ನೀವು ಸುಮ್ಮನೆ ಮನೆಯಲ್ಲಿ ಕುಳಿತಾಗ ಒಂದು ಕ್ಷಣ ನಿಮಗೆ ತಿಳಿದಿರುವ ಅತ್ಯಂತ ಯಶಸ್ವಿ ಜನರ (Success People) ಬಗ್ಗೆ ಸ್ವಲ್ಪ ಯೋಚಿಸಿ (Think) ನೋಡಿ. ಅವರೇಕೆ ನಮಗೆ ಬೇರೆ ಎಲ್ಲಾ ವ್ಯಕ್ತಿಗಳಿಗಿಂತಲೂ ಸ್ವಲ್ಪ ಭಿನ್ನವಾಗಿ (Different) ಕಾಣುತ್ತಾರೆ. ಅವರೇಕೆ ಜೀವನದಲ್ಲಿ ಯಶಸ್ಸನ್ನು ಕಂಡಿರುತ್ತಾರೆ ಅಂತ ಯೋಚಿಸಿ. ಆಗ ನಿಮಗೆ ಸಿಗುವ ಉತ್ತರ ಎಂದರೆ ಅವರು ತಮ್ಮ ಜೀವನದಲ್ಲಿ ಬೇರೆ ರೀತಿಯ ಕೌಶಲ್ಯಗಳನ್ನು ಮತ್ತು ದೃಷ್ಟಿಕೋನವನ್ನು ಹೊಂದಿರುತ್ತಾರೆ ಅನ್ನೋದು ಗೊತ್ತಾಗುತ್ತದೆ.
ಕೆಲವೊಮ್ಮೆ ನಾವು ನಮ್ಮ ಬಾಲ್ಯದ ದಿನಗಳಲ್ಲಿ ಚಿಕ್ಕವರಾಗಿದ್ದಾಗ ಅನೇಕರ ಜೊತೆಗೆ ಬೆಳೆದಿರುತ್ತೇವೆ ಮತ್ತು ಶಾಲೆಗೆ ಹೋಗಿರುತ್ತೇವೆ. ಅನೇಕ ವರ್ಷಗಳ ನಂತರ ನೋಡಿದರೆ ಅದರಲ್ಲಿ ಕೆಲವರು ಮಾತ್ರ ಜೀವನದಲ್ಲಿ ತುಂಬಾನೇ ಯಶಸ್ಸನ್ನು ಕಂಡಿರುತ್ತಾರೆ. ತುಂಬಾ ವರ್ಷಗಳ ನಂತರ ಅವರನ್ನು ನಾವು ಭೇಟಿಯಾದಾಗ, ನಮಗೆ ಅವರು ಹೇಗೆ ಅಷ್ಟೊಂದು ಯಶಸ್ವಿಯಾದರು? ಅವರು ಯಾವ ಗುಣಗಳನ್ನು ಹೊಂದಿದ್ದಾರೆ, ಅವರ ದೃಷ್ಟಿಕೋನ ಹೇಗಿರುತ್ತದೆ ಮತ್ತು ಅವರಲ್ಲಿರುವ ಕೌಶಲ್ಯಗಳು ಯಾವುವು ಅಂತೆಲ್ಲಾ ಆಲೋಚಿಸುತ್ತೇವೆ.
ಇಲ್ಲಿ ಒಬ್ಬ ವ್ಯಕ್ತಿ ಯಶಸ್ವಿಯಾಗಿದ್ದಾರೆ ಅಂತ ಹೇಳಿದರೆ, ಆ ವ್ಯಕ್ತಿ ಖಂಡಿತವಾಗಿಯೂ ಈ 7 ಕೌಶಲ್ಯಗಳನ್ನು ತನ್ನಲ್ಲಿ ಹೊಂದಿದ್ದಾನೆ ಅಂತ ಹೇಳಬಹುದು. ಈ ಕೌಶಲ್ಯಗಳನ್ನು ನೀವು ನಿಮ್ಮ ಜೀವನದಲ್ಲಿ ಬೆಳೆಸಿಕೊಂಡು ನೋಡಿ, ನಿಮಗೂ ನೀವು ಮಾಡುವಂತಹ ಕೆಲಸಗಳಲ್ಲಿ ಆ ಯಶಸ್ಸು ಸಿಗಬಹುದು.
1. ಬರವಣಿಗೆ
ವ್ಯಕ್ತಿಯ ಜೀವನದಲ್ಲಿ ಬರವಣಿಗೆ ಎನ್ನುವುದು ತುಂಬಾನೇ ಮುಖ್ಯವಾಗುತ್ತದೆ. ಯಾವ ವ್ಯಕ್ತಿ ಚೆನ್ನಾಗಿ ಬರೆಯುತ್ತಾರೋ, ಆ ವ್ಯಕ್ತಿಯ ಆಲೋಚನೆಯಲ್ಲಿ ಸ್ಪಷ್ಟತೆ ಇರುತ್ತದೆ ಅಂತ ಹೇಳಲಾಗುತ್ತದೆ. ಬರವಣಿಗೆಯು ವಿಷಯಗಳನ್ನು ಆಲೋಚಿಸಲು ದಾರಿ ಮಾಡಿಕೊಡುತ್ತದೆ. ಜನರು ಒಂದು ವಿಷಯವನ್ನು ಕರಗತ ಮಾಡಿಕೊಂಡಿದ್ದರೆ, ಅದರ ಬಗ್ಗೆ ಹೇಗೆ ಬೇಕೋ ಹಾಗೆ ಬರೆಯಲು ಬರುತ್ತದೆ ಅಂತ ಹೇಳಬಹುದು. ನೀವು ಹೆಚ್ಚು ಹೆಚ್ಚು ಬರೆದಷ್ಟೂ, ನೀವು ಹೆಚ್ಚು ಹೆಚ್ಚು ಕಲಿಯುತ್ತೀರಿ ಮತ್ತು ನೀವು ಹೆಚ್ಚು ಹೆಚ್ಚು ಕಲಿತಷ್ಟೂ, ಜೀವನದಲ್ಲಿ ತುಂಬಾ ಯಶಸ್ಸು ಸಾಧಿಸುತ್ತೀರಿ.
ಇದನ್ನೂ ಓದಿ: Success Story: ಸಕ್ಸಸ್ಗೆ ಶಾರ್ಟ್ಕಟ್ ಇಲ್ಲ, 8-10 ಗಂಟೆ ನಿತ್ಯ ಓದಲೇಬೇಕು ಅಂತಾರೆ UPPSC ಟಾಪರ್ ಸಂಚಿತಾ
2. ಸಾರ್ವಜನಿಕವಾಗಿ ಮಾತನಾಡುವುದು
ಒಬ್ಬ ವ್ಯಕ್ತಿಗೆ ಸಂವಹನ ಕೌಶಲ್ಯಗಳು ತುಂಬಾನೇ ಅತ್ಯಗತ್ಯ, ಏಕೆಂದರೆ ಸಮಾಜದಲ್ಲಿ ಅನೇಕ ಬಗೆಯ ಜನರ ಜೊತೆಗೆ ಹೇಗೆ ಮಾತಾಡಬೇಕು ಅನ್ನೋ ಒಂದು ಕೌಶಲ್ಯ ಇದ್ದರೆ ತುಂಬಾ ಯಶಸ್ವಿಯಾಗಬಹುದು. ನಮ್ಮ ನಡುವೆ ಇರುವಂತಹ ಅತ್ಯಂತ ಯಶಸ್ವಿ ಜನರು ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳಲು, ಮಾತನಾಡಲು ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶಗಳನ್ನು ಹುಡುಕುತ್ತಾರೆ.
3. ಸಮಸ್ಯೆಯನ್ನು ಪರಿಹರಿಸುವುದು
ಈ ಕೌಶಲ್ಯವು ಸಾಮಾನ್ಯವಾಗಿ ಇತರೆ ಎಲ್ಲಾ ಕೌಶಲ್ಯಗಳಿಗಿಂತಲೂ ತುಂಬಾನೇ ಮುಖ್ಯವಾಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅತ್ಯಂತ ಯಶಸ್ವಿ ಜನರು ಪ್ರತಿಯೊಂದು ಅವಕಾಶದೊಳಗಿನ ಸಮಸ್ಯೆಯ ಬದಲು ಪ್ರತಿಯೊಂದು ಸಮಸ್ಯೆಯಲ್ಲೂ ಒಂದೊಂದು ಹೊಸ ಅವಕಾಶವನ್ನು ನೋಡಲು ತಮ್ಮನ್ನು ತಾವು ತರಬೇತುಗೊಳಿಸುತ್ತಾರೆ. ನಿರ್ಣಾಯಕ ಕೌಶಲ್ಯಗಳಲ್ಲಿ ಒಂದು, ಅಸಾಧ್ಯವೆಂದು ತೋರುವ ಸಮಸ್ಯೆಗಳನ್ನು ಹೆಚ್ಚು ನಿರ್ವಹಿಸಬಹುದಾದ ಕಾರ್ಯಗಳಾಗಿ ವಿಭಜಿಸುವ ಸಾಮರ್ಥ್ಯ ಇವರಿಗಿರುತ್ತದೆ.
4. ಔದಾರ್ಯವನ್ನು ಬೆಳೆಸಿಕೊಳ್ಳುವುದ
ಜನರು ನೀವು ಏನು ಹೇಳುತ್ತೀರಿ ಅಥವಾ ಏನು ಮಾಡುತ್ತೀರಿ ಎಂದು ನೆನಪಿಸಿಕೊಳ್ಳುವುದಿಲ್ಲ, ನೀವು ಅವರಿಗೆ ಹೇಗೆ ಅನಿಸುತ್ತೀರಿ ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಜನರು ನೆನಪಿಟ್ಟುಕೊಳ್ಳುವ ಒಂದು ವಿಷಯ ಎಂದರೆ ಜನರು ಅವರನ್ನು ಔದಾರ್ಯದಿಂದ ಪರಿಗಣಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ನೋಡುತ್ತಾರೆ ಮತ್ತು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಆದ್ದರಿಂದ, ಅತ್ಯಂತ ಯಶಸ್ವಿ ಜನರು ಈ ಕೌಶಲ್ಯವನ್ನು ಬೆಳೆಸಿಕೊಂಡಿರುತ್ತಾರೆ ಮತ್ತು ಅದನ್ನು ತಮ್ಮ ಸಂವಹನಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
5. ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಕೌಶಲ್ಯ
ಇದು ಜೀವನದಲ್ಲಿ ತುಂಬಾನೇ ಮುಖ್ಯವಾದ ಕೌಶಲ್ಯವಾಗಿರುತ್ತದೆ ಅಂತ ಹೇಳಬಹುದು. ಜೀವನದಲ್ಲಿ ಎಲ್ಲರ ಜೊತೆ ಮುಕ್ತವಾಗಿ ಮಾತನಾಡಬೇಕು. ಮಧ್ಯೆ ಅಸಮಾಧಾನವಿದ್ದರೆ, ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಹೀಗೆ ಪ್ರತಿಯೊಂದು ಕಡೆಯಲ್ಲೂ ಮಾತನಾಡುವುದು ಸ್ವಲ್ಪ ಆಕ್ರಮಣಕಾರಿಯಾಗಿ ತೋರಬಹುದು, ಆದರೆ ವಾಸ್ತವಾಗಿ ನೋಡಿದರೆ ಇದು ಒಳ್ಳೆಯ ಕೌಶಲ್ಯವಾಗಿದೆ ಅಂತ ಹೇಳಬಹುದು.
ಒಂದು ದೊಡ್ಡ ವ್ಯವಹಾರದಿಂದ ಹಿಡಿದು ಸ್ನೇಹಿತರು, ಸಂಗಾತಿ ಹೀಗೆ ಎಲ್ಲರ ಜೊತೆಯಲ್ಲೂ ಮುಕ್ತವಾಗಿ ಮಾತನಾಡಲು ಕಲಿಯುವುದು ತುಂಬಾ ಮುಖ್ಯವಾಗುತ್ತದೆ.
6. ಅಹಂಕಾರವನ್ನು ನಿಯಂತ್ರಣದಲ್ಲಿಡುವುದು
ಅತ್ಯಂತ ಯಶಸ್ವಿ ಜನರು ಹೆಚ್ಚಾಗಿ ತಮ್ಮನ್ನು ತಾವು ಜೀವನಪರ್ಯಂತ ಕಲಿಯುವವರು ಅಂತಾನೆ ಭಾವಿಸುತ್ತಾರೆ. ಈ ರೀತಿಯಾದ ಅವರ ವರ್ತನೆ ಕಡಿಮೆ ಯಶಸ್ಸು ಸಾಧಿಸಿದ ಜನರಲ್ಲಿ ನೋಡಲು ಸಿಗುವುದಿಲ್ಲ. ಯಾರು ಬಂದು ತಮ್ಮ ಮೇಲೆ ಪ್ರಭಾವ ಬೀರುತ್ತಾರೋ ಅಂತ ಜನರಿಂದ ಸ್ವಲ್ಪ ದೂರವೇ ಇರಲು ಬಯಸುತ್ತಾರೆ. ನಿಮ್ಮ ಅಹಂ ಅನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ನಿಮ್ಮ ಸುತ್ತಮುತ್ತಲಿನಲ್ಲಿ ಅನೇಕ ರೀತಿಯ ಪಾಠಗಳನ್ನು ನೀವು ಕಲಿಯಬಹುದು.
7. ಭಾವನಾತ್ಮಕ ಬುದ್ಧಿಮತ್ತೆಯನ್ನು ಬೆಳೆಸಿಕೊಳ್ಳುವುದು
ಅತ್ಯಂತ ಹೆಚ್ಚಿನ ಭಾವನಾತ್ಮಕ ಬುದ್ಧಿವಂತಿಕೆ ಹೊಂದಿರುವ ಜನರು ಜೀವನದಲ್ಲಿ ತುಂಬಾನೇ ಯಶಸ್ವಿಯಾಗಿರುತ್ತಾರೆ ಅಂತ ಹೇಳಲಾಗುತ್ತದೆ. ಅವರ ಸ್ಮಾರ್ಟ್ ಅಭ್ಯಾಸಗಳು, ಆಲೋಚನೆಗಳು ಎಲ್ಲವೂ ಅವರ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತವೆ ಅಂತ ಹೇಳಬಹುದು.
ಜನರು ಅನೇಕ ಸಂದರ್ಭಗಳಲ್ಲಿ ತುಂಬಾನೇ ಭಾವನಾತ್ಮಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದಕ್ಕೆ ಈ ಭಾವನಾತ್ಮಕ ಬುದ್ದಿಮತ್ತೆಯು ತುಂಬಾನೇ ಮುಖ್ಯವಾಗಿರುತ್ತದೆ ಎಂದು ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ