• ಹೋಂ
  • »
  • ನ್ಯೂಸ್
  • »
  • Jobs
  • »
  • Success Story: ಅಪಘಾತವಾಗಿ 14 ಆಪರೇಷನ್ಸ್​ಗೆ ಒಳಗಾದ್ರೂ ಛಲ ಬಿಡದೆ UPSC ಪಾಸ್ ಮಾಡಿ IAS ಆದ ದಿಟ್ಟೆ

Success Story: ಅಪಘಾತವಾಗಿ 14 ಆಪರೇಷನ್ಸ್​ಗೆ ಒಳಗಾದ್ರೂ ಛಲ ಬಿಡದೆ UPSC ಪಾಸ್ ಮಾಡಿ IAS ಆದ ದಿಟ್ಟೆ

ಐಎಎಸ್​ ಪ್ರೀತಿ

ಐಎಎಸ್​ ಪ್ರೀತಿ

ಪ್ರೀತಿ ಅವರು ಯಾವುದೇ ಕೋಚಿಂಗ್ ಪಡೆಯದೆ 754ನೇ Rank ಪಡೆಯುವುದರೊಂದಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

  • Share this:

ಯುಪಿಎಸ್‌ಸಿ ಪರೀಕ್ಷೆ (UPSC Exam) ಎಂದರೆ ಸಾಕು ಅನೇಕರು ‘ಅಬ್ಬಬ್ಬಾ.. ಅದು ತುಂಬಾನೇ ಕಠಿಣವಾದ ಪರೀಕ್ಷೆ, ಅದನ್ನು ಸುಲಭವಾಗಿ ಪಾಸ್ ಮಾಡಲು ಆಗುವುದೇ ಇಲ್ಲ’ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಅನೇಕರಿಗೆ ಅನೇಕ ತಾಪತ್ರಯಗಳು ಎದುರಾದರೂ ಸಹ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಬೇಕೆಂಬ ಗುರಿಯ ಮೇಲಿನ ತಮ್ಮ ದೃಷ್ಠಿಯನ್ನು (Goal) ಸ್ವಲ್ಪವೂ ಆಚೆ ಈಚೆ ಆಗುವುದಕ್ಕೆ ಬಿಡೋದಿಲ್ಲ. ಅಂತಹ ಐಎಎಸ್ ಆಕಾಂಕ್ಷಿಗಳು (IAS Aspirants) ನಿಜಕ್ಕೂ ಸಾಧಕರೇ ಸರಿ.


ಇಲ್ಲಿ ಐಎಎಸ್ ಅಧಿಕಾರಿಯೊಬ್ಬರು ತಮಗೆ ಅಪಘಾತವಾಗಿ ಒಂದು ವರ್ಷ ಹಾಸಿಗೆ ಹಿಡಿದಿದ್ದರೂ ಸಹ ಚೇತರಿಸಿಕೊಂಡ ನಂತರ ಪರೀಕ್ಷೆಗೆ ಚೆನ್ನಾಗಿ ಓದಿಕೊಂಡು ಒಳ್ಳೆಯ ರ್ಯಾಂಕ್ ಪಡೆದು ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.


ಅಪಘಾತವಾಗಿ ಒಂದು ವರ್ಷ ಹಾಸಿಗೆ ಹಿಡಿದಿದ್ರಂತೆ ಈ ಐಎಎಸ್ ಅಧಿಕಾರಿ..


ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಸಿವಿಲ್ ಸರ್ವೀಸಸ್ ಭಾರತದ ಕಠಿಣವಾದ ಪರೀಕ್ಷೆಗಳಲ್ಲಿ ಒಂದು ಅಂತ ಪರಿಗಣಿಸಲಾಗುತ್ತದೆ. ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅನೇಕ ವರ್ಷಗಳಿಂದ ಪರೀಕ್ಷೆಗೆ ಸಿದ್ದತೆ ಮಾಡಿಕೊಂಡಿರುತ್ತಾರೆ.


ಅಂತಹ ಒಂದು ಯಶೋಗಾಥೆ ಐಎಎಸ್ ಅಧಿಕಾರಿ ಪ್ರೀತಿ ಬೆನಿವಾಲ್ ಅವರದ್ದು, ಅವರು ರೈಲು ಅಪಘಾತದಲ್ಲಿ ಗಾಯಗೊಂಡು ಒಂದು ವರ್ಷದವರೆಗೆ ಹಾಸಿಗೆ ಹಿಡಿದಿದ್ದರು, ಅದರ ನಂತರ ಅವರು ಯುಪಿಎಸ್‌ಸಿ ಸಿಎಸ್ಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.


2016 ರಲ್ಲಿ, ಪ್ರೀತಿ ಬೆನಿವಾಲ್ ಅವರು ಫುಡ್ ಕೋ-ಆಪರೇಶನ್ ಆಫ್ ಇಂಡಿಯಾದಲ್ಲಿ ತಮ್ಮ ಉದ್ಯೋಗದಲ್ಲಿ ಬಡ್ತಿಗಾಗಿ ಗಾಜಿಯಾಬಾದ್ ನಲ್ಲಿ ಪರೀಕ್ಷೆಗೆ ಕುಳಿತುಕೊಳ್ಳಬೇಕಿತ್ತು. ರೈಲು ನಿಲ್ದಾಣದಲ್ಲಿದ್ದಾಗ, ಅವರು ಪ್ಲಾಟ್ಫಾರ್ಮ್ ಮೇಲಿಂದ ಜಾರಿ ರೈಲು ಹಳಿಗಳ ಮೇಲೆ ಬಿದ್ದರು, ಆಗ ರೈಲಿನ ಕೆಲವು ಬೋಗಿಗಳು ಆಕೆಯ ಮೇಲಿಂದ ಹಾದು ಹೋಗಿವೆ. ಇದರಿಂದಾಗಿ ಅವರಿಗೆ ಮಾರಣಾಂತಿಕ ಗಾಯಗಳಾಗಿದ್ದವು.


ಐಎಎಸ್​ ಪ್ರೀತಿ


ಈ ಅಪಘಾತವಾದ ನಂತರ ಗಂಡ, ಅತ್ತೆ ಮತ್ತು ಮಾವ ಇವರಿಂದ ದೂರವಾದ್ರಂತೆ..


ಇಂತಹ ಒಂದು ಭೀಕರವಾದಂತಹ ಅಪಘಾತದ ನಂತರ ಪ್ರೀತಿ ಅವರು 14 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಚಿಕಿತ್ಸೆಯ ಸಮಯದಲ್ಲಿ, ಬೆನಿವಾಲ್ ಅವರ ಗಾಯಗಳು ಮಾರಣಾಂತಿಕವಾಗಿದ್ದರಿಂದ ಅವರನ್ನು ತುಂಬಾ ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಿಸಲಾಯಿತು. ಈ ಅಪಘಾತದಿಂದಾಗಿ, ಬೆನಿವಾಲ್ ಅವರ ಪತಿ ಮತ್ತು ಅತ್ತೆ ಮಾವಂದಿರು ಅವಳನ್ನು ತೊರೆದರು, ಆದರೆ ಅವರು ಗಂಭೀರ ಸ್ಥಿತಿಯಲ್ಲಿದ್ದರು ಮತ್ತು ಹಾಸಿಗೆ ಹಿಡಿದಿದ್ದರು.


ಇದನ್ನೂ ಓದಿ: UPSC Success Story: ಬಡ ಟೈಲರ್ ದಂಪತಿಯ ಇಬ್ಬರೂ ಮಕ್ಕಳು ಈಗ IPS ಅಧಿಕಾರಿಗಳು


ಇದರ ಹೊರತಾಗಿಯೂ, ಪ್ರೀತಿ ಅವರು ಐಎಎಸ್ ಅಧಿಕಾರಿಯಾಗುವ ತಮ್ಮ ಬಾಲ್ಯದ ಕನಸನ್ನು ಈಡೇರಿಸಿಕೊಳ್ಳಲು ನಿರ್ಧರಿಸಿದ್ದರು. ಅವರು ಚೇತರಿಸಿಕೊಂಡ ನಂತರ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾದರು. ಪ್ರೀತಿ ಅವರು ಯಾವುದೇ ಕೋಚಿಂಗ್ ಇಲ್ಲದೆ 754ನೇ ರ್ಯಾಂಕ್ ಪಡೆಯುವುದರೊಂದಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.


ಐಎಎಸ್ ಪ್ರೀತಿ ಬೆನಿವಾಲ್ ಅವರ ವಿದ್ಯಾಭ್ಯಾಸ ಹೀಗಿತ್ತು ನೋಡಿ..


ಹರಿಯಾಣದ ದುಪೇಡಿ ಮೂಲದ ಪ್ರೀತಿ ಅವರು ನೆರೆಯ ಗ್ರಾಮವಾದ ಫಫ್ದಾನದ ಖಾಸಗಿ ಶಾಲೆಗೆ ಹೋಗಿದ್ದರು. ಅವರು ಪಾಣಿಪತ್ ನಲ್ಲಿ ತಮ್ಮ 10ನೇ ತರಗತಿಯನ್ನು ಪೂರ್ಣಗೊಳಿಸಿದರು ಮತ್ತು ಟಾಪರ್ ಆಗಿ ಹೊರ ಹೊಮ್ಮಿದರು.


ಪ್ರೀತಿ ಅವರು ತಮ್ಮ 12ನೇ ತರಗತಿಯನ್ನು ಮಟ್ಲುಡಾದಲ್ಲಿ ಪೂರ್ಣಗೊಳಿಸಿದರು ಮತ್ತು ನಂತರ ಹರಿಯಾಣದ ಇಸ್ರಾನಾ ಕಾಲೇಜಿನಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಅಧ್ಯಯನ ಮಾಡಿದರು.
ಐಎಎಸ್ ಪ್ರೀತಿ ಬೆನಿವಾಲ್ ಅವರು ಮೊದಲು ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿದ್ರಂತೆ


ಎಂ.ಟೆಕ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರ ಪ್ರೀತಿ ಅವರು 2013 ರಿಂದ 2016 ರವರೆಗೆ ಗ್ರಾಮೀಣ ಬ್ಯಾಂಕಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿದರು. 2016 ರಲ್ಲಿ, ಅವರನ್ನು ಎಫ್‌ಸಿಐ ಅಸಿಸ್ಟೆಂಟ್ ಜನರಲ್ II ಹುದ್ದೆಗೆ ನೇಮಕ ಮಾಡಿತು. ಅವರು 2016 ರಿಂದ 2021 ರವರೆಗೆ ಎಫ್‌ಸಿಐನಲ್ಲಿ ಕೆಲಸ ಮಾಡಿದರು.


ವರದಿಗಳ ಪ್ರಕಾರ, ಜನವರಿ 2021 ರಲ್ಲಿ, ಅವರು ವಿದೇಶಾಂಗ ಸಚಿವಾಲಯದಲ್ಲಿ ಸಹಾಯಕ ಸೆಕ್ಷನ್ ಆಫೀಸರ್ ಆಗಿ ಕೆಲಸ ಮಾಡಿದರು. ಯುಪಿಎಸ್‌ಸಿ ಸಿಎಸ್ಇ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅವರು ಈಗ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

First published: