ಉತ್ತಮ ವೇತನದ (Salary) ಉದ್ಯೋಗ (Job) ಪಡೆಯಬೇಕು ಎಂದಾದರೆ ಚುರುಕುತನ, ಬುದ್ಧಿವಂತಿಕೆ ಹಾಗೂ ಸ್ಮಾರ್ಟ್‌ನೆಸ್ (Smartness) ಇರಬೇಕು ಎಂಬುದು ಇನ್ನು ಮುಂದೆ ಹಳೆಯ ವಾದವಾಗಿದೆ ಏಕೆ ಗೊತ್ತೇ? ಇತ್ತೀಚೆಗೆ ನಡೆದ ಸಮೀಕ್ಷೆಯ ಪ್ರಕಾರ ಕಡಿಮೆ ಬುದ್ಧಿವಂತರು ಕೂಡ ಕೈತುಂಬಾ ಸಂಬಳ ಪಡೆಯುವ ವೇತವನ್ನು ಗಿಟ್ಟಿಸಿಕೊಳ್ಳಬಹುದು ಎಂಬ ಅಂಶವನ್ನು ಒತ್ತಿಹೇಳಿದ್ದು, ಉತ್ತಮ ವೇತನ ಪಡೆಯುವಲ್ಲಿ ಬುದ್ಧಿವಂತಿಕೆ ಹಾಗೂ ಸ್ಮಾರ್ಟ್‌ನೆಸ್ ಅಷ್ಟೊಂದು ಪರಿಣಾಮಕಾರಿಯಲ್ಲ ಎಂಬ ತತ್ವವನ್ನು ಇದು ಮಂಡಿಸಿದೆ. ಅಧ್ಯಯನಕಾರರು ಕೈ ತುಂಬಾ ಸಂಬಳಕ್ಕೆ ಇರಬೇಕಾದ ಕೆಲವೊಂದು ಅಂಶಗಳನ್ನು ತಿಳಿಸಿದ್ದು, ಇದರಿಂದ ಕಡಿಮೆ ಬುದ್ಧಿವಂತರು ಕೂಡ ಉನ್ನತ ಸಂಬಳದ ಹುದ್ದೆಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದ್ದಾರೆ. ಏಕೆ ಎಂಬುದನ್ನು ತಿಳಿದುಕೊಳ್ಳೋಣ.
ಮಾನದಂಡ ಮುಖ್ಯವಾಗುತ್ತದೆ
ಜನವರಿಯಲ್ಲಿ ಯುರೋಪಿಯನ್ ಸೋಶಿಯೋಲಾಜಿಕಲ್ ರಿವ್ಯೂನಲ್ಲಿ ಪ್ರಕಟವಾದ ಸಂಶೋಧನೆಯು ಕಡಿಮೆ ಬುದ್ಧಿವಂತರು ಕೂಡ ಉತ್ತಮ ವೇತನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದನ್ನು ಕಂಡು ಹಿಡಿದಿದೆ. ಆದರೆ ವೇತನದ ಮಟ್ಟವನ್ನು ಕೂಡ ಸಮೀಕ್ಷೆ ತಿಳಿಸಿದ್ದು ಆ ಮಟ್ಟದವರೆಗೆ ಮಾತ್ರ ಸಾಮಾನ್ಯ ಬುದ್ಧಿವಂತರು ಉತ್ತಮ ಸಂಬಳವನ್ನು ಪಡೆಯುತ್ತಾರೆ ತದನಂತರ ಇದು ಕೆಲವೊಂದು ಮಾನದಂಡಗಳ ಮೇಲೆ ನಿರ್ಧಾರಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಪುರಾವೆಗಳಿಲ್ಲ ಎಂದ ತಜ್ಞರು
ಹೆಚ್ಚಿನ ವೇತನ ಪಡೆದುಕೊಳ್ಳುವವರು ಬುದ್ಧಿವಂತರು ಹಾಗೂ ಸ್ಮಾರ್ಟ್ ವ್ಯಕ್ತಿಗಳು, ಕೇವಲ ಅರ್ಧದಷ್ಟು ವೇತನ ಗಳಿಸುವವರಿಗಿಂತ ಹೆಚ್ಚು ಅರ್ಹರು ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಸಮಾಜಶಾಸ್ತ್ರದ ಹಿರಿಯ ಸಹಾಯಕ ಪ್ರಾಧ್ಯಾಪಕ ಮಾರ್ಕ್ ಕೆಯುಶ್ನಿಗ್ ತಿಳಿಸಿದ್ದಾರೆ.
ಉದ್ಯೋಗದಲ್ಲಿ ಯಶಸ್ಸಿಗೆ ಬುದ್ಧಿವಂತಿಕೆಯೊಂದೇ ಕಾರಣವಲ್ಲ ಎಂದು ತಿಳಿಸಿರುವ ಲೇಖಕರು ಕೌಟುಂಬಿಕ ಅಂಶಗಳು, ಸಾಮರ್ಥ್ಯ ಹಾಗೂ ಅದೃಷ್ಟ ಕೂಡ ಕೈಹಿಡಿಯಬೇಕೆಂಬ ತತ್ವವನ್ನು ಮಂಡಿಸಿದ್ದಾರೆ.
ಅಧ್ಯಯನ ನಡೆಸಿದ ಅಧ್ಯಯನಕಾರರು
ಅಧ್ಯಯನವು 18 ಅಥವಾ 19 ವರ್ಷ ವಯಸ್ಸಿನ 59,387 ಸ್ವೀಡಿಷ್ ಮೂಲದ ಪುರುಷರ ಅರಿವಿನ ಸಾಮರ್ಥ್ಯವನ್ನು ಮತ್ತು 35 ಮತ್ತು 45 ರ ನಡುವಿನ 11 ವರ್ಷಗಳ ಅವಧಿಯಲ್ಲಿ ಅವರ ಗಳಿಕೆಯನ್ನು ವಿಶ್ಲೇಷಿಸಿದೆ. ಕಡ್ಡಾಯ ಮಿಲಿಟರಿ ಸೇವೆಯ ಭಾಗವಾಗಿ ಮಾಡಿದ ಸಂಶೋಧನೆಯು ಪುರುಷರ ಬುದ್ಧಿವಂತಿಕೆಯ ಪರಿಶೀಲನೆ ನಡೆಸಿದ್ದು ಮೌಖಿಕ ತಿಳುವಳಿಕೆ, ತಾಂತ್ರಿಕ ಗ್ರಹಿಕೆ, ಪ್ರಾದೇಶಿಕ ಸಾಮರ್ಥ್ಯ ಮತ್ತು ತರ್ಕದ ಪರೀಕ್ಷೆಗಳನ್ನು ಒಳಗೊಂಡಿದೆ.
ಮಹಿಳೆಯರು ಮತ್ತು ವಲಸಿಗರನ್ನು ಅಧ್ಯಯನದಲ್ಲಿ ಸೇರಿಸಲಾಗಿಲ್ಲ ಏಕೆಂದರೆ 1971-77 ಮತ್ತು 1980-99 ರ ನಡುವೆ ಆರಂಭಿಕ ಡೇಟಾವನ್ನು ದಾಖಲಿಸಿದಾಗ ಆ ಗುಂಪುಗಳಿಗೆ ಮಿಲಿಟರಿ ಸೇವೆ ಕಡ್ಡಾಯವಾಗಿರಲಿಲ್ಲ. ಉದಾಹರಣೆಗೆ ಪ್ರೇರಣೆ ಮಟ್ಟಗಳು ಅಥವಾ ಉನ್ನತ ಸಾಮಾಜಿಕ ಕೌಶಲ್ಯಗಳು-ಇದು ಕೆಲಸಗಾರರಿಗೆ ಹೆಚ್ಚಿನ ಸಂಬಳದ ಉದ್ಯೋಗಗಳನ್ನು ಗಳಿಸಲು ಸಹಾಯ ಮಾಡುತ್ತದೆ ಎಂಬುದನ್ನು ಸಂಶೋಧನೆಯು ಸ್ಪಷ್ಟಪಡಿಸಿದೆ.
ಸ್ಮಾರ್ಟ್ ಜನರ ಬೇಡಿಕೆ ಹೇಗಿರುತ್ತದೆ?
ಉತ್ತಮ ವೇತನದ ಉದ್ಯೋಗಕ್ಕೆ ಕಾರಣವಾಗಿರುವ ಇನ್ನಷ್ಟು ಅಂಶಗಳನ್ನು ಲೇಖಕರು ತಿಳಿಸಿದ್ದು ಸ್ಮಾರ್ಟ್ ಹಾಗೂ ಬುದ್ಧಿವಂತ ಜನರು ಹೆಚ್ಚಿನ ಪಾವತಿಯ ಉದ್ಯೋಗಕ್ಕಿಂತಲೂ ಆಸಕ್ತಿಕರ ಅಥವಾ ಲಾಭದಾಯಕ ಹುದ್ದೆಯನ್ನು ಆರಿಸಿಕೊಳ್ಳುತ್ತಾರೆ. ಏಕೆಂದರೆ ಇವರು ಪ್ರತಿಷ್ಟಿತ ಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಹಾಗೂ ಉತ್ತಮ ವೇತನ ಅವರಿಗೆ ಅಷ್ಟೊಂದು ಗೌಣವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Retirement Age: ಯಾವ ವಯಸ್ಸಿನಲ್ಲಿ ನಿವೃತ್ತಿ ಹೊಂದಿದರೆ ಬದುಕಿನ ಸಂಜೆ ಕಾಲ ಸುಖಮಯವಾಗಿರುತ್ತೆ?
ಅಸಮಾನತೆಗೆ ಹೇಗೆ ಕಾರಣವಾಗಿದೆ?
ಸಂಬಳದ ವಿಷಯದಲ್ಲಿ ಬುದ್ಧಿವಂತಿಕೆ ಹಾಗೂ ಅರಿವಿನ ಕೊರತೆಯು ಶ್ರೀಮಂತ ಮತ್ತು ಸಮಾಜದ ಉಳಿದವರ ನಡುವೆ ಬೆಳೆಯುತ್ತಿರುವ ಆದಾಯದ ಅಸಮಾನತೆಯ ಬಗ್ಗೆ ಎಚ್ಚರಿಕೆಯ ಸಂಕೇತವಾಗಿದೆ ಎಂಬುದನ್ನು ಅಧ್ಯಯನಕಾರರು ತಿಳಿಸಿದ್ದಾರೆ. ಸ್ವೀಡನ್ ತುಲನಾತ್ಮಕವಾಗಿ ಕಿರಿದಾದ ಆದಾಯದ ಅಂತರವನ್ನು ಹೊಂದಿರುವ ಕಾರಣ ಸಿಂಗಾಪುರ ಅಥವಾ ಯುಎಸ್‌ನಂತಹ ಸ್ಥಳಗಳಲ್ಲಿ ಈ ಅಸಮಾನತೆಯ ಅಂತರ ಇನ್ನಷ್ಟು ಬೆಳೆಯಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಉನ್ನತ ಗಳಿಕೆದಾರರು ತೆಗೆದುಕೊಳ್ಳುವ ನಿರ್ಧಾರಗಳು ಬಹಳಷ್ಟು ಜನರಿಗೆ ಪರಿಣಾಮ ಬೀರುತ್ತವೆ ಎಂಬುದಾಗಿ ಅಧ್ಯಯನಕಾರರು ತಿಳಿಸಿದ್ದು ಹಾಗಾಗಿ ಉನ್ನತ ಸ್ಥಾನಗಳಲ್ಲಿ ಸರಿಯಾದ ಅರ್ಹ ವ್ಯಕ್ತಿ ನೇಮಕರಾಗಬೇಕು ಎಂಬುದು ಮುಖ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ