ಇಂಜಿನಿಯರಿಂಗ್ (Engineering) ಮುಗೀತು, ಕೆಲಸ (Job) ಹುಡುಕಬೇಕು. ಡಿಗ್ರಿ ಮುಗೀತು, ಒಂದು ಕೆಲಸ ನೋಡಬೇಕು. 20-30 ಸಾವಿರ ಸ್ಯಾಲರಿ (Salary) ಕೊಟ್ರೆ ಸಾಕು ಅನ್ನೋ ಲೆಕ್ಕಾಚಾರದಲ್ಲೇ ಮಿಡಲ್ ಕ್ಲಾಸ್ ಯುವಕ-ಯುವತಿಯರು ಇರ್ತಾರೆ. ಆದರೆ ಇಲ್ಲೊಬ್ಬಳು ರೈತನ ಮಗಳು, ಸಾಮಾನ್ಯ ಬಡಕುಟುಂಬದ ಯುವತಿಗೆ ಸಿಕ್ಕಿರುವ ಪ್ಯಾಕೇಜ್ ಕೇಳಿದ್ರೆ ನೀವು ಹೌಹಾರುತ್ತೀರಾ. ಯಾಕಂದ್ರೆ, ವರ್ಷಕ್ಕೆ ಬರೋಬ್ಬರಿ 64.15 ಲಕ್ಷ ರೂಪಾಯಿ ಪ್ಯಾಕೇಜ್‌ನ ಸಂಬಳಕ್ಕೆ ಈಕೆ ಆಯ್ಕೆಯಾಗಿದ್ದಾಳೆ.
ಐದು ಸುತ್ತು ಇಂಟರ್ ವ್ಯೂ.. ಕಂಪನಿಯವರು ಶಾಕ್!
ನಿಜ.. ತಮಿಳುನಾಡಿನ ಯುವತಿಯೊಬ್ಬಳಿಗೆ ಸಿಂಗಾಪುರ ಮೂಲದ ಕಂಪನಿಯೊಂದು ಇಂತಹದೊಂದು ಬಿಗ್ ಆಫರ್ ಕೊಟ್ಟಿದೆ. ಒಂದಲ್ಲ, ಎರಡಲ್ಲ, ವರ್ಷಕ್ಕೆ 64.15 ಲಕ್ಷ ರೂಪಾಯಿ ಸಂಬಳ ಕೊಟ್ಟು ಯುವತಿಯನ್ನ ಕೆಲಸಕ್ಕೆ ನೇಮಿಸಿಕೊಂಡಿದೆ. ಅಷ್ಟಕ್ಕೂ ಇಷ್ಟು ದೊಡ್ಡ ಮೊತ್ತದ ಸಂಬಳದ ಕೆಲಸ ಗಿಟ್ಟಿಸಿಕೊಂಡಿರುವ ಯುವತಿಯ ಹೆಸರು ರಮ್ಯಾ ಆರ್.
ತಮಿಳುನಾಡಿನ ಸೇಲಂ ಮೂಲದ ರಮ್ಯಾ, ಸಾಂಬಲಪುರದ ಐಐಟಿಯಲ್ಲಿ ಓದುತ್ತಿದ್ದಳು. ಅಂತಿಮ ವರ್ಷದಲ್ಲಿ ಕ್ಯಾಂಪಸ್ ಇಂಟರ್‌ವ್ಯೂ ನಡೆದಿದೆ. ಈ ವೇಳೆ ಸಿಂಗಾಪುರ ಮೂಲದ ಟೊಲಾರಾಮ್ ಗ್ರೂಪ್ ಕಂಪನಿಗೆ ರಮ್ಯಾ ಸೆಲೆಕ್ಟ್ ಆಗಿದ್ದಾರೆ.
ಸುಮಾರು ಐದು ಸುತ್ತು ಇಂಟರ್ ವ್ಯೂ ಎದುರಿಸಿದ ರಮ್ಯಾ, ನಿರ್ವಹಣೆ ಮತ್ತು ವಿಶ್ಲೇಷಣೆ ಪ್ರಕ್ರಿಯೆಯಿಂದ ಕಂಪನಿಯವರ ಗಮನ ಸೆಳೆದಿದ್ದಾಳೆ. ಹೀಗಾಗಿ ರಮ್ಯಾಗೆ ಬರೋಬ್ಬರಿ 65 ಲಕ್ಷದ ಪ್ಯಾಕೇಜ್ ಕೊಟ್ಟಿರುವ ಕಂಪನಿಯು, ಅವರನ್ನ ಕೆಲಸಕ್ಕೆ ಸೇರಿಸಿಕೊಂಡಿದೆ. ಕಂಪನಿಯ ನೈಜಿರಿಯಾದಲ್ಲಿರುವ ಬ್ರಾಂಜ್‌ನಲ್ಲಿ ರಮ್ಯಾ ಇದೇ ಮೇ ತಿಂಗಳಿಂದ ಕೆಲಸ ಶುರು ಮಾಡಲಿದ್ದಾರೆ.
ಮನೆಯಲ್ಲಿ ಪದವಿ ಮುಗಿಸಿದ ಮೊದಲಿಗಳು ರಮ್ಯಾ!
ಅಂದಹಾಗೆ ರಮ್ಯಾ ಕುಟುಂಬಸ್ಥರು ಬಡತನದವರು. ತಂದೆ-ತಾಯಿ ಕೃಷಿಕರು. ಗ್ರಾಮದ ಹೆಣ್ಣು ಮಕ್ಕಳು ಕೂಡ ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದಿದ್ದಾರೆ. ನಾಮಕ್ಕಲ್‌ನಲ್ಲಿ ಸಾಹಿತ್ಯದ ವಿದ್ಯಾರ್ಥಿನಿಯಾಗಿದ್ದ ರಮ್ಯಾ ಬಳಿಕ ಐಐಟಿಗೆ ಸೇರಿದ್ರು. ಮತ್ತೊಂದು ಸಂಗತಿಯಂದ್ರೆ ಮನೆಯಲ್ಲಿ ಪದವಿ ಓದಿದವರಲ್ಲಿ ರಮ್ಯಾನೇ ಮೊದಲು. ಈ ಮೊದಲು ಯಾರೂಬ್ಬರೂ ಕೂಡ ಕಾಲೇಜು ಮೆಟ್ಟಿಲು ಹತ್ತಿರಲಿಲ್ಲ.
ರಮ್ಯಾಗೆ ಈಗ ಸಿಕ್ಕಿರುವ ಕೆಲಸದಿಂದ ಊರಿನ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಗ್ರಾಮದ ಮಹಿಳೆಯರು ಕೂಡ ಹೊಸತನಕ್ಕೆ ತೆರೆದುಕೊಳ್ಳುವ ಭರವಸೆ ಇದೆ ಅಂತ ರಮ್ಯಾ ತಿಳಿಸಿದ್ದಾರೆ. ಹಾಗೇ, ಸಾಂಬಲಪುರ ಐಐಟಿಗೆ ರಮ್ಯಾ ಧನ್ಯವಾದ ತಿಳಿಸಿದ್ದಾರೆ. ನಾನು ಈ ಮಟ್ಟಿಗೆ ತಯಾರಾಗಲು ಐಐಟಿಯಲ್ಲಿದ್ದ ಸೌಲಭ್ಯ ಹಾಗೂ ಉಪನ್ಯಾಸಕರು ಕಾರಣ. ಅವರಿಗೆ ನಾನು ಆಭಾರಿ ಆಗಿರುತ್ತೇನೆ. ಜತೆಗೆ, ನನ್ನ ಯಶಸ್ಸನ್ನು ಪೋಷಕರಿಗೆ ಅರ್ಪಿಸುತ್ತೇನೆ ಅಂತ ರಮ್ಯಾ ಹೇಳಿದ್ದಾರೆ.
ಕೋಟಿ ಕೋಟಿ ಸಂಬಳಕ್ಕೆ ಆಯ್ಕೆಯಾದವರು ಇದ್ದಾರೆ
ಐಐಟಿ ವಿದ್ಯಾರ್ಥಿಗಳು ದೊಡ್ಡ ಮೊಟ್ಟದ ಸಂಬಳಕ್ಕೆ ಆಯ್ಕೆಯಾಗುವ ಮೂಲಕ ಆಗಾಗೇ ಸುದ್ದಿಯಲ್ಲಿ ಇರುತ್ತಾರೆ. ಈ ಹಿಂದೆ ರೂರ್ಕಿಯ ವಿದ್ಯಾರ್ಥಿಯೊಬ್ಬನಿಗೆ ಅಂತರಾಷ್ಟ್ರೀಯ ಟೆಕ್ ಕಂಪನಿಯೊಂದು ವಾರ್ಷಿಕ 2.15 ಕೋಟಿ ಸಂಬಳ ನೀಡುವ ಮೂಲಕ ಕೆಲಸಕ್ಕೆ ಆಯ್ಕೆ ಮಾಡಿಕೊಂಡಿತ್ತು.
ಇದನ್ನೂ ಓದಿ: Career Options: ಲಕ್ಷಗಳಲ್ಲಿ ಸಂಬಳ ಪಡೆಯಬೇಕೇ? ಈ ಐದರಲ್ಲಿ ಒಂದನ್ನು ಆಯ್ಕೆ ಮಾಡಿದ್ರೂ ಸಾಕು
ಬಾಂಬೆಯ ಐಐಟಿ ವಿದ್ಯಾರ್ಥಿ ಕೂಡ ವಾರ್ಷಿಕ 2.05 ಕೋಟಿ ರೂಪಾಯಿ ಸಂಬಳ ಪಡೆದು ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಆಯ್ಕೆಯಾಗಿದ್ದ. ಇಷ್ಟೇ ಅಲ್ಲ ಗುವಾಹಟಿ ಮೂಲದ ಐಐಟಿ ವಿದ್ಯಾರ್ಥಿಯೊಬ್ಬನಿಗೆ ಕಂಪನಿಯೊಂದು ವಾರ್ಷಿಕ 2 ಕೋಟಿ ರೂಪಾಯಿ ಪ್ಯಾಕೇಜ್ ನೀಡಿತ್ತು.
ಟ್ವಿಟರ್‌ನಲ್ಲಿ ಸಿಇಒ ಆಗಿದ್ದ ಪರಾಗ್ ಅಗರ್‌ವಾಲ್ ಅವರು ಕೂಡ ಐಐಟಿ ವಿದ್ಯಾರ್ಥಿ. ಬಾಂಬೆ ಐಐಟಿಯಲ್ಲಿ ಓದುತ್ತಿದ್ದ ಅವರು ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ರು. ಟ್ವಿಟರ್‌ನಲ್ಲಿ ಅವರು ಸಿಇಓ ಹುದ್ದೆಗೆ ಏರಿದ್ದ ಬಳಿಕ ಐಐಟಿಯ ಶಿಕ್ಷಕರು ಅವರಿಗೆ ಅಭಿನಂದನೆ ಸಲ್ಲಿಸಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ