ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ಹಾಗೂ ರೋಬೋಟ್‌ಗಳು ಕೆಲವಷ್ಟು ಉದ್ಯೋಗಗಳನ್ನು (Jobs) ಕಸಿದುಕೊಳ್ಳಬಹುದು ಎಂದು ನಂಬಲಾಗಿದೆ. ಚಾಟ್ ಜಿಪಿಟಿಯಂತಹ AI ಯ ಅಪ್ಲಿಕೇಶನ್‌ಗಳು ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿವೆ. ಪ್ರಾಂಪ್ಟ್‌ಗಳಲ್ಲಿ ಉತ್ತರಗಳನ್ನು ನೀಡಲು, ಮಾನವರಂತೆ ಸಂಭಾಷಣೆ ನಡೆಸಲು, ಅಸ್ಪಷ್ಟ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸೃಜನಾತ್ಮಕ ವಿಷಯವನ್ನು ರಚಿಸುವ ಸಾಮರ್ಥ್ಯಗಳೊಂದಿಗೆ ಈ ತಂತ್ರಜ್ಞಾನಗಳು (Technology) ಜನರನ್ನು ಆಕರ್ಷಿಸಿವೆ.
ಹೆಚ್ಚು ಅತ್ಯಾಧುನಿಕ, ಸೃಜನಾತ್ಮಕ ಮತ್ತು ಸಂಕೀರ್ಣ ಪ್ರಾಂಪ್ಟ್‌ಗಳನ್ನು ನಿಭಾಯಿಸಲು ಸಮರ್ಥವಾಗಿರುವ 'GPT-4' ಎಂಬ ಜನರೇಟಿವ್ AI ಯ ಹೊಸ ಆವೃತ್ತಿಯ ಬಿಡುಗಡೆಯು ಬಹಳಷ್ಟು ಪ್ರಯೋಜನಕಾರಿ ನಿಜ. ಆದರೆ ಇವು ಜನರಲ್ಲಿ ಸ್ವಲ್ಪ ಮಟ್ಟಿಗೆ ಭಯವನ್ನು ಹುಟ್ಟು ಹಾಕಿದೆ.
ಇದು AI ನ ಪ್ರಾರಂಭವಾಗಿದೆ. ಟೆಕ್ ದಿಗ್ಗಜಗಳು ಮಾರುಕಟ್ಟೆಯ ಪ್ರಾಬಲ್ಯವನ್ನು ಪಡೆದುಕೊಳ್ಳುವ ಸಲುವಾಗಿ ಹೆಚ್ಚು ಸುಧಾರಿತ ಮತ್ತು ಅಭಿವೃದ್ಧಿಪಡಿಸಿದ AI ಬೋಟ್ ಅನ್ನು ಉತ್ಪಾದಿಸಲು ತೊಡಗಿವೆ.
ಮೈಕ್ರೋಸಾಫ್ಟ್ ತನ್ನ ಸರ್ಚ್ ಇಂಜಿನ್ 'ಬಿಂಗ್' ನಲ್ಲಿ ChatGPT ಅನ್ನು ಸಂಯೋಜಿಸಿದೆ. ಮುಂಬರುವ ತಿಂಗಳುಗಳಲ್ಲಿ ತನ್ನ AI 'Bard' ಅನ್ನು ತರಲು ಗೂಗಲ್ ಘೋಷಿಸಿದೆ. ಪ್ರಪಂಚದಲ್ಲಿ ಕೃತಕ ಬುದ್ದಿಮತ್ತೆ ಮತ್ತು ರೋಬೋಟ್‌ಗಳ ಸುತ್ತಲೂ ನಡೆಯುತ್ತಿರುವ ಕೆಲವು ಮಹತ್ವದ ಬೆಳವಣಿಗೆಗಳು ಇವಾಗಿವೆ.
ಈ 20 ಉದ್ಯೋಗಗಳಿಗೆ ಬೇಡಿಕೆ ಕಡಿಮೆಯಾಗಬಹುದು!
GPT-4 ಗೆ ಭವಿಷ್ಯದಲ್ಲಿ ಬೇಡಿಕೆ ಕಡಿಮೆಯಾಗಬಹುದಾದ 20 ಉದ್ಯೋಗಗಳನ್ನು ಪಟ್ಟಿ ಮಾಡಲು ಕೇಳಿದಾಗ ಅದು ಈ 20 ಉದ್ಯೋಗಗಳನ್ನು ಪಟ್ಟಿ ಮಾಡಿದೆ. ಡೇಟಾ ಎಂಟ್ರಿ ಕ್ಲರ್ಕ್, ಗ್ರಾಹಕ ಸೇವಾ ಪ್ರತಿನಿಧಿ, ಪ್ರೂಫ್ ರೀಡರ್, ಪ್ಯಾರಾಲೀಗಲ್, ಬುಕ್‌ಕೀಪರ್, ಅನುವಾದಕ, ಕಾಪಿರೈಟರ್, ಮಾರುಕಟ್ಟೆ ಸಂಶೋಧನಾ ವಿಶ್ಲೇಷಕ, ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕ, ನೇಮಕಾತಿ ವೇಳಾಪಟ್ಟಿ ನಿರ್ವಾಹಕ, ಟೆಲಿಮಾರ್ಕೆಟರ್, ವರ್ಚುವಲ್ ಅಸಿಸ್ಟೆಂಟ್, ಟ್ರಾನ್ಸ್‌ಕ್ರಿಪ್ಷನಿಸ್ಟ್, ನ್ಯೂಸ್ ರಿಪೋರ್ಟರ್, ಟ್ರಾವೆಲ್ ಎಜೆಂಟ್, ತಾಂತ್ರಿಕ ಬೆಂಬಲ ವಿಶ್ಲೇಷಕ, ಇಮೇಲ್ ಮಾರ್ಕೆಟರ್, ಕಂಟೆಂಟ್ ಮಾಡರೇಟರ್ ಮತ್ತು ರಿಕ್ರುಟರ್ ಸೇರಿದಂತೆ 20 ಉದ್ಯೋಗಗಳನ್ನು ಇದು ಪಟ್ಟಿಮಾಡಿದೆ.
ಚಾಟ್‌ಬಾಟ್ GPT-4 ಅಪ್ಲಿಕೇಷನ್ ಸಂಶೋಧನೆ, ಗಣಿತದ ಕೌಶಲ್ಯಗಳು, ಭಾಷಾ ಪ್ರಾವೀಣ್ಯತೆ, ಸೃಜನಶೀಲತೆ ಮತ್ತು ಬರವಣಿಗೆ, ವಿಶ್ಲೇಷಣಾತ್ಮಕ ಕೌಶಲ್ಯಗಳು, ವಿಷಯ ರಚನೆ ಮತ್ತು ಕ್ಯುರೇಶನ್, ಮನವೊಲಿಸುವುದು ಮತ್ತು ಸಂವಹನ, ಕೇಳುವ ಮತ್ತು ಟೈಪಿಂಗ್ ಕೌಶಲ್ಯಗಳು, ಸತ್ಯ-ಪರಿಶೀಲನೆ ಮತ್ತು ಬರವಣಿಗೆ, ವಿಮರ್ಶಾತ್ಮಕ ಚಿಂತನೆ, ಸಂದರ್ಶನ ಮತ್ತು ಮೌಲ್ಯಮಾಪನ ಮುಂತಾದ ವಿಷಯಗಳಲ್ಲಿ ಗುಣಮಟ್ಟದ ಫಲಿತಾಂಶಗಳನ್ನು ನೀಡುವುದರಿಂದ ಇಂಥ ಉದ್ಯೋಗಗಳು ಭವಿಷದಲ್ಲಿ ಕಾಣೆಯಾಗಬಹುದು ಎನ್ನಲಾಗಿದೆ.
ಇದನ್ನೂ ಓದಿ: Success Story: ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟ ಬಳಿಕವೇ UPSCಯಲ್ಲಿ ಪಾಸ್ ಆಗಿ IAS ಆದ ಪರಿ
ಇನ್ನು ಯುಎಸ್ ಕೆರಿಯರ್ ಇನ್ಸ್ಟಿಟ್ಯೂಟ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ರೋಬೋಟ್‌ಗಳಿಂದ ಕಡಿಮೆ ಅಪಾಯವನ್ನು ಹೊಂದಿರುವ 65 ಉದ್ಯೋಗಗಳನ್ನು ಪಟ್ಟಿ ಮಾಡಿದೆ.
ಈ ಉದ್ಯೋಗಗಳು ಸದ್ಯಕ್ಕೆ ಸೇಫ್!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ