ವಿಶ್ವದಾದ್ಯಂತ ಅನೇಕ ಸ್ಟಾರ್ಟ್‌ಅಪ್‌ಗಳು (Startups) ಹಣಕಾಸಿನ ಮುಗ್ಗಟ್ಟು ಮತ್ತು ಇತರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಂತಹ ಕಠಿಣ ಹಣಕಾಸಿನ ಪರಿಸ್ಥಿತಿಯಲ್ಲಿ, ಉದ್ಯೋಗಾಕಾಂಕ್ಷಿಗಳು ತಮ್ಮ ತಮ್ಮ ಉದ್ಯೋಗಗಳ (Job) ಭದ್ರತೆಗಾಗಿ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ (Corporate Company) ಉದ್ಯೋಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ.
ಅಪ್ನಾ ಡಾಟ್ ಕಾಮ್ ಸಮೀಕ್ಷೆಯ ವರದಿ ಏನ್ ಹೇಳ್ತಿದೆ?
ಉದ್ಯೋಗಗಳು ಮತ್ತು ವೃತ್ತಿಪರ ನೆಟ್‌ವರ್ಕ್ ಪ್ಲಾಟ್‌ಫಾರ್ಮ್ ಅಪ್ನಾ ಡಾಟ್ ಕಾಮ್ (Apna.co) ನ ಸಮೀಕ್ಷೆಯ ವರದಿಯ ಪ್ರಕಾರ “ಶೇಕಡಾ 73 ರಷ್ಟು ಉದ್ಯೋಗಾಕಾಂಕ್ಷಿಗಳು ಸ್ಥಿರವಾಗಿರುವ ಮತ್ತು ಯಾವಾಗಲೂ ಉದ್ಯೋಗ ಭದ್ರತೆ ನೀಡುವ ಸ್ಥಾಪಿತ ಕಂಪನಿಗಳಲ್ಲಿ ಕೆಲಸ ಮಾಡಲು ಮತ್ತು ಆ ಕಂಪನಿಯಲ್ಲಿ ಬಹಳ ದಿನಗಳವರೆಗೆ ಉದ್ಯೋಗ ಮಾಡಲು ಉದ್ಯೋಗಸ್ಥರು ಬಯಸುತ್ತಿದ್ದಾರೆ” ಎಂದು ತಿಳಿಸಿದೆ.
ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಉದ್ಯೋಗಾಕಾಂಕ್ಷಿಗಳೆಷ್ಟು? ಸಮೀಕ್ಷೆಯ ಅಧ್ಯಯನ ಏನು ಹೇಳ್ತಿದೆ?
“ಈ ಸಮೀಕ್ಷೆಯಲ್ಲಿ 10,000 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಮತ್ತು 1,000 ಕ್ಕೂ ಹೆಚ್ಚು ಹೆಚ್ಆರ್ಗಳು ಪಾಲ್ಗೊಂಡಿದ್ದಾರೆ. ಈ ಸಮೀಕ್ಷೆಯಿಂದ ತಿಳಿದುಬಂದ ವಿಚಾರವೇನಂದ್ರೆ ಇನ್ನು ಶೇಕಡಾ 27 ರಷ್ಟು ಉದ್ಯೋಗಿಗಳು ತಮ್ಮ ವೃತ್ತಿಜೀವನದ ಬೆಳವಣಿಗೆಗೆ ಸ್ಟಾರ್ಟ್‌ಅಪ್‌ಗಳು ಉತ್ತಮವೆಂದು ತಿಳಿದಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಹಲವು ಹುದ್ದೆಗಳ ನೇಮಕ- ತಡಮಾಡದೇ ಈಗಲೇ ಅಪ್ಲೈ ಮಾಡಿ
ಹಾಗೆಯೇ ಇತರ ಉದ್ಯೋಗಗಳ ವೃತ್ತಿಪರರು ತಮ್ಮ ಪ್ರಸ್ತುತ ಸಂಸ್ಥೆಯಲ್ಲಿ ಬೆಳೆಯಲು ಉನ್ನತ ಕೌಶಲ್ಯಗಳನ್ನು ಕಲಿಯುವುದರ ಮೇಲೆ ತಮ್ಮ ಸಾಮರ್ಥ್ಯವನ್ನೆಲ್ಲ ಒಟ್ಟುಗೂಡಿಸಿಕೊಳ್ಳುತ್ತಿದ್ದಾರೆ. ತಮ್ಮನ್ನು ತಾವು ಅಪ್‌ಡೇಟ್ ಮಾಡಿಕೊಳ್ಳುತ್ತಿದ್ದಾರೆ” ಎಂದು ಸಮೀಕ್ಷೆಯ ಅಧ್ಯಯನ ತಿಳಿಸುತ್ತಿದೆ.
ಈ ಸಮೀಕ್ಷೆಯ ಕುರಿತು ಅಪ್ನಾ ಡಾಟ್ ಕಾಮ್‌ನ ಸಿಇಒ ಹೇಳುವುದೇನು?
ಅಪ್ನಾ ಡಾಟ್ ಕಾಮ್‌ನ (apna.co) ನ ಸಂಸ್ಥಾಪಕ ಮತ್ತು ಸಿಇಓ (CEO) ಆಗಿರುವ ನಿರ್ಮಿತ ಪಾರಿಖ್ ಅವರು , "ಉತ್ತಮ ವೃತ್ತಿ ಬೆಳವಣಿಗೆಯ ನಿರೀಕ್ಷೆಗಳಿಗಾಗಿ ಈಗ ಸ್ಥಿರ ಮತ್ತು ಸ್ಥಾಪಿತ ಕಂಪನಿಗಳತ್ತ ಹೆಚ್ಚು ಒಲವು ತೋರುತ್ತಿರುವ ಉದ್ಯೋಗಾಕಾಂಕ್ಷಿಗಳ ಬದಲಾವಣೆಯ ಆದ್ಯತೆಗಳೊಂದಿಗೆ ಭಾರತದ ಉದ್ಯೋಗ ಮಾರುಕಟ್ಟೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ" ಎಂದು ಹೇಳಿದರು.
ಕೆರಿಯರ್ ಗ್ರೋಥ್ ವರ್ಸಸ್ ವರ್ಕ್ ಲೈಫ್ ಬ್ಯಾಲೆನ್ಸ್
ಉದ್ಯೋಗದಾತರು ಮೊದಲಿಗೆ ಉದ್ಯೋಗಾಕಾಂಕ್ಷಿಗಳಲ್ಲಿ ಪರೀಕ್ಷಿಸುವ ವಿಧಾನವಂದ್ರೆ ಅದುವೇ ಕೆಲಸದಲ್ಲಿರುವ ಅವರ ಕೌಶಲ್ಯತೆ. ಕೌಶಲ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ಎಲ್ಲ ಕಂಪನಿಗಳು ಈಗ ನೀಡುತ್ತಿವೆ. ಉದ್ಯೋಗಾಕಾಂಕ್ಷಿಗಳು ಉದ್ಯೋಗವನ್ನು ಹುಡುಕುತ್ತಿರುವಾಗ ತಮ್ಮ ಉದ್ಯೋಗದ ಬೆಳವಣಿಗೆಯ ಅವಕಾಶಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
ತಮ್ಮ ಕೆರಿಯರ್ ಗ್ರೋಥ್ ಜೊತೆಗೆ ಕಂಪನಿಯ ವರ್ಕ್ ಕಲ್ಚರ್ ಕಡೆಗೂ ಸಹ ಉದ್ಯೋಗಿಗಳು ಈಗೀಗ ಹೆಚ್ಚಿನ ಗಮನ ವಹಿಸುತ್ತಿದ್ದಾರೆ. ಇದರಿಂದ ತಮ್ಮ ದಿನನಿತ್ಯದ ಜೀವನ ಸುಲಭವಾಗುತ್ತದೆ ಎಂಬುದು ಹಲವು ಉದ್ಯೋಗಿಗಳ ಮನದ ಮಾತು.
ವರದಿಯ ಪ್ರಕಾರ, “ಶೇಕಡಾ 73 ರಷ್ಟು ಭಾರತೀಯರು ಉದ್ಯೋಗವನ್ನು ಸರ್ಚ್ ಮಾಡುವಾಗ ವೃತ್ತಿಜೀವನದ ಬೆಳವಣಿಗೆಯನ್ನು ಪ್ರಾಥಮಿಕ ಅಂಶವೆಂದು ಪರಿಗಣಿಸುತ್ತಾರೆ. ಇದು ವರ್ಕ್-ಲೈಪ್ ಅನ್ನು ಬ್ಯಾಲನ್ಸ್ ಮಾಡುವುದಲ್ಲದೇ, ಕೆಲಸದ ಸಮಯವನ್ನು ಸಹ ಕೆಲವೊಮ್ಮೆ ಹೆಚ್ಚಿಸಬಹುದು” ಎಂದು ಹೇಳುತ್ತಿದೆ.
ಮತ್ತೊಂದೆಡೆ, ಸಮೀಕ್ಷೆಯ ಪ್ರಕಾರ, “ಭಾರತದಲ್ಲಿ ಉದ್ಯೋಗದಾತರು ಉದ್ಯೋಗಾಕಾಂಕ್ಷಿಗಳ ಅಗತ್ಯಗಳನ್ನು ಗುರುತಿಸಿ, ಅವುಗಳಿಗೆ ತಕ್ಕಂತೆ ಉದ್ಯೋಗಗಳಲ್ಲಿ ವೃತ್ತಿಪರ ಅಭಿವೃದ್ಧಿ ಅವಕಾಶಗಳನ್ನು ನೀಡುತ್ತಿದ್ದಾರೆ.
ಇದು ಭಾರತದಲ್ಲಿನ ಶೇಕಡಾ 72 ರಷ್ಟು ಉದ್ಯೋಗದಾತರಿಗೆ ಮೊದಲ ಆದ್ಯತೆಯಾಗಿದೆ ಎಂದ್ರೂ ತಪ್ಪಾಗಲಾರದು. ಇದರ ನಂತರ ಇನ್ನು ಶೇಕಡಾ 22 ರಷ್ಟು ಉದ್ಯೋಗದಾತರು ತಮ್ಮ ಕಂಪನಿಯ ಉದ್ಯೋಗಗಳಿಗೆ ಉದ್ಯೋಗಾಕಾಂಕ್ಷಿಗಳು ಹೊಂದಿಕೊಳ್ಳುವ ಕೆಲಸದ ಸಮಯದ ಬಗ್ಗೆ ಯೋಜನೆ ಮಾಡುತ್ತಾರೆ” ಎಂದಿದೆ.
ಉನ್ನತ ಕೌಶಲ್ಯಕ್ಕೆ ಆದ್ಯತೆ ನೀಡುತ್ತಿರುವ ಹಲವು ಕಂಪನಿಗಳು
ಅಧ್ಯಯನದ ಪ್ರಕಾರ, 10 ಉದ್ಯೋಗದಾತರಲ್ಲಿ 9 ಉದ್ಯೋಗದಾತರು ನುರಿತ ವೃತ್ತಿಪರರ ನೇಮಕಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಉನ್ನತ ಕೌಶಲ್ಯವನ್ನು ಒಂದು ಪ್ರಮುಖ ಮಾನದಂಡವಾಗಿ ಗುರುತಿಸಿದ್ದಾರೆ. ಅದರೊಂದಿಗೆ, 10 ಉದ್ಯೋಗದಾತರಲ್ಲಿ 6 ಮಂದಿ ಮಾತ್ರ ತಮ್ಮ ಸಂಸ್ಥೆಗಳಲ್ಲಿ ಕೌಶಲ್ಯ ಹೆಚ್ಚಿಸುವ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.
ಶೇಕಡಾ 65 ರಷ್ಟು ವೃತ್ತಿಪರರು ಕೆಲಸದ ಸಂದರ್ಶನದಲ್ಲಿ ಯಶಸ್ವಿಯಾಗಲು ಪ್ರತಿಷ್ಠಿತ ಸಂಸ್ಥೆಯಿಂದ ಪಡೆದ ಪದವಿಯಷ್ಟೇ ಮುಖ್ಯ, ಈ ಕೌಶಲ್ಯಗಳು ಸಹ ಆಗಿವೆ ಎಂದಿದ್ದಾರೆ. ಆದ್ದರಿಂದ ಉನ್ನತ ಕೌಶಲ್ಯಗಳನ್ನು ಪ್ರಮುಖ ಆದ್ಯತೆಯಾಗಿ ಉದ್ಯೋಗದಾತರು ಇತ್ತಿಚೀಗೆ ಪರಿಗಣಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ʼದಿ ಫ್ಯೂಚರ್ ಆಫ್ ಜಾಬ್ಸ್ ರಿಪೋರ್ಟ್ 2023ʼ ರಲ್ಲಿ ಇರುವ ಪ್ರಮುಖ ಅಂಶವೇನು?
ವರ್ಲ್ಡ್ ಎಕನಾಮಿಕ್ ಫೋರಮ್ ಈ ತಿಂಗಳ ಆರಂಭದಲ್ಲಿ 'ದಿ ಫ್ಯೂಚರ್ ಆಫ್ ಜಾಬ್ಸ್ ರಿಪೋರ್ಟ್ 2023' ನ ನಾಲ್ಕನೇ ಆವೃತ್ತಿಯನ್ನು ಬಿಡುಗಡೆ ಮಾಡಿತು. ಈ ಆವೃತ್ತಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಸುಮಾರು ಕಾಲು ಭಾಗದಷ್ಟು ಉದ್ಯೋಗಗಳು (ನಿಖರವಾಗಿ ಶೇಕಡಾ 23 ರಷ್ಟು) ಬದಲಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಉದ್ಯೋಗ ಕ್ಷೇತ್ರದಲ್ಲಿ ಜಾಗತಿಕ ಸರಾಸರಿ ಶೇಕಡಾ 23 ರಷ್ಟಕ್ಕೆ ಹೋಲಿಸಿದರೆ ಭಾರತವು ಶೇಕಡಾ 22 ರಷ್ಟು ಕುಸಿತವನ್ನು ಕಾಣಲಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಮ್ (WEF) ವರದಿ ಹೇಳಿದೆ. ಶೇಕಡಾ 61 ರಷ್ಟು ಭಾರತೀಯ ಕಂಪನಿಗಳು ಇಎಸ್‌ಜಿ ಮಾನದಂಡಗಳ ವ್ಯಾಪಕ ಅನ್ವಯಿಕೆಗಳು ಉದ್ಯೋಗದ ಬೆಳವಣಿಗೆಯನ್ನು ಹೆಚ್ಚಿಸುತ್ತವೆ ಎಂದು ಭಾವಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ