ಉದ್ಯೋಗ ಮಾರುಕಟ್ಟೆ (Job Market) ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಅದಕ್ಕಾಗಿ ಕೌಶಲ್ಯಗಳನ್ನು ಅಪ್‌ಗ್ರೇಡ್ (Skills Upgrade) ಮಾಡುತ್ತಲೇ ಇರಬೇಕು. ಅಂದಾಗ ಮಾತ್ರ ನಾವು ಸ್ಪರ್ಧೆ ನೀಡಲು ಸಾಧ್ಯ. ಆದರೆ ಕೆಲವೊಂದು ಕೌಶಲ್ಯಗಳು ಸಾರ್ವಕಾಲಿಕವಾಗಿರುತ್ತವೆ. ಅದನ್ನು ನೀವು ಎಲ್ಲಿ ಬೇಕಾದರೂ ಬಳಸಬಹುದು.
ಹೌದು.. ಕೆಲವಷ್ಟು ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಅವು ನಮ್ಮ ವೃತ್ತಿ ಪ್ರಯಾಣದಲ್ಲಿ ಯಾವಾಗಲೂ ನಮ್ಮ ಸಹಾಯಕ್ಕೆ ಬರುತ್ತವೆ. ಅವು ವರ್ಗಾವಣೆ ಮಾಡುವಂಥ ಕೌಶಲ್ಯಗಳು. ನಿಮ್ಮ ವೃತ್ತಿಜೀವನದಲ್ಲಿ ಹಿಡಿತ ಸಾಧಿಸಲು ಮತ್ತು ವೃತ್ತಿ ಬದಲಾವಣೆಯಂತಹ ಸಮಯದಲ್ಲಿ ಒತ್ತಡವನ್ನು ನಿಭಾಯಿಸಲು ನಿಮಗೆ ಸಹಕಾರಿಯಾಗಿರುತ್ತವೆ.
ಇಂಥ ವರ್ಗಾವಣೆ ಮಾಡಬಹುದಾದ ಕೌಶಲ್ಯಗಳು ಬಹಳಷ್ಟು ಪ್ರಯೋಜನಕಾರಿ. ವಿಕಸನಗೊಳ್ಳುತ್ತಿರುವ ಕೆಲಸದ ಅವಶ್ಯಕತೆಗಳು ಮತ್ತು ಜವಾಬ್ದಾರಿಗಳಿಗೆ ನೀವು ಹೊಂದಿಕೊಳ್ಳಲು ಸಾಧ್ಯ. ಅಲ್ಲದೇ ಇದರಿಂದ ಊದ್ಯೋಗ ಮಾರುಕಟ್ಟೆಯಲ್ಲಿ ನಿಮ್ಮನ್ನು ಹೆಚ್ಚು ಗುರುತಿಸುವಂತೆ ಮಾಡಬಹುದು. ಪ್ರಸಿದ್ಧ ವೃತ್ತಿ ತರಬೇತುದಾರರಾದ ಮೆಹರ್ ಸಿಂಧು ಬಾತ್ರಾ ಅವರು ವರ್ಗಾಯಿಸಬಹುದಾದ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
1. ನಿಮ್ಮ ಟೀಂನ ಸಂಪನ್ಮೂಲ ವ್ಯಕ್ತಿಯಾಗುವುದು : ಆಫೀಸ್ ಎಂದರೆ ಅಲ್ಲಿ ಕೆಲವೊಮ್ಮೆ ಸಮಸ್ಯೆಗಳುಂಟಾಗುವುದು ಸಾಮಾನ್ಯ. ಆದರೆ ಅಂಥ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಂಥ ಮಾರ್ಗವನ್ನು ತಿಳಿದಿರುವುದು ಮುಖ್ಯ.
ನಾವು ಸುಲಭವಾಗಿ ಬಿಟ್ಟುಕೊಡುತ್ತೇವೆಯೇ ಅಥವಾ ನಮ್ಮಿಂದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆಯೇ? ನಮ್ಮ ತಂಡದ ಸದಸ್ಯರಿಗೆ ಸಹಾಯ ಮಾಡಲು ನಮಗೆ ಸಾಧ್ಯವಾಗುತ್ತದೆಯೇ ಅಥವಾ ನಾವು ತಜ್ಞರ ಸಹಾಯವನ್ನು ಪಡೆಯುತ್ತೇವೆಯೇ ಎಂಬುದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು.
2. ವಿಮರ್ಶಾತ್ಮಕ ಚಿಂತನೆಯ ಸಾಮರ್ಥ್ಯ: ಈ ಕೌಶಲ್ಯವು ಕೇವಲ ವಾಸ್ತುಶಿಲ್ಪಿಗಳು, ಒಳಾಂಗಣ ವಿನ್ಯಾಸಕರು ಅಥವಾ ಗ್ರಾಫಿಕ್ ವಿನ್ಯಾಸಕರಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ಉದ್ಯೋಗಿಯು ಹೊಂದಬೇಕಾದ ಪ್ರಮುಖ ಕೌಶಲ್ಯ ಇದು. ಏಕೆಂದರೆ ಪ್ರತಿ ಕ್ಲಿಷ್ಟಕರ ಸನ್ನಿವೇಶದಲ್ಲೂ ಇದು ಉಪಯೋಗಕ್ಕೆ ಬರುತ್ತದೆ. ಒಂದು ಸಮಸ್ಯೆಯನ್ನು ಬೇರೆಯದೇ ಆದ ದೃಷ್ಟಿಕೋನದಿಂದ ನೋಡುವುದು ಅದರನ್ನು ಪರಿಹರಿಸಲು ಸುಲಭವಾಗುವಂತೆ ಮಾಡುತ್ತದೆ.
ಕೆಲವೊಮ್ಮೆ ಬರೆಹರಿಯದ ಸಮಸ್ಯೆಗಳು ಎದುರಾದಾಗ ವಿಮರ್ಶಾತ್ಮಕ ಚಿಂತನೆಯ ಸಾಮರ್ಥ್ಯ ಹೊಂದಿದ್ದರೆ ಸುಲಭವಾಗಿ ಪರಿಹರಿಸಬಹುದು.
3. ಅಗತ್ಯವಿದ್ದಾಗ ನಾಯಕರಾಗಿರುವುದು: ನಾಯಕತ್ವವು ಒಂದು ಹುದ್ದೆಯಲ್ಲ. ಅದೊಂದು ಕೌಶಲ್ಯ. ಈ ಕೌಶಲ್ಯವನ್ನು ಹೊಂದಿರುವ ಜನರು ತಾವೇ ಉಸ್ತುವಾರಿಯನ್ನು ತೆಗೆದುಕೊಳ್ಳುತ್ತಾರೆ.
ಕಠಿಣ ಸಂದರ್ಭಗಳಲ್ಲಿ ತಮ್ಮ ಸಹೋದ್ಯೋಗಿಯೊಂದಿಗೆ ನಿಲ್ಲುತ್ತಾರೆ. ಎಂಥದ್ದೇ ಪರಿಸ್ಥಿತಿಯಲ್ಲಿ ಅವರು ಹಿಂತಿರುಗಿ ನೋಡುವುದಿಲ್ಲ. ಸಂಪೂರ್ಣ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಜೊತೆಗೆ ಅವರ ಗಮನ ಗುರಿಯನ್ನು ತಲುಪಬೇಕು ಎಂಬುದಾಗಿರುತ್ತದೆ.
4. ಭಾವನಾತ್ಮಕವಾಗಿ ಬುದ್ಧಿವಂತರಾಗಿರುವುದು: ಭಾವನಾತ್ಮಕ ಬುದ್ಧಿವಂತಿಕೆಯು ಭಾವನೆಗಳನ್ನು ಗುರುತಿಸುವ, ಬಳಸಿಕೊಳ್ಳುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ.
ಭಾವನಾತ್ಮಕ ಬುದ್ಧಿವಂತಿಕೆಯನ್ನು ಪ್ರದರ್ಶಿಸಲು, ನಾವು ಪರಾನುಭೂತಿ, ಸ್ವಯಂ-ಅರಿವು ಹೊಂದಿರ ಬೇಕಾಗುತ್ತದೆ. ಇದು ಜನರನ್ನು ನಿರ್ವಹಿಸುವಂಥ ಕೆಲಸಗಳಿಗೆ ಹೆಚ್ಚು ಅವಶ್ಯಕವಾಗಿದೆ. ಉದ್ಯೋಗಿಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ನೀವು ಅದನ್ನು ತಿಳಿದಿದ್ದರೆ ಮಾತ್ರ ದಿನದ ಕೆಲಸಗಳು ಸುಲಭವಾಗಿ ಸಾಗುತ್ತವೆ.
5. ಟೀಂ ವರ್ಕ್ ಮಹತ್ವ ತಿಳಿದುಕೊಳ್ಳುವುದು: ಸಂಸ್ಥೆಗಳಲ್ಲಿ ಒಂದು ಗುರಿ ತಲುಪಬೇಕೆಂದರೆ ತಂಡಗಳಲ್ಲಿ ಕೆಲಸ ಮಾಡುವುದು ಮುಖ್ಯ. ಒಂದು ಟೀಂನಲ್ಲಿ ಕೆಲಸ ಮಾಡುವುದರ ಪ್ರಾಮುಖ್ಯತೆಯನ್ನು ಅರಿಯುವುದು ಅತ್ಯಗತ್ಯ.
ಏಕಾಂಗಿಯಾಗಿ ಕೆಲಸ ಮಾಡುವುದು ಕಷ್ಟ ಎಂದಲ್ಲ. ಆದಾಗ್ಯೂ ಟೀಂ ವರ್ಕ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ನಿಗದಿತ ಗುರಿ ಸಾಧಿಸುವಾಗ ಸಾಕಷ್ಟು ಸಮಯವನ್ನು ಉಳಿಸುತ್ತದೆ.
6. ಯಾವಾಗ, ಏನು ಮಾತನಾಡಬೇಕೆಂಬ ಅರಿವು: ಕೆಲಸದ ಸ್ಥಳದಲ್ಲಿ ತಪ್ಪು ಸಂವಹನವು ತಂಡದಲ್ಲಿ ಘರ್ಷಣೆಗೆ ಕಾರಣವಾಗಬಹುದು. ಉತ್ತಮ ಕೆಲಸದ ವಾತಾವರಣವನ್ನು ಇದು ಹಾಳುಗೆಡವಬಹುದು.
ಆದ್ದರಿಂದ ಒಂದು ವಿಷಯದ ಬಗ್ಗೆ ಏನನ್ನು ಮಾತನಾಡಬೇಕು... ಹೇಗೆ ಮಾತನಾಡಬೇಕು ಹಾಗೂ ಯಾವಾಗ, ಯಾರೊಂದಿಗೆ ಮಾತನಾಡಬೇಕು ಎಂಬ ಕೌಶಲ್ಯವನ್ನು ರೂಢಿಸಿಕೊಳ್ಳುವುದು ಮುಖ್ಯ. ಈ ಕೌಶಲ್ಯವನ್ನು ಹೊಂದಿರುವುದು ನಿಮಗೆ ಮಾತ್ರವಲ್ಲದೆ ನೀವು ಸಹಯೋಗ ಹೊಂದಿರುವ ಸಂಸ್ಥೆಗೂ ಸಹ ಅಮೂಲ್ಯವಾದ ಆಸ್ತಿಯಾಗಿದೆ.
ಇದನ್ನೂ ಓದಿ: Success Story: ಸಾಮಾನ್ಯ ಉದ್ಯೋಗಿಯಾಗಿ ಸೇರಿದ ಕಂಪನಿಯಲ್ಲೇ CEO-MD ಸ್ಥಾನಕ್ಕೇರಿದ ಸಾಧಕರಿವರು
ಒಟ್ಟಾರೆ, ಇಂಥ ವರ್ಗಾವಣೆ ಮಾಡಬಹುದಾದ ಕೌಶಲ್ಯಗಳು ನಿಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಈ ಕೌಶಲ್ಯಗಳು ನೀವು ವೃತ್ತಿಪರರಾಗಲು ಹೆಚ್ಚು ಗಮನಾರ್ಹವಾಗಿ ಕೊಡುಗೆ ನೀಡುತ್ತವೆ.
ಆದರೆ ನೀವು ವರ್ಗಾವಣೆ ಮಾಡಬಹುದಾದ ಕೌಶಲ್ಯಗಳನ್ನು ಹೊಂದಿರುವಿರಿ ಎಂದು ತಿಳಿದುಕೊಂಡರೆ ಸಾಲದು, ಅದನ್ನು ಪ್ರಸ್ತುತ ಸನ್ನಿವೇಶಗಳಿಗೆ ಹೇಗೆ ಅನ್ವಯಿಸಬೇಕೆಂದು ತಿಳಿದುಕೊಳ್ಳುವುದೂ ಮುಖ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ