ವಿಶ್ವದ ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ (Computer Programmer) ಎಂದೇ ಉಲ್ಲೇಖಿತರಾದ ಅದಾ ಲವ್ಲೇಸ್, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಲ್ಲಿ ಒಬ್ಬರೆನಿಸಿದ್ದಾರೆ. ಇವರಿಂದ ಪ್ರೇರಣೆಗೊಂಡು 1940 ರ ದಶಕದಲ್ಲಿ ಮೊದಲ ಆಧುನಿಕ ಕಂಪ್ಯೂಟರ್ ಅನ್ನು ಕಂಪ್ಯೂಟರ್ ವಿಜ್ಞಾನಿ ಅಲನ್ ಟ್ಯೂರಿಂಗ್ ನಿರ್ಮಿಸಿದರು. ಹೀಗೆ ಟೆಕ್ (Tech) ಕ್ಷೇತ್ರದಲ್ಲಿ ಮಹಿಳೆಯರು ಸಾಧಿಸುತ್ತಾ ಬಂದಿದ್ದು ಈ ಸಾಧನೆಯ ಪ್ರಮಾಣ ಇದೀಗ ಹೆಚ್ಚಾಗಿದೆ. ವರ್ಷಕಳೆದಂತೆ ಸಾಧನೆಯ ಶಿಖರವನ್ನೇರುತ್ತಿರುವ ಮಹಿಳೆಯರು. ಜಾಗತಿಕ ಸಂಶೋಧನೆಯ ಪ್ರಕಾರ, 2020 ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ 28.8% ಮಹಿಳೆಯರು ಸಾಧಿಸಿದ್ದು, 2018 ರಲ್ಲಿ 25.9% ಮತ್ತು 2019 ರಲ್ಲಿ 26.2% ಗೆ ಹೋಲಿಸಿದರೆ ಈ ಪ್ರಮಾಣ ಹೆಚ್ಚಾಗಿದೆ. ಮಹಿಳೆಯರು (Women) ಈ ಕ್ಷೇತ್ರದಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದು ಇನ್ನಷ್ಟು ಸಾಧಿಸಲು ಕೆಲವೊಂದು ಸಲಹೆಗಳು ಇಲ್ಲಿವೆ. ತಂತ್ರಜ್ಞಾನದಲ್ಲಿ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಯೋಜನೆ ಎಂದರೆ ಯುವ ನವೋದ್ಯಮಿಗಳಲ್ಲಿ ಹೂಡಿಕೆ ಮಾಡುವುದು ಮತ್ತು ಅವರ ವೃತ್ತಿಜೀವನವನ್ನು (Career) ಸಿದ್ಧಗೊಳಿಸುವುದಾಗಿದೆ.
STEM ಗೆ (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ) ಬದ್ಧರಾಗಿರುವುದು
ಟೆಕ್ ಉದ್ಯಮದ ಧನಾತ್ಮಕ ಬೆಳವಣಿಗೆಗಾಗಿ, ಹುಡುಗರು ಮತ್ತು ಹುಡುಗಿಯರು ಇಬ್ಬರೂ STEM ಅನ್ನು ಆಯ್ಕೆ ಮಾಡಲು ಮತ್ತು ವಲಯಕ್ಕೆ ತಮ್ಮ ನವೀನ ಆಲೋಚನೆಗಳನ್ನು ತರಲು ಸಮಾನವಾಗಿ ಪ್ರೋತ್ಸಾಹಿಸಬೇಕು.
ಟೆಕ್ ಪರಿಕರಗಳಲ್ಲಿ ಹೂಡಿಕೆ ಮಾಡುವುದು ಮತ್ತು ಮಾಧ್ಯಮಿಕ/ಹೈಯರ್ ಸೆಕೆಂಡರಿ ಶಾಲೆಗಳಲ್ಲಿ STEM ಲ್ಯಾಬ್‌ಗಳನ್ನು ಸ್ಥಾಪಿಸುವುದು ಚಿಕ್ಕ ವಯಸ್ಸಿನಿಂದಲೇ ಯುವ ಪ್ರತಿಭೆಗಳಿಗೆ ಬೆಂಬಲಿಸಲು, ಪ್ರೋತ್ಸಾಹಿಸಲು ಅವಶ್ಯಕವಾಗಿದೆ.
ಉನ್ನತ ಕೌಶಲ್ಯ
ಟೆಕ್ ಉದ್ಯಮದಲ್ಲಿ ಹೆಚ್ಚು ಸಮಯ ಸಾಧಿಸಲು ಹಾಗೂ ಅಭಿವೃದ್ಧಿ ಹೊಂದಲು ಹೊಸ ತಂತ್ರಜ್ಞಾನಗಳು ಹಾಗೂ ಬೆಳವಣಿಗೆಯೊಂದಿಗೆ ಅಪ್‌ಡೇಟ್ ಆಗಿರುವುದು ಅಗತ್ಯವಾಗಿದೆ.
ನವೀಕೃತವಾಗಿರುವುದು ಮತ್ತು ಉದ್ಯಮದ ಬಗ್ಗೆ ಸಾಧ್ಯವಾದಷ್ಟು ಕಲಿಯುವುದು ವೇಗದ ಗತಿಯ ವಾತಾವರಣದಲ್ಲಿ ಇನ್ನಷ್ಟು ನಿರ್ಣಾಯಕವಾಗುತ್ತದೆ. ಉದ್ಯಮದ ಬಗ್ಗೆ ಕುತೂಹಲ ಹೊಂದಿರುವುದು ಹಾಗೂ ಬದಲಾವಣೆಗೆ ಒಡ್ಡಿಕೊಳ್ಳುವುದು ಮುಖ್ಯವಾಗಿದೆ.
ಸ್ಪಷ್ಟವಾಗಿ ಮಾತನಾಡಲು ಕಲಿಯಿರಿ
ನಾಯಕರು ಹಾಗೂ ಹಿಂಬಾಲಕರ ನಡುವಿನ ವ್ಯತ್ಯಾಸ ಧ್ವನಿಯದ್ದಾಗಿದೆ. ನೀವು ಮಾತನಾಡುವ ಪರಿಣತಿ ಹೊಂದಿದ್ದರೆ ಅದನ್ನು ಬಳಸಿ. ನಿಮ್ಮ ಅಭಿಪ್ರಾಯ ಮಂಡಿಸಲು ಭಯಪಡಬೇಡಿ.
ಇದನ್ನೂ ಓದಿ: ಆರ್ಕಿಟೆಕ್ಚರ್ ಕ್ಷೇತ್ರದಲ್ಲಿ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಿದ್ದೀರಾ? ಹಾಗಾದರೆ ನೀವು ತಪ್ಪದೇ ಈ ಸ್ಟೋರಿ ಓದಲೇ ಬೇಕು!
ನಿಮ್ಮಲ್ಲಿರುವ ಹಿಂಜರಿಕೆ ಭಯ ಹೋಗಬೇಕು ಎಂದಾದರೆ ನೀವು ಮಾತನಾಡಬೇಕು ಹಾಗೂ ನಿಮ್ಮಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಲು ಮಾತು ಉತ್ತಮ ಅಸ್ತ್ರವಾಗಿದೆ.
ಸಂಪರ್ಕ ನಿರ್ಮಿಸಿಕೊಳ್ಳಿ
ಪ್ರತಿ ಉದ್ಯಮದಲ್ಲಿ ಬೆಳೆಯಲು ಸಂಪರ್ಕ ನಿರ್ಮಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಟೆಕ್ ವಲಯಕ್ಕೆ ಭಿನ್ನವಾಗಿರುವುದಿಲ್ಲ. ಇಂದು, ಹಲವಾರು ಸಂಸ್ಥೆಗಳು ಮತ್ತು ಗುಂಪುಗಳು ನಾಯಕತ್ವ ಸ್ಥಾನದಲ್ಲಿರುವವರನ್ನು ಅಧಿವೇಶನಗಳು/ಸಭೆಗಳ ಮೂಲಕ ಸಂಪರ್ಕಿಸಲು ಜನರನ್ನು ಸಕ್ರಿಯಗೊಳಿಸುತ್ತಿವೆ.
ಮಾರ್ಗದರ್ಶಕರನ್ನು ಹುಡುಕಿ
ನೀವು ಯಾವುದಾದರೂ ವಿಷಯದಲ್ಲಿ ಸಿಲುಕಿಕೊಂಡಿದ್ದರೆ ಅಥವಾ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ, ವಿಶೇಷವಾಗಿ ನೀವು ತಂತ್ರಜ್ಞಾನ ಕ್ಷೇತ್ರದಲ್ಲಿದ್ದರೆ ಸಹಾಯಕ್ಕಾಗಿ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ಪರಿಣಿತರ ಮಾತಾಗಿದೆ. ಕಲಿಯಲು ಮತ್ತು ಬೆಳೆಯಲು ಸಹಾಯ ಮಾಡುವ ಮಾರ್ಗದರ್ಶಕರನ್ನು ಹುಡುಕುವುದು ನಿರ್ಣಾಯಕವಾಗಿದೆ.
ಮೈಕ್ರೊಸ್ಟ್ರೆಸ್ ನಿರ್ವಹಣೆ
ಮೈಕ್ರೊಸ್ಟ್ರೆಸ್ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ, ಆದರೆ ಇದು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಣ್ಣ ಸಣ್ಣ ಒತ್ತಡಗಳೇ ಹೆಚ್ಚಿನ ಸಮಸ್ಯೆಗೆ ಕಾರಣವಾಗುತ್ತಿವೆ.
ಹೆಸರೇ ಸೂಚಿಸುವಂತೆ, ಇದು ಆರಂಭದಲ್ಲಿ ನಮಗೆ ಅಗೋಚರವಾಗಿರಬಹುದು, ಆದರೆ ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಏರಿಳಿತದ ಪರಿಣಾಮವನ್ನು ಉಂಟುಮಾಡುತ್ತದೆ.
ಇಂತಹ ಸಣ್ಣ ಒತ್ತಡಗಳನ್ನು ನಿಭಾಯಿಸಲು ಆರಂಭದಲ್ಲಿಯೇ ಅದಕ್ಕೆ ಪರಿಹಾರ ಕಂಡುಹಿಡಿಯುವುದು ಹಾಗೂ ಅದನ್ನು ಅಲ್ಲಿಯೇ ಪರಿಹರಿಸುವುದು ಎಂದು ಟೆಕ್ ಪರಿಣಿತರು ಸಲಹೆ ನೀಡುತ್ತಾರೆ.
ಟೆಕ್ ವಲಯ ಸೇರಿದಂತೆ ಉದ್ಯಮದ ಎಲ್ಲಾ ಕ್ಷೇತ್ರಗಳಲ್ಲಿ ಇಂದು ಮಹಿಳೆ ಸಾಧನೆ ಮಾಡಿದ್ದಾರೆ ಹಾಗೂ ಗುರುತಿಸಿಕೊಂಡಿದ್ದಾರೆ. ಪ್ರಯತ್ನಗಳಲ್ಲಿ ಸ್ಥಿರವಾಗಿರುವುದು ಹಾಗೂ ಗುರಿಮುಟ್ಟಲು ಹಿಮ್ಮೆಟ್ಟದಿರುವುದು ಮುಖ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ