• ಹೋಂ
  • »
  • ನ್ಯೂಸ್
  • »
  • Jobs
  • »
  • Career Choice: ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಒಂದು ಉತ್ತಮವಾದ ಆಯ್ಕೆ, ಕಾರಣ ಇಲ್ಲಿದೆ ನೋಡಿ

Career Choice: ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಒಂದು ಉತ್ತಮವಾದ ಆಯ್ಕೆ, ಕಾರಣ ಇಲ್ಲಿದೆ ನೋಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರೋಬೋಟ್ ಉದ್ಯಮವು ಭಾರತದಲ್ಲೂ ಸಹ ಸಾಕಷ್ಟು ಬೆಳೆದಿದೆ. ರೋಬೋಟಿಕ್ಸ್ ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿಜೀವನದ ಆಯ್ಕೆಯಾಗಿದೆ.

  • Share this:

ಮೊದಲೆಲ್ಲಾ ನಾವು ಈ ರೋಬೋಟ್ ಮತ್ತು ರೋಬೋಟಿಕ್ಸ್ (Robotics)  ಪದಗಳನ್ನು ನಮ್ಮ ಪದವಿ ( Degree) ಓದುವಾಗ ಕೇಳಿರುತ್ತಿದ್ದೆವು. ಆದರೆ ಈಗ ಶಾಲೆಯಲ್ಲಿ 4ನೇ ತರಗತಿಯಲ್ಲಿಯೇ ಈ ರೋಬೋಟ್ (Robot) ಎಂದರೇನು ಮತ್ತು ರೋಬೋಟಿಕ್ಸ್ ಎಂದರೇನು ಅಂತ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದಾರೆ. ಎಂದರೆ ದಿನೇ ದಿನೇ ತಂತ್ರಜ್ಞಾನ ಬೆಳೆಯುತ್ತಿದ್ದಂತೆ, ಈ ರೋಬೋಟಿಕ್ಸ್ ಬಗ್ಗೆ ಜನರಲ್ಲಿ ಅರಿವು ಸಹ ತುಂಬಾನೇ ಮೂಡುತ್ತಿದೆ.


ಸರಳವಾಗಿ ಹೇಳುವುದಾದರೆ ರೋಬೋಟಿಕ್ಸ್ ಎಂಬ ಪದಗುಚ್ಛವನ್ನು ರೋಬೋಟ್ ಎಂಬ ಚಿಕ್ಕ ಪದದಿಂದಲೇ ವಿಸ್ತರಿಸಲಾಗಿದೆ. ಇದು ರೋಬೋಟ್ ಗಳನ್ನು ರಚಿಸುವ, ಉತ್ಪಾದಿಸುವ ಮತ್ತು ಬಳಸುವ ಕಲ್ಪನೆಯೊಂದಿಗೆ ವ್ಯವಹರಿಸುವ ಎಂಜಿನಿಯರಿಂಗ್ ಕ್ಷೇತ್ರವಾಗಿದೆ.


ಈಗಂತೂ ವಿಶ್ವಾದ್ಯಂತ, ಈ ರೋಬೋಟಿಕ್ಸ್ ಕ್ಷೇತ್ರವು ತುಂಬಾನೇ ವೇಗವಾಗಿ ವಿಸ್ತರಿಸುತ್ತಿದೆ. ಕೈಗಾರಿಕಾ ರೋಬೋಟ್ ಗಳ ಮಾರುಕಟ್ಟೆಯ ಮೌಲ್ಯವು 2021 ರಲ್ಲಿ ಯುಎಸ್ ನಲ್ಲಿ 32.32 ಡಾಲರ್ ಬಿಲಿಯನ್ ಆಗಿತ್ತು. ಅದೇ 2022 ರಿಂದ 2030 ರವರೆಗೆ, ಇದು 12.1 ಪ್ರತಿಶತ ಸಿಎಜಿಆರ್ ನಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆಯಂತೆ. ಇದು ಯುಎಸ್ ನಲ್ಲಿ 88.55 ಡಾಲರ್ ಬಿಲಿಯನ್ ತಲುಪುತ್ತದೆ ಅಂತ ಅಂದಾಜಿಸಲಾಗುತ್ತಿದೆ.


ರೋಬೋಟ್ ಉದ್ಯಮವು ಭಾರತದಲ್ಲೂ ಸಹ ಬೆಳೆದಿದೆ, 2019 ರಿಂದ 2024 ರವರೆಗೆ ಬೆಳವಣಿಗೆಯು 13.3 ಪ್ರತಿಶತ ಸಿಎಜಿಆರ್ ಎಂದು ನಿರೀಕ್ಷಿಸಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ರೊಬೊಟಿಕ್ಸ್ ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿಜೀವನದ ಆಯ್ಕೆಯಾಗಿದೆ.


ಪ್ರಾತಿನಿಧಿಕ ಚಿತ್ರ


ನೀವು ರೋಬೋಟಿಕ್ಸ್ ನಲ್ಲಿ ಆಯ್ಕೆ ಮಾಡಬಹುದಾದ ಕೋರ್ಸ್ ಗಳು ಹೀಗಿವೆ..


ನಿಮಗೆ ರೋಬೋಟಿಕ್ಸ್ ಕ್ಷೇತ್ರದಲ್ಲಿ ತುಂಬಾನೇ ಆಸಕ್ತಿ ಇದ್ದು, ಇದನ್ನು ನೀವು ಕರಿಯರ್ ಆಗಿ ಆಯ್ಕೆ ಮಾಡಲು ನಿರ್ಧರಿಸಿದರೆ ಇಲ್ಲಿವೆ ನೋಡಿ ಅನೇಕ ರೀತಿಯ ಕೋರ್ಸ್ ಗಳು.


ಮೈಕ್ರೋ-ರೋಬೋಟಿಕ್ಸ್


ಡಿಜಿಟಲ್ ಎಲೆಕ್ಟ್ರಾನಿಕ್ಸ್ ಮತ್ತು ಮೈಕ್ರೋ-ಪ್ರೊಸೆಸರ್ಸ್


ಡಿಸೈನ್ ಆಂಡ್ ಕಂಟ್ರೋಲ್


ರೋಬೋಟ್ ಮ್ಯಾನಿಪ್ಯುಲೇಟರ್ಸ್


ಇಂಡಸ್ಟ್ರಿಯಲ್ ರೋಬೋಟಿಕ್ಸ್


ಆಟೋಮೇಷನ್


ಕಂಪ್ಯೂಟರ್ ಇಂಟಿಗ್ರೇಟೆಡ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಂ


ಮೆಕಾಟ್ರಾನಿಕ್ಸ್ ಕೋರ್ಸ್


ಆರ್ಟಿಫಿಷಿಯಲ್ ಇಂಟೆಲಿಜೆನ್ಸ್


ರೋಬೋಟ್ ಮೋಷನ್ ಪ್ಲ್ಯಾನಿಂಗ್


ಕಂಪ್ಯೂಟರ್ ಎಡೆಡ್ ಮ್ಯಾನುಫ್ಯಾಕ್ಚರಿಂಗ್


ಮೆಡಿಕಲ್ ರೋಬೋಟಿಕ್ಸ್


ಸಿಗ್ನಲ್ ಪ್ರೋಸೆಸಿಂಗ್


ರೋಬೋಟಿಕ್ಸ್ ನಲ್ಲಿ ಯಾವೆಲ್ಲಾ ಉದ್ಯೋಗಾವಕಾಶಗಳಿವೆ ನೋಡಿ..


ಕಳೆದ ಕೆಲವು ದಶಕಗಳಲ್ಲಿ ವ್ಯಾಪಕ ಶ್ರೇಣಿಯ ಕೈಗಾರಿಕೆಗಳಲ್ಲಿ ಎಲ್ಲವೂ ಯಾಂತ್ರೀಕೃತಗೊಳಿಸುವ ಪ್ರಯತ್ನದ ಪರಿಣಾಮವಾಗಿ ರೋಬೋಟಿಕ್ಸ್ ಕ್ಷೇತ್ರವು ತುಂಬಾನೇ ವೇಗವಾಗಿ ಬೆಳೆಯುತ್ತಿದೆ. ಇದರಿಂದ ರೋಬೋಟಿಕ್ಸ್ ಉದ್ಯಮದಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿದೆ.


ರೋಬೋಟಿಕ್ಸ್ ಆಟೋಮೇಷನ್ ಎಂಜಿನಿಯರ್


ಆಟೋಮೇಷನ್ ರೊಬೊಟಿಕ್ಸ್ ಎಂಜಿನಿಯರ್ ರೋಬೋಟ್ ನ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡುತ್ತಾರೆ ಮತ್ತು ತಮ್ಮ ಗ್ರಾಹಕರಿಂದ ಏನಾದರೂ ಸುಧಾರಣೆಗಳು ಮತ್ತು ವಿನಂತಿಗಳಿದ್ದರೆ, ಅವುಗಳನ್ನು ಪರಿಶೀಲಿಸುತ್ತಾರೆ. ಹಾಗಾಗಿ ಈ ಕೆಲಸಕ್ಕೆ ಡಿಮ್ಯಾಂಡ್ ಇದ್ದೇ ಇರುತ್ತದೆ.


ರೋಬೋಟ್​​


ರೋಬೋಟಿಕ್ಸ್ ಎಂಜಿನಿಯರ್


ರೋಬೋಟಿಕ್ಸ್ ಎಂಜಿನಿಯರ್ ದಕ್ಷ, ಸುರಕ್ಷಿತ ಮತ್ತು ಸಮಂಜಸವಾದ ಬೆಲೆಯ ರೋಬೋಟ್ ಗಳ ವಿನ್ಯಾಸ, ರಚನೆ ಮತ್ತು ನಿರ್ಮಾಣದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.


ಅವರು ಎಂಜಿನಿಯರ್, ಕಂಪ್ಯೂಟರ್ ವಿಜ್ಞಾನಿಗಳು ಮತ್ತು ರೋಬೋಟಿಕ್ಸ್ ಡೆವಲಪರ್ ಗಳ ವಿವಿಧ ತಂಡಗಳೊಂದಿಗೆ ಸೇರಿಕೊಂಡು ಕೆಲಸ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.


ಸಾಫ್ಟ್‌ವೇರ್ ಡೆವಲಪರ್


ಸಾಫ್ಟ್‌ವೇರ್ ಡೆವಲಪರ್ ಗಳು ಡೇಟಾ ಪ್ರಸರಣವನ್ನು ಆಪ್ಟಿಮೈಸ್ ಮಾಡುವುದು, ಹಸ್ತಚಾಲಿತ ಕಾರ್ಯಾಚರಣೆಗಳನ್ನು ಸ್ವಯಂಚಾಲಿತಗೊಳಿಸುವುದು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಆಂತರಿಕ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಾರೆ. ಅವರು ರೋಬೋಟ್ ನ ಹೆಚ್ಚಿನ ಕಾರ್ಯಕ್ಷಮತೆಯ ಡೇಟಾ ಸಂಸ್ಕರಣಾ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.


ರೋಬೋಟಿಕ್ಸ್ ಟೆಕ್ನಿಷಿಯನ್


ರೋಬೋಟಿಕ್ಸ್ ಟೆಕ್ನಿಷಿಯನ್ ರೋಬೋಟ್ ಗಳ ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ, ತಯಾರಿಕೆ ಮತ್ತು ಬಳಕೆಯ ಎಲ್ಲಾ ಅಂಶಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಅವರು ಕಡಿಮೆ-ಕೋಡ್ ಪ್ರೋಗ್ರಾಮಿಂಗ್ ಮತ್ತು ರೋಬೋಟ್ ರಿಪ್ರೊಗ್ರಾಮಿಂಗ್ ನಲ್ಲಿ ಪ್ರವೀಣರಾಗಿರುತ್ತಾರೆ ಮತ್ತು ಅವರು ರೋಬೋಟ್ ನ ಒಟ್ಟಾರೆ ಉಸ್ತುವಾರಿಯನ್ನು ವಹಿಸಿರುತ್ತಾರೆ.


ರೋಬೋಟಿಕ್ ವೆಲ್ಡರ್


ರೋಬೋಟಿಕ್ ವೆಲ್ಡಿಂಗ್ ಪ್ರೋಗ್ರಾಮಿಂಗ್ ಮತ್ತು ರೋಬೋಟ್ ನ ವೆಲ್ಡಿಂಗ್ ಉಪಕರಣವನ್ನು ನಿಯಂತ್ರಿಸುವುದು, ಸೆಟಪ್ ಅವಶ್ಯಕತೆಗಳಿಗೆ ಅನುಗುಣವಾಗಿ ವೆಲ್ಡಿಂಗ್ ಜಿಗ್ ಗಳನ್ನು ಹೊಂದಿಸುವುದು ಮತ್ತು ಸಾಂದರ್ಭಿಕವಾಗಿ ಗ್ರೈಂಡಿಂಗ್ ಅಥವಾ ವೆಲ್ಡಿಂಗ್ ಸ್ಪಾಟ್ ಕಾಂಪೊನೆಂಟ್ ಗಳನ್ನು ಒಳಗೊಂಡಿರುತ್ತದೆ.


ಇದನ್ನೂ ಓದಿ: Career Options: ಪ್ರಾಂಪ್ಟ್ ಇಂಜಿನಿಯರಿಂಗ್​ನಲ್ಲಿ ವೃತ್ತಿಜೀವನ ಪ್ರಾರಂಭಿಸುವುದು ಹೇಗೆ, ಇಲ್ಲಿದೆ ಮಾಹಿತಿ


ಕಂಟ್ರೋಲ್ ಎಂಜಿನಿಯರ್


ವಿವಿಧ ವಿದ್ಯುತ್ ನಿಯಂತ್ರಣಗಳನ್ನು ರೋಬೋಟಿಕ್ಸ್ ಕಂಟ್ರೋಲ್ ಎಂಜಿನಿಯರ್ ಯಾಂತ್ರಿಕ ವ್ಯವಸ್ಥೆಗಳಲ್ಲಿ ಸಂಯೋಜಿಸುತ್ತಾರೆ. ಅವರು ನಿಯಂತ್ರಣ ವಿನ್ಯಾಸಗಳಿಗೆ ಸಹ ಸಹಾಯ ಮಾಡುತ್ತಾರೆ. ನಿರ್ವಹಣೆ, ಸಂಶೋಧನೆ ಮತ್ತು ವಿನ್ಯಾಸದ ಮೂಲಕ. ಅವರು ಯಂತ್ರದ ರೋಬೋಟಿಕ್ಸ್ ಉಪಕರಣದ ರಚನೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ.


ರೋಬೋಟಿಕ್ಸ್ ನ್ಯಾವಿಗೇಷನ್ ಆಂಡ್ ಪರ್ಸಪ್ಷನ್ ಸ್ಪೆಶಲಿಸ್ಟ್


ಲಿಡಾರ್, ಸ್ಟಿರಿಯೊ ಕ್ಯಾಮೆರಾಗಳು ಮತ್ತು ಇತರ ರೋಬೋಟಿಕ್ಸ್ ಮತ್ತು ಡೇಟಾ ಅನಾಲಿಟಿಕ್ಸ್ ಕಾರ್ಯಗಳಿಂದ ಡೇಟಾವನ್ನು ಸಂಯೋಜಿಸುವ ಮೂಲಕ, ಈ ಅಭ್ಯರ್ಥಿಗಳು ರೋಬೋಟ್ ಗಳ ಪ್ರಸ್ತುತ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾರೆ.

First published: