• ಹೋಂ
 • »
 • ನ್ಯೂಸ್
 • »
 • Jobs
 • »
 • Success Tips: ಸಕ್ಸಸ್​ ಸಿಕ್ಕ ಮೇಲೆ ಈ ವಿಚಾರಗಳ ಬಗ್ಗೆ ತಲೆನೇ ಕೆಡಿಸಿಕೊಳ್ಳಲ್ವಂತೆ ಜನರು

Success Tips: ಸಕ್ಸಸ್​ ಸಿಕ್ಕ ಮೇಲೆ ಈ ವಿಚಾರಗಳ ಬಗ್ಗೆ ತಲೆನೇ ಕೆಡಿಸಿಕೊಳ್ಳಲ್ವಂತೆ ಜನರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಶಸ್ವಿ ಜನರು ತಮ್ಮ ಜೀವನದಲ್ಲಿ ಅವರ ನಿಯಂತ್ರಣದಲ್ಲಿ ಇಲ್ಲದೇ ಇರುವ ವಿಷಯಗಳ ಬಗ್ಗೆ ಎಂದಿಗೂ ತಲೆ ಕೆಡೆಸಿಕೊಳ್ಳುವುದಿಲ್ಲ ಮತ್ತು ಅದರ ಮೇಲೆ ಸಮಯ ಸಹ ವ್ಯರ್ಥ ಮಾಡುವುದಿಲ್ಲ. ಹಾಗಿದ್ರೆ ಆ ಕೆಲಸಗಳು ಯಾವುದೆಲ್ಲಾ ಎಂಬುದು ಈ ಲೇಖನದಲ್ಲಿದೆ ಓದಿ.

 • Share this:

ನಮ್ಮಲ್ಲಿ ಅನೇಕ ಜನರು ಚಿಕ್ಕ-ಪುಟ್ಟ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾ ಇರುವುದನ್ನು ಮತ್ತು ಸುಮ್ಮನೆ ಪೇಚಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಅದೇ ಯಶಸ್ವಿ (Success) ಜನರ ಬದುಕಿನಲ್ಲಿ ಈ ರೀತಿಯ ಪರದಾಟಗಳು ಮತ್ತು ಸುಮ್ಮನೆ ಯಾವುದೋ ಒಂದು ವಿಷಯದಲ್ಲಿ ಸಿಲುಕಿಹಾಕಿಕೊಳ್ಳುವುದು ತುಂಬಾನೇ ಕಡಿಮೆ ನೋಡುತ್ತೇವೆ. ಇದೇಕೆ ಹೀಗೆ? ಅಂತ ಅನೇಕರು ಆಶ್ಚರ್ಯಪಡಬಹುದು, ಆದರೆ ಇದಕ್ಕೆ ಕಾರಣ ತುಂಬಾನೇ ಸಿಂಪಲ್ ಕಣ್ರೀ. ಯಶಸ್ವಿ ಜನರು ಮತ್ತು ಸಾಮಾನ್ಯ ಜನರು ರೂಢಿಸಿಕೊಂಡಿರುವ ಗುಣಗಳನ್ನು ಹೊಂದಿರುವುದಿಲ್ಲ. ಯಶಸ್ವಿ ಜನರು ಎಂತಹ ವಿಷಯಗಳ ಮೇಲೆ ತಮ್ಮ ಸಮಯವನ್ನು (Time) ಮತ್ತು ಶ್ರಮವನ್ನು ವ್ಯರ್ಥಮಾಡುವುದಿಲ್ಲ ಈ ಕೆಳಗೆ ನೋಡಿ.


ತಾವು ನಿಯಂತ್ರಿಸಲು ಸಾಧ್ಯವಾಗದ ವಿಷಯಗಳ ಬಗ್ಗೆ ಚಿಂತಿಸುವುದಿಲ್ಲ


ಯಶಸ್ವಿ ಜನರು ತಮ್ಮ ಜೀವನದಲ್ಲಿ ಅವರ ನಿಯಂತ್ರಣದಲ್ಲಿ ಇಲ್ಲದೇ ಇರುವ ವಿಷಯಗಳ ಬಗ್ಗೆ ಎಂದಿಗೂ ತಲೆ ಕೆಡೆಸಿಕೊಳ್ಳುವುದಿಲ್ಲ ಮತ್ತು ಅದರ ಮೇಲೆ ಸಮಯ ಸಹ ವ್ಯರ್ಥ ಮಾಡುವುದಿಲ್ಲ. ಉದಾಹರಣೆಗೆ ಹೇಳಬೇಕು ಎಂದರೆ ಪ್ರಿಸ್ಕೂಲ್ ಶಿಕ್ಷಕರೊಬ್ಬರು ಹೇಗೆ ಅವರು ಆರಂಭಿಕ ದಿನಗಳಲ್ಲಿ ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರದೆ, ಮಕ್ಕಳಿಗೆ ಹೇಗೆ ಪಾಠ ಹೇಳಿಕೊಡಬೇಕು ಅಂತ ಅನೇಕ ರೀತಿಯ ವಿಧಾನಗಳನ್ನು ಹುಡುಕುವುದು.


ಎಂದರೆ ಒತ್ತಡ ತೆಗೆದುಕೊಂಡು ಆ ಒತ್ತಡವನ್ನು ಮಕ್ಕಳ ಮೇಲೆ ಸಹ ಹಾಕುವುದರಿಂದ ಏನೂ ಸಹ ಪ್ರಯೋಜನವಾಗುವುದಿಲ್ಲ. ಹಾಗಾಗಿ ನಮ್ಮ ನಿಯಂತ್ರಣಕ್ಕೆ ಬಾರದ ವಿಷಯಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.


ಇದನ್ನೂ ಓದಿ: ಯಶಸ್ವಿ ವ್ಯಕ್ತಿಗಳ ಸೀಕ್ರೆಟ್​ ಇದು, ನೀವೂ ಫಾಲೋ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ


ಯಶಸ್ವಿ ಜನರು ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವರ ಶಕ್ತಿಯು ಸೀಮಿತ ಸಂಪನ್ಮೂಲವಾಗಿದೆ ಎಂದು ಅವರಿಗೆ ತಿಳಿದಿರುತ್ತದೆ ಮತ್ತು ಕ್ರಿಯಾತ್ಮಕ ವಸ್ತುಗಳ ಕಡೆಗೆ ಅವರು ತಮ್ಮ ಎಲ್ಲಾ ಶಕ್ತಿಯನ್ನು ನಿರ್ದೇಶಿಸಿದಾಗ ಅದನ್ನು ಇನ್ನೂ ಉತ್ತಮವಾಗಿ ಬಳಸಿಕೊಳ್ಳಲಾಗುತ್ತದೆ.


ಪರಿಪೂರ್ಣತೆಯನ್ನು ಹುಡುಕದೆ ಇರುವುದು


ಈ ವಿಷಯ ಮೇಲೆ ಹೇಳಿದ ಅಂಶಕ್ಕೆ ಬಹಳ ಸಂಬಂಧ ಹೊಂದಿದೆ. ಪರಿಪೂರ್ಣತೆಯು ಒಂದು ಭ್ರಮೆಯಾಗಿದೆ, ಆದರೂ ನಮ್ಮಲ್ಲಿ ಅನೇಕರು ಅದನ್ನು ಎಡೆಬಿಡದೆ ಬೆನ್ನಟ್ಟುತ್ತಾರೆ. ಅದಕ್ಕಾಗಿಯೇ ನಾವು ಎಲ್ಲವನ್ನೂ ನಿಯಂತ್ರಿಸಬಲ್ಲೆವು ಎಂಬ ಭ್ರಮೆಗೆ ಹೋಗುತ್ತೇವೆ.


ಅಷ್ಟೇ ಅಲ್ಲ, ನಾವು ಈ ಒಂದು ವಿಷಯವನ್ನು ಪರಿಪೂರ್ಣಗೊಳಿಸಿದರೆ, ನಾವು ಅಂತಿಮವಾಗಿ ಯಶಸ್ವಿಯಾಗುತ್ತೇವೆ ಅಥವಾ ಸಂತೋಷವಾಗುತ್ತೇವೆ ಎಂದು ನಾವು ಭಾವಿಸುತ್ತೇವೆ. ಆದರೆ ಇದು ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತದೆ ಎಂದು ಯಶಸ್ವಿ ಜನರಿಗೆ ಮಾತ್ರ ಚೆನ್ನಾಗಿ ತಿಳಿದಿರುತ್ತದೆ. ಏಕೆಂದರೆ ಪರಿಪೂರ್ಣತೆಯನ್ನು ಸಾಧಿಸುವುದು ಅಸಾಧ್ಯ.


ಸಾಂದರ್ಭಿಕ ಚಿತ್ರ


ತಪ್ಪುಗಳನ್ನು ಪುನರಾವರ್ತಿಸದೆ ಇರುವುದು


ತಪ್ಪುಗಳ ಬಗ್ಗೆ ಮಾತನಾಡುವುದು ಮತ್ತು ತಪ್ಪುಗಳ ಬಗ್ಗೆ ಯೋಚನೆ ಮಾಡುವುದು ನಮ್ಮ ಯಶಸ್ಸಿಗೆ ಮುಳುವಾಗಬಹುದು. ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ.


ಆದರೆ ಯಾವುದು ಮುಖ್ಯ ಎಂದು ನಿಮಗೆ ತಿಳಿದಿರಬೇಕು ಮತ್ತು ನಾವು ಅವುಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ತಿಳಿದಿರಬೇಕು. ಯಶಸ್ವಿ ಜನರು ಅವರಿಂದ ಕಲಿಯುವ ಮೂಲಕ ತಮ್ಮ ತಪ್ಪುಗಳನ್ನು ಪರಿಗಣಿಸುತ್ತಾರೆ ಮತ್ತು ಒಂದೇ ತಪ್ಪನ್ನು ಎರಡು ಬಾರಿ ಮಾಡುವುದಿಲ್ಲ.


ಇದಕ್ಕೆ ಮೂರು ವಿಷಯಗಳು ಬೇಕಾಗುತ್ತವೆ:


 • ತಮ್ಮ ದೌರ್ಬಲ್ಯಗಳನ್ನು ಒಪ್ಪಿಕೊಳ್ಳುವ ನಮ್ರತೆ

 • ಏನಾಯಿತು ಎಂಬುದನ್ನು ಪರೀಕ್ಷಿಸಲು ಸ್ವಯಂ ಅರಿವು

 • ಅವರ ಆಲೋಚನೆಗಳು ಮತ್ತು ನಡವಳಿಕೆಯ ಮೇಲೆ ನಿಗಾ ಇಡಲು ಅವರಿಗೆ ಸಹಾಯ ಮಾಡುವ ಎಚ್ಚರಿಕೆಯ ಮನೋಭಾವ


ಆದ್ದರಿಂದ, ಮುಂದಿನ ಬಾರಿ ನೀವು ತಪ್ಪು ಮಾಡಿದಾಗ, ಆ ತಪ್ಪಿನಿಂದ ನಾವು ಕಲಿತುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ತಪ್ಪಿನಿಂದ ಕಲಿಯಿರಿ, ಸರಿಹೊಂದಿಸಿ ಮತ್ತು ಜೀವನದಲ್ಲಿ ಮುಂದುವರಿಯಿರಿ.


ಹಳೆಯ ಘಟನೆಗಳ ಬಗ್ಗೆ ಯೋಚಿಸುವುದು


ಹಳೆಯ ಘಟನೆಗಳ ಮತ್ತು ಸೋಲುಗಳ ಬಗ್ಗೆ ಚಿಂತೆ ಯಶಸ್ವಿ ಜನರು ಮಾಡುವುದಿಲ್ಲ. ಹಾಗೆ ಈಗಾಗಲೇ ಮುಗಿದು ಹೋಗಿರುವ ಸಮಯದ ಬಗ್ಗೆ ಚಿಂತೆ ಮಾಡಿ ಲಾಭವಾದರೂ ಏನಿದೆ ಅಂತ ಯಶಸ್ವಿ ಜನರು ಅದೆಲ್ಲದರ ಬಗ್ಗೆ ಜಾಸ್ತಿ ಚಿಂತಿಸಲು ಹೋಗುವುದಿಲ್ಲ.


ನಾವೆಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ನಮ್ಮ ಜೀವನದಲ್ಲಿ ನಡೆದ ಹಿಂದಿನ ಘಟನೆಗಳನ್ನು ಅಥವಾ ತಪ್ಪುಗಳನ್ನು ಮತ್ತೆ ಮತ್ತೆ ನಮ್ಮ ನೆನಪಿಸಿಕೊಂಡು ಹತಾಶರಾಗುತ್ತಿರುತ್ತೇವೆ. ಆದರೆ ಯಶಸ್ವಿ ಜನರು ಇದರ ಮೇಲೆ ತಮ್ಮ ಸಮಯ ಮತ್ತು ಶ್ರಮವನ್ನು ವ್ಯರ್ಥ ಮಾಡುವುದಿಲ್ಲ.


ಭೂತಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಯಶಸ್ವಿ ಜನರು ಅರ್ಥ ಮಾಡಿಕೊಳ್ಳುತ್ತಾರೆ.


ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು


ಭೂತಕಾಲದ ಬಗ್ಗೆ ಗಮನ ಹರಿಸದಿರುವ ಒಂದು ಭಾಗವೆಂದರೆ ದ್ವೇಷವನ್ನು ಬಿಡುವುದು ಮತ್ತು ಅದು ಯಶಸ್ವಿ ಜನರು ಮಾಡುವ ಮತ್ತೊಂದು ಒಳ್ಳೆಯ ವಿಷಯ ಅಂತ ಹೇಳಬಹುದು. ದ್ವೇಷವನ್ನು ಇಟ್ಟುಕೊಳ್ಳುವುದು ಈ ಕ್ಷಣದಲ್ಲಿ ತೃಪ್ತಿಕರ ಅಂತ ಅನ್ನಿಸಬಹುದು, ಆದರೆ ಅದು ಧೀರ್ಘಕಾಲದ ಜೀವನಕ್ಕೆ ಒಳ್ಳೆಯದಲ್ಲ ಎಂದು ಈ ಯಶಸ್ವಿ ಜನರಿಗೆ ಚೆನ್ನಾಗಿ ತಿಳಿದಿರುತ್ತದೆ.


ಹೀಗೆ ಹಿಂದಿನ ದ್ವೇಷವನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಂಡು ಹೋದರೆ ಜೀವನ ತುಂಬಾನೇ ಭಾರ ಅಂತ ಅನ್ನಿಸುತ್ತದೆ. ಅದು ನಿಮ್ಮ ಜೀವನವನ್ನು ಮತ್ತು ಯಶಸ್ಸನ್ನು ತುಂಬಾನೇ ನಿಧಾನಗೊಳಿಸುತ್ತದೆ ಮತ್ತು ನಿಮ್ಮನ್ನು ತುಂಬಾನೇ ಆಯಾಸಗೊಳಿಸುತ್ತದೆ. ಅದಕ್ಕಾಗಿಯೇ ಅವರು ಕ್ಷಮಿಸಲು ಮತ್ತು ಜೀವನದಲ್ಲಿ ಮುಂದುವರಿಯಲು ಆಯ್ಕೆ ಮಾಡಿಕೊಳ್ಳುತ್ತಾರೆ.


ಬದಲಾವಣೆಯ ಭಯ


ಭವಿಷ್ಯದ ಬಗ್ಗೆ ಮಾತನಾಡುವುದು ನಮ್ಮನ್ನು ಯಾವಾಗಲೂ ಮುಂದಿನ ದಿನಗಳ ಬಗ್ಗೆ ಯೋಚಿಸಲು ಮತ್ತು ಚೆನ್ನಾಗಿ ಯೋಜಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದರೆ ಅನೇಕರಿಗೆ ಹೀಗೆ ಭವಿಷ್ಯದ ಬಗ್ಗೆ ಯೋಚಿಸುವಾಗ, ಈ ಬದಲಾವಣೆ ಅನೇಕರಿಗೆ ಒಂದು ಭಯದಂತೆ ಕಾಡುತ್ತಿರುತ್ತದೆ. ಮುಂದೆ ಏನಾಗುತ್ತದೆ ಎಂದು ತಿಳಿಯದ, ನೀವು ಅದನ್ನು ನಿಭಾಯಿಸಬಲ್ಲಿರಿ ಎಂದು ಖಚಿತವಾಗಿ ತಿಳಿದಿಲ್ಲ ಎಂಬ ಭಾವನೆ... ಅದು ನಿಜವಾಗಿಯೂ ಅಹಿತಕರವಾಗಿರುತ್ತದೆ.


ಸಾಂದರ್ಭಿಕ ಚಿತ್ರ


ಆದರೆ ಯಶಸ್ವಿ ಜನರು ಅವರು ಕಲಿತ ಒಂದು ಸಣ್ಣ ರಹಸ್ಯ ಇಲ್ಲಿದೆ ನೋಡಿ. ಅವರು ಯಾವುದೇ ಬದಲಾವಣೆಗೂ ಹೆದರುವುದಿಲ್ಲ, ಅವರು ಆ ಬದಲಾವಣೆಯನ್ನು ಅದನ್ನು ಅಪ್ಪಿಕೊಳ್ಳುತ್ತಾರೆ.


ಯಶಸ್ವಿ ಜನರು ಈ ಬದಲಾವಣೆಯನ್ನು ಒಂದು ಅವಕಾಶವಾಗಿ ನೋಡುತ್ತಾರೆ, ಬೆದರಿಕೆಯಾಗಿ ಅಲ್ಲ. ಇದು ಜೀವನದಲ್ಲಿ ಏಕೈಕ ಸ್ಥಿರವಾಗಿದೆ ಮತ್ತು ಅಭಿವೃದ್ಧಿ ಹೊಂದುವ ಏಕೈಕ ಮಾರ್ಗವೆಂದರೆ ಹೊಂದಿಕೊಳ್ಳುವುದು ಎಂದು ಅವರಿಗೆ ತಿಳಿದಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಯಶಸ್ವಿ ಜನರು ತುಂಬಾನೇ ಧೈರ್ಯ, ಭರವಸೆ ಮತ್ತು ಸಕಾರಾತ್ಮಕತೆಯನ್ನು ಹೊಂದಿರುತ್ತಾರೆ, ಅವರಿಗೆ ಯಾವುದರ ಬಗ್ಗೆಯೂ ಭಯವಿರುವುದಿಲ್ಲ.


"ಪರಿಪೂರ್ಣ" ಕ್ಷಣಕ್ಕಾಗಿ ಕಾಯುವುದು


ನಮ್ಮಲ್ಲಿ ಅನೇಕರು ಅವರ ಜೀವನದಲ್ಲಿ ಒಂದು ಪರಿಪೂರ್ಣವಾದ ಕ್ಷಣಕ್ಕಾಗಿ ಕಾಯುತ್ತಾ ಇರುತ್ತಾರೆ. ಎಂದರೆ ಏನಾದರೂ ಒಂದು ವ್ಯವಹಾರವನ್ನು ಪ್ರಾರಂಭಿಸಲು, ಪುಸ್ತಕ ಬರೆಯಲು ಅಥವಾ ಪ್ರವಾಸಕ್ಕೆ ಹೋಗಲು ಹೀಗೆ ಜೀವನದಲ್ಲಿ ಒಂದು ಸೂಕ್ತ ಕ್ಷಣ ಎಂದರೆ ಪರಿಪೂರ್ಣವಾದ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ ಅಂತ ಹೇಳಬಹುದು.


ನಿಮಗೆ ಆ ಪರಿಪೂರ್ಣವಾದ ಕ್ಷಣ ಯಾವುದು ಅಂತ ನಿಜವಾಗಿಯೂ ಗೊತ್ತಿರುವುದಿಲ್ಲ. ಅದು ಬರುವವರೆಗೆ ನೀವು ಕಾಯುತ್ತಲೇ ಇದ್ದರೆ, ನೀವು ಶಾಶ್ವತವಾಗಿ ಕಾಯುತ್ತಲೆ ಇರಬೇಕಾಗಬಹುದು.


"ಪರಿಪೂರ್ಣ ಕ್ಷಣಕ್ಕಾಗಿ ಕಾಯಬೇಡಿ, ಆ ಕ್ಷಣವನ್ನು ತೆಗೆದುಕೊಳ್ಳಿ ಮತ್ತು ಅದನ್ನು ಪರಿಪೂರ್ಣಗೊಳಿಸಿ" ಅನ್ನೋ ಒಂದು ಹಳೆಯ ಗಾದೆ ಮಾತನ್ನು ಯಶಸ್ವಿ ಜನರು ತುಂಬಾನೇ ನೆನಪಿನಲ್ಲಿಟ್ಟುಕೊಂಡಿರುತ್ತಾರೆ.


ಗಾಸಿಪ್ ಅಥವಾ ನಕಾರಾತ್ಮಕ ಮಾತುಗಳಲ್ಲಿ ಭಾಗವಹಿಸುವುದು


ನೀವು ನಿಮ್ಮ ಜೀವನದ ತುಂಬಾ ಸಮಯವನ್ನು ಬೇರೆಯವರ ಬಗ್ಗೆ ಗಾಸಿಪ್ ಮಾಡುವುದರಲ್ಲಿ ಅಥವಾ ಬೇರೊಬ್ಬರ ಬಗ್ಗೆ ನಕಾರಾತ್ಮಕ ಮಾತುಗಳನ್ನು ಆಡುತ್ತಾ ಕಾಲ ಕಳೆದರೆ, ಜೀವನದಲ್ಲಿ ಬೆಲೆವಣಿಗೆಯಾಗುವುದು ತುಂಬಾನೇ ಕಷ್ಟವಾಗುತ್ತದೆ. ಇದು ಯಶಸ್ವಿ ಜನರಿಗೆ ತುಂಬಾನೇ ಚೆನ್ನಾಗಿ ಅರ್ಥವಾಗಿರುತ್ತದೆ.


ಗಾಸಿಪ್ ಅಥವಾ ನಕಾರಾತ್ಮಕ ಮಾತು ಆ ಕ್ಷಣದಲ್ಲಿ ನಿಮಗೆ ನಿಜವಾಗಿಯೂ ತುಂಬಾ ಮನರಂಜನೆಯನ್ನು ನೀಡಬಹುದು, ಆದರೆ ನಿಮ್ಮ ಜೀವನಕ್ಕೆ ಅಂತಹ ವಿಷಯಗಳಿಂದ ಏನೂ ದೊಡ್ಡ ಪ್ರಯೋಜನವಂತೂ ಆಗಿರುವುದಿಲ್ಲ.


ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುತ್ತಿರುವುದು


ನೀವು ನಿಮ್ಮ ಜೀವನದಲ್ಲಿ ಇತರರನ್ನು ಮೆಚ್ಚಿಸಲು ಬದುಕಿದರೆ, ಆ ಬದುಕಿನಿಂದ ನಿಮಗೆ ಏನೂ ಪ್ರಯೋಜನವಾಗುವುದಿಲ್ಲ. ಆದ್ದರಿಂದಲೇ ಯಶಸ್ವಿ ಜನರು ಇತರರನ್ನು ಮೆಚ್ಚಿಸಲು ಪ್ರಯತ್ನಿಸುವುದನ್ನು ನೀವು ಎಂದಿಗೂ ನೋಡಿರಲಿಕ್ಕೆ ಸಾಧ್ಯವೇ ಇಲ್ಲ.


ಒಬ್ಬ ವ್ಯಕ್ತಿ ನಮಗೆ ಇಷ್ಟವಾಗುವುದು ಮತ್ತು ಸ್ವೀಕರಿಸುವುದು ಮಾನವನ ಸ್ವಾಭಾವಿಕ ಬಯಕೆಯಾಗಿದೆ. ಈ ಬಯಕೆಯನ್ನು ಜನರು ಚಿಕ್ಕವಯಸ್ಸಿನಲ್ಲಿ ಸ್ವಲ್ಪ ಹೆಚ್ಚಿಗೆ ಹೊಂದಿರುತ್ತಾರೆ. ಜನರನ್ನು ಸಂತೋಷಪಡಿಸುವುದು ಅಸಾಧ್ಯವಾದ, ದಣಿಯುವ ಕೆಲಸ ಮತ್ತು ಇದು ಅನೇಕರಿಗೆ ನಾಟಕ ಅಂತ ಅನ್ನಿಸಬಹುದು.
ಯಶಸ್ವಿಯಾಗಲು, ಎಲ್ಲರೂ ನಿಮ್ಮೊಂದಿಗೆ ಒಪ್ಪುವುದಿಲ್ಲ ಅಥವಾ ನಿಮ್ಮನ್ನು ಇಷ್ಟಪಡುವುದಿಲ್ಲ ಎಂಬ ಕಲ್ಪನೆಯೊಂದಿಗೆ ನೀವು ಸರಿಯಾಗಿರಬೇಕು. ನಿಮ್ಮ ಮೌಲ್ಯಗಳು ಮತ್ತು ದೃಷ್ಟಿಕೋನಕ್ಕೆ ಸತ್ಯವಾದ ಜೀವನವನ್ನು ನಡೆಸುವುದು ಒಳ್ಳೆಯದು.


ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು


ಅಂತಿಮವಾಗಿ, ಯಶಸ್ವಿ ಜನರು ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡದ ಕೊನೆಯ ವಿಷಯ ಎಂದರೆ ಅದು ತಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು.


ಹೀಗೆ ಈ ಹೋಲಿಕೆ ಮಾಡುವುದನ್ನು ನಾವೆಲ್ಲಾ ನಮ್ಮ ಜೀವನದಲ್ಲಿ ಒಮ್ಮೆಯಾದರೂ ಮಾಡಿಕೊಂಡಿರುವಂತದ್ದೆ ಅಂತ ಹೇಳಬಹುದು. ಆದರೆ ಇಂತಹ ಆಟವು ನಾವೆಲ್ಲರೂ ಒಂದು ಹಂತದಲ್ಲಿ ಆಡಿದ ಆಟವಾಗಿದೆ, ಆದರೆ ಇದು ಸಂಪೂರ್ಣವಾಗಿ ನೈಸರ್ಗಿಕ ಪ್ರವೃತ್ತಿಯಾಗಿದ್ದರೂ, ಇದು ನಿಜವಾಗಿಯೂ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ.


Story link: Successful people never waste their energy on these 10 things - Hack Spirit


Srinivas Reddy

top videos
  First published: