• ಹೋಂ
 • »
 • ನ್ಯೂಸ್
 • »
 • Jobs
 • »
 • Best Boss: ಉದ್ಯೋಗಿಗಳಿಗೆ ಥ್ಯಾಂಕ್ಯೂ ಹೇಳುವ ಬಾಸ್ ಇದ್ದರೆ, ಆ ಕಂಪನಿ ನಂಬರ್ 1 ಆಗುತ್ತೆ; ತಜ್ಞರ ಅಭಿಪ್ರಾಯ

Best Boss: ಉದ್ಯೋಗಿಗಳಿಗೆ ಥ್ಯಾಂಕ್ಯೂ ಹೇಳುವ ಬಾಸ್ ಇದ್ದರೆ, ಆ ಕಂಪನಿ ನಂಬರ್ 1 ಆಗುತ್ತೆ; ತಜ್ಞರ ಅಭಿಪ್ರಾಯ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸಂಸ್ಥೆಯಲ್ಲಿ ಒಬ್ಬ ನಾಯಕ ಕೃತಜ್ಞತೆ ಹಾಗೂ ವಿನಮ್ರತೆಯನ್ನು ತೋರಿದರೆ, ಉದ್ಯೋಗಿಗಳಲ್ಲಿ ಹೆಚ್ಚು ಸಾಮರ್ಥ್ಯ ಬರುವುದರ ಜೊತೆಗೆ ಸಂಸ್ಥೆಯ ಉನ್ನತಿಗೂ ಕಾರಣವಾಗುತ್ತದೆ ಎಂಬುವುದು ಹಲವಾರು ತಜ್ಞರ ಅಭಿಪ್ರಾಯವಾಗಿದೆ.

 • Trending Desk
 • 2-MIN READ
 • Last Updated :
 • Share this:

  ಕೃತಜ್ಞತೆ (Thankful) ಹಾಗೂ ವಿನಮ್ರತೆ (Humble) ಎಂಬುದು ಯಾವುದೇ ಕ್ಷೇತ್ರದಲ್ಲಿ ಮುಖ್ಯವಾಗಿರುವ ಗುಣಗಳಾಗಿವೆ. ವಿನಮ್ರತೆಯನ್ನು ತೋರ್ಪಡಿಸುವುದು ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಯಾವುದೇ ಕ್ಷೇತ್ರದಲ್ಲಿ ಮುಖ್ಯವಾಗಿರುವ ಮಾನವೀಯ ಅಂಶಗಳಾಗಿವೆ. ವೃತ್ತಿಜೀವನದಲ್ಲಿ (Career) ಕೃತಜ್ಞತೆ ಹಾಗೂ ವಿನಮ್ರತೆ ಎಂಬುದು ಹಲವಾರು ರೂಪದಲ್ಲಿ ಸಾಧನೆಗಳನ್ನು ಸಾಧಿಸುವ ವೇದಿಕೆಯಾಗಿ ರೂಪುಗೊಳ್ಳುತ್ತದೆ. ಕೃತಜ್ಞತೆ ವ್ಯಕ್ತಪಡಿಸುವುದು ಅಥವಾ ತೋರ್ಪಡಿಸುವುದು ಇಂದಿನ ದಿನಗಳಲ್ಲಿ ಹೆಚ್ಚು ಕಷ್ಟಕರವಾಗಿದೆ. ಏಕೆಂದರೆ ಕೃತಜ್ಞತೆ ಭಾವನೆ ನಮ್ಮಲ್ಲಿ ಪ್ರದರ್ಶನಗೊಳ್ಳಬೇಕು ಎಂದಾದಲ್ಲಿ ನಾವು ಮೃದು ಹೃದಯಿಗಳಾಗಿರಬೇಕು. ಕೃತಜ್ಞತೆ ಎಂಬುದು ಸೌಜನ್ಯವನ್ನು ಪ್ರಕಟಪಡಿಸುವ ಇನ್ನೊಂದು ವಿಧಾನವೂ ಹೌದು.


  ಸಂಸ್ಥೆಯಲ್ಲಿ ಒಬ್ಬ ನಾಯಕ ಕೃತಜ್ಞತೆ ಹಾಗೂ ವಿನಮ್ರತೆಯನ್ನು ತೋರಿದರೆ, ಉದ್ಯೋಗಿಗಳಲ್ಲಿ ಹೆಚ್ಚು ಸಾಮರ್ಥ್ಯ ಬರುವುದರ ಜೊತೆಗೆ ಸಂಸ್ಥೆಯ ಉನ್ನತಿಗೂ ಕಾರಣವಾಗುತ್ತದೆ ಎಂಬುವುದು ಹಲವಾರು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.


  ಸಂಸ್ಥೆಯನ್ನು ಮುನ್ನಡೆಸುವ ಪರಿಕರವಾಗಿ ಬಳಕೆ


  ಸಂಸ್ಥೆಗಳಲ್ಲಿ ಕೃತಜ್ಞತೆ ಹಾಗೂ ಸೌಜನ್ಯತೆ ಎಂಬುದು ಆ ಸಂಸ್ಥೆಯನ್ನು ಮುನ್ನಡೆಸುವ ಪರಿಕರವಾಗಿ ಬಳಕೆಯಾಗುತ್ತದೆ. ಯಾವುದೋ ಒಂದು ಕೆಲಸಕ್ಕೆ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸುವುದು ಅವರಿಗೆ ನಿಮ್ಮ ಮೇಲಿರುವ ಗೌರವವನ್ನು ಹೆಚ್ಚಿಸುತ್ತದೆ ಹಾಗೂ ಇನ್ನಷ್ಟು ಕೆಲಸ ಮಾಡುವ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.  ಎರಡು ಹಾರ್ಮೋನ್‌ಗಳ ಬಿಡುಗಡೆ


  ಕೃತಜ್ಞತೆಯನ್ನು ವ್ಯಕ್ತಪಡಿಸಿದ ಸಂದರ್ಭದಲ್ಲಿ ಮೆದುಳು ಎರಡು ಹಾರ್ಮೋನ್‌ಗಳಾದ ಡೋಪಮೈನ್ ಮತ್ತು ಸಿರೊಟೋನಿನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್‌ಗಳು ನಮ್ಮನ್ನು ಸಂತೋಷ ಹಾಗೂ ನಿರಾಳತೆಯ ಅನುಭವವನ್ನುಂಟು ಮಾಡುವಲ್ಲಿ ಮಹತ್ವದ್ದಾಗಿದೆ.


  ನಾಯಕತ್ವಕ್ಕೆ ಮುನ್ನಗ್ಗುವ ಮಾರ್ಗದರ್ಶಿಯಾಗಿ ಕೃತಜ್ಞತೆ ಬೆಂಬಲ ನೀಡುತ್ತದೆ


  ನಾಯಕತ್ವದ ವಿಚಾರದಲ್ಲಿ ಕೃತಜ್ಞತೆ ಎಂಬುದು ಅವರಿಗೆ ಮುನ್ನುಗ್ಗುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ಹಿಂದಿನ ಸಾಧನೆಗಳನ್ನು ನೆನಪಿಸಲು ಹಾಗೂ ಇನ್ನಷ್ಟು ಹೆಜ್ಜೆಗಳನ್ನು ಮುಂದಿರಿಸಲು ಕೃತಜ್ಞತೆ ಸಹಕಾರಿಯಾಗಿದೆ. ಉನ್ನತ ಸ್ಥಾನಕ್ಕೇರಲು ಆ ನಾಯಕರಿಗೆ ಸಹಾಯ ಮಾಡಿದ ಜನರ ಕೊಡುಗೆ ಹಾಗೂ ಬೆಂಬಲವನ್ನು ಕೃತಜ್ಞತೆ ನೆನಪಿಸುತ್ತದೆ ಅದೇ ರೀತಿ ವೈಯಕ್ತಿಕ ಹಾಗೂ ವೃತ್ತಿಪರವಾಗಿ ಕೂಡ ಈ ಅಂಶ ಅವರನ್ನು ದೃಢವಾಗಿಸುತ್ತದೆ.


  ನಾಯಕನನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ


  ಕೃತಜ್ಞತೆ ಎಂಬುದು ಸಾಮಾಜಿಕ ಭಾವನೆಯಾಗಿದ್ದು ಇತರರು ನಮಗೆ ಏನುಮಾಡಿದ್ದಾರೆ ಎಂಬುದನ್ನು ಗುರುತಿಸುವ ಸಂಕೇತಗಳನ್ನು ನೀಡುತ್ತದೆ. ಇದುವೇ ಒಬ್ಬ ಸಂಸ್ಥೆಯಲ್ಲಿ ನಾಯಕನನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ ಹಾಗೂ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವನ್ನು ನೀಡುತ್ತದೆ.


  ಇದನ್ನೂ ಓದಿ: Office Meetings ವೇಳೆ ಮ್ಯಾನೇಜರ್ಸ್ ಈ 5 ತಪ್ಪುಗಳನ್ನು ಮಾಡಬಾರದು, ಕಿರಿಕಿರಿ ಎನಿಸುತ್ತೆ

  ಸಹೋದ್ಯೋಗಿಗಳಿಗೆ ಬೆಂಬಲ


  ಒಬ್ಬ ನಾಯಕನ ಅಂತರಾಳದಲ್ಲಿ ನಮ್ರತೆ ಇದ್ದಾಗ ಆತ ಇನ್ನೊಬ್ಬರ ಕೆಲಸವನ್ನು ಗುರುತಿಸುತ್ತಾನೆ ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಅವರ ಕೊಡುಗೆಗೆ ಕೃತಜ್ಞತೆಯನ್ನು ಅರ್ಪಿಸುತ್ತಾರೆ. ಸಹೋದ್ಯೋಗಿಗಳನ್ನು ಶ್ಲಾಘಿಸುವುದು, ಹುರಿದುಂಬಿಸುವುದು, ಸಕಾರಾತ್ಮವಾಗಿ ಮಾತನಾಡುವುದು ಸಹೋದ್ಯೋಗಿಗಳಿಗೆ ಬೆಂಬಲವನ್ನು ನೀಡುತ್ತದೆ.  ಸಂವಹನದ ಒಂದು ರೂಪವಾಗಿ ಕಾರ್ಯನಿರ್ವಹಿಸುತ್ತದೆ


  ಒಬ್ಬ ನಾಯಕ ಹಾಗೂ ಸಹೋದ್ಯೋಗಿಗಳ ನಡುವೆ ಕೃತಜ್ಞತೆ ಎಂಬುದು ಸಂವಹನದ ಒಂದು ರೂಪವಾಗಿ ಕಾರ್ಯನಿರ್ವಹಿಸುತ್ತದೆ. ನಾಯಕತ್ವ ಗುಣಗಳಲ್ಲಿ ನಮೃತೆ, ಕೃತಜ್ಞತೆ, ಹುರಿದುಂಬಿಸುವಿಕೆ ಅತ್ಯಂತ ಮಹತ್ವದ ಸ್ತಂಭಗಳಾಗಿವೆ. ಈ ಅಂಶಗಳ ಕೊರತೆ ಇರುವ ನಾಯಕರು ನಕಾರಾತ್ಮಕ ಅಂಶಗಳನ್ನೇ ಸಹೋದ್ಯೋಗಿಗಳಲ್ಲೂ ಪೋಷಿಸಲು ಕಾರಣರಾಗುತ್ತಾರೆ.


  ಸ್ವಾರ್ಥ, ಅಸೂಯೆ, ಅಹಂಕಾರ, ದ್ವೇಷ ಅವರಲ್ಲಿ ಒಡಮೂಡುತ್ತದೆ ಹಾಗೂ ಸಹೋದ್ಯೋಗಿಗಳ ಪ್ರತಿಯೊಂದು ಕಾರ್ಯದಲ್ಲೂ ಅವರು ಕೊಂಕು ನುಡಿಯುತ್ತಾರೆ ಮತ್ತು ಸಹೋದ್ಯೋಗಿಗಳೂ ಅವರನ್ನು ಇಷ್ಟಪಡುವುದಿಲ್ಲ. ಇನ್ನು ಕೃತಜ್ಞತೆ ವ್ಯಕ್ತಪಡಿಸುವ ಹಾಗೂ ವಿನಮೃತೆಯುಳ್ಳ ನಾಯಕರೂ ಕೂಡ ಆಗಾಗ್ಗೆ ನಕಾರಾತ್ಮಕ ಭಾವನೆಗಳಿಗೆ ಒಳಪಡುತ್ತಾರೆ. ಆದರೆ ಇಂತಹ ಭಾವನೆಗಳ ಮಟ್ಟ ತುಂಬಾ ಕಡಿಮೆ ಇರುತ್ತದೆ.


  ಬೆನ್ನುತಟ್ಟಿ ಪ್ರೋತ್ಸಾಹಿಸುವ ನಾಯಕರು


  ಹೃದಯದಲ್ಲಿ ನಮೃತೆಯ ಗುಣಗಳನ್ನು ಹೊಂದಿರುವ ನಾಯಕರು ತಮ್ಮಲ್ಲಿರುವ ಕೊರತೆಗಳನ್ನು ಬದಿಗೊತ್ತಿ ಮತ್ತೊಬ್ಬರ ಉತ್ತಮತೆಯನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ. ಉದ್ಯೋಗಿಗಳ ಕಾರ್ಯಕ್ಷಮತೆ ಮತ್ತು ಸಂಸ್ಥೆಗಳ ಸುಸ್ಥಿರ ಅಭಿವೃದ್ಧಿಗೆ ನೌಕರರ ಕೆಲಸದ ಯೋಗಕ್ಷೇಮ ಹೀಗಾಗಿ ಸಹೋದ್ಯೋಗಿಗಳನ್ನು ಮುನ್ನಡೆಸುವ ನಾಯಕರುಗಳು, ಯಜಮಾನರು ಕೃತಜ್ಞತೆ ಹಾಗೂ ವಿನಮೃತೆಯನ್ನು ಹೊಂದಿರಬೇಕಾಗಿರುವುದು ಅನಿವಾರ್ಯವಾಗಿದೆ.


  ಇನ್ನೊಬ್ಬರಿಗೆ ಗೌರವ ನೀಡುತ್ತಾರೆ


  ವಿನಮ್ರ ನಾಯಕರು ತಾವೇ ಬುದ್ಧಿವಂತರು ಹಾಗೂ ತಮ್ಮ ಮಾತನ್ನು ಪ್ರತಿಯೊಬ್ಬರೂ ಕೇಳಬೇಕು ಎಂಬ ಮನೋಭಾವವನ್ನು ಹೊಂದಿರುವುದಿಲ್ಲ. ಇತರರಿಗೆ ಮಾತನಾಡಲು, ಅಭಿಪ್ರಾಯಗಳನ್ನು ಮಂಡಿಸಲು ಹಾಗೂ ಪರಸ್ಪರರನ್ನು ಗೌರವಿಸುವ ಅಂಶವನ್ನು ಅರಿತುಕೊಂಡಿರುತ್ತಾರೆ.


  ವಿನಮ್ರ ವ್ಯಕ್ತಿ ತಪ್ಪುಗಳನ್ನು ಒಪ್ಪಿಕೊಳ್ಳುವುದು ಮಾತ್ರವಲ್ಲ ಅವರು ಏನು ತಪ್ಪು ಮಾಡಿದ್ದಾರೆ ಮತ್ತು ಮುಂದೆ ಏನನ್ನು ಬದಲಾಯಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.  ಇತರರಿಗೆ ನೆರವಾಗುವುದು


  ಇತರ ಅಭ್ಯರ್ಥಿಗಳು ಯಾವುದಾದರೂ ಕೊರತೆಯನ್ನು ಅನುಭವಿಸುತ್ತಿದ್ದರೆ ಉತ್ತಮ ವಿನಮ್ರ ನಾಯಕ ಅವರಿಗೆ ಪ್ರೋತ್ಸಾಹ ನೀಡುತ್ತಾರೆ ಹಾಗೂ ಮುಂದುವರಿಯಲ ಬೆನ್ನು ತಟ್ಟುತ್ತಾರೆ.


  ವೃತ್ತಿ ಹಾಗೂ ವೈಯಕ್ತಿಕ ಕ್ಷೇತ್ರಗಳಲ್ಲಿ ಪ್ರಭಾವಶಾಲಿ


  ಸ್ವಯಂ-ಅರಿವುಳ್ಳ ವಿನಮ್ರ ನಾಯಕರು ಹೆಚ್ಚು ಪರಿಣಾಮಕಾರಿಯಾಗುತ್ತಾರೆ, ವೃತ್ತಿ ಹಾಗೂ ವೈಯಕ್ತಿಕ ಕ್ಷೇತ್ರಗಳಲ್ಲಿ ಪ್ರಭಾವಶಾಲಿಯಾಗಿರುತ್ತಾರೆ. ಇಂತಹ ಸಾಮರ್ಥ್ಯಗಳನ್ನು ಹೊಂದಿರುವ ನಾಯಕರನ್ನು ಪಡೆದಿರುವ ಕಂಪನಿಗಳು ದೃಢವಾದ ಆರ್ಥಿಕ ಕಾರ್ಯಕ್ಷಮತೆಯನ್ನು ಹೊಂದಿವೆ.


  ನಾಯಕರು ತಮ್ಮ ಉದ್ಯೋಗಿಯ ಮೇಲೆ ನಂಬಿಕೆ ಇರಿಸಿದಾಗ ಕೆಲಸದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡಿದಾಗ, ಅವರ ತಂಡಗಳು 75% ಕಡಿಮೆ ಒತ್ತಡದೊಂದಿಗೆ, 50% ಹೆಚ್ಚಿನ ಉತ್ಪಾದಕತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಆರ್ಥಿಕ ವಿಜ್ಞಾನ, ಮನೋವಿಜ್ಞಾನದ ಪ್ರಾಧ್ಯಾಪಕರಾದ ಪಾಲ್ ಜೆ. ಝಾಕ್ ತಿಳಿಸಿದ್ದಾರೆ.


  ಏತನ್ಮಧ್ಯೆ, ಯುನಿವರ್ಸಿಟಿ ಆಫ್ ಸಿಂಗಾಪುರ್ ಮತ್ತು ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ವಿನಮ್ರ ಸಿಇಒ ಗಳು ಉತ್ತಮ-ಕಾರ್ಯನಿರ್ವಹಣೆಯ ನಿರ್ವಹಣಾ ತಂಡಗಳು ಮತ್ತು ಅತ್ಯುತ್ತಮ ಕಂಪನಿಯ ಕಾರ್ಯಕ್ಷಮತೆಯನ್ನು ಹೊಂದುವ ಸಾಧ್ಯತೆಯಿದೆ ಎಂದು ಅನ್ವೇಷಿಸಿದ್ದಾರೆ.


  ಉದ್ಯೋಗಿಗಳೊಂದಿಗೆ ವಿಶ್ವಾಸದಲ್ಲಿರುವುದು


  ಸಂಸ್ಥೆಯಲ್ಲಿರುವ ಪ್ರತಿಯೊಬ್ಬ ಉದ್ಯೋಗಿಗಳಿಗೂ ತನ್ನನ್ನು ಪ್ರೋತ್ಸಾಹಿಸುವ ಹಾಗೂ ಬೆಂಬಲ ನೀಡುವ ಇನ್ನೊಬ್ಬ ವ್ಯಕ್ತಿಯ ಅಗತ್ಯವಿರುತ್ತದೆ. ತನ್ನ ಗುಂಪಿನ ನಾಯಕ ವಿನಮೃ ಹಾಗೂ ವಿಶ್ವಾಸನೀಯ ವ್ಯಕ್ತಿಯಾದರೆ ಆ ತಂಡದಲ್ಲಿರುವ ಉದ್ಯೋಗಿಗಳೂ ಕೂಡ ಹೆಚ್ಚು ನಿಷ್ಟೆಯಿಂದ ಕೆಲಸ ಮಾಡುತ್ತಾರೆ ಅಂತೆಯೇ ನಾಯಕರ ಮೇಲೆಯೂ ವಿಶ್ವಾಸವನ್ನು ಪ್ರಕಟಿಸುತ್ತಾರೆ.


   

  ಉದ್ಯೋಗಿಗಳ ಹುಟ್ಟುಹಬ್ಬವನ್ನು ಆಚರಿಸುವುದು, ಅವರ ಕಷ್ಟಕ್ಕೆ ನೆರವಾಗುವುದು ಹೀಗೆ ಒಬ್ಬ ನಾಯಕ ತನ್ನ ತಂಡದಲ್ಲಿರುವ ಉದ್ಯೋಗಿಗೆ ಸಹಾಯ ಮಾಡಿದಷ್ಟು ಆತ ಸಂಸ್ಥೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಸಹಾಯವನ್ನು ಒದಗಿಸುತ್ತಾನೆ. ತನ್ನೊಂದಿಗೆ ಸಂಸ್ಥೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಬೆಂಬಲವನ್ನು ಒದಗಿಸುತ್ತಾನೆ.


  ಹೆಚ್ಚು ಕೃತಜ್ಞರಾಗಿರುವ ಜನರು ತಮ್ಮ ಜೀವನದಲ್ಲಿ ಹೆಚ್ಚು ತೃಪ್ತರಾಗಿರುತ್ತಾರೆ


  ಹೆಚ್ಚು ಕೃತಜ್ಞರಾಗಿರುವ ಜನರು ತಮ್ಮ ಜೀವನದಲ್ಲಿ ಹೆಚ್ಚು ತೃಪ್ತರಾಗಿರುತ್ತಾರೆ ಎಂಬುದು ಲೇಖಕ ಸಮ್ಮರ್ ಅಲೆನ್ ಅಭಿಪ್ರಾಯವಾಗಿದೆ. ಪೋಷಕರಲ್ಲಿ ಕೂಡ ಕೃತಜ್ಞತೆಯ ಗುಣಗಳಿದ್ದರೆ ಅದು ಮಕ್ಕಳಲ್ಲಿ ಕೂಡ ತನ್ನಷ್ಟಕ್ಕೆ ಬರುತ್ತದೆ ಎಂಬುದು ಲೇಖಕರ ಅನಿಸಿಕೆಯಾಗಿದೆ. ತಮ್ಮ ಮಕ್ಕಳಲ್ಲಿ ಮೌಲ್ಯಗಳನ್ನು ಮತ್ತು ಕೃತಜ್ಞತೆಯಂತಹ ಧನಾತ್ಮಕ ಭಾವನೆಗಳನ್ನು ಪೋಷಕರು ಉಂಟುಮಾಡಬೇಕು ಎಂದು ಬಾಷ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸೌಮಿತ್ರ ಭಟ್ಟಾಚಾರ್ಯ ತಿಳಿಸುತ್ತಾರೆ.


  ನಿಯಮಿತ ಕೃತಜ್ಞತೆಯ ಅಭ್ಯಾಸಗಳನ್ನು ಹೊಂದಿರುವ ಜನರು ಆರೋಗ್ಯಕರ, ಸಂತೋಷ ಮತ್ತು ಉತ್ತಮ ಸಂಬಂಧಗಳನ್ನು ಹೊಂದಿದ್ದಾರೆ ಎಂದು ಡಾ ರಾಬರ್ಟ್ ಎಮ್ಮನ್ಸ್ ಕಂಡುಹಿಡಿದಿದ್ದಾರೆ. ಸಂಶೋಧನೆಯು ವ್ಯಕ್ತಿಗಳು ಮತ್ತು ತಂಡಗಳು ಸವಾಲಿನ ಕಾರ್ಯಗಳಲ್ಲಿ ದೃಢವಾಗಿ ಸಹಾಯ ಮಾಡುವಲ್ಲಿ ಕೃತಜ್ಞತೆಯು ಪ್ರಮುಖವಾಗಿದೆ ಎಂಬುದು ರಾಬರ್ಟ್ ಅಭಿಪ್ರಾಯವಾಗಿದೆ.


  ವಿನಮ್ರ ನಾಯಕರಲ್ಲಿ ಕೃತಜ್ಞತೆಯು ಮೂರು ಘಟಕಗಳನ್ನು ಅಥವಾ ಗುಣಲಕ್ಷಣಗಳನ್ನು ಹೊಂದಿದೆ


  ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯಗಳಲ್ಲಿ ಜವಾಬ್ದಾರಿಯುತ ನಡವಳಿಕೆ


  ನಿಮ್ಮ ಸಂಸ್ಥೆ ಅಥವಾ ತಂಡ ಯಾವುದಾದರೊಂದು ಸಮಸ್ಯೆಯಿಂದ ಬಳಲುತ್ತಿರುವ ಸಮಯದಲ್ಲಿ ನಾಯಕ ಅವರಿಗೆ ಬೆನ್ನುಲುಬಾಗಿ ನಿಲ್ಲಬೇಕು ಹಾಗೂ ಆ ಸಮಸ್ಯೆಯನ್ನು ಪರಿಹರಿಸುವಲ್ಲಿ ಬೆಂಬಲವಾಗಿರಬೇಕು.


  ಉದ್ಯೋಗಿಯಾಗಿರಲಿ ಅಥವಾ ಸಂಸ್ಥೆಯಾಗಿರಲಿ ಬೇರೊಂದು ಕಡೆಯಿಂದ ಬೆಂಬಲ ದೊರೆತಂತೆ ಸಮಸ್ಯೆಗಳನ್ನು ನಿಭಾಯಿಸುವ ಬಲ ಅವರಲ್ಲಿ ಒಡಮೂಡುತ್ತದೆ ಹಾಗೂ ಇನ್ನಷ್ಟು ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯ ತನ್ನಷ್ಟಕ್ಕೆ ಬರುತ್ತದೆ.


  Keep these formula in mind to get success in your career

  ಯಶಸ್ಸಿನ ಆಚರಣೆ


  ನಿಮ್ಮ ತಂಡ ಯಾವುದಾದರೂ ಪ್ರಾಜೆಕ್ಟ್‌ನಲ್ಲಿ ಯಶಸ್ಸು ಸಾಧಿಸಿದರೆ ಅಥವಾ ತಂಡದಲ್ಲಿರುವ ಉದ್ಯೋಗಿ ಏನನ್ನಾದರೂ ಸಾಧಿಸಿದಲ್ಲಿ ಅದನ್ನು ಮುಕ್ತ ಮನಸ್ಸಿನಿಂದ ಹೊಗಳಿ ಹಾಗೂ ಅವರನ್ನು ಪ್ರೋತ್ಸಾಹಿಸಿ.


  ಒಬ್ಬ ವಿನಮ್ರ ನಾಯಕ ಇನ್ನೊಬ್ಬರ ಏಳಿಗೆಯನ್ನು ಗಮನಿಸಿ ಹೊಟ್ಟೆಕಿಚ್ಚುಪಡುವುದಿಲ್ಲ ಬದಲಿಗೆ ತನ್ನೊಂದಿಗೆ ಇತರರು ಬೆಳೆಯಬೇಕೆಂಬ ಹಂಬಲವನ್ನು ಇಟ್ಟುಕೊಳ್ಳುತ್ತಾರೆ.


  ಸಾರ್ವತ್ರಿಕ ಅಂಗೀಕಾರ


  ಕೆಲಸದಲ್ಲಿ ತಪ್ಪಾದ ಸಂದರ್ಭದಲ್ಲಿ ವಿನಮ್ರ ನಾಯಕ ಅದನ್ನು ಅಂಗೀಕರಿಸುತ್ತಾರೆ ಹಾಗೂ ಇತರರ ಮುಂದೆಯೇ ಅದನ್ನು ಒಪ್ಪಿಕೊಳ್ಳುತ್ತಾರೆ. ಯಶಸ್ವಿ ವಿನಮ್ರ ನಾಯಕ ತಪ್ಪು ಒಪ್ಪಿಕೊಳ್ಳುವುದರ ಜೊತೆಗೆ ಅಂತಹ ತಪ್ಪುಗಳನ್ನು ಇನ್ನು ಮುಂದೆ ಮಾಡದಂತೆ ಕ್ರಮ ಕೈಗೊಳ್ಳುತ್ತಾನೆ.

  Published by:Kavya V
  First published: