• ಹೋಂ
  • »
  • ನ್ಯೂಸ್
  • »
  • Jobs
  • »
  • Survey Report: ದುಡಿಯುವ ಗಂಡ-ಹೆಂಡತಿಗೆ ಆಫೀಸ್​ನಲ್ಲಿ ಕೆಟ್ಟ ಬಾಸ್ ಇದ್ದರೆ ಜೀವನ ಹೀಗಿರುತ್ತದೆಯಂತೆ!

Survey Report: ದುಡಿಯುವ ಗಂಡ-ಹೆಂಡತಿಗೆ ಆಫೀಸ್​ನಲ್ಲಿ ಕೆಟ್ಟ ಬಾಸ್ ಇದ್ದರೆ ಜೀವನ ಹೀಗಿರುತ್ತದೆಯಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಾಸ್​ ಎನಿಸಿಕೊಂಡವರ ಗುಣ ಹೇಗೆ ಪೋಷಕರನ್ನು ಪ್ರಭಾವಿಸುತ್ತದೆ? ಇದು ಮಕ್ಕಳ ಬೆಳವಣಿಗೆಯಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಅಧ್ಯಯನವೊಂದರಲ್ಲಿ ಬಯಲಾಗಿದೆ.

  • Share this:

ಒಂದೇ ಮನೆಯಲ್ಲಿ ಎರಡು ವಿಭಿನ್ನ ವೃತ್ತಿ (Career) ಹೊಂದಿರುವ ಪೋಷಕರು (Parents) ತಮ್ಮ ಮಕ್ಕಳ (Children) ಜೀವನದಲ್ಲಿ ವೃತ್ತಿ ಹಿನ್ನೆಲೆಯಲ್ಲಿ ಬಹಳಷ್ಟು ಪ್ರಭಾವ ಬೀರುತ್ತಾರೆ. ನಿಮ್ಮ ಕಛೇರಿಯ ವಾತಾವರಣ ಸಕಾರಾತ್ಮಕವಾಗಿದ್ದರೆ ನಿಮ್ಮ ಮನೆಯೂ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಇಬ್ಬರು ಕೂಡ ತಮ್ಮ ಆಫೀಸ್​ನ ಬಾಸ್​ ಮತ್ತು ಕಚೇರಿಯ ಪ್ರಭಾವಗಳಿಂದ ಸಕಾರಾತ್ಮಕ ಇಲ್ಲವೇ ನಕಾರಾತ್ಮಕ ಗುಣಗಳನ್ನು ಮನೆಯಲ್ಲಿ ಪಸರಿಸುವ ಮೂಲಕ ಪ್ರಭಾವಿಸುತ್ತಿರುತ್ತಾರೆ.


ಬಾಸ್​ ಎನಿಸಿಕೊಂಡವರ ಗುಣ ಹೇಗೆ ಪೋಷಕರನ್ನು ಪ್ರಭಾವಿಸುತ್ತದೆ? ಇದು ಮಕ್ಕಳ ಬೆಳವಣಿಗೆಯಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಅಧ್ಯಯನವೊಂದರಲ್ಲಿ ಬಯಲಾಗಿದೆ.


ಅಧ್ಯಯನದ ವರದಿ


ಸಾಂಕ್ರಾಮಿಕದ ಸಮಯದಲ್ಲಿ, ಎರಡು ರೀತಿಯ ವೃತ್ತಿಯಲ್ಲಿರುವ 100 ಜನ ಪೋಷಕರನ್ನು ಮತ್ತು ಅವರ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಇದರಲ್ಲಿ ಒಬ್ಬರ ಪೇರೆಂಟ್​ನ ಕಚೇರಿ ವಾತಾವರಣ, ಬಾಸ್ ವ್ಯಕ್ತಿತ್ವ ಪ್ರಭಾವವು ಮನೆಯಲ್ಲಿನ ಇನ್ನೊಬ್ಬ ಪೇರೆಂಟ್​ ಸಾಮರ್ಥ್ಯದ ಮೇಲೂ ಬೀರುತ್ತದೆ ಎಂಬ ಅಂಶ ತಿಳಿದು ಬಂದಿದೆ.


ಒಳ್ಳೆಯ ಬಾಸ್ ಇದ್ದರೆ ಬೆಂಬಲ ನೀಡುವ ಕಚೇರಿ ವಾತಾವರಣವಿದ್ದಾಗ ಪೋಷಕರಾದವರು ಮನೆಯಲ್ಲೂ ಉತ್ಸಾಹಿಗಳಾಗಿರುತ್ತಾರೆ. ಇಲ್ಲವಾದರೆ ಆ ಮನೆಯಲ್ಲಿ ಮನಸ್ಥಾಪಗಳು ಉಂಟಾಗುತ್ತವೆ. ಮಕ್ಕಳ ಬೆಳವಣಿಗೆಗೆ ತೊಡಕಾಗುತ್ತದೆ. ಇದೆಲ್ಲದ್ದಕ್ಕೂ ಉದ್ಯೋಗಿಯ ಮನಸ್ಥಿತಿಯ ಮೇಲೆ ಪ್ರಭಾವ ಬೀರುವ ಬಾಸ್​ ಕಾರಣರಾಗಿರುತ್ತಾರೆ. ಇಂತಹ ಸಮಯದಲ್ಲಿ ಈ ರೀತಿಯ ಸನ್ನಿವೇಶಗಳನ್ನು ನಿಭಾಯಿಸಲು ಇಲ್ಲಿದೆ ಕೆಲವು ಸಲಹೆಗಳು.


ಕೆಲಸದ ಒತ್ತಡವನ್ನು ಸರಿಯಾಗಿ ನಿಭಾಯಿಸುವುದು


ಕೆಲಸದ ಒತ್ತಡ ವೈಯಕ್ತಿಕ ಜೀವನವನ್ನು ಪ್ರಭಾವಿಸುತ್ತದೆ. ಕಾರ್ಯಕ್ಷೇತ್ರದ ಒತ್ತಡವು ಧನಾತ್ಮಕ ಇಲ್ಲವೇ ಋಣಾತ್ಮಕ ಪರಿಣಾಮವನ್ನು ಬೀರಬಹುದು. ನಿಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದು, ಆ ದಿನ ನಿಮಗೆ ಆಫೀಸ್​ನಲ್ಲಿ ಸಂತೋಷದ ಸಾರ್ಥಕತೆ ಇದ್ದರೆ ಮನೆಯಲ್ಲೂ ನೀವು ನೆಮ್ಮದಿಯಿಂದ ಇರುತ್ತೀರಿ.


ಪ್ರಾತಿನಿಧಿಕ ಚಿತ್ರ


ಒಂದು ವೇಳೆ ಕಚೇರಿಯ ಕೆಲಸ ಬಹಳ ಒತ್ತಡದಿಂದ ಕೂಡಿದ್ದರೆ ನಿಜಕ್ಕೂ ಆ ದಿನ ನಿಮ್ಮ ಸಂತೋಷ ಹಾಳಾಗಬಹುದು. ಈ ನಿಟ್ಟಿನಲ್ಲಿ ನೀವು ನಿಮ್ಮ ಆಫೀಸ್​ ಮತ್ತು ಮನೆಯ ಒತ್ತಡದಿಂದ ಮುಕ್ತವಾಗಲು ಕೆಲವು ಕ್ರಮ ಅನುಸರಿಸಬಹುದು. ಈ ನಿಟ್ಟಿನಲ್ಲಿ ನೀವು ರೂಢಿಸಿಕೊಳ್ಳುವ ಹವ್ಯಾಸಗಳು ನಿಮಗೆ ನೆರವಾಗುತ್ತದೆ.


ಸಂಗಾತಿಗಳು ಕೆಲಸವನ್ನು ಹಂಚಿಕೊಳ್ಳಬೇಕು


ದಂಪತಿಗಳು ಕೆಲಸವನ್ನು ಅರ್ಧದಷ್ಟು ಹಂಚಿಕೊಳ್ಳಲು ಪ್ರಯತ್ನಿಸಬೇಕು. ಯಾವಾಗಲೂ ಇದು ಸಾಧ್ಯವಾಗದಿದ್ದರೆ ಕೆಲವು ಕೆಲಸಗಳನ್ನಾದರೂ ಹಂಚಿಕೊಳ್ಳುವ ಮನಸ್ಸು ಮಾಡಬೇಕು. ಕಚೇರಿಯಲ್ಲಿ ಸರಿಯಾದ ವಾತಾವರಣವಿರದ ಸಮಯದಲ್ಲಿ ಪೋಷಕರು ಈ ರೀತಿ ಕೆಲಸಗಳನ್ನು ಹಂಚಿಕೊಳ್ಳಲು ಕಷ್ಟವಾಗಬಹುದು ಎಂದು ಸಂಶೋಧನೆ ತಿಳಿಸುತ್ತದೆ.


ಇದನ್ನೂ ಓದಿ: Career Tips: ಕೆಲಸ ಮತ್ತು ಜೀವನವನ್ನು ಸರಿದೂಗಿಸಿಕೊಂಡು ಹೋಗಲು 7 ಸಲಹೆಗಳು; ಇದನ್ನು ಪಾಲಿಸಿದ್ರೆ ಟೆನ್ಷನ್ ಇರಲ್ಲ


ಈ ನಿಟ್ಟಿನಲ್ಲಿ ಕೆಲವು ಮನೆಯಲ್ಲಿ ತೃಪ್ತಿ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ದಂಪತಿಗಳು ಒಟ್ಟಿಗೆ ಕೆಲಸ ಮಾಡುವ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಜೊತೆಗೆ ಅದನ್ನು ಸರಿಯಾಗಿ ಹೊಂದಿಸುವ ಕಲೆ ಸಿದ್ಧಿಯಾಗಬೇಕು. ಇಬ್ಬರೂ ವಿಭಿನ್ನ ವೃತ್ತಿಯಲ್ಲಿರುವ ಸಹ ಪೋಷಕರು ಪ್ರಯೋಗಿಸಿ ನಿರ್ಧರಿಸಬಹುದು.


ಉತ್ತಮ ವ್ಯಕ್ತಿತ್ವವುಳ್ಳ ಮುಖ್ಯಸ್ಥರ ಬಳಿ ಕಾರ್ಯನಿರ್ವಹಿಸಿ


ಯಾರೇ ಮುಖ್ಯಸ್ಥರಾದರೂ ತನ್ನ ಉದ್ಯೋಗಿಗಳ ಪ್ರಗತಿಯಲ್ಲಿ ಪಾತ್ರ ನಿರ್ವಹಿಸುತ್ತಾರೆ. ಉದ್ಯೋಗಿಗಳು ಎಡವಿದಾಗ ಮೃದು ಭಾಷಿಯಾಗಿ ಪ್ರೋತ್ಸಾಹಿಸುವ ಧಾಟಿಯಲ್ಲಿ ಅವರಿಗೆ ಮಾರ್ಗದರ್ಶನ ನೀಡಬೇಕು. ಆಗ ಆ ಮುಖ್ಯಸ್ಥರು ಉದ್ಯೋಗ ಕ್ಷೇತ್ರದ ಬಗ್ಗೆ ಸಕಾರಾತ್ಮಕ ಧೋರಣೆ ಬೆಳೆಯುವಂತೆ ಮಾಡುತ್ತಾರೆ.


ಪ್ರಾತಿನಿಧಿಕ ಚಿತ್ರ


ಆ ಮೂಲಕ ಒಬ್ಬರ ವೃತ್ತಿ ಬದುಕು ಎತ್ತರಕ್ಕೇರುವಂತೆ ಮಾಡುತ್ತಾರೆ. ಇಂತಹ ಬಾಸ್​ಗಳನ್ನು ನೀವು ಆಯ್ಕೆ ಮಾಡಿಕೊಳ್ಳಲು ಪ್ರಯತ್ನಿಸಿ. ಎಲ್ಲಾ ಸಮಯದಲ್ಲೂ ಇದು ಸಾಧ್ಯವಾಗದಿರಬಹುದು. ಆದರೆ ವೃತ್ತಿ ಬದುಕಿನ ಮುಂದಿನ ಹಂತಗಳಲ್ಲಿ ಇದರ ಬಗ್ಗೆ ಗಮನವಹಿಸಿ.


ನಿರ್ವಹಣೆ


ನಿಮ್ಮ ಮೇಲ್ವಿಚಾರಕರೊಂದಿಗೆ ಸಕಾರಾತ್ಮಕ ಸಂಬಂಧವನ್ನು ನಿರ್ಮಿಸಿಕೊಳ್ಳಿ. ಇದರಿಂದ ನಿಮ್ಮ ಬಾಸ್​ನಿಂದ ಉತ್ತಮ ಹೊಂದಾಣಿಕೆ, ಸಂವಹನ ಮತ್ತು ಬೆಂಬಲವನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಉದ್ಯೋಗ ತೃಪ್ತಿ, ಉತ್ಪಾದಕತೆ, ವೃತ್ತಿ ಪ್ರಗತಿಗೆ ಇದು ಅವಕಾಶ ನೀಡುತ್ತದೆ.


ಬೆಂಬಲ ಗಳಿಸಿಕೊಳ್ಳಿ


ಸಹಕಾರ ನೀಡುವ ಬಾಸ್​ ಇರುವುದು ಬಹಳ ಪ್ರಯೋಜನಕಾರಿ ನಿಜ. ಆದರೆ ಅವರ ಮೇಲೆ ಸಂಪೂರ್ಣ ಅವಲಂಬನೆ ಒಳ್ಳೆಯದಲ್ಲ. ಕುಟುಂಬ, ಸ್ನೇಹಿತರು, ಸಮುದಾಯ ಮತ್ತು ನಿಮ್ಮ ಸಂಪನ್ಮೂಲಗಳ ಸಹಕಾರದಿಂದ ಸವಾಲಿನ ಸಂದರ್ಭಗಳಲ್ಲಿ ಅಭಿವೃದ್ಧಿ ಹೊಂದಲು ಪ್ರಯತ್ನಿಸಿ.
ನಿಮ್ಮ ಬಾಸ್​ ನಿಮ್ಮ ಸಹ ಪೋಷಕರ ಸಾಮರ್ಥ್ಯವನ್ನು ಪ್ರಭಾವಿಸಬಹುದು. ಈ ನಿಟ್ಟಿನಲ್ಲಿ ನಿಮ್ಮ ಅರ್ಥ ಮಾಡಿಕೊಳ್ಳುವಿಕೆ ಮೂಲಕ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಲು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

top videos
    First published: