• Home
 • »
 • News
 • »
 • jobs
 • »
 • Over Workload: ಅತಿಯಾಗಿ ಕೆಲಸ ಕೊಡುತ್ತಿದ್ದರೆ ಉದ್ಯೋಗಿಗಳು ಹೀಗೆ ನಯವಾಗಿ ಬಾಸ್ ಮನವೊಲಿಸಬಹುದು

Over Workload: ಅತಿಯಾಗಿ ಕೆಲಸ ಕೊಡುತ್ತಿದ್ದರೆ ಉದ್ಯೋಗಿಗಳು ಹೀಗೆ ನಯವಾಗಿ ಬಾಸ್ ಮನವೊಲಿಸಬಹುದು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಆರೋಗ್ಯಕ್ಕಾಗಿ ವರ್ಕ್​​-ಲೈಫ್​ ಬ್ಯಾಲೆನ್ಸ್​ ಹೊಂದಿರಬೇಕು. ಆಫೀಸ್​ನ ಕೆಲಸಕ್ಕಾಗಿ ನೀವು ಹೆಚ್ಚು ಸಮಯ ನೀಡಿ, ನಿಮ್ಮ ವೈಯಕ್ತಿಕ ಬದುಕಿಗೆ ಕಡಿಮೆ ಸಮಯ ನೀಡುತ್ತಿದ್ದೀರಿ ಎಂದು ಅನಿಸಿದರೆ ನೀವು ಇದನ್ನು ಬಗೆಹರಿಸಿಕೊಳ್ಳುವುದು ಬಹಳ ಮುಖ್ಯ.

 • Trending Desk
 • 4-MIN READ
 • Last Updated :
 • Share this:

  ಕಳೆದ ಎರಡ್ಮೂರು ವರ್ಷಗಳಿಂದ ಹಲವರ ಜೀವನ (Life) ಬದಲಾಗಿದೆ. ಬಹಳಷ್ಟು ಜನರ ಜೀವನವು ಕಷ್ಟಕ್ಕೆ ನೂಕಲ್ಪಟ್ಟಿದೆ. ಅಲ್ಲದೇ ಸಾಂಕ್ರಾಮಿಕ ರೋಗದಿಂದಾಗಿ (Coronavirus) ಅನೇಕ ಜನರು ಗಮನಾರ್ಹ ಆರ್ಥಿಕ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ಅವರು ಹೆಚ್ಚು ಕೆಲಸ (JOB) ಮಾಡುತ್ತಿದ್ದಾರೆ. ಆದ್ರೆ ಹೀಗೆ ದೀರ್ಘಾವಧಿಯ ಕೆಲಸದ ದಿನಗಳಿಂದಾಗಿ ಸಾಕಷ್ಟು ದುಷ್ಪರಿಣಾಮಗಳಿವೆ. ಆದ್ದರಿಂದ ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ಅದರಿಂದ ಹೊರಬರುವುದು ದಾರಿಯನ್ನು ಕಂಡುಕೊಳ್ಳಬೇಕಿರುವುದು ಬಹಳ ಮುಖ್ಯ.


  ಬಹಳಷ್ಟು ಜನರು ದೀರ್ಘ ಕೆಲಸದ ದಿನಗಳು, ಹೆಚ್ಚು ಕೆಲಸದ ಅವಧಿಯಲ್ಲಿ ದುಡಿಯಬೇಕಾಗಿರುತ್ತದೆ. ಆದರೆ ಇದು ನಿಮಗೆ ಒತ್ತಡವನ್ನು ಉಂಟು ಮಾಡಬಹುದು. ಆದಾಗ್ಯೂ, ದೀರ್ಘ ಕೆಲಸದ ದಿನಗಳ ಸಾಧಕ-ಬಾಧಕಗಳನ್ನು ಗಮನಿಸಿ, ಸರಳವಾಗಿಯೇ ಅದರ ಬಗ್ಗೆ ನೀವು ದೂರು ನೀಡಬಹುದು.


  ಕೆಲಸದ ಸ್ಥಳದಲ್ಲಿ ಬದಲಾವಣೆಯ ಪರಿಣಾಮವಿದು!


  ಕಳೆದ ಎರಡು ವರ್ಷಗಳಲ್ಲಿ ಉದ್ಯೋಗಿ ಮತ್ತು ಕೆಲಸದ ಸ್ಥಳದಲ್ಲಿ ಅನೇಕ ಬದಲಾವಣೆಗಳಾಗಿವೆ. ಕೊರೊನಾ ಸಾಂಕ್ರಾಮಿಕ ರೋಗವು ಬಂದಾಗ, ಅನೇಕ ಜನರು ಮನೆಯಿಂದ ಪೂರ್ಣ ಅಥವಾ ಅರೆಕಾಲಿಕ ಕೆಲಸವನ್ನು ಪ್ರಾರಂಭಿಸಬೇಕಾಯ್ತು. ಸಾಂಕ್ರಾಮಿಕ ರೋಗಕ್ಕೆ ಮೊದಲು ಅಮೆರಿಕ ಜನಸಂಖ್ಯೆಯ ಕೇವಲ 6% ಜನರು ಪ್ರಾಥಮಿಕವಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಆದರೆ ಮೇ 2020 ರಲ್ಲಿ, ಈ ಸಂಖ್ಯೆಯು ಜನಸಂಖ್ಯೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚಾಯಿತು.


  Career Tips how to choose right career as far your dreams
  ಸಾಂದರ್ಭಿಕ ಚಿತ್ರ


  US ಕಾರ್ಮಿಕ ಇಲಾಖೆ ಪ್ರಕಾರ 2021 ರಲ್ಲಿ, 38% ಅಮೆರಿಕನ್ನರು ತಮ್ಮ ಕೆಲಸವನ್ನು ಮನೆಯಿಂದಲೇ ಮಾಡಿದರು. ಇದರಿಂದ ಅನೇಕರಿಗೆ ಹೆಚ್ಚು ಸಮಯ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಯ್ತು.


  ದೀರ್ಘ ಕೆಲಸದ ದಿನಗಳ ಪ್ರಯೋಜನಗಳು


  ಸುದೀರ್ಘ ಕೆಲಸದ ದಿನವನ್ನು ಹೊಂದಿರುವ ಸ್ಪಷ್ಟ ಪ್ರಯೋಜನವೆಂದರೆ ನೀವು ಹೆಚ್ಚು ಹಣವನ್ನು ಗಳಿಸಬಹುದು. ನೀವು ಎಷ್ಟು ಗಂಟೆ ಹೆಚ್ಚು ಕೆಲಸ ಮಾಡುತ್ತೀರಿ ಅಷ್ಟು ಹೆಚ್ಚು ಮೊತ್ತವನ್ನು ಪಡೆಯುತ್ತೀರಿ. ಹೆಚ್ಚುವರಿ ವೇತನದ ಸಿಗುತ್ತದೆ ಎಂಬ ಕಾರಣಕ್ಕೆ ಉದ್ಯೋಗಿಗಳು ದೀರ್ಘ ಕೆಲಸದ ದಿನವನ್ನು ಇಷ್ಟಪಡಬಹುದು. ದೀರ್ಘ ಕೆಲಸದ ದಿನಗಳ ಋಣಾತ್ಮಕ ಪರಿಣಾಮ, ಮನೆಯಿಂದ ಕೆಲಸ ಮಾಡುವುದರಿಂದ ನೀವು ಕೆಲಸದಿಂದ ದೂರವಾಗುವುದಿಲ್ಲ.


  How to Navigate a Mid Life Career Crisis
  ಸಾಂದರ್ಭಿಕ ಚಿತ್ರ


  ಅದನ್ನು ಅರಿತುಕೊಳ್ಳದೆ, ನೀವು ಅಜಾಗರೂಕತೆಯಿಂದ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬಹುದು. ಇದರಿಂದ ನಿಮ್ಮ ಬಾಸ್ ನಿಮ್ಮಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಸುಲಭವಾಗುತ್ತದೆ. ನೀವು ಕಚೇರಿಗೆ ಹಿಂತಿರುಗಿದಾಗಲೂ, ನಿಮ್ಮ ಬಾಸ್ ಅದೇ ಸಮಯವನ್ನು ನಿರೀಕ್ಷಿಸಬಹುದು.


  ಸುದೀರ್ಘ ಕೆಲಸದ ದಿನಗಳ ನಕಾರಾತ್ಮಕ ಪರಿಣಾಮಗಳು


  *ಹೆಚ್ಚುವರಿ ಕೆಲಸದ ಹೊರೆಯಿಂದ ಒತ್ತಡ


  *ಹಲವಾರು ಗಂಟೆ ಕೆಲಸ ಮಾಡುವುದರಿಂದ ಆಯಾಸ


  *ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಡಿಮೆ ಸಮಯ ಕಳೆಯುವುದು


  *ಕಡಿಮೆ ಸಾಮಾಜಿಕ ಸಮಯವನ್ನು ಹೊಂದಿರುವುದರಿಂದ ಖಿನ್ನತೆ


  ಇದನ್ನೂ ಓದಿ: Monday Blues: ಭಾನುವಾರದ ರಜೆ ಬಳಿಕ ಸೋಮವಾರ ಕೆಲಸಕ್ಕೆ ಹೋಗಲು ಹಿಂಸೆ ಅನಿಸೋದು ಏಕೆ?


  ಅತಿಯಾದ ಕೆಲಸದ ಬಗ್ಗೆ ಹೇಗೆ ದೂರು ನೀಡಬೇಕು?


  ಅತ್ಯುತ್ತಮ ಆರೋಗ್ಯಕ್ಕಾಗಿ ವರ್ಕ್​​-ಲೈಫ್​ ಬ್ಯಾಲೆನ್ಸ್​ ಹೊಂದಿರಬೇಕು. ಆಫೀಸಿನ ಕೆಲಸಕ್ಕಾಗಿ ನೀವು ಹೆಚ್ಚು ಸಮಯ ನೀಡಿ, ನಿಮ್ಮ ವೈಯಕ್ತಿಕ ಬದುಕಿನಲ್ಲಿ ಕಡಿಮೆ ಸಮಯ ನೀಡುತ್ತೀದ್ದೀರೆಂದು ಅನಿಸಿದರೆ ನೀವು ಇದನ್ನು ಬಗೆಹರಿಸಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ನೀವು ನಿಮ್ಮ ಬಾಸ್‌ ಜೊತೆ ಸರಳವಾಗಿ ಮಾತನಾಡುವುದು ಅಗತ್ಯವಾಗಿದೆ.
  ನೇರವಾಗಿರಿ: ನಿಮ್ಮ ಬಾಸ್‌ನೊಂದಿಗೆ ಮಾತುಕತೆ ನಡೆಸಲು ಉತ್ತಮ ಮಾರ್ಗವೆಂದರೆ ನೇರ ಮತ್ತು ಪಾರದರ್ಶಕವಾಗಿರುವುದು. ಪರಿಸ್ಥಿತಿಯನ್ನು ಶುಗರ್ಕೋಟ್ ಮಾಡಲು ಪ್ರಯತ್ನಿಸಬೇಡಿ. ಸಭ್ಯ ಮತ್ತು ಗೌರವಾನ್ವಿತರಾಗಿ ನೇರವಾಗಿ ಮಾತನಾಡಿ.


  ನಿಮ್ಮ ಬಾಸ್‌ನಿಂದ ಪ್ರತೀಕಾರದ ಭಯವಿಲ್ಲದೆ ನಿಮ್ಮ ಕೆಲಸದ ಬಗ್ಗೆ ಮಾತನಾಡಿ. ನೀವು ಗುಣಮಟ್ಟದ ಕೆಲಸವನ್ನು ಮಾಡುತ್ತಿದ್ದರೆ ಕಂಪನಿಯು ನಿಮ್ಮನ್ನು ಕಳೆದುಕೊಳ್ಳಲು ಬಯಸುವುದಿಲ್ಲ.


  ಪರಿಹಾರಗಳನ್ನು ನೀಡಿ: ಕೆಲಸದ ಹೊರೆಯ ಸಮಸ್ಯೆಗೆ ಪರಿಹಾರಗಳೊಂದಿಗೆ ಸಿದ್ಧರಾಗಿರಿ. ನಿಮ್ಮ ಸಮಯವನ್ನು ಕಡಿತಗೊಳಿಸಿದರೆ ಅದನ್ನು ತುಂಬಲು ನೀವು ಪರ್ಯಾಯ ಯೋಜನೆಯನ್ನು ಹೊಂದಬಹುದು.


  ಉದಾಹರಣೆಗೆ, ನೀವು ಇತರ ಸಿಬ್ಬಂದಿ ಸದಸ್ಯರಿಗೆ ಕೆಲವು ಜವಾಬ್ದಾರಿಗಳನ್ನು ನಿಯೋಜಿಸಬಹುದು. ಸಹಜವಾಗಿ, ಇದಕ್ಕಾಗಿ ನಿಮ್ಮ ವ್ಯವಸ್ಥಾಪಕರ ಅನುಮೋದನೆಯನ್ನು ನೀವು ಪಡೆಯಬೇಕು. ಆದರೆ ಸಾಧ್ಯತೆಗಳನ್ನು ಚರ್ಚಿಸುವುದು ಯೋಗ್ಯವಾಗಿದೆ.
  ಇತರರಿಂದ ಫೀಡ್‌ಬ್ಯಾಕ್‌ ಪಡೆಯಿರಿ : ವ್ಯವಸ್ಥಾಪಕರ ಬಳಿಗೆ ಹೋಗುವ ಮೊದಲು ನಿಮ್ಮ ಆಲೋಚನೆಗಳನ್ನು ಇನ್ನಷ್ಟು ಉತ್ತಮಗೊಳಿಸಲು ಇದು ಸಹಾಯಕವಾಗಿದೆ. ಕೆಲವೊಮ್ಮೆ ಇನ್ನೊಬ್ಬ ವ್ಯಕ್ತಿಯ ಇನ್‌ಪುಟ್ ನಿಮಗೆ ಮುನ್ನಡೆಯಬೇಕಾದ ಉತ್ತೇಜನವನ್ನು ನೀಡುತ್ತದೆ. ಹೇಳಬೇಕಾದುದನ್ನು ಹೇಳಲು ಇದು ನಿಮಗೆ ಧೈರ್ಯವನ್ನು ನೀಡಬಹುದು.


  ಆಶಾವಾದಿಯಾಗಿರಿ: ನಿಮ್ಮ‌ ಬಾಸ್‌ ಅಥವಾ ಮ್ಯಾನೇಜರ್‌ ಜೊತೆ ನೀವು ಮಾತನಾಡುವಾಗ, ಲವಲವಿಕೆಯಿಂದಿರಿ. ನೀವು ಮುಂದುವರಿಯಲು ಸಾಧ್ಯವಿಲ್ಲ ಎಂಬಂತೆ ನಿಮ್ಮ ಬಾಸ್‌ ಬಳಿ ಹೋಗಬೇಡಿ. ನಿಮ್ಮ ಅಗತ್ಯಗಳ ಬಗ್ಗೆ ಪ್ರಾಮಾಣಿಕವಾಗಿರಿ. ಆದರೆ ವಿಷಯಗಳನ್ನು ಪರಿಹರಿಸುವ ಸಾಮರ್ಥ್ಯದ ಬಗ್ಗೆ ಧನಾತ್ಮಕವಾಗಿ ಮಾತನಾಡಿ.

  Published by:Kavya V
  First published: