Career Guidance: ನಾವು ಹಲವಷ್ಟು ವಿಚಾರಗಳಲ್ಲಿ ಸಾಂಪ್ರದಾಯಿಕ ವಿಧಾನಗಳನ್ನೇ ಅನುಸರಿಸಿಕೊಂಡು ಬಂದಿರುತ್ತೇವೆ. ಕೆಲವೊಮ್ಮೆ ಆಚರಣೆಗಳಲ್ಲಿ ಇನ್ನೂ ಕೆಲವೊಮ್ಮೆ ಕೆಲಸದ ವಿಚಾರಗಳಲ್ಲಿ. ಇಂಥ ವಿಚಾರಗಳಲ್ಲಿ ನಮಗೆ ಹೇಳಿಕೊಟ್ಟಿರುವಂಥ ವಿಧಾನಗಳಲ್ಲಿಯೇ ಮುಂದುವರಿಯುತ್ತೇವೆ. ಆದ್ರೆ ದಿನಗಳೆದಂತೆ ಹಲವಾರು ವಿಚಾರಗಳು ಅಪ್ ಡೇಟ್ ಆಗುತ್ತಿರುತ್ತವೆ. ಅದರಲ್ಲಿ ನಮ್ಮ ರೆಸ್ಯೂಮ್ (Resume) ಕೂಡ ಒಂದು. ಸಾಮಾನ್ಯವಾಗಿ ರೆಸ್ಯೂಮ್ (Address) ಬರೆಯುವ ವಿಚಾರಕ್ಕೆ ಬಂದಾಗ ಪುಟದ ಮೇಲ್ಭಾಗದಲ್ಲಿ ಮನೆಯ ವಿಳಾಸ ಸೇರಿದಂತೆ ನಮ್ಮ ಪೂರ್ಣ ಹೆಸರು ಮತ್ತು ಸಂಪರ್ಕ ಮಾಹಿತಿಯನ್ನು ನೀಡುತ್ತೇವೆ.
ರೆಸ್ಯೂಮ್ ಫಾರ್ಮಾಟ್ ಹೀಗೆಯೇ ಇರಬೇಕು ಎಂಬುದಾಗಿ ನಮಗೆ ಹೇಳಿಕೊಟ್ಟಿರುತ್ತಾರೆ. ಆದ್ರೆ ಇದು ಬದಲಾಗಿವೆ. ಕಾಲಕ್ಕೆ ತಕ್ಕಂತೆ ನಾವು ನಮ್ಮನ್ನು ಅಪ್ ಡೇಟ್ ಮಾಡಿಕೊಳ್ಳಬೇಕು. ಆದ್ದರಿಂದಲೇ ಕೆಲವು ವೃತ್ತಿ ತಜ್ಞರ ಪ್ರಕಾರ, ಡಾಕ್ಯುಮೆಂಟ್ನಲ್ಲಿ ಅಥವಾ ರೆಸ್ಯೂಮ್ ನಲ್ಲಿ ನಿಮ್ಮ ಸಂಪೂರ್ಣ ಮನೆಯ ವಿಳಾಸವನ್ನು ಸೇರಿಸುವ ಅಗತ್ಯವಿಲ್ಲ.
ನಿಮ್ಮ ರೆಸ್ಯೂಮ್ನಲ್ಲಿ ನಿಮ್ಮ ವಿಳಾಸವನ್ನು ಹಾಕುವ ಅಗತ್ಯ ಏಕಿಲ್ಲ?
ನೀವು ಸಂದರ್ಶನಕ್ಕೆ ಶಾರ್ಟ್ ಲಿಸ್ಟ್ ಆದಲ್ಲಿ ಸಂದರ್ಶನಕಾರರಿಂದ ನಿಮಗೆ ಕರೆ ಬರುತ್ತದೆ ಅಥವಾ ಇಮೇಲ್ ಅನ್ನು ನೀವು ಸ್ವೀಕರಿಸುತ್ತೀರಿ. ಅದರಲ್ಲಿ ಎಷ್ಟು ಗಂಟೆಗೆ ಹಾಜರಿರಬೇಕು ಅಥವಾ ಯಾರು ನಿಮ್ಮ ಸಂದರ್ಶನ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ. ಒಂದೊಮ್ಮೆ ನೀವು ಸಂದರ್ಶನದಲ್ಲಿ ಆಯ್ಕೆಯಾದರೂ ಕೂಡ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ. ಇನ್ನು ನೀವು ಸಂದರ್ಶನಕ್ಕೆ ಆಯ್ಕೆಯೇ ಆಗಿಲ್ಲ ಎಂದಾದಲ್ಲಿ ಈ ಪ್ರಶ್ನೆಯೇ ಬರುವುದಿಲ್ಲ. ಹೀಗಿದ್ದಾಗ ನಿಮ್ಮ ಮನೆಯ ಸಂಪೂರ್ಣ ವಿಳಾಸ ಹಾಕುವ ಅಗತ್ಯವೇನಿದೆ?
ಟಾಪ್ ರೆಸ್ಯೂಮ್ನ ವೃತ್ತಿ ತಜ್ಞ ಅಮಂಡಾ ಆಗಸ್ಟಿನ್ ಅವರು, ನಿಮ್ಮ ರೆಸ್ಯೂಮ್ನಲ್ಲಿ ನಿಮ್ಮ ಪೂರ್ಣ ಮನೆಯ ವಿಳಾಸವನ್ನು ಹಾಕಿದಲ್ಲಿ ಸುರಕ್ಷತೆಯ ಅಪಾಯಗಳಿವೆ ಎಂದು ಹೇಳುತ್ತಾರೆ. ನೀವು ಎಲ್ಲಿ ವಾಸುತ್ತಿದ್ದೀರಿ ಎಂಬುದನ್ನು ಎಲ್ಲರಿಗೂ ಹೇಳುವ ಅಗತ್ಯವಿಲ್ಲ ಎಂಬುದಾಗಿ ಅಗಸ್ಟಿನ್ ಹೇಳುತ್ತಾರೆ. ಅವರು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಬಹಳಷ್ಟು ಜನರು ಇದನ್ನು ಭದ್ರತಾ ಕಾಳಜಿ ಎಂದು ಪರಿಗಣಿಸುತ್ತಾರೆ.
ಗುರುತಿನ ಕಳ್ಳತನ ಅಥವಾ ನಿಮ್ಮ ಮನೆಯ ಸುತ್ತ ಯಾರಾದರೂ ಕಾಣಿಸಿಕೊಳ್ಳುವುದನ್ನು ಯಾರೂ ಬಯಸುವುದಿಲ್ಲ. ಆದ ಕಾರಣ ನೀವು ನಿಮ್ಮ ಸಂಪೂರ್ಣವಾದ ವಿಳಾಸವನ್ನು ರೆಸ್ಯೂಮ್ ನಲ್ಲಿ ಹಾಕುವ ಅಗತ್ಯವಿಲ್ಲ ಎಂಬುದಾಗಿ ಅವರು ಹೇಳುತ್ತಾರೆ.
ನಿಮ್ಮ ಸ್ಥಳದ ಕುರಿತು ನಿಮ್ಮ ರೆಸ್ಯೂಮ್ನಲ್ಲಿ ಏನು ಸೇರಿಸಬೇಕು?
ನಿಮ್ಮ ರೆಸ್ಯೂಮ್ನಲ್ಲಿ ಮನೆಯ ಪೂರ್ಣ ವಿಳಾಸವನ್ನು ಸೇರಿಸದಿದ್ದರೆ ನಿಮ್ಮ ಸ್ಥಳದ ಕುರಿತು ನಿಮ್ಮ ರೆಸ್ಯೂಮ್ ನಲ್ಲಿ ಏನನ್ನ ಹಾಕಬೇಕು ಅನ್ನೋ ಪ್ರಶ್ನೆ ಮೂಡುವುದು ಸಹಜ. ಅಂತಿಮವಾಗಿ ಇದು ನೀವು ಅರ್ಜಿ ಸಲ್ಲಿಸುತ್ತಿರುವ ಉದ್ಯೋಗದ ಪ್ರಕಾರಕ್ಕೆ ಬರುತ್ತದೆ. ನೀವು ಅರ್ಜಿ ಸಲ್ಲಿಸಿದ ಪ್ರದೇಶಕ್ಕೆ ತುಂಬಾ ದೂರದಲ್ಲಿದ್ದರೆ ಆ ಪ್ರದೇಶದ ಹೆಸರನ್ನು ನೀವು ಹಾಕಬಹುದು.
ಉದಾಹರಣಗೆ ನೀವು ಚಿತ್ರದುರ್ಗದ ಮೂಲದವರಾಗಿದ್ದರೆ ನೀವು ಅದನ್ನು ಹಾಕಬಹುದು. ಇನ್ನು ಸ್ವಲ್ಪ ನಿರ್ದಿಷ್ಟವಾಗಿ ಹಾಕಬೇಕೆಂದರೆ ನಿಮ್ಮ ರಾಜ್ಯ ಅಥವಾ ನೀವು ವಾಸಿಸುತ್ತಿರುವ ನಗರದ ಹೆಸರನ್ನು ನೀವು ನಮೂದಿಸಬಹುದು. ಮೊದಲೆಲ್ಲ ರೆಸ್ಯೂಮ್ ನಲ್ಲಿ ನಿಮ್ಮ ಮನೆಯ ಸಂಪೂರ್ಣ ವಿಳಾಸವನ್ನು ಸೇರಿಸುವ ಸಾಂಪ್ರದಾಯಿಕ ವಿಧಾನ ರೂಢಿಯಲ್ಲಿತ್ತು. ಆದ್ರೆ ಈಗ ಅನೇಕ ಕಡೆಗಳಲ್ಲಿ ಈ ವಿಧಾನ ಬದಲಾಗಿದೆ.
ನಿಮ್ಮ ಸಿವಿಗಳಲ್ಲಿ ನಿಮ್ಮ ನಗರ ಮತ್ತು ರಾಜ್ಯದ ಹೆಸರನ್ನು ಮಾತ್ರ ನಮೂದಿಸಿದರೆ ಸಾಕು. ಅನಗತ್ಯ ಮಾಹಿತಿಯನ್ನು ನೀಡದೆಯೇ ನೀವು ಎಷ್ಟು ಅಂತರದಲ್ಲಿ ವಾಸಿಸುತ್ತಿದ್ದೀರಿ ಎಂದು ಕಂಪನಿಯವರಿಗೆ ಗೊತ್ತಾಗುತ್ತದೆ. ಅಷ್ಟು ಮಾತ್ರದ ಮಾಹಿತಿ ಸಾಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ