ಇಂದು ದೇಶಾದ್ಯಂತ 74ನೇ ಗಣರಾಜ್ಯೋತ್ಸವದ (Republic Day-2023) ಸಂಭ್ರಮ ಮನೆ ಮಾಡಿದೆ. ಜನವರಿ 26, 1950 ರಂದು ಇಡೀ ದೇಶದಲ್ಲಿ ಸಂವಿಧಾನವು (Constitution) ಜಾರಿಗೆ ಬಂದಿತು. ಇದೇ ದಿನ ಭಾರತವನ್ನು ಪೂರ್ಣ ಗಣರಾಜ್ಯವೆಂದು ಘೋಷಿಸಲಾಯಿತು. ಪ್ರತಿ ವರ್ಷ ಈ ದಿನದಂದು ಇಡೀ ದೇಶವೇ ಸಂಭ್ರಮಿಸುತ್ತದೆ. ಪ್ರತಿ ವರ್ಷ ವಿದೇಶಗಳ ಮುಖ್ಯಸ್ಥರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಈ ಬಾರಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿದ್ದಾರೆ.
ಗಣರಾಜ್ಯೋತ್ಸವ ಇತಿಹಾಸದ ಮಹತ್ವದ ಭಾಗವಾಗಿದೆ. ಹೀಗಾಗಿ ಶಾಲಾ-ಕಾಲೇಜು ಶಿಕ್ಷಣದಲ್ಲಿ ಮಾತ್ರವಲ್ಲದೇ ಸಾಮಾನ್ಯಜ್ಞಾನದ ವಿಚಾರಕ್ಕೆ ಬಂದಾಗಲು ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಿರಲಿ ಗಣರಾಜ್ಯೋತ್ಸವದ ಕುರಿತು ಅನೇಕ ಪ್ರಶ್ನೆಗಳು ಪುನಾರಾವರ್ತಿತವಾಗಿವೆ. ಆ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಈ ಪ್ರಶ್ನೋತ್ತರ ಸಹಾಯಕವಾಗಲಿದೆ.
ಪ್ರಶ್ನೆ 1. ಮೊದಲ ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರಪತಿ ಯಾರಾಗಿದ್ದರು?
ಉತ್ತರ - ಡಾ. ರಾಜೇಂದ್ರ ಪ್ರಸಾದ್
ಪ್ರಶ್ನೆ 2. ಭಾರತದ ರಾಷ್ಟ್ರಧ್ವಜದಲ್ಲಿ ಎಷ್ಟು ಬಣ್ಣಗಳಿವೆ?
ಉತ್ತರ - 4 ಬಣ್ಣಗಳು
ಪ್ರಶ್ನೆ 3. ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಯಾವ ಪ್ರಶಸ್ತಿಯನ್ನು ನೀಡಲಾಗುತ್ತದೆ?
ಉತ್ತರ - ಶೌರ್ಯ ಪ್ರಶಸ್ತಿಗಳು
ಪ್ರಶ್ನೆ-4. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಿಲಿಟರಿ ಸೆಲ್ಯೂಟ್ ಅನ್ನು ಯಾರಿಗೆ ನೀಡಲಾಗುತ್ತದೆ?
ಉತ್ತರ - ಭಾರತದ ರಾಷ್ಟ್ರಪತಿಗಳಿಗೆ
ಪ್ರಶ್ನೆ-5. "ಭಾರತೀಯ ಸಂವಿಧಾನದ ಪಿತಾಮಹ" ಎಂದು ಯಾರು ಕರೆಯುತ್ತಾರೆ?
ಉತ್ತರ- ಡಾ.ಭೀಮರಾವ್ ಅಂಬೇಡ್ಕರ್
ಪ್ರಶ್ನೆ-6. ರಾಷ್ಟ್ರಧ್ವಜದಲ್ಲಿರುವ ಅಶೋಕ ಚಕ್ರವನ್ನು ಎಲ್ಲಿಂದ ತೆಗೆದುಕೊಳ್ಳಲಾಗಿದೆ?
ಉತ್ತರ - ಅಶೋಕ ಸ್ತಂಭ
ಪ್ರಶ್ನೆ-7. ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳಿಗೆ ಎಷ್ಟು ಗನ್ ಸೆಲ್ಯೂಟ್ ನೀಡಲಾಗುತ್ತದೆ?
ಉತ್ತರ - 21 ಗನ್ ಸೆಲ್ಯೂಟ್
ಪ್ರಶ್ನೆ-8. ಭಾರತವು ಗಣರಾಜ್ಯವಾದಾಗ ಪರಮವೀರ ಚಕ್ರವನ್ನು ಯಾವ ಗೌರವಾರ್ಥವಾಗಿ ಪ್ರಾರಂಭಿಸಲಾಯಿತು?
ಉತ್ತರ- ಭಾರತವು ಗಣರಾಜ್ಯವಾದಾಗ ಪರಮವೀರ ಚಕ್ರವು ವಿಕ್ಟೋರಿಯಾ ಕ್ರಾಸ್ ಅನ್ನು ಬದಲಿಸಿತು. ಇದು ಭಾರತದ ಅತ್ಯುನ್ನತ ಮಿಲಿಟರಿ ಪದಕವಾಗಿದೆ.
ಪ್ರಶ್ನೆ-9. 1947 ರ ಭಾರತೀಯ ಸ್ವಾತಂತ್ರ್ಯ ಕಾಯಿದೆಗೆ ರಾಜಮನೆತನದ ಒಪ್ಪಿಗೆಯನ್ನು ಯಾವಾಗ ನೀಡಲಾಯಿತು?
ಉತ್ತರ - ಜುಲೈ 18, 1947 ರಂದು
ಪ್ರಶ್ನೆ-10. 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂದರೆ ಈ ಬಾರಿಯ ಮುಖ್ಯ ಅತಿಥಿ ಯಾರು?
ಉತ್ತರ- ಈ ಬಾರಿ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿದ್ದಾರೆ.
ಹೆಚ್ಚಿನ ಮಾಹಿತಿ
ಭಾರತದ ಸಂವಿಧಾನವು 26 ಜನವರಿ 1950 ರಂದು ಜಾರಿಗೆ ಬಂದಿತು, ಇದರಿಂದಾಗಿ ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಈ ವರ್ಷ ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಭಾರತದ ಸಂವಿಧಾನವನ್ನು ರಚಿಸಿದ ಸಮಿತಿಯಲ್ಲಿ ಒಟ್ಟು 7 ಮಂದಿ ಸದಸ್ಯರಿದ್ದರು.
ಸಂವಿಧಾನ ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರು 64 ವಿಷಯಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಅವರಿಗೆ 9 ಭಾಷೆಗಳ ಜ್ಞಾನವಿತ್ತು. ಒಟ್ಟು 32 ಡಿಗ್ರಿಗಳನ್ನು ಹೊಂದಿದ್ದರು. ಸುಮಾರು 21 ವರ್ಷಗಳ ಕಾಲ ಜಗತ್ತಿನ ಎಲ್ಲ ಧರ್ಮಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದ್ದರು. ಡಾ.ಭೀಮರಾವ್ ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ 8 ವರ್ಷಗಳ ಅಧ್ಯಯನವನ್ನು ಕೇವಲ 2 ವರ್ಷ, 3 ತಿಂಗಳಲ್ಲಿ ಪೂರ್ಣಗೊಳಿಸಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ 'ಡಾಕ್ಟರ್ ಆಫ್ ಸೈನ್ಸ್' ಎಂಬ ಡಾಕ್ಟರೇಟ್ ಪದವಿಯನ್ನು ಗಳಿಸಿದ ವಿಶ್ವದ ಮೊದಲ ಮತ್ತು ಏಕೈಕ ವ್ಯಕ್ತಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ