• Home
  • »
  • News
  • »
  • jobs
  • »
  • Success Story: ವರ್ಷಕ್ಕೆ 45 ಲಕ್ಷ ಸ್ಯಾಲರಿ! ಇವರು ಕಲಿತದ್ದು ಕೇವಲ ಯುಟ್ಯೂಬ್​ನಲ್ಲಿ

Success Story: ವರ್ಷಕ್ಕೆ 45 ಲಕ್ಷ ಸ್ಯಾಲರಿ! ಇವರು ಕಲಿತದ್ದು ಕೇವಲ ಯುಟ್ಯೂಬ್​ನಲ್ಲಿ

ಪೂಜಿತಾ

ಪೂಜಿತಾ

ಇವರು ಕೋಡಿಂಗ್ ಕಲಿಯೋಕೆ Leatcode, CodeChef, Prepbytes, BinarySearch.com ಇತ್ಯಾದಿ ಸೈಟ್‌ಗಳನ್ನು ಬಳಸಿಕೊಂಡಿದ್ದಾರೆ. ಸಮಯ ನಿರ್ವಹಣೆ ಹೇಗೆ ಎಂಬುದನ್ನು ಕಲಿತುಕೊಂಡೆ. ಆನ್‌ಲೈನ್ ಅಸೆಸ್ಮೆಂಟ್ ಮತ್ತು ಸಂದರ್ಶನಗಳಿಗಾಗಿ ತಯಾರಿ ಮಾಡಿಕೊಂಡೆ ಎಂದು ಅವರು ಹೇಳುತ್ತಾರೆ. 

  • News18 Kannada
  • 2-MIN READ
  • Last Updated :
  • Karnataka, India
  • Share this:

ಸಾಧನೆ ಮಾಡೋದಕ್ಕೆ ಬಡವರು ಶ್ರೀಮಂತರು (Rich) ಎಂದೇನು ಇಲ್ಲ ಯಾರು ಬೇಕಾದರೂ ಸಾಧನೆ ಮಾಡ್ಬಹುದು. ಅದರಲ್ಲೂ ಮನಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಮಗೆ ಹಲವಾರು ಉದಾಹರಣೆಗಳು ಲಭ್ಯವಿದೆ ಅಂತದ್ದೇ ಒಂದು ಘಟನೆ ಗುಂಟೂರಿನಲ್ಲಿ ನಡೆದಿದೆ. ಅದೇನೆಂದರೆ ಯುವತಿಯೊಬ್ಬಳು (Lady) ಉದಾಹರಣೆಯಾಗಿದ್ದಾಳೆ (Exampale) ರಾವೂರಿ ಪೂಜಿತಾ ಎಂಬಾಕೆ ಯೂಟ್ಯೂಬ್​ನಿಂದಲೇ ಕೋಡಿಂಗ್​ ಕಲಿತು, ಈಗ ಗೂಗಲ್​ ಕಂಪನಿಯಲ್ಲಿ ವರ್ಷಕ್ಕೆ 60 ಲಕ್ಷ (Lack) ರೂಪಾಯಿ ಸಂಬಳದ ಕೆಲಸದ ಆಫರ್ ಗಿಟ್ಟಿಸಿಕೊಂಡಿದ್ದಾರೆ.  


ನೀವೂ ಸಹ ಮನಸು ಮಾಡಿದ್ರೆ ಈ ಸಾಧನೆ ಮಾಡಬಹುದು. ಕಲಿಯೋಕೆ ಗುರು ಇಲ್ಲದಿದ್ರೂ ಗೂಗಲ್​, ಯುಟ್ಯೂಬ್​ಗಳಿವೆ. ಈಕೆಯೂ ಹಾಗೆ ತನಗೆ ತಾನೇ ಗುರುವಾಗಿ ಯುಟ್ಯೂಬ್​ ಮೂಲಕ ಕೋಡಿಂಗ್​ ಕಲಿತುಕೊಂಡಿದ್ದಾರೆ. ಅದರ ಮೂಲಕವೇ ಹೆಚ್ಚಿನ ಹಣ ಸಂಪಾದನೆಗೆ ಮಾರ್ಗ ಕಂಡುಕೊಂಡಿದ್ದಾರೆ. ಇವರು ಯಾವ ಶಾಲೆಗೂ ಹೋಗಿಲ್ಲ ಅಥವಾ ಕಾಲೇಜಿಗೂ ಹೋಗಿಲ್ಲಾ.


ಗೂಗಲ್​​ನಲ್ಲಿ ಒಳ್ಳೆಯ ಉದ್ಯೋಗ! ವರ್ಷಕ್ಕೆ 60 ಲಕ್ಷ ರೂಪಾಯಿಗಳ ಸ್ಯಾಲರಿ ಆಫರ್​ ಈವರಿಗಿದೆ ಎಂದು ತಿಳಿದುಬಂದಿದೆ. .ನಾನು ಬಿಟೆಕ್‌ನ ಮೊದಲ ವರ್ಷದಲ್ಲಿದ್ದಾಗ ಕೋವಿಡ್-19 ಸೋಂಕು ಪ್ರಾರಂಭವಾಯಿತು. ಆಗಲೇ ಲಾಕ್‌ಡೌನ್ ಕೂಡ ಹೇರಲಾಗಿತ್ತು. ಎಷ್ಟೋ ಜನರಂತೆ ನನಗೂ ಕಾಲೇಜಿಗೆ ಹೋಗಿ ಓದುವ ಅವಕಾಶವಿರಲಿಲ್ಲ. ಆದರೆ ಈ ಬಗ್ಗೆ ನಾನು ತೀರಾ ತಲೆಕೆಡಿಸಿಕೊಳ್ಳಲಿಲ್ಲ. ಆನ್‌ಲೈನ್‌ನಲ್ಲಿ ಕಾಲೇಜು ಸಿಬ್ಬಂದಿ ನೀಡುವ ಉಪನ್ಯಾಸಗಳನ್ನು ನಾನು ಗಮನವಿಟ್ಟು ಕೇಳುತ್ತಿದ್ದೆ ಎಂದು ಅವರೇ ಹೇಳಿದ್ದಾರೆ.


ಇದನ್ನೂ ಓದಿ: Foreign Study: ವಿದೇಶದಲ್ಲಿ ಅಲೆಮಾರಿಗಳಾದ ಭಾರತೀಯ ವಿದ್ಯಾರ್ಥಿಗಳು, ಇವರು ಅನುಭವಿಸುವ ಕಷ್ಟ ಹೇಗಿದೆ ನೋಡಿ


ಅವರು ತಮಗೆ ಅರ್ಥವಾಗದ ವಿಷಯಗಳನ್ನು ಹಲವಾರು ಬಾರಿ ಶಿಕ್ಷಕರ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದರಂತೆ. ಆದರೆ ಕೆಲವೊಮ್ಮೆ ಅವರೂ ಲಭ್ಯವಾಗದೇ ಇದ್ದ ಸಮಯದಲ್ಲಿ ಇವರು ಗೂಗಲ್​ ಮಾಡಿ ಆ ವಿಷಯವನ್ನು ತಿಳಿದುಕೊಳ್ಳುತ್ತಿದ್ದರಂತೆ. ಇದರಿಂದಾಗಿಯೇ ಅವರು ಕೋಡಿಂಗ್​ ಕಲಿತಿದ್ದಾರೆ.


ಇವರು ಕೋಡಿಂಗ್​ ಕಲಿಯಲು ಸಹಕರಿಸಿದ ವಿಷಯ ಯಾವುದು?
ಇವರು ಕೋಡಿಂಗ್ ಕಲಿಯೋಕೆ Leatcode, CodeChef, Prepbytes, BinarySearch.com ಇತ್ಯಾದಿ ಸೈಟ್‌ಗಳನ್ನು ಬಳಸಿಕೊಂಡಿದ್ದಾರೆ. ಸಮಯ ನಿರ್ವಹಣೆ ಹೇಗೆ ಎಂಬುದನ್ನು ಕಲಿತುಕೊಂಡೆ. ಆನ್‌ಲೈನ್ ಅಸೆಸ್ಮೆಂಟ್ ಮತ್ತು ಸಂದರ್ಶನಗಳಿಗಾಗಿ ತಯಾರಿ ಮಾಡಿಕೊಂಡೆ ಎಂದು ಅವರು ಹೇಳುತ್ತಾರೆ.


ಗೂಗಲ್, ಅಡೋಬ್ ಮತ್ತು ಅಮೆಜಾನ್ ಸಹಕರಿಸಿದ ಬಗೆ 


ಕೆಲವೊಮ್ಮೆ ಆನ್​ಲೈನ್​ ಕೋರ್ಸ್​ ಮಾಡುವಾಗಲೇ ಸಂದರ್ಶನಗಳು ಇರುತ್ತಿದ್ದವು ಅವುಗಳನ್ನು ಪಾಸ್​ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಆದ್ದರಿಂದ ಅವರಿಗೆ ಅಗತ್ಯವಿರುವ ವೃತ್ತಿಪರ ತರಬೇತಿಯೂ ಸಹ ಆಗಲೇ ದೊರೆತು ಬಿಟ್ಟಿತ್ತು ಹೀಗಾಗಿ ಇನ್ನೂ ಹೆಚ್ಚಿನ ಅನುಕೂಲ ಅವರಿಗಾಯಿತು ಎನ್ನಬಹುದು. ಗೂಗಲ್, ಅಡೋಬ್ ಮತ್ತು ಅಮೆಜಾನ್ ಈ ಕಂಪನಿಗಳಿಂದ ನಾನು ಸಾಕಷ್ಟು ಲಾಭವನ್ನು ಪಡೆದಿದ್ದೇನೆ ಎಂದು ಅವರು ಹೇಳಿದ್ದಾರೆ.


ವರ್ಷಕ್ಕೆ 45 ಲಕ್ಷ ರೂಪಾಯಿಗಳ ಪ್ಯಾಕೇಜ್


ಆತ್ಮ ವಿಶ್ವಾಸ ಹೆಚ್ಚಿಸಲು ಸಹ ನನಗೆ ಇದೇ ಸಹಕಾರವಾಯ್ತು ನಾನು ಇವೆಲ್ಲದರಿಂದ ಸಾಕಷ್ಟು ಕಲಿತಿದ್ದೇನೆ. ಇದರಿಂದಲೇ ನನಗೆ ಒಳ್ಳೆಯ ಉದ್ಯೋಗ ಕೈ ತುಂಬಾ ಸ್ಯಾಲರಿ ಬರಲು ಸಹಾಯವಾಗಿದೆ ಎಂದು ಅವರು ಖುಷಿಯಲ್ಲಿ ಹೇಳಿದ್ದಾರೆ. ವರ್ಷಕ್ಕೆ 45 ಲಕ್ಷ ರೂಪಾಯಿಗಳ ಪ್ಯಾಕೇಜ್​ ನೀಡಲು ಮುಂದೆ ಬಂದಿರುವುದು ಆರ್ಥಿಕವಾಗಿ ಅವರು ಸಭಲರಾಗಲು ಸಹಾಯ ಮಾಡುತ್ತದೆ. ನನ್ನ ಜೀವನದ ಗುರಿಯನ್ನು ನಾನು ಸಾಧಿಸಿದ್ದೇನೆ ಎಂದು ಆಕೆ ಹೇಳಿದ್ದಾರೆ. ಯಾರು ಬೇಕಾದರೂ ಸಹ ಈ ರೀತಿ ಸಾಧನೆ ಮಾಡುವ ಅವಕಾಶವಿದೆ.

First published: