ನಾವು ಕೆಲಸ ಹುಡುಕುವಾಗ (Job Search) ಕಂಪನಿಗಳಲ್ಲಿರುವ ಎಚ್ ಆರ್ ಗಳಿಗೆ (HR) ನಮ್ಮ ರೆಸ್ಯೂಮ್ ಅಥವಾ ಸಿವಿಯನ್ನು (Resume or CV) ಇ-ಮೇಲ್ ಮಾಡುತ್ತೇವೆ. ಆದರೆ ಬಹುತೇಕರು ಈ ರೆಸ್ಯೂಮ್ ಮತ್ತು ಸಿವಿ ಎಂದರೆ ಎರಡು ಒಂದೇ ಅಂತ ಅಂದುಕೊಂಡಿರುತ್ತಾರೆ. ಆದರೆ ಇವುಗಳಲ್ಲಿ ತುಂಬಾನೇ ವ್ಯತ್ಯಾಸವಿದೆ ನೋಡಿ. ಉದ್ಯೋಗಿಯ ನೇಮಕಾತಿ (Recruitment) ಪ್ರಕ್ರಿಯೆಯ ಪ್ರಮುಖ ಅಂಶವಾಗಿದೆ ಈ ರೆಸ್ಯೂಮ್ ಮತ್ತು ಸಿವಿ ಅಂತ ಹೇಳಿದರೆ ಸುಳ್ಳಲ್ಲ. ಆದರೆ ಇವೆರಡೂ ಹೇಗೆ ಬೇರೆ ಬೇರೆ ಆಗಿರುತ್ತವೆ.
ಎರಡರಲ್ಲೂ ನಮ್ಮ ವೃತ್ತಿಜೀವನ ಮತ್ತು ವೈಯುಕ್ತಿಕ ಮಾಹಿತಿ ಇರುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಇವೆರಡನ್ನೂ ಉದ್ಯೋಗ ಹುಡುಕುವಾಗ ನಾವು ನಮ್ಮ ಉದ್ಯೋಗದಾತರಿಗೆ ನೀಡುತ್ತೇವೆ. ರೆಸ್ಯೂಮ್ ಮತ್ತು ಸಿವಿ ನಡುವಿನ ವ್ಯತ್ಯಾಸಗಳನ್ನು ನಾವು ಇಂದು ನೋಡೋಣ ಬನ್ನಿ. ನೀವು ಇವೆರಡನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ನಿಮಗೆ ಸೂಕ್ತವಾದದನ್ನು ಆಯ್ಕೆ ಮಾಡಲು ಈ ಲೇಖನ ಸಹಾಯ ಮಾಡುತ್ತದೆ ಎಂದು ಹೇಳಬಹುದು.
ರೆಸ್ಯೂಮ್ ಎಂದರೇನು?
ರೆಸ್ಯೂಮ್ ಅಭ್ಯರ್ಥಿಯ ಹಿನ್ನೆಲೆ ಮತ್ತು ಕೆಲಸ ಮಾಡಿದ ಸಂಕ್ಷಿಪ್ತ ಮತ್ತು ಅಪ್-ಟು-ಪಾಯಿಂಟ್ ಸಾರಾಂಶವನ್ನು ನೀಡುತ್ತದೆ. ಇದು ಸಾಮಾನ್ಯವಾಗಿ 1-2 ಪುಟಗಳ ದಾಖಲೆಯಾಗಿರುತ್ತದೆ. ರೆಸ್ಯೂಮ್ ಗಳು ಅಭ್ಯರ್ಥಿಯ ಪದವಿಗೆ ಕಡಿಮೆ ಒತ್ತು ನೀಡುತ್ತವೆ ಮತ್ತು ಕೆಲಸದ ಅನುಭವ ಮತ್ತು ಉದ್ಯೋಗ ಕೌಶಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತವೆ.
ರೆಸ್ಯೂಮ್ ನಲ್ಲಿ ಏನನ್ನು ಸೇರಿಸಬೇಕು?
ಸಿವಿ ಅಥವಾ ಇಂಗ್ಲೀಷ್ ನಲ್ಲಿ ಕರಿಕುಲಂ ವಿಟೇ ಅಂತ ಕರೆಯುವ ಈ ದಾಖಲೆಯಲ್ಲಿ ಒಬ್ಬ ವ್ಯಕ್ತಿಯ ಉದ್ಯೋಗ ಇತಿಹಾಸ, ಶಿಕ್ಷಣ, ಸಾಧನೆಗಳು, ಪ್ರಸ್ತುತಿಗಳು, ಗೌರವಗಳು ಮತ್ತು ಪ್ರಶಸ್ತಿಗಳು, ಸಂಶೋಧನೆ ಮತ್ತು ಇತರ ಸಾಧನೆಗಳ ಬಗ್ಗೆ ಸಮಗ್ರ ವಿವರಗಳು ಇರುತ್ತವೆ ಮತ್ತು ಇದು ಒಂದು ಬಹು-ಪುಟದ ದಾಖಲೆಯಾಗಿದೆ ಅಂತ ಹೇಳಬಹುದು.
ಒಂದು ಅಕಾಡೆಮಿಕ್ ಸಿವಿ, ಕರಿಕುಲಂ ವಿಟೇಯನ್ನು ಪದವಿ ಕಾಲೇಜು, ಪಿಎಚ್ಡಿ ಪ್ರೋಗ್ರಾಮ್ ಗಳು ಮತ್ತು ಶೈಕ್ಷಣಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಳಸಲಾಗುತ್ತದೆ. ಕರಿಕುಲಂ ವಿಟೇ ಎಂಬ ಪದದ ಅರ್ಥ ಲ್ಯಾಟಿನ್ ಭಾಷೆಯಲ್ಲಿ "ಜೀವನದ ಕೋರ್ಸ್" ಎಂದರ್ಥ. ಸಿವಿಯ ಉದ್ದೇಶವು ಅದರ ಅರ್ಥಕ್ಕೆ ಸರಿಯಾಗಿ ಹೊಂದುತ್ತದೆ ಅಂತ ಹೇಳಬಹುದು.
ಸಿವಿಗಳಲ್ಲಿ ಮೂರು ವಿಧಗಳಿವೆ:
1. ಕ್ರೊನೊಲಾಜಿಕಲ್ ಸಿವಿ: ಈ ಸಿವಿ ಅತ್ಯಂತ ಜನಪ್ರಿಯ ಸಿವಿ ಫಾರ್ಮ್ಯಾಟ್ ಆಗಿದ್ದು, ಇದರಲ್ಲಿರುವ ವಿವರಗಳು ಕಾಲಾನುಕ್ರಮದಲ್ಲಿರುತ್ತವೆ ಎಂದು ಹೇಳಬಹುದು. ಇದು ಅತ್ಯಂತ ಇತ್ತೀಚಿನ ಕೆಲಸದಿಂದ ಪ್ರಾರಂಭವಾಗುತ್ತದೆ ಮತ್ತು ನಿಮ್ಮ ಹಿಂದಿನ ಎಲ್ಲಾ ಉದ್ಯೋಗಗಳನ್ನು ವಿವರವಾಗಿ ವಿವರಿಸುತ್ತದೆ.
2. ಫಂಕ್ಷನಲ್ ಸಿವಿ: ಇದನ್ನು ಸ್ಕಿಲ್ ಬೇಸ್ಡ್ ಸಿವಿ ಅಂತ ಸಹ ಕರೆಯುತ್ತಾರೆ. ಇದು ನಿಮ್ಮ ಕಾಲಾನುಕ್ರಮದ ಉದ್ಯೋಗ ಇತಿಹಾಸಕ್ಕಿಂತ ಹೆಚ್ಚಾಗಿ ನಿಮ್ಮ ಸಾಮರ್ಥ್ಯಗಳು ಮತ್ತು ವೃತ್ತಿಪರ ಅನುಭವವನ್ನು ಎತ್ತಿ ತೋರಿಸುವ ಉದ್ದೇಶವನ್ನು ಹೊಂದಿರುತ್ತದೆ.
ಇದನ್ನೂ ಓದಿ: Resume Tips-4: 2023ರಲ್ಲಿ ಕೆಲಸ ಸಿಗಲು ನಿಮ್ಮ ರೆಸ್ಯೂಮ್ನಲ್ಲಿ ಈ 8 ವಿಷಯಗಳು ಇರಲೇಬೇಕು
ನೀವು ಈ ಮೊದಲು ಯಾವುದೇ ಉದ್ಯೋಗವನ್ನು ಹೊಂದಿಲ್ಲದಿದ್ದರೆ, ನಿಮ್ಮ ಉದ್ಯೋಗದ ಇತಿಹಾಸದಲ್ಲಿ ಅಂತರಗಳನ್ನು ಹೊಂದಿದ್ದರೆ, ಅಥವಾ ವೃತ್ತಿಜೀವನವನ್ನು ಬದಲಾಯಿಸಲು ಬಯಸಿದರೆ, ಈ ಸಿವಿ ಆದರ್ಶಪ್ರಾಯವಾಗಿರಬಹುದು.
3. ಕಾಂಬಿನೇಷನ್ ಸಿವಿ: ಈ ಸಿವಿ ಮಾದರಿಯು ಕ್ರಿಯಾತ್ಮಕ ಮತ್ತು ಕಾಲಾನುಕ್ರಮದ ಸಿವಿಯನ್ನು ಸಂಯೋಜಿಸುತ್ತದೆ. ನೀವು ನಿಮ್ಮ ಕೌಶಲ್ಯಗಳನ್ನು ಹೈಲೈಟ್ ಮಾಡಬಹುದು ಮತ್ತು ಸಂಯೋಜಿತ ಸಿವಿಯಲ್ಲಿ ಕಾಲಾನುಕ್ರಮದ ಕೆಲಸದ ಇತಿಹಾಸವನ್ನು ಸಹ ನೀಡಬಹುದು.
ಸಿವಿಯಲ್ಲಿ ಏನನ್ನು ಸೇರಿಸಬೇಕು?
ಸಿವಿ ಮತ್ತು ರೆಸ್ಯೂಮ್ ನಡುವಿನ ವ್ಯತ್ಯಾಸವು ತುಂಬಾನೇ ಉದ್ದವಾಗಿದೆ ಅಂತ ಹೇಳಬಹುದು. ಕರಿಕುಲಂ ವಿಟೇ ಅಥವಾ ಸಿವಿ, ಲ್ಯಾಟಿನ್ ಭಾಷೆಯಲ್ಲಿ ಇದರರ್ಥ "ಜೀವನದ ಕೋರ್ಸ್" ಆಗಿದ್ದರೆ, ರೆಸ್ಯೂಮ್ ಫ್ರೆಂಚ್ ಭಾಷೆಯಿಂದ ಬಂದಿದ್ದು, ಇದರರ್ಥ "ಸಂಕ್ಷಿಪ್ತವಾಗಿ ಹೇಳುವುದು" ಎಂದರ್ಥ.
ಸಿವಿ ಉದ್ಯೋಗಿಯ ಹಿಂದಿನ ಶಿಕ್ಷಣ, ಉದ್ಯೋಗದ ಇತಿಹಾಸ, ಸಾಧನೆಗಳು ಮತ್ತು ಕೌಶಲ್ಯಗಳನ್ನು ಒಳಗೊಂಡಿರುವ ದಾಖಲೆಯಾಗಿದ್ದರೆ, ಮತ್ತೊಂದೆಡೆ ರೆಸ್ಯೂಮ್ ಉದ್ಯೋಗಿಯ ಶಿಕ್ಷಣ, ವೃತ್ತಿಪರ ಹಿನ್ನೆಲೆ, ಕೌಶಲ್ಯಗಳು ಮತ್ತು ಹಿಂದಿನ ಉದ್ಯೋಗ ಅನುಭವಗಳ ಸಂಕ್ಷಿಪ್ತ ವಿವರಗಳನ್ನೊಳಗೊಂಡ ದಾಖಲೆಯಾಗಿದೆ. ಒಂದು ಸಿವಿ 2 ರಿಂದ 20 ಪುಟಗಳವರೆಗೂ ಇರಬಹುದು, ಆದರೆ ರೆಸ್ಯೂಮ್ ಕೇವಲ 1 ಅಥವಾ 2 ಪುಟಗಳಷ್ಟು ಮಾತ್ರವೇ ಉದ್ದವಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ