• Home
  • »
  • News
  • »
  • jobs
  • »
  • Resume Tips-9: ಕರಿಯರ್ ಗ್ಯಾಪ್ ಇದ್ದರೆ ಚಿಂತೆ ಬೇಡ, ರೆಸ್ಯೂಮ್​ನಲ್ಲಿ ಈ ರೀತಿ ಉಲ್ಲೇಖಿಸಿ

Resume Tips-9: ಕರಿಯರ್ ಗ್ಯಾಪ್ ಇದ್ದರೆ ಚಿಂತೆ ಬೇಡ, ರೆಸ್ಯೂಮ್​ನಲ್ಲಿ ಈ ರೀತಿ ಉಲ್ಲೇಖಿಸಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕರಿಯರ್​ ಬ್ರೇಕ್​ ಎಂದರೆ ಒಬ್ಬ ಉದ್ಯೋಗಿ ಯಾವುದೋ ಕಾರಣಕ್ಕಾಗಿ ಒಂದೆರೆಡು ವರ್ಷ ಕೆಲಸದಿಂದ ಬ್ರೇಕ್‌ ತೆಗೆದುಕೊಂಡು ಮತ್ತೆ ಕೆಲಸಕ್ಕೆ ಹಾಜರಾಗುವುದು ಎಂದರ್ಥ. ಇಂತಹವರಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚು.

  • Share this:

    ಒಬ್ಬ ಉದ್ಯೋಗಾಂಕ್ಷಿ (Candidates) ಯಾವುದಾದರೂ ಕೆಲಸಕ್ಕೆ ಅರ್ಜಿ ಹಾಕುವಾಗ ಮೊದಲಿಗೆ ಬರುವುದೇ  ರೆಸ್ಯೂಮ್ (Resume).‌ ಈ ರೆಸ್ಯೂಮ್‌ನಲ್ಲಿ ನಾವು ಉಲ್ಲೇಖಿಸಿರುವ ಮಾಹಿತಿ ನಿಖರವಾಗಿರಬೇಕು ಮತ್ತು ಸಂದರ್ಶಕರಿಗೆ ಇಷ್ಟವಾಗುವಂತಿರಬೇಕು. ಎಲ್ಲದಕ್ಕೂ ಮುಖ್ಯವಾಗಿ ನಿಮ್ಮ ಕೌಶಲ್ಯ, ವಿದ್ಯಾರ್ಹತೆ, ಅನುಭವ ಎಲ್ಲವೂ ಸಹ ಸತ್ಯತೆಯಿಂದ ಕೂಡಿರಬೇಕು. ಒಬ್ಬ ಉದ್ಯೋಗಾಂಕ್ಷಿ ರೆಸ್ಯೂಮ್‌ ರಚಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಿರುವ ಮೂಲಭೂತ ಅಂಶಗಳು ಇವು.


    ತೊಡಕಾಗುತ್ತಿದೆ ಕೆಲಸದ ಅಂತರ


    ಆದರೆ ಇತ್ತೀಚಿನ ದಿನಗಳಲ್ಲಿ ರೆಸ್ಯೂಮ್‌ನಲ್ಲಿ ಉಲ್ಲೇಖಿಸುವ ಕೆಲಸದ ಅನುಭವದ ಅಂತರ ಅಭ್ಯರ್ಥಿಗಳಿಗೆ ತೊಡಕಾಗುತ್ತಿದೆಯಂತೆ. ಅದರಲ್ಲೂ ಮಹಿಳೆಯರಿಗೆ ಈ ಸಂಕಷ್ಟ ತುಂಬಾನೇ ಅಡಚಣೆ ಉಂಟುಮಾಡುತ್ತಿದೆ ಎಂದು ವರದಿಗಳು ಹೇಳುತ್ತಿವೆ. ನೇಮಕಾತಿ ವ್ಯವಸ್ಥಾಪಕರು ಸಹ ವಿರಾಮ ಹೊಂದಿರುವ ಅಭ್ಯರ್ಥಿಗಳ ವಿರುದ್ಧ ತಾರತಮ್ಯ ಮಾಡುತ್ತಾರೆ ಎಂದು ಹಿಂದಿನ ಕೆಲ ಅಧ್ಯಯನಗಳು ಹೇಳಿವೆ.


    ಕೆಲಸದಿಂದ ಬ್ರೇಕ್‌ ತೆಗೆದುಕೊಳ್ಳುವಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು


    ಕರಿಯರ್​ ಬ್ರೇಕ್​ ಎಂದರೆ ಒಬ್ಬ ಉದ್ಯೋಗಿ ಯಾವುದೋ ಕಾರಣಕ್ಕಾಗಿ ಒಂದೆರೆಡು ವರ್ಷ ಕೆಲಸದಿಂದ ಬ್ರೇಕ್‌ ತೆಗೆದುಕೊಂಡು ಮತ್ತೆ ಕೆಲಸಕ್ಕೆ ಹಾಜರಾಗುವುದು ಎಂದರ್ಥ. ಇಂತಹವರಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚು. ಮಹಿಳೆಯರು ಮಗು ಆದ ಮೇಲೆ ಅವರ ಲಾಲನೆ-ಪಾಲನೆಯಲ್ಲಿ ಒಂದು ಅಥವಾ ಎರಡು ವರ್ಷ ತೊಡಗಿಕೊಂಡು ನಂತರ ಸ್ವಲ್ಪ ಮಕ್ಕಳು ಬೆಳೆದ ಬಳಿಕ ಕೆಲಸ ಮಾಡುವ ಮನಸ್ಸು ಮಾಡುತ್ತಾರೆ.


    job interview tips how to control nervousness before interview


    ಇಂತಹ ಅಭ್ಯರ್ಥಿಗಳು ಕೆಲಸದಿಂದ ಒಂದೆರೆಡು ವರ್ಷ ದೂರ ಉಳಿಯುವಂತಾಗುತ್ತದೆ. ಹೀಗೆ ಕೆಲಸದಿಂದ ದೂರ ಉಳಿದ ಅಭ್ಯರ್ಥಿಗಳು ಮತ್ತೆ ಕೆಲಸ ಹುಡುಕಲು ಆರಂಭಿಸುವಾಗ ಸಂದರ್ಶಕರು ವಿರಾಮ ಹೊಂದಿದ ಅಭ್ಯರ್ಥಿಗಳ ಮೇಲೆ ಅಷ್ಟಾಗಿ ಆಸಕ್ತಿ ವಹಿಸುವುದಿಲ್ಲ ಎನ್ನಲಾಗಿದೆ.


    ಕೆಲಸದಿಂದ ಅಂತರ ಕಾಯ್ದುಕೊಂಡವರ ರೆಸ್ಯೂಮ್‌ ಹೇಗಿರಬೇಕು?


    ಹಾಗಾದರೆ ಕೆಲಸದಿಂದ ದೂರ ಉಳಿದು ಮತ್ತೆ ರೆಸ್ಯೂಮ್‌ ಕಳುಹಿಸಿ ಕೆಲಸ ಹುಡುಕುವ ಅಭ್ಯರ್ಥಿಗಳು ಇದರಿಂದ ತಪ್ಪಿಸಿಕೊಳ್ಳೋದು ಹೇಗೆ ಅನ್ನೋದನ್ನ ನಾವಿಲ್ಲಿ ನೋಡೋಣ. ಒಂದೇ ಒಂದು ಸಿಂಪಲ್‌ ಸೂತ್ರ ಬಳಸುವ ಮೂಲಕ ಅಭ್ಯರ್ಥಿಗಳು ತಮ್ಮ ಕೆಲಸದ ವಿರಾಮದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.


    ಇದನ್ನೂ ಓದಿ: Resume Tips-8: ರೆಸ್ಯೂಮ್​​ನಲ್ಲಿ ಸುಳ್ಳು ಹೇಳಿದ್ದರೆ ಏನಾಗುತ್ತೆ, ಈ ರೀತಿ ಸಿಕ್ಕಿ ಬೀಳುತ್ತೀರಿ ಎಚ್ಚರ!


    ಕೆಲಸದ ಅನುಭವದ ವರ್ಷವನ್ನು ಹೇಗೆ ಉಲ್ಲೇಖಿಸಬೇಕು?


    ಇತ್ತೀಚೆಗೆ ನೇಚರ್ ಹ್ಯೂಮನ್ ಬಿಹೇವಿಯರ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ, ಉದ್ಯೋಗದ ನಿಜವಾದ ದಿನಾಂಕಗಳಿಗಿಂತ ಹೆಚ್ಚಾಗಿ ಉದ್ಯೋಗದಾತರಲ್ಲಿ ವರ್ಷಗಳ ಅವಧಿಯನ್ನು ಪಟ್ಟಿ ಮಾಡಲಾದ ರೆಸ್ಯೂಮ್‌ಗಳು ಉದ್ಯೋಗವಕಾಶಗಳನ್ನು ಹೆಚ್ಚಾಗಿ ಪಡೆದುಕೊಳ್ಳುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.




    ಇದರರ್ಥ ನೀವು 2015 ರಿಂದ ಕೆಲಸ ಆರಂಭಿಸಿ 2021ರವರೆಗೆ ಕೆಲಸ ಮಾಡಿ ನಂತರ ಬ್ರೇಕ್‌ ತೆಗೆದುಕೊಂಡು 2023ಕ್ಕೆ ಕೆಲಸ ಆರಂಭಿಸುತ್ತಿದ್ದರೆ, ನಿಮ್ಮ ರೆಸ್ಯೂಮ್‌ನಲ್ಲಿ 2015 ರಿಂದ 2021ರವರೆಗೆ ಕಂಪನಿಯಲ್ಲಿ ಕೆಲಸ ಮಾಡಿದ್ದೀನಿ ಎಂದು ಹೇಳುವ ಬದಲು ನೇರವಾಗಿ ನಿಮ್ಮ ಅನುಭವದ ವರ್ಷವನ್ನು ಉಲ್ಲೇಖಿಸಬಹುದು.


    ಅಂದರೆ ನಿಮ್ಮ ರೆಸ್ಯೂಮ್‌ನಲ್ಲಿ ಈ ಮೇಲಿನ ಉದಾಹರಣೆಯಂತೆ ನೀವು ನಿಮ್ಮ ಕೆಲಸದ ಅನುಭವ ಆರು ವರ್ಷ ಎಂದು ಉಲ್ಲೇಖಿಸಬೇಕಾಗುತ್ತದೆ. ನಿರ್ದಿಷ್ಟ ದಿನಾಂಕಗಳಿಗಿಂತ ಹೆಚ್ಚಾಗಿ ಲಿಸ್ಟಿಂಗ್ ಅವಧಿಯು ಉದ್ಯೋಗದ ಅಂತರದೊಂದಿಗೆ ರೆಸ್ಯೂಮ್‌ಗೆ ಹೋಲಿಸಿದರೆ 15% ರಷ್ಟು ಉದ್ಯೋಗ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.




    ಸಂಶೋಧನೆಯ ಲೇಖಕರು ಅರ್ಜಿದಾರರು ಕೆಲಸದ ಅನುಭವವನ್ನು ವರ್ಷಗಳಲ್ಲಿ ಹೈಲೈಟ್ ಮಾಡುವುದು ಪರಿಣಾಮಕಾರಿಯಾಗಿದೆ ಎಂದಿದ್ದಾರೆ. ಉದ್ಯೋಗಾಕಾಂಕ್ಷಿಗಳು ತಮ್ಮ ವಿರಾಮದ ವಿರುದ್ಧ ತಾರತಮ್ಯದಿಂದ ನಿರ್ವಾಹಕರನ್ನು ನೇಮಿಸಿಕೊಳ್ಳುವುದನ್ನು ಮುಂದುವರಿಸಲು ಸಾಕಷ್ಟು ಸಲಹೆಗಳಿವೆ ಎಂದು ಅವರು ಗಮನಸೆಳೆದಿದ್ದಾರೆ.


    ಹೊಸ ಅಧಿಕಾರಾವಧಿಯ ಸ್ವರೂಪವು ಅರ್ಜಿದಾರರ ಕೆಲಸದ ಅನುಭವದತ್ತ ಗಮನ ಸೆಳೆಯುತ್ತದೆ ಮತ್ತು ಲೋಪದಿಂದ ಉದ್ಯೋಗದ ಅಂತರವನ್ನು ಅಸ್ಪಷ್ಟಗೊಳಿಸುತ್ತದೆ ಎಂದು ಅಧ್ಯಯನದಲ್ಲಿ ವಿವರಿಸಿದ್ದಾರೆ.

    Published by:Kavya V
    First published: