಕೆ ಮುಳುವಾಗಿ ಪರಿಣಮಿಸುತ್ತದೆ ಎಂದಾಗಿದೆ.
84% ಪ್ರತಿಕ್ರಿಯೆ ನೀಡಿದವರಲ್ಲಿ ಪುರುಷರು ಹಾಗೂ ಮಹಿಳಾ ಭಾಗಿಗಳು ಒಳಗೊಂಡಿದ್ದು, ತಂದೆಗಿಂತ ಒಬ್ಬ ತಾಯಿ ವೃತ್ತಿಜೀವನ ಮುಂದುವರಿಸಲು ಕೆಲಸದ ಸಮಯದಲ್ಲಿ ಹೆಚ್ಚಿನ ಪಾಪಪ್ರಜ್ಞೆಯನ್ನು ಅನುಭವಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ: Career Tips: ಉದ್ಯೋಗ ಹುಡುಕುವಾಗ ಅಭ್ಯರ್ಥಿಗಳು ಈ 7 ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು
ಆರ್ಥಿಕ ಸಮಾನತೆ
ಆರ್ಥಿಕ ಸ್ವಾತಂತ್ರ್ಯದ ಕೊರತೆಯು ಮಹಿಳೆಯರು ಅತೃಪ್ತಿಕರ ಸಂಬಂಧಗಳಲ್ಲಿ ಉಳಿಯಲು ಪ್ರಮುಖ ಕಾರಣವೆಂದು ಸಮೀಕ್ಷೆಯಲ್ಲಿ ಪಾಲ್ಗೊಂಡ 86% ಜನ ಪ್ರತಿಕ್ರಿಯಿಸಿದ್ದು, 87 ಪ್ರತಿಶತದಷ್ಟು ಸಾಮಾಜಿಕ ರಚನೆಗಳು, ವ್ಯವಸ್ಥೆಗಳು ಮಹಿಳೆಯರನ್ನು ಪುರುಷರ ಮೇಲೆ ಆರ್ಥಿಕವಾಗಿ ಅವಲಂಬಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ