• ಹೋಂ
 • »
 • ನ್ಯೂಸ್
 • »
 • Jobs
 • »
 • Career Tips: ಪಿಯು ಬಳಿಕ 3-4 ವರ್ಷಗಳ ಪದವಿ ಮಾಡಲು ಇಷ್ಟಪಡದವರು ಈ ಅಲ್ಪಾವಧಿ ಕೋರ್ಸ್​ಗಳನ್ನು ಮಾಡಿ

Career Tips: ಪಿಯು ಬಳಿಕ 3-4 ವರ್ಷಗಳ ಪದವಿ ಮಾಡಲು ಇಷ್ಟಪಡದವರು ಈ ಅಲ್ಪಾವಧಿ ಕೋರ್ಸ್​ಗಳನ್ನು ಮಾಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಹೆಚ್ಚಿನ ವಿದ್ಯಾಭ್ಯಾಸ ಸಾಧ್ಯವಿಲ್ಲ, ಕೆಲಸ ಮಾಡಬೇಕು ಎನ್ನುವ ಹೊಣೆಗಾರಿಕೆ ಇರುವವರು ಪಿಯುಸಿ ನಂತರ ಉದ್ಯೋಗ ಒದಗಿಸುವ ಕೋರ್ಸ್‌ಗಳನ್ನು ಮಾಡಬಹುದು.

 • Share this:

ಶಿಕ್ಷಣದಲ್ಲಿ (Education) ಒಂದು ಹಂತದ ವಿದ್ಯಾಭ್ಯಾಸ ಮುಗಿದ ಮೇಲೆ ಮುಂದೆ ಓದಲು, ವಿದ್ಯಾಭ್ಯಾಸ ಮುಂದುವರೆಸಲು ಅಷ್ಟೇ ಯಾಕೆ ಕೆಲಸ (Job) ಮಾಡಲು ಸಹ ಸಹಸ್ರಾರು ಅವಕಾಶಗಳಿವೆ. ಎಸ್‌ಎಸ್‌ಎಲ್‌ಸಿ (SSLC) ಮುಗಿದ ಮೇಲೆ ಡಿಪ್ಲೋಮಾ, ಪಿಯುಸಿ ಹೀಗೆ ಬೇರೆ ಬೇರೆ ಇದ್ದರೆ, ಪಿಯುಸಿ (PUC) ನಂತರವಂತೂ ಇನ್ನೂ ಅನೇಕ ಆಯ್ಕೆಗಳಿವೆ. ಈಗಷ್ಟೇ ರಾಜ್ಯದ ಪಿಯುಸಿ ಮಕ್ಕಳ ಫಲಿತಾಂಶ ಹೊರಬಿದ್ದಿದೆ. ರಿಸಲ್ಟ್‌ ಏನೋ ಬಂತು ಮುಂದೇನು ಅಂತಾ ಕೆಲವರು ಯೋಚಿಸುತ್ತಿದ್ದಾರೆ. ಅಂತಹವರಿಗೆ ಕೆಲ ಉಪಯುಕ್ತ ಮಾಹಿತಿ ಇಲ್ಲಿದೆ.


ಪಿಯುಸಿ ನಂತರ ಡಿಗ್ರಿ ಒಂದೆನಾ ಆಯ್ಕೆ, ಖಂಡಿತಾ ಇಲ್ಲ. ಪದವಿ ಮಾತ್ರವಲ್ಲದೇ ವಿದ್ಯಾರ್ಥಿಗಳು ಕೆಲವು ಕೋರ್ಸ್‌ ಸಹ ಮಾಡಬಹುದು. ಹೆಚ್ಚಿನ ವಿದ್ಯಾಭ್ಯಾಸ ಸಾಧ್ಯವಿಲ್ಲ, ಕೆಲಸ ಮಾಡಬೇಕು ಎನ್ನುವ ಹೊಣೆಗಾರಿಕೆ ಇರುವವರು ಪಿಯುಸಿ ನಂತರ ಉದ್ಯೋಗ ಒದಗಿಸುವ ಕೋರ್ಸ್‌ಗಳನ್ನು ಮಾಡಬಹುದು.


ಪದವಿ ಇಲ್ಲದೆಯೂ ಉತ್ತಮ ಕೆಲಸ ಪಡೆದುಕೊಳ್ಳಬಹುದು. ಆದರೆ ಅದಕ್ಕೆ ಕೆಲ ಕೋರ್ಸ್‌, ಸ್ಕಿಲ್‌ ಬೇಕಾಗುತ್ತದೆ. ಈ ಅಲ್ಪಾವಧಿಯ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಕ್ಷೇತ್ರದಲ್ಲಿ ಮೌಲ್ಯಯುತವಾದ ಕೌಶಲ್ಯ ಮತ್ತು ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಅವರನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡುತ್ತದೆ.


ಹಾಗಾದರೆ, ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಉದ್ಯೋಗ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಲು 12ನೇ ತರಗತಿ ನಂತರ ಪರಿಗಣಿಸಬಹುದಾದ ಕೆಲವು ಅತ್ಯುತ್ತಮ ಅಲ್ಪಾವಧಿಯ ಕೋರ್ಸ್‌ಗಳು ಯಾವುವು ಅಂತಾ ಇಲ್ಲಿ ತಿಳಿಯೋಣ.


ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್: ಡಿಜಿಟಲ್ ಮಾರ್ಕೆಟಿಂಗ್ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದಾಗಿದೆ ಮತ್ತು ಈ ಕ್ಷೇತ್ರದಲ್ಲಿ ನುರಿತ ವೃತ್ತಿಪರರಿಗೆ ಫುಲ್‌ ಡಿಮ್ಯಾಂಡ್‌ ಇದೆ.


ಈ ವಿಭಾಗದಲ್ಲಿ ಎಸ್‌ಇಒ, ಎಸ್‌ಇಎಂ, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಇಮೇಲ್ ಮಾರ್ಕೆಟಿಂಗ್ ಮತ್ತು ಕಂಟೆಂಟ್ ಮಾರ್ಕೆಟಿಂಗ್‌ನಂತಹ ವಿವಿಧ ಡಿಜಿಟಲ್ ಮಾರ್ಕೆಟಿಂಗ್ ಜ್ಞಾನವನ್ನು ಕಲಿಯಬಹುದು. ಒಟ್ಟಾರೆ ಈ ಕೋರ್ಸ್ ಉದ್ಯೋಗಕ್ಕೆ ಪೂರಕವಾಗಿದೆ.


Grow Business Digitally with 6 tips sns
ಡಿಜಿಟಲ್ ವ್ಯವಹಾರ


ವೆಬ್ ಡೆವಲಪ್‌ಮೆಂಟ್ ಕೋರ್ಸ್: ಆನ್‌ಲೈನ್‌ ವ್ಯವಹಾರ, ವಹಿವಾಟು ಎಲ್ಲಾ ಹೆಚ್ಚುತ್ತಿರುವ ಈ ಕಾಲದಲ್ಲಿ ವೆಬ್ ಡೆವಲಪ್‌ಮೆಂಟ್‌ಗೆ ಸಾಕಷ್ಟು ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವೆಬ್ ಡೆವಲಪ್‌ಮೆಂಟ್ ಕೋರ್ಸ್ ಮಾಡಿಕೊಂಡರೆ ಉದ್ಯೋಗವಕಾಶಗಳು ಹೆಚ್ಚಿರುತ್ತವೆ.


ವೆಬ್ ಡೆವಲಪರ್‌ ಅಲ್ಪಾವಧಿಯ ಕೋರ್ಸ್ ನಿಮಗೆ HTML, CSS, JavaScript ಮತ್ತು PHP ಯಂತಹ ವಿವಿಧ ಪ್ರೋಗ್ರಾಮಿಂಗ್ ಭಾಷೆಗಳ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.


ಗ್ರಾಫಿಕ್ ಡಿಸೈನಿಂಗ್ ಕೋರ್ಸ್: ಕ್ರಿಯೇಟಿವಿಟಿ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಕೋರ್ಸ್‌ ಉತ್ತಮ ಆಯ್ಕೆ. ಏಕೆಂದರೆ ಈ ಅಲ್ಪಾವಧಿಯ ಕೋರ್ಸ್ ನಿಮಗೆ ವಿವಿಧ ವಿನ್ಯಾಸ ಉಪಕರಣಗಳು ಮತ್ತು ಅಡೋಬ್ ಫೋಟೋಶಾಪ್, ಇಲ್ಲಸ್ಟ್ರೇಟರ್ ಮತ್ತು ಇನ್‌ಡಿಸೈನ್‌ನಂತಹ ಸಾಫ್ಟ್‌ವೇರ್‌ಗಳನ್ನು ಕಲಿಯಲು ಸಹಾಯ ಮಾಡುತ್ತದೆ. ನೀವೂ ಈ ಕೋರ್ಸ್‌ ಜೊತೆ ಈವೆಂಟ್‌ ಕಂಪನಿ, ಇತರೆ ಕಂಪನಿಗಳ ಜೊತೆ ಕೆಲಸ ಮಾಡಬಹುದು.


ಡೇಟಾ ಅನಾಲಿಟಿಕ್ಸ್ ಕೋರ್ಸ್: ಡೇಟಾ ಅನಾಲಿಟಿಕ್ಸ್ ಮತ್ತೊಂದು ಬೇಡಿಕೆಯ ಕ್ಷೇತ್ರವಾಗಿದ್ದು, ಈ ವಿಭಾಗದಲ್ಲಿ ತೆಗೆದುಕೊಳ್ಳುವ ಅಲ್ಪಾವಧಿಯ ಕೋರ್ಸ್ ಡೇಟಾ ವಿಶ್ಲೇಷಣೆಯಲ್ಲಿ ಬಳಸುವ ವಿವಿಧ ಉಪಕರಣಗಳು ಮತ್ತು ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತದೆ.


ಇನ್ನೂ ಡೇಟಾ ಅನಾಲಿಟಿಕ್ಸ್ ಅನ್ನು ಕಂಪನಿಗಳಲ್ಲಿ ಅಗತ್ಯವಾಗಿ ನೇಮಕಾತಿ ಮಾಡಿಕೊಳ್ಳುವುದರಿಂದ ಈ ಕೊರ್ಸ್‌ ಅವಶ್ಯವಾಗಿ ಉದ್ಯೋಗದ ಭದ್ರತೆ ನೀಡುತ್ತದೆ.
ಭಾಷಾ ಕೋರ್ಸ್: ನೀವು ಹೊಸ ಭಾಷೆಯನ್ನು ಕಲಿಯಲು ಆಸಕ್ತಿ ಹೊಂದಿದ್ದರೆ, ಅಲ್ಪಾವಧಿಯ ಭಾಷಾ ಕೋರ್ಸ್ ನಿಮ್ಮ ಭಾಷಾ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಅಂತರರಾಷ್ಟ್ರೀಯ ಗ್ರಾಹಕರೊಂದಿಗೆ ವ್ಯವಹರಿಸುವ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಹಾಸ್ಪಿಟಾಲಿಟಿ ಕೋರ್ಸ್: ಆತಿಥ್ಯ ಉದ್ಯಮವು ಬೆಳೆಯುತ್ತಿರುವ ಕ್ಷೇತ್ರವಾಗಿದೆ ಮತ್ತು ಆತಿಥ್ಯ ನಿರ್ವಹಣೆಯಲ್ಲಿ ಅಲ್ಪಾವಧಿಯ ಕೋರ್ಸ್ ನಿಮಗೆ ಗ್ರಾಹಕ ಸೇವೆ, ಹೋಟೆಲ್ ಕಾರ್ಯಾಚರಣೆಗಳು ಮತ್ತು ಇತರ ಸಂಬಂಧಿತ ಕೌಶಲ್ಯಗಳ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: 2nd PUCಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿ; ಇಲ್ಲಿದೆ ನೋಡಿ ನಿಮಗೆ ಸುವರ್ಣಾವಕಾಶ


ಅಕೌಂಟಿಂಗ್ ಕೋರ್ಸ್: ಪ್ರತಿ ಸಂಸ್ಥೆಯಲ್ಲಿ ಅಕೌಂಟಿಂಗ್ ಅವಿಭಾಜ್ಯ ಅಂಗವಾಗಿದೆ. ಲೆಕ್ಕಪರಿಶೋಧಕದಲ್ಲಿನ ಅಲ್ಪಾವಧಿಯ ಕೋರ್ಸ್ ನಿಮಗೆ ವಿವಿಧ ಲೆಕ್ಕಪತ್ರ ಮತ್ತು ಟ್ಯಾಲಿ, ಕ್ವಿಕ್‌ಬುಕ್ಸ್ ಮತ್ತು ಎಸ್‌ಎಪಿಯಂತಹ ಸಾಫ್ಟ್‌ವೇರ್ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಪ್ರತಿ ಕ್ಷೇತ್ರವೂ ಈ ವಿಭಾಗವನ್ನು ಹೊಂದಿರುವುದರಿಂದ ಸಹಜವಾಗಿಯೇ ಉದ್ಯೋಗ ಅವಕಾಶಗಳು ಇರುತ್ತವೆ.

top videos


  ಪಿಯುಸಿ ನಂತರ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಉದ್ಯೋಗ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಲು ಈ ಅಲ್ಪಾವಧಿಯ ಕೋರ್ಸ್‌ಗಳು ಸಹಾಯ ಮಾಡುತ್ತವೆ. ಅಭ್ಯರ್ಥಿಗಳು ಆಸಕ್ತಿಗಳು, ಕೌಶಲ್ಯಗಳು ಮತ್ತು ವೃತ್ತಿ ಗುರಿಗಳ ಆಧಾರದ ಮೇಲೆ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡಲ್ಲಿ ಉದ್ಯೋಗ ಜೀವನ ಉತ್ತಮವಾಗಿರುತ್ತದೆ.

  First published: