• ಹೋಂ
  • »
  • ನ್ಯೂಸ್
  • »
  • Jobs
  • »
  • Success Story: ಹಾಸ್ಟೆಲ್​ನಲ್ಲಿದ್ದಾಗ ಬಂದ ಒಂದು ಐಡಿಯಾ ಇಂದು ಈತನನ್ನು ಮಲ್ಟಿ ಮಿಲಿಯನೇರ್ ಮಾಡಿದೆ!

Success Story: ಹಾಸ್ಟೆಲ್​ನಲ್ಲಿದ್ದಾಗ ಬಂದ ಒಂದು ಐಡಿಯಾ ಇಂದು ಈತನನ್ನು ಮಲ್ಟಿ ಮಿಲಿಯನೇರ್ ಮಾಡಿದೆ!

ಅಂಕಿತ್ ಅಗರ್ವಾಲ್

ಅಂಕಿತ್ ಅಗರ್ವಾಲ್

37 ವರ್ಷ ವಯಸ್ಸಿನ ಅಂಕಿತ್ ಅಗರ್ವಾಲ್ ತಮ್ಮದೇ ಆದ ಸ್ಟಾರ್ಟ್‌ಅಪ್‌ ಆರಂಭಿಸುವ ಮೂಲಕ ಇಂದು ಮಲ್ಟಿ ಮಿಲಿಯನ್‌ ಡಾಲರ್‌ ಒಡೆಯನಾಗಿದ್ದಾರೆ.

  • Trending Desk
  • 5-MIN READ
  • Last Updated :
  • Share this:

    ಏನಾದರೂ ಸಾಧನೆ ಮಾಡಬೇಕು (Achievement) ಎನ್ನುವ ಹಂಬಲ, ಛಲ, ಸರಿಯಾದ ಯೋಜನೆ, ಅದು ಜನಕ್ಕೆ ಉಪಯೋಗವಾಗುತ್ತೆ ಎನ್ನುವ ಪರಿಕಲ್ಪನೆ ಹೊಂದಿರುವ ಉದ್ಯಮಗಳು ಖಂಡಿತ ಯಶಸ್ಸು (Success) ಕಾಣುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಅದು ದೆಹಲಿಯ ಅಂಕಿತ್ ಅಗರ್ವಾಲ್ ( Ankit Aggarwal) . 37 ವರ್ಷ ವಯಸ್ಸಿನ ಅಂಕಿತ್ ಅಗರ್ವಾಲ್ ತಮ್ಮದೇ ಆದ ಸ್ಟಾರ್ಟ್‌ಅಪ್‌ ಆರಂಭಿಸುವ ಮೂಲಕ ಇಂದು ಮಲ್ಟಿ ಮಿಲಿಯನ್‌ ಡಾಲರ್‌ ಒಡೆಯನಾಗಿದ್ದಾರೆ. ಅಂಕಿತ್‌ ಆರಂಭಿಸಿದ ಈ ಸ್ಟಾರ್ಟ್‌ಅಪ್‌ ಈಗ ಮಿಲಿಯನ್‌ ಜನರಿಗೆ ಉಪಯುಕ್ತವಾಗಿದ್ದು, ಉದ್ಯಮ ಕೂಡ ಬೆಳವಣಿಗೆ ಕಾಣುತ್ತಿದೆ.


    ಅಂಕಿತ್‌ ಆರಂಭಿಸಿದ ಸ್ಟಾರ್ಟ್‌ಅಪ್‌ ಏನು?
    ಅಂಕಿತ್‌ ಲಿಂಕ್ಡ್‌ಇನ್‌, ನೌಕರಿ ಡಾಟ್‌ ಕಾಂನಂತೆಯೇ ಅನ್‌ಸ್ಟಾಪ್‌ ಎಂಬ ವೆಬ್‌ಸೈಟ್‌ ಅನ್ನು ಆರಂಭಿಸಿದ್ದಾರೆ. ಇದು ಕೆಲಸ ಹುಡುಕವವರಿಗೆ ಮಾಹಿತಿ ಒದಗಿಸುವ ಮತ್ತು ಇನ್ನೂ ಹತ್ತಾರು ರೀತಿಯಲ್ಲಿ ವಿದ್ಯಾರ್ಥಿಗಳಿಗೆ, ಉದ್ಯೋಗಾಂಕ್ಷಿಗಳಿಗೆ ನೇಮಕಾತಿ ವೇದಿಕೆಯಾಗಿ ಸಹಾಯ ಮಾಡುತ್ತದೆ. ಅನ್‌ಸ್ಟಾಪ್‌ ವೇದಿಕೆ ಈಗ 5 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಈ ವರ್ಷ $2.5 ಮಿಲಿಯನ್ ಆದಾಯವನ್ನು ಗಳಿಸಿದೆ.




    ಬ್ಲಾಗ್‌ರ್‌ನಿಂದ ಬಹು-ಮಿಲಿಯನ್ ಕಂಪನಿ ಕಟ್ಟಿದ ಅಂಕಿತ್‌
    ಅಂಕಿತ್‌ ಹಾಸ್ಟೆಲ್‌ನಲ್ಲಿ ಇರುವಾಗ ಇಂತದ್ದೊಂದು ಕಲ್ಪನೆಯನ್ನು ಯೋಜಿಸಿದರು. ಕೆಲಸ ಹುಡುಕಲು, ಪ್ಲೇಸ್‌ಮೆಂಟ್‌ಗಾಗಿ ವಿದ್ಯಾರ್ಥಿಗಳು ಕಷ್ಟಪಡುತ್ತಿರುವಾಗ ಇಂತಹವರಿಗೆ ಉಪಯೋಗವಾಗಲೆಂದು ಮೊದಲಿಗೆ ಇದಕ್ಕೆ ಸಂಬಂಧಿಸಿದ ಬ್ಲಾಗ್‌ ಒಂದನ್ನು ಆರಂಭಿಸಿದರು. ಈ ಬ್ಲಾಗ್‌ನಿಂದ ಆರಂಭವಾದ ಯೋಜನೆ ಕೊನೆಗೆ ಪೂರ್ಣ ಪ್ರಮಾಣದ ಬಹು-ಮಿಲಿಯನ್ ಡಾಲರ್ ಸ್ಟಾರ್ಟ್‌ಅಪ್ ಆಗಿ ಹೊರಹೊಮ್ಮಿತು.


    “ನಾನು IMT ಯಲ್ಲಿ MBA ಓದುತ್ತಿದ್ದೆ ಮತ್ತು ವಿವಿಧ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಕಂಪನಿಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ಬಯಸುತ್ತಿದ್ದೆ. ಆದರೆ ಈ ಕಾರ್ಯಕ್ರಮಗಳ ಬಗ್ಗೆ ನನಗೆ ಸಮಯಕ್ಕೆ ಸರಿಯಾಗಿ ತಿಳಿಯುತ್ತಲೇ ಇರಲಿಲ್ಲ. ಹೀಗಾಗಿ ನನ್ನಂತೇ ಇತರರಿಗೆ ತೊಂದರೆಯಾಗದಂತೆ ಏನನ್ನಾದರೂ ರೂಪಿಸಬೇಕು ಎಂದಾಗಲೇ ಈ ಕಲ್ಪನೆ ಹುಟ್ಟಿಕೊಂಡಿತು. ಈ ಬಗ್ಗೆ ಮಾಹಿತಿ ಸಿಕ್ಕ ಬಳಿಕ ನಾನು ಬ್ಲಾಗ್‌ನಲ್ಲಿ ಪೋಸ್ಟ್‌ ಮಾಡುತ್ತಿದೆ. ಮೊದಲಿಗೆ ಬ್ಲಾಗ್‌ ಮೂಲಕ ಇದನ್ನು ನಡೆಸುತ್ತಿದೆ, ಆದರೆ ಈಗ ಹೆಚ್ಚುವರಿ ವಿಚಾರಗಳನ್ನು ಜನರಿಗೆ ತಲುಪಿಸುವ ಮೂಲಕ ಬ್ಲಾಗ್‌ ಈಗ ಕಂಪನಿಯಾಗಿ ಬೆಳೆದಿದೆ" ಎಂದು ಅಂಕಿತ್‌ ತಮ್ಮ ಆರಂಭದ ಹಾದಿಯನ್ನು ನೆನಪಿಸಿಕೊಂಡರು.




    ಅಂಕಿತ್ ವಿದ್ಯಾಭ್ಯಾಸದ ಜೊತೆಯೇ ಬ್ಲಾಗ್‌ ನಡೆಸುತ್ತಿದ್ದರು. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಪಿಎಚ್‌ಡಿ ಮುಂದುವರೆಸಲು ತೆರಳಿದಾಗ ಇಲ್ಲಿಯೂ ವಿದ್ಯಾರ್ಥಿಗಳು ಕಷ್ಟ ಅನುಭವಿಸಿದನ್ನು ಕಂಡುಕೊಂಡರು. "ಹಾರ್ವರ್ಡ್‌ನಲ್ಲೂ ನಾನು ಅದೇ ಪ್ರವೃತ್ತಿಯನ್ನು ಗಮನಿಸಿದ್ದೇನೆ. ವಿದ್ಯಾರ್ಥಿಗಳು ಹೆಚ್ಚಿನ ಅವಕಾಶಗಳನ್ನು ಅನ್ವೇಷಿಸಲು ಮತ್ತು ಅವರು ಯಾವ ಉದ್ಯಮಕ್ಕೆ ಸೂಕ್ತವೆಂದು ಕಂಡುಕೊಳ್ಳಲು ಕಷ್ಟಪಡುತ್ತಿದ್ದರು. ನಾನು ಈ ಬ್ಲಾಗ್‌ ಇಷ್ಟಕ್ಕೇ ಸೀಮಿತವಾಗಿಲ್ಲ. ಇದು ಇನ್ನೂ ಹೆಚ್ಚಿನ ಪ್ರಯೋಜನ ಹೊಂದಿದೆ ಎಂದು ಅರ್ಥಮಾಡಿಕೊಂಡೆ. ಮತ್ತು ಇದು ಹೆಚ್ಚಿನ ಆದಾಯ ನೀಡುವ ಉದ್ಯಮ ಎಂದು ನಾನು ಭಾವಿಸಿದೆ" ಎನ್ನುತ್ತಾರೆ ಅಂಕಿತ್‌.


    ಅನ್‌ಸ್ಟಾಪ್‌ ವೆಬ್‌ ಆರಂಭವಾಗಿದ್ದು ಹೇಗೆ?
    ನಂತರ ಇದನ್ನು ಕಂಪನಿಯಾಗಿ ಕಟ್ಟಲು ಅಂಕಿತ್‌ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ರಿಲಯನ್ಸ್ ಅವರನ್ನು ಸಂಪರ್ಕ ಮಾಡಿದರು. "ಇದು ನನಗೆ ಮುಂದುವರಿಯಲು ದೊಡ್ಡ ಪ್ರೇರಣೆ ನೀಡಿತು. ಉದ್ಯಮದ ಇಬ್ಬರು ದೊಡ್ಡ ದೈತ್ಯರನ್ನು ಭೇಟಿ ಮಾಡಿ ನಾನು ವಿದ್ಯಾರ್ಥಿಗಳನ್ನು ತಲುಪಬಹುದೇ ಮತ್ತು ಉದ್ಯೋಗದಾತ ಬ್ರಾಂಡ್ ಅನ್ನು ಪ್ರಾರಂಭಿಸಬಹುದೇ ಎಂದು ಅವರು ನನ್ನನ್ನು ಕೇಳಿದರು. ಆ ಬ್ಲಾಗ್ ಅನ್ನು ವೆಬ್‌ಸೈಟ್ ಆಗಿ ಪರಿವರ್ತಿಸಲು ಇದು ಸರಿಯಾದ ಸಮಯ ಎಂದು ನಾನು ನಿರ್ಧರಿಸಿದೆ” ಎಂದು ಅವರು ಹೇಳುತ್ತಾರೆ. 2017 ರಲ್ಲಿ, ಅಂಕಿತ್ ತನ್ನ ಬ್ಲಾಗ್ ಅನ್ನು ವೆಬ್‌ಸೈಟ್‌ ಆಗಿ ನಿರ್ಮಿಸಲು ಮುಂದಾದರು. ಹೀಗೆ ಆರಂಭವಾದ ವೆಬ್‌ಸೈಟ್‌ ಪ್ರಸ್ತುತ ಮಿಲಿಯನ್‌ ಬಳಕೆದಾರರನ್ನು ತಲುಪಿದೆ.




    ಅನ್‌ಸ್ಟಾಪ್‌ ಪ್ಲಾಟ್‌ಫಾರ್ಮ್ ಹೇಗೆ ಕಾರ್ಯನಿರ್ವಹಿಸುತ್ತದೆ?
    ಪ್ಲಾಟ್‌ಫಾರ್ಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುತ್ತಾ ಅಂಕಿತ್ ಹೇಳುತ್ತಾರೆ, “ಅನ್‌ಸ್ಟಾಪ್ Naukri.com, LinkedIn ಮತ್ತು Mettl ನಂತಹ ವೇದಿಕೆಯನ್ನೇ ಹೆಚ್ಚುಕಮ್ಮಿ ಹೋಲುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನೀವು ಕೆಲಸ ಮಾಡುವ ವೃತ್ತಿಪರರಾಗಿದ್ದರೆ ಅಥವಾ ವಿದ್ಯಾರ್ಥಿಯಾಗಿದ್ದರೆ, ಹೊಸ ಕೌಶಲ್ಯಗಳನ್ನು ಕಲಿಯಲು, ಹೊಸ ಉದ್ಯೋಗದಾತರಿಗೆ ಆ ಕೌಶಲ್ಯಗಳನ್ನು ಪ್ರದರ್ಶಿಸಲು, CV ಅಂಕಗಳನ್ನು ಪಡೆಯಲು ಮತ್ತು ಅಂತಿಮವಾಗಿ, ನೇಮಕಾತಿಯಲ್ಲಿ ಪ್ರತಿಫಲವನ್ನು ಪಡೆಯಲು ನಿಮಗೆ ಸಹಾಯ ಮಾಡುವ ಮೂಲಕ ನಾವು ನಿಮ್ಮ ಪ್ರತಿಭೆಯ ಪ್ರಯಾಣವನ್ನು ಹೆಚ್ಚಿಸುತ್ತೇವೆ" ಎಂದಿದ್ದಾರೆ.


    ಇಂದು ನಾವು 5 ಮಿಲಿಯನ್ ಬಳಕೆದಾರರು, 10,000 ಕಾಲೇಜುಗಳು ಮತ್ತು 1,000 ಕ್ಕೂ ಹೆಚ್ಚು ಕಂಪನಿಗಳು ತಮ್ಮ ಅವಕಾಶಗಳನ್ನು ʼಅನ್‌ಸ್ಟಾಪ್‌ʼ ವೇದಿಕೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡುತ್ತಾರೆ.


    ಹಲವು ಉದ್ಯಮಗಳಲ್ಲಿ ಸೋಲು ಕಂಡಿದ್ದ ಅಂಕಿತ್
    ನನ್ನ ಮೊದಲ ಉದ್ಯಮದ ಹೆಜ್ಜೆ ಅನ್‌ಸ್ಟಾಪ್‌ ಅಲ್ಲ. ಇದಕ್ಕಿಂತ ಮುನ್ನ ನಾನು ವಿವಿಧ ಸ್ಟಾರ್ಟ್‌ಅಪ್‌ಗಳಲ್ಲಿ ನನ್ನ ಅದೃಷ್ಟ ಪರೀಕ್ಷೆ ಮಾಡಿದ್ದೇನೆ ಮತ್ತು ವಿಫಲವಾಗಿದ್ದೇನೆ. ನನ್ನ ಹಿಂದಿನ ಉದ್ಯಮಗಳಲ್ಲಿ ನಾನು ನನ್ನ ಸಹ-ಸಂಸ್ಥಾಪಕರ ಮೇಲೆ ಹೆಚ್ಚು ಅವಲಂಬಿತನಾಗಿದ್ದೆ. ಆದರೆ ಅನ್‌ಸ್ಟಾಪ್‌ನಲ್ಲಿ ನನ್ನದೇ ನಿರ್ಧಾರ, ಯೋಜನೆ ಆಗಿದ್ದರಿಂದ ನನಗೆ ಇಲ್ಲಿ ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಸಹಾಯವಾಯಿತು ಎನ್ನುತ್ತಾರೆ.


    ಇದನ್ನೂ ಓದಿ: Career Secret: 9 to 5 ಜಾಬ್ ಬಿಟ್ಟವರೇ ಇಂದು ದೊಡ್ಡ ಶ್ರೀಮಂತರಾಗಿರೋದು! ಏನಿದು ವೃತ್ತಿ ರಹಸ್ಯ?


    ವಾಣಿಜ್ಯೋದ್ಯಮಿ ಅಂಕಿತ್ ಇತ್ತೀಚೆಗೆ ಶಾರ್ಕ್ ಟ್ಯಾಂಕ್ ಸೀಸನ್ 2 ನಲ್ಲಿ ಕಾಣಿಸಿಕೊಂಡಿದ್ದು, 5 ಕೋಟಿ ರೂಗಳನ್ನು ಸಹ ಪಡೆದರು. ಆದರೆ ಈ ಹಣವನ್ನು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. "


    ಭವಿಷ್ಯದ ಯೋಜನೆಗಳ ಬಗ್ಗೆ ಹೇಳಿದ ಅಂಕಿತ್‌, “ಸದ್ಯಕ್ಕೆ ನಾವು ಸುಸ್ಥಿರ ಬೆಳವಣಿಗೆಯನ್ನು ನೋಡುತ್ತಿದ್ದೇವೆ. ನಾವು ವಿದ್ಯಾರ್ಥಿಗಳು ಮತ್ತು ಉದ್ಯೋಗದಾತರ ಸಮುದಾಯವನ್ನು ರೂಪಿಸಲು ಬಯಸುತ್ತೇವೆ. ನಮ್ಮ ಐದು ಮಿಲಿಯನ್ ಬಳಕೆದಾರರನ್ನು 10, 20 ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಗೆ ತಲುಪಿಸಲು ಬೇಕಾದ ಎಲ್ಲಾ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ನಾವು ಸದ್ಯಕ್ಕೆ ಕಂಪನಿಯ ಆದಾಯದ ಕಡೆ ನೋಡುತ್ತಿಲ್ಲ ಬದಲಿಗೆ ಸಮುದಾಯದ ಕಡೆ ನೋಡುತ್ತಿದ್ದೇವೆ ಎಂದು ಹೇಳಿದರು.

    Published by:Kavya V
    First published: